KL ರಾಹುಲ್ ಟಿ-20 ವಿಶ್ವಕಪ್ ಕನಸು ಭಗ್ನ – ಚುಟುಕು ಸಮರದಲ್ಲಿ ಯಾಕಿಲ್ಲ ಚಾನ್ಸ್?  

KL ರಾಹುಲ್ ಟಿ-20 ವಿಶ್ವಕಪ್ ಕನಸು ಭಗ್ನ – ಚುಟುಕು ಸಮರದಲ್ಲಿ ಯಾಕಿಲ್ಲ ಚಾನ್ಸ್?  

ಟೀಂ ಇಂಡಿಯಾದ ಯಾವುದೇ ಸರಣಿ ಅಥವಾ ಟೂರ್ನಮೆಂಟ್ ಆರಂಭಕ್ಕೂ ಮೊದಲು ಚರ್ಚೆಗೆ ಬರೋದೇ ಕನ್ನಡಿಗ ಕೆಎಲ್ ರಾಹುಲ್ ಹೆಸರು. ರಾಹುಲ್​ರನ್ನ ತಂಡಕ್ಕೆ ಸೇರಿಸಿಕೊಳ್ಳೋದು ಬೇಡ ಅಂತಾನೇ ವಾದ ಶುರುವಾಗುತ್ತೆ. ಬಟ್ ಪಂದ್ಯಗಳು ಮುಗಿದ್ಮೇಲೆ ರಾಹುಲ್ ಪ್ರದರ್ಶನ ನೋಡಿ ಎಲ್ಲರು ಬಾಯಿ ಮುಚ್ಚಿಕೊಳ್ತಾರೆ. ಬಟ್ ಈ ಸಲ ಏಷ್ಯಾಕಪ್​ಗೆ ಸೆಲೆಕ್ಟ್ ಆಗೋದು ಡೌಟ್ ಇದೆ. ಯಾಕಂದ್ರೆ ಈಗಾಗ್ಲೇ ಕೆ.ಎಲ್.ರಾಹುಲ್ ಟಿ20ಐ ಕರಿಯರ್ ಬಹುತೇಕ ಅಂತ್ಯವಾದಂತಿದೆ. ಹೀಗಿದ್ರೂ ರಾಹುಲ್ ಮಾತ್ರ ಅದೊಂದು ಕನಸು ನನಸಾಗ್ಲಿ ಅಂತಾ ಬೇಡಿಕೊಳ್ತಿದ್ದಾರೆ.

ಇದನ್ನೂ ಓದಿ : ಸರ್ಕಾರದ ತಪ್ಪಿಗೆ ಚಿನ್ನಸ್ವಾಮಿಗೆ ಶಿಕ್ಷೆ – ವಿಶ್ವಕಪ್ ಶಿಫ್ಟ್ ನಿಂದ ಎಷ್ಟೆಲ್ಲಾ ಲಾಸ್?

ಏಕದಿನ ಮತ್ತು ಟೆಸ್ಟ್ ತಂಡಗಳಲ್ಲಿ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್​ ಆಗಿರುವ ಕೆಎಲ್ ರಾಹುಲ್ ಭಾರತದ ಟಿ20 ತಂಡದಿಂದ ದೂರವಾಗಿ ವರ್ಷಗಳೇ ಉರುಳುತ್ತಿವೆ. ಏಷ್ಯಾಕಪ್​ಗೆ ಟಿ20 ತಂಡದ ಪ್ರಕಟಿಸುವ ಹೊತ್ತಿನಲ್ಲೇ ಕೆ.ಎಲ್.ರಾಹುಲ್ ಟಿ20 ತಂಡಕ್ಕೆ ಕಮ್​ಬ್ಯಾಕ್ ಕನಸು ಕಾಣ್ತಿದ್ದಾರೆ. ಯಾಕಂದ್ರೆ 2026ರ ಟಿ20 ವಿಶ್ವಕಪ್​​ನಲ್ಲಿ ಆಡ್ಬೇಕು ಅನ್ನೋದು ಅವ್ರ ಹೆಬ್ಬಯಕೆ. ಆದ್ರೆ ಅದು ಅಷ್ಟು ಸುಲಭದ ಮಾತಲ್ಲ.

ರಾಹುಲ್ ಗಿಲ್ಲ ಟಿ-20 ಸ್ಥಾನ!

2022ರ ನವೆಂಬರ್​ 10 ರಂದು, ಟಿ20 ಪಂದ್ಯವಾಡಿದ್ದೇ ಲಾಸ್ಟ್

ರಾಹುಲ್ ​ಗೆ ಮತ್ತೆ ಟೀಮ್​ ಇಂಡಿಯಾ ಟಿ20 ತಂಡದ ಡೋರ್​ ಓಪನ್​ ಆಗಿಲ್ಲ

ಟೆಸ್ಟ್ ಹಾಗೂ ಏಕದಿನ ತಂಡದಲ್ಲಿ ಮಾತ್ರವೇ ಸ್ಥಾನ ಉಳಿಸಿಕೊಂಡಿರುವ ರಾಹುಲ್

ರಾಹುಲ್ ರನ್ನ ಸೇರಿಸಿಕೊಳ್ಳೋಕೆ ಮ್ಯಾನೇಜ್​ಮೆಂಟ್ ರೆಡಿ ಇದ್ದಂತೆ ಕಾಣ್ತಿಲ್ಲ

ಡೆಲ್ಲಿ ಪರ ಉತ್ತಮ ಪ್ರದರ್ಶನ ನೀಡಿರುವ ಕೆ.ಎಲ್.ರಾಹುಲ್ ಅದ್ಭುತ ಬ್ಯಾಟ್

ಪಂತ್​ ಬದಲಿಗೆ ಏಷ್ಯಾಕಪ್​ ತಂಡಕ್ಕೆ ಎಂಟ್ರಿ ಕೊಟ್ಟು 2026ರ ಟಿ20 ವಿಶ್ವಕಪ್

ಸಂಜು ಸ್ಯಾಮ್ಸನ್​​ ಇದ್ರೆ, ಮತ್ತೊಂದ್ಕಡೆ ಜಿತೇಶ್ ಶರ್ಮಾ ಪೈಪೋಟಿ ಕೊಡ್ತಾರೆ

ಏಷ್ಯಾಕಪ್​, ಆಸ್ಟ್ರೇಲಿಯಾ, ಸೌತ್ ಆಫ್ರಿಕಾ, ನ್ಯೂಜಿಲೆಂಡ್ ಎದುರಿನ ಟಿ20 ಸರಣಿ

ರಿಷಭ್ ಪಂತ್ ಟಿ20ಗೆ ಕಮ್ ​ಬ್ಯಾಕ್, ಟಾಪ್ ಆರ್ಡರ್ ​ನಲ್ಲಿ ಸಂಜು ಸ್ಯಾಮ್ಸನ್

ಓಪನಿಂಗ್ ಸ್ಲಾಟ್ ​​ನಲ್ಲಿ ಅಭಿಷೇಕ್ ಶರ್ಮಾ, ಶುಭ್​ಮನ್ ಗಿಲ್, ಯಶ್ವಸ್ವಿ ಜೈಸ್ವಾಲ್

ಟಿ-20 ವಿಶ್ವಕಪ್​ಗೆ ಉಳಿದಿರೋದೇ ಇನ್ನು ಆರು ತಿಂಗಳು. ಈಗ್ಲೇ ಭಾರತ ತಂಡದಲ್ಲಿ ಒಂದು ಸ್ಥಾನಕ್ಕೆ ಮೂರ್ನಾಲ್ಕು ಆಪ್ಶನ್ಸ್ ಇದ್ದಾರೆ. ಸಿಚುಯೇಷನ್ ಹಿಂಗಿರುವಾಗ ಕೆಎಲ್ ರಾಹುಲ್ ಮತ್ತೆ ತಂಡ ಸೇರೋದು ಅನುಮಾನವೇ. ಬಹುಶಃ ರಾಹುಲ್ ಟಿ-20 ವಿಶ್ವಕಪ್ ಕನಸು ಕನಸಾಗಿಯೇ ಉಳಿಯೋ ಎಲ್ಲಾ ಲಕ್ಷಣಗಳಿವೆ.

Shantha Kumari