KL, DDP ಆಯ್ತು ಈಗ ಸ್ಮರಣ್ ರವಿಚಂದ್ರನ್ – TESTನಲ್ಲಿ ಕನ್ನಡಿಗರಿಗೆ ಜಾಕ್ ಪಾಟ್
ನ್ಯೂಜಿಲೆಂಡ್ TASKನಲ್ಲಿ ಯಾರೆಲ್ಲಾ?

KL, DDP ಆಯ್ತು ಈಗ ಸ್ಮರಣ್ ರವಿಚಂದ್ರನ್ – TESTನಲ್ಲಿ ಕನ್ನಡಿಗರಿಗೆ ಜಾಕ್ ಪಾಟ್ನ್ಯೂಜಿಲೆಂಡ್ TASKನಲ್ಲಿ ಯಾರೆಲ್ಲಾ?

2027ರ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ರೇಸ್​​ನಲ್ಲಿರೋ ಭಾರತದ ಮುಂದೆ ಸದ್ಯ 7 ಪಂದ್ಯಗಳ ಚಾಲೆಂಜ್ ಇದೆ. ಌಂಡ್ ಟಾಪ್ 2 ಟಿಕೆಟ್ ಸಿಗ್ಬೇಕು ಅಂದ್ರೆ ಎಲ್ಲಾ ಪಂದ್ಯಗಳನ್ನೂ ಗೆಲ್ಲಬೇಕಾದ ಅನಿವಾರ್ಯತೆಯೂ ಇದೆ. ಮುಂದಿನ ತಿಂಗಳು ನ್ಯೂಜಿಲೆಂಡ್ ವಿರುದ್ಧ 2 ಪಂದ್ಯಗಳಿದ್ದು ಇದಕ್ಕಾಗಿ ಬಿಸಿಸಿಐ ಬಲಿಷ್ಠ ಟೀಂ ರೆಡಿ ಮಾಡ್ತಿದೆ. ಹಾಗೇ ನ್ಯೂಜಿಲೆಂಡ್ ಎ ವಿರುದ್ಧದ ಮೂರು ಪಂದ್ಯಗಳ ಅನಧಿಕೃತ ಟೆಸ್ಟ್  ಸರಣಿಗಾಗಿ ಟೀಂ ಅನೌನ್ಸ್ ಆಗಿದ್ದು ಅಚ್ಚರಿಯ ಆಯ್ಕೆಗಳನ್ನ ಮಾಡಿದೆ. ಌಂಡ್ ಕನ್ನಡಿಗರಿಗೆ ಜಾಕ್​ಪಾಟ್ ಹೊಡೆದಿದೆ.

ಇದನ್ನೂ ಓದಿ : ಅಯ್ಯರ್ ಫೈಯರ್ ಗೆ WI ರೋಸ್ಟ್ – ಭಾರತದಲ್ಲೂ ಸದ್ದು ಮಾಡ್ತಿಲ್ಲ ಸಂಜು

ಅಕ್ಟೋಬರ್ 24 ರಿಂದ ಆರಂಭವಾಗಲಿರುವ ಈ ಅನಧಿಕೃತ ಟೆಸ್ಟ್ ಸರಣಿ ನವೆಂಬರ್ 10ರವೆಗೆ ಕಂಪ್ಲೀಟ್ ಆಗಿ ನ್ಯೂಜಿಲೆಂಡ್‌ನಲ್ಲಿ ನಡೆಯಲಿದೆ. ಈ ಸರಣಿಗಾಗಿ ಬಿಸಿಸಿಐ 15 ಸದಸ್ಯರ ಭಾರತ ಎ ತಂಡವನ್ನು ಅನೌನ್ಸ್ ಮಾಡಿದೆ. ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೆಲ್ ಅವರಿಗೆ ತಂಡದ ನಾಯಕತ್ವದ ಜವಾಬ್ದಾರಿ ನೀಡಿದ್ರೆ ಸಾಕಷ್ಟು ಸ್ಟಾರ್ ಪ್ಲೇಯರ್ಸ್ ಕೂಡ ಇದ್ದಾರೆ. ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ರವಿಚಂದ್ರನ್ ಸ್ಮರಣ್, ರಿಷಭ್ ಪಂತ್*, ಧ್ರುವ್ ಜುರೆಲ್, ವಾಷಿಂಗ್ಟನ್ ಸುಂದರ್, ಅಕೀಬ್ ನಬಿ, ಆಕಾಶ್ ದೀಪ್, ಅನ್ಶುಲ್ ಕಾಂಬೋಜ್, ಮಾನವ್ ಸುತಾರ್, ಮುಖೇಶ್ ಚೌಧರಿ, ಸಾಯಿ ಸುದರ್ಶನ್, ಯಶ್ ರಾಥೋಡ್, ಮುಖೇಶ್ ಕುಮಾರ್ ಸೆಲೆಕ್ಟ್ ಆಗಿದ್ದಾರೆ.

ಎ ತಂಡದಲ್ಲೂ ಅನುಭವಿಗಳಿಗೆ ಮಣೆ ಹಾಕಿದ ಬಿಸಿಸಿಐ!

ನ್ಯೂಜಿಲೆಂಡ್ ಸಿರೀಸ್​ಗಾಗಿ ಸಿದ್ಧವಾಗಿರೋ 15 ಸದಸ್ಯರ ಭಾರತ ಎ ತಂಡದಲ್ಲಿ ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ವಾಷಿಂಗ್ಟನ್ ಸುಂದರ್ ಮತ್ತು ಮುಖೇಶ್ ಕುಮಾರ್ ಸೇರಿದಂತೆ ಬರೋಬ್ಬರಿ 11 ಮಂದಿ ಈಗಾಗಲೇ ಅಂತಾರಾಷ್ಟ್ರೀಯ ಟೆಸ್ಟ್ ಆಡಿದ ಅನುಭವ ಹೊಂದಿರುವ ಆಟಗಾರರಾಗಿದ್ದಾರೆ. ಕರ್ನಾಟಕದ ರವಿಚಂದ್ರನ್ ಸ್ಮರಣ್ ಮತ್ತು ವಿದರ್ಭದ ಯಶ್ ರಾಥೋಡ್ ಅವರಂತಹ ದೇಶಿ ಕ್ರಿಕೆಟ್‌ನ ಯುವ ಪ್ರತಿಭೆಗಳಿಗೂ ತಂಡದಲ್ಲಿ ಚೊಚ್ಚಲ ಅವಕಾಶ ನೀಡಲಾಗಿದೆ. ಇರಾನಿ ಕಪ್‌ನಲ್ಲಿ ಮುಖೇಶ್ ಕುಮಾರ್  ಅದ್ಭುತ ಪ್ರದರ್ಶನದಿಂದ ಎ ತಂಡಕ್ಕೆ ಮರಳಿದ್ದಾರೆ. ಪಂದ್ಯದಲ್ಲಿ ಮುಖೇಶ್ ಎಂಟು ವಿಕೆಟ್‌ಗಳನ್ನು ಕಬಳಿಸಿದರು. ಹಾಗೇ ದೇಶೀಯ ಕ್ರಿಕೆಟ್ ಪ್ರದರ್ಶನದಿಂದಲೇ ಸದ್ದು ಮಾಡಿರುವ ರವಿಚಂದ್ರನ್ ಸ್ಮರಣ್ ಮೇಲೆಯೂ ಎಲ್ಲರ ಕಣ್ಣಿದೆ. ಇಂಟ್ರೆಸ್ಟಿಂಗ್ ಅಂದ್ರೆ ಈ ತಂಡದಲ್ಲಿ ಮೂವರು ಕನ್ನಡಿಗರಿದ್ದಾರೆ.

ಕೆಎಲ್ ರಾಹುಲ್, ದೇವದತ್ ಆಯ್ತು ಈಗ ಸ್ಮರಣ್ ರವಿಚಂದ್ರನ್ ಸರದಿ!

ಸದ್ಯ ಎ ತಂಡದಲ್ಲಿ ಕನ್ನಡಿಗರಾಗ ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್ ಹಾಗೇ ಸ್ಮರಣ್ ರವಿಚಂದ್ರನ್ ಅವಕಾಶ ಪಡೆದಿದ್ದಾರೆ. ಅದ್ರಲ್ಲೂ ಸ್ಮರಣ್ ಗೆ ಚಾನ್ಸ್ ಸಿಕ್ಕಿರೋದು ಪ್ಯೂರ್ಲಿ ಅವ್ರ ಟ್ಯಾಲೆಂಟ್​ನಿಂದಲೇ. ಇತ್ತೀಚೆಗೆ ಜಮ್ಮು & ಕಾಶ್ಮೀರ ವಿರುದ್ಧದ ರೆಸ್ಟ್ ಆಫ್ ಇಂಡಿಯಾದ ಇರಾನಿ ಕಪ್ ಪಂದ್ಯದಲ್ಲಿ  ಕರ್ನಾಟಕದ ಸ್ಟೈಲಿಷ್ ಲೆಫ್ಟ್ ಹ್ಯಾಂಡರ್ ಸ್ಮರಣ್ ರವಿಚಂದ್ರನ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ರು. ಮೊದಲ ಇನ್ನಿಂಗ್ಸ್ ನಲ್ಲಿ 68, 2ನೇ ಇನ್ನಿಂಗ್ಸ್ ನಲ್ಲಿ 153 ಎಸೆತಗಳಲ್ಲಿ 135 ರನ್ ಸಿಡಿಸಿದ್ರು. ರೆಸ್ಟ್ ಆಫ್ ಇಂಡಿಯಾ ಪರ ಏಕಾಂಗಿ ಹೋರಾಟ ನಡೆಸಿ ತಂಡದ ಗೆಲುವಿನ ಹೀರೋ ಆಗಿದ್ರು. ಅಷ್ಟೇ ಅಲ್ಲದೆ ಈ ಬಾರಿಯ ರಣಜಿ ಟೂರ್ನಿಯ ಮೊದಲ ಪಂದ್ಯಕ್ಕೆ ಕರ್ನಾಟಕ ತಂಡದ ನಾಯಕನಾಗಿ ಸ್ಮರಣ್ ಆಯ್ಕೆಯಾಗಿದ್ದಾರೆ. 23 ವರ್ಷದ ಸ್ಮರಣ್ 2024ರಲ್ಲಿ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ್ದು 2 ವರ್ಷಗಳಲ್ಲೇ ತನ್ನ ಹೆಜ್ಜೆಗುರುತು ಮೂಡಿಸುತ್ತಿದ್ದಾರೆ. ಈಗ ಕೆಎಲ್ ರಾಹುಲ್, ಪಡಿಕ್ಕಲ್ ಜೊತೆ ಎ ತಂಡಕ್ಕೆ ಸೇರಿದ್ದು ಮುಂದಿನ ದಿನಗಳಲ್ಲಿ ಭಾರತ ಟೆಸ್ಟ್ ತಂಡದಲ್ಲೂ ಮಿಂಚಬಹುದು.

Shantha Kumari

Leave a Reply

Your email address will not be published. Required fields are marked *