HITಮ್ಯಾನ್ ನಿವೃತ್ತಿ ಮರೆಸಿದ KL – ಬ್ಯಾಟಿಂಗ್ ತಪಸ್ವಿಯಾದ್ರಾ ರಾಹುಲ್?
511 ರನ್.. ಗೊತ್ತಾಯ್ತಾ ಕನ್ನಡಿಗನ ಬೆಲೆ?

ಇಂಗ್ಲೆಂಡ್ ಸರಣಿಯಲ್ಲಿ ಟೀಂ ಇಂಡಿಯಾ ಪರ ಬ್ಯಾಟಿಂಗ್ನಲ್ಲಿ ಬೆನ್ನೆಲುಬಾಗಿ ನಿಂತಿರೋ ಬ್ಯಾಟ್ಸ್ಮನ್ ಅಂದ್ರೆ ಅದು ಕೆಎಲ್ ರಾಹುಲ್. ಅದ್ರಲ್ಲೂ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆಬ್ಸೆನ್ಸ್ನಲ್ಲಿ ಜವಾಬ್ದಾರಿಯನ್ನ ಅಚ್ಚುಕಟ್ಟಾಗಿ ನಿಭಾಯಿಸ್ತಿದ್ದಾರೆ. ಕೂಲ್ & ಕಾಮ್ ಆಗೇ ಇನ್ನಿಂಗ್ಸ್ ಆಡ್ತಿರೋ ರಾಹುಲ್ ತಪಸ್ವಿ ಅನ್ನೋ ಬಿರುದನ್ನೂ ಪಡೆದಿದ್ದಾರೆ. ಆಂಗ್ಲರ ನಾಡಿನಲ್ಲಿ ರಾಹುಲ್ ಪರ್ಫಾಮೆನ್ಸ್ ಬಗೆಗಿನ ರೋಚಕ ವಿಚಾರ ನೋಡೋಣ.
ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಟೀಂ ಇಂಡಿಯಾ ಇಂಗ್ಲೆಂಡ್ ಗೆ ಹಾರಿದಾಗ ತುಂಬಾ ಅಭಿಮಾನಿಗಳನ್ನ ಹಾಗೇ ಕ್ರಿಕೆಟ್ ಎಕ್ಸ್ಪರ್ಟ್ಸ್ನ ಕಾಡಿದ್ದ ಪ್ರಶ್ನೆ ಅಂದ್ರೆ ಸೀನಿಯರ್ಸ್ ಇಲ್ಲದೆ ಜೂನಿಯರ್ಸ್ ಹೇಗೆ ನಿಭಾಯಿಸ್ತಾರೆ ಅನ್ನೋದು. ಅದಕ್ಕೆ ತಕ್ಕಂತೆ ಕೆಲವು ಸಲ ಭಾರತ ಎಡವಿದ್ದೂ ಇದೆ. ಬಟ್ ಸರಣಿಯುದ್ಧಕ್ಕೂ ನಂಬಿಕಸ್ಥ ಆಟಗಾರನಾಗಿ ಆಡ್ತಿರೋದು ಕೆಎಲ್ ರಾಹುಲ್. ರೋಹಿತ್ ಶರ್ಮಾ ನಿವೃತ್ತಿ ಬಳಿಕ ಓಪನರ್ ಆಗಿ ಅವ್ರ ಸ್ಲಾಟ್ನಲ್ಲಿ ಕಣಕ್ಕಿಳಿದ ರಾಹುಲ್ ತಮ್ಮ ಜವಾಬ್ದಾರಿಯನ್ನ ತಲೆ ಮೇಲೆ ಹೊತ್ತು ಸಾಗಿದ್ದಾರೆ. ಕ್ರೂಶಿಯಲ್ ಟೈಮ್ಗಳಲ್ಲೂ ಗಟ್ಟಿಯಾಗಿ ನಿಂತು ತಂಡಕ್ಕೆ ಬೆನ್ನೆಲುಬಾಗಿ ನಿಲ್ಲುತ್ತಿದ್ದಾರೆ.
ಭಾರತ ತಂಡಕ್ಕಾಗಿ ತಪಸ್ವಿಯಂತೆ ಆಡುತ್ತಿದ್ದಾರೆ ರಾಹುಲ್!
ರಾಹುಲ್ ಅಂದ್ರೇನೇ ಹಾಗೆ. ಅಜಾತ ಶತ್ರು ಇದ್ದಂತೆ. ಇಂಗಲ ಭಾರತ ತಂಡದಲ್ಲಿ ಅಗ್ರಸ್ಥಾನದಲ್ಲಿರುವ ರೋಹಿತ್ ಶರ್ಮಾ ಅವರನ್ನು ಟೀಂ ಇಂಡಿಯಾ ಮಿಸ್ ಮಾಡಿಕೊಳ್ಳದಂತೆ ನೋಡಿಕೊಂಡಿದ್ದೇ ಕೆಎಲ್ ರಾಹುಲ್. ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ರೋಹಿತ್ ಟೆಸ್ಟ್ ಪಂದ್ಯಗಳಿಂದ ನಿವೃತ್ತರಾದರು. ಹೀಗಾಗಿ ರಾಹುಲ್ ಓಪನರ್ ಆಗಿ ಕಣಕ್ಕಿಳಿದ್ರು. ಕಠಿಣ ಪರಿಸ್ಥಿತಿಗಳಲ್ಲೂ ಸ್ಥಿರವಾಗಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ರು. ರಾಹುಲ್ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡುತ್ತಿರುವುದನ್ನು ನೋಡಿ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಹುಲ್ ತಪಸ್ವಿಯಂತೆ ಆಡುತ್ತಿದ್ದಾರೆ, ಕ್ರೀಸ್ನಲ್ಲಿ ನಿಜವಾದ ತಪಸ್ವಿ. ನಾಲ್ಕನೇ ಪಂದ್ಯದಲ್ಲಿ ತಮ್ಮ ಶತಕವನ್ನು ತಪ್ಪಿಸಿಕೊಂಡಿರಬಹುದು, ಆದರೆ ಈ ಸರಣಿಯಲ್ಲಿ ಭಾರತದ ಅಗ್ರ ಕ್ರಮಾಂಕದ ಬೆನ್ನೆಲುಬಾಗಿದ್ದಾರೆ ಎಂದು ಕೊಂಡಾಡಿದ್ದಾರೆ.
4 ಪಂದ್ಯ.. 8 ಇನ್ನಿಂಗ್ಸ್.. 511 ರನ್ ಬಾರಿಸಿದ ಕೆಎಲ್!
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ಸಾಲಿಡ್ ಫಾರ್ಮ್ನಲ್ಲಿದ್ದಾರೆ. ಕಳೆದ ನಾಲ್ಕು ಪಂದ್ಯಗಳಲ್ಲಿ ಎರಡು ಶತಕಗಳನ್ನು ಗಳಿಸಿದ್ದಾರೆ ಹಾಗೇ ಪ್ರಸ್ತುತ ಸರಣಿಯಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದು, 63.88 ರ ಅತ್ಯುತ್ತಮ ಸರಾಸರಿಯಲ್ಲಿ 511 ರನ್ ಗಳಿಸಿದ್ದಾರೆ. ಅದೂ ಅಲ್ದೇ ಮ್ಯಾಂಚೆಸ್ಟರ್ನಲ್ಲಿ ನಡೆದ ಪಂದ್ಯದಲ್ಲಿ ರಾಹುಲ್ ಇನ್ನಿಂಗ್ಸ್ ಅಂತೂ ಅಲ್ಟಿಮೇಟ್. 90 ರನ್ಗಳ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಈ ಸ್ಟಾರ್ ಬ್ಯಾಟ್ಸ್ಮನ್, ಪಂದ್ಯ ಡ್ರಾ ಆಗಲು ಅಡಿಪಾಯ ಹಾಕಿದರು. 0 ರನ್ಗೆ 2 ವಿಕೆಟ್ ಕಳ್ಕೊಂಡಿದ್ದ ಭಾರತದ ಪರ ಕ್ಯಾಪ್ಟನ್ ಶುಭ್ಮನ್ ಗಿಲ್ ಜೊತೆಗೆ ಭಾರತವನ್ನು ಕಠಿಣ ಸ್ಥಿತಿಯಿಂದ ಪಾರು ಮಾಡಿದ್ರು. ಆಂಗ್ಲರ ಬೌಲಿಂಗ್ ದಾಳಿಯನ್ನ ಎದುರಿಸಿ 230 ಎಸೆತಗಳನ್ನು ಫೇಸ್ ಮಾಡಿ ದಿಟ್ಟ ಉತ್ತರ ನೀಡಿದ್ರು.
ಗವಾಸ್ಕರ್ ದಾಖಲೆ ಬ್ರೇಕ್ ಮಾಡ್ತಾರಾ ರಾಹುಲ್?
ಮ್ಯಾಂಚೆಸ್ಟರ್ ಟೆಸ್ಟ್ ನ ಎರಡನೇ ಇನ್ನಿಂಗ್ಸ್ ನಲ್ಲಿ 90 ರನ್ ಗಳಿಸಿ ಔಟ್ ಆದ್ರೂ ರಾಹುಲ್ ಹೊಸ ದಾಖಲೆ ಬರೆದ್ರು. ವಿದೇಶದಲ್ಲಿ ಟೆಸ್ಟ್ ಸರಣಿಯೊಂದರಲ್ಲಿ 500+ ರನ್ ಗಳಿಸಿದ ಎರಡನೇ ಭಾರತೀಯ ಆರಂಭಿಕ ಬ್ಯಾಟ್ಸ್ಮನ್ ಎಂಬ ದಾಖಲೆ ಬರೆದರು. ಇದಕ್ಕೂ ಮೊದಲು 1979 ರಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಮಾತ್ರ ಈ ಸಾಧನೆ ಮಾಡಿದ್ದರು. 1979 ರ ಇಂಗ್ಲೆಂಡ್ ಪ್ರವಾಸದಲ್ಲಿ ಆರಂಭಿಕರಾಗಿದ್ದ ಸುನಿಲ್ ಗವಾಸ್ಕರ್ 542 ರನ್ಗಳಿಸಿದ್ದರು. ಸದ್ಯ ರಾಹುಲ್ ಅವರಿಗೆ ಈ ದಾಖಲೆ ಬ್ರೇಕ್ ಮಾಡಲು ಒಂದು ಪಂದ್ಯ ಬಾಕಿ ಇದೆ. ರಾಹುಲ್ ಸರಣಿಯಲ್ಲಿ ಇನ್ನು ಒಂದು ಪಂದ್ಯ ಬಾಕಿ ಇರುವಂತೆ 508 ರನ್ ಗಳಿಸಿದ್ದಾರೆ. ಇನ್ನು 34 ರನ್ ಗಳಿಸಿದ್ರೂ ಗವಾಸ್ಕರ್ ದಾಖಲೆ ಬ್ರೇಕ್ ಮಾಡ್ತಾರೆ. ಸರಣಿ ಆರಂಭಕ್ಕೂ ಮುನ್ನ ರಾಹುಲ್ ವಿಚಾರದಲ್ಲಿ ಕೆಲವ್ರು ಅಪಸ್ವರ ತೆಗೆದಿದ್ರು. ಆದ್ರೆ ತಮ್ಮ ಬ್ಯಾಟ್ ಮೂಲಕವೇ ರಾಹುಲ್ ಎಲ್ಲರ ಬಾಯಿ ಮುಚ್ಚಿಸಿದ್ದಾರೆ. ಐದನೇ ಪಂದ್ಯದಲ್ಲೂ ಅಂತದ್ದೇ ಪ್ರದರ್ಶನ ಬರಲಿ.

ನೋಡಿರಿ

