ರಾಹುಲ್ ರಿವೇಂಜ್ ಗೆ ಆಂಗ್ಲರು ಸುಸ್ತು.. ಸೆಕೆಂಡ್ ಇನ್ನಿಂಗ್ಸ್ ಮಿಸ್ಟೇಕ್ಸ್ ಏನು? – 400+ ರನ್ಸ್ ಹೊಡೆದ್ರೂ ಸೇಫ್ ಅಲ್ವಾ?

ರಾಹುಲ್ ರಿವೇಂಜ್ ಗೆ ಆಂಗ್ಲರು ಸುಸ್ತು.. ಸೆಕೆಂಡ್ ಇನ್ನಿಂಗ್ಸ್ ಮಿಸ್ಟೇಕ್ಸ್ ಏನು? – 400+ ರನ್ಸ್ ಹೊಡೆದ್ರೂ ಸೇಫ್ ಅಲ್ವಾ?

ಇಂಗ್ಲೆಂಡ್ ನೆಲದಲ್ಲಿ ಟೀಂ ಇಂಡಿಯಾ ಟೆಸ್ಟ್ ಸರಣಿ ಗೆಲ್ಲದೆ 18 ವರ್ಷಗಳೇ ಕಳೆದಿವೆ. ಸೋ ಈ ಸಿರೀಸ್​ನಲ್ಲಿ ಶುಭ್​ಮನ್ ಗಿಲ್ ಕ್ಯಾಪ್ಟನ್ಸಿಯಲ್ಲಿ ಏನಾದ್ರೂ ಚರಿತ್ರೆ ಸೃಷ್ಟಿಸ್ತಾರಾ ಅಂತಾ ಕೋಟ್ಯಂತರ ಅಭಿಮಾನಿಗಳು ಕಾಯ್ತಿದ್ದಾರೆ. ಫಸ್ಟ್ ಮ್ಯಾಚ್​ನ ಫಸ್ಟ್ ಇನ್ನಿಂಗ್ಸ್​ನಲ್ಲಿ ಅಬ್ಬರದ ಪ್ರದರ್ಶನ ನೀಡಿದ್ರೂ ಬೌಲಿಂಗ್​ನಲ್ಲಿ ಎಡವಿದ್ದಾರೆ. ಸೆಕೆಂಡ್ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್​ನಲ್ಲೂ ಮಿಸ್ಟೇಕ್ಸ್ ಆಗ್ತಿದೆ.

ಇದನ್ನೂ ಓದಿ: ಯಶ್‌ ಜೊತೆ ರಾಮಾಯಣದಲ್ಲಿ ನಟಿಸಲ್ಲ ಎಂದ ಬಾಲಿವುಡ್‌ ನಟ – ಕಾರಣವೇನು ಗೊತ್ತಾ?

ಇಂಗ್ಲೆಂಡ್ ನ ಲೀಡ್ಸ್ ನಲ್ಲಿ ನಡೆಯುತ್ತಿರೋ ಮೊದಲ ಟೆಸ್ಟ್ ಮ್ಯಾಚ್​ ನಲ್ಲಿ ಭಾರತ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 6 ರನ್​ಗಳ ಮುನ್ನಡೆ ಸಾಧಿಸಿತ್ತು. ಸೆಕೆಂಡ್ ಇನ್ನಿಂಗ್ಸ್​ನಲ್ಲಿ ತ್ರಿಬಲ್ ಡಿಜಿಟ್ ಸ್ಕೋರ್ ತಲುಪೋ ಮುನ್ನವೇ ಮೂರು ವಿಕೆಟ್ ಉರುಳಿಯಾಗಿದೆ. ಹೀಗಾಗಿ ಮಿಡಲ್ ಆರ್ಡರ್ ಬ್ಯಾಟರ್ಸ್ ಕಡೆಯಿಂದ ಬಿಗ್ ಸ್ಕೋರ್ ಬರ್ಲೇಬೇಕಾದ ಒತ್ತಡದ ಸಿಚುಯೇಷನ್​ನಲ್ಲಿ ಭಾರತ ಇತ್ತು. ಸೋ ಇಂಥಾ ಟೈಮಲ್ಲಿ ಕೆಎಲ್ ರಾಹುಲ್ ಮತ್ತು ರಿಷಭ್ ಪಂತ್ ನಡುವೆ ಒಂದೊಳ್ಳೆ ಅಂಡರ್ ಸ್ಟಾಂಡಿಂಗ್ ಇತ್ತು.

ಸೀನಿಯರ್ ಆಗಿ ರಾಹುಲ್ ಜವಾಬ್ದಾರಿಯುತ ಬ್ಯಾಟಿಂಗ್!

ಯೆಸ್. ಭಾರತ ತಂಡದಲ್ಲಿ ಪ್ರಸ್ತುತ ಕೆಎಲ್ ರಾಹುಲ್ ಸೀನಿಯರ್ ಪ್ಲೇಯರ್ ಹಾಗೇ ಇಂಗ್ಲೆಂಡ್​ನಲ್ಲಿ ಅತೀ ಹೆಚ್ಚು ಪಂದ್ಯಗಳನ್ನ ಕಲೆ ಹಾಕಿರೋ ಬ್ಯಾಟ್ಸ್​ಮನ್. ಜೈಸ್ವಾಲ್ ಜೊತೆ ಇನ್ನಿಂಗ್ಸ್ ಆರಂಭಿಸಿದ ರಾಹುಲ್​ಗೆ ಒಳ್ಳೆ ಪಾರ್ಟ್ನರ್​ಶಿಪ್ ಸಿಗ್ಲಿಲ್ಲ. ಜೈಸ್ವಾಲ್ 4 ರನ್​ಗಳಿಗೆ ಔಟಾದ್ರು. ಆ ಬಳಿಕ ಜೊತೆಯಾದ ಸಾಯಿ ಸುದರ್ಶನ್​ ಒಳ್ಳೆ ಫಾರ್ಮ್​ಗೆ ಬರ್ತಾ ಇದ್ರು. ಇಬ್ಬರ ಜೋಡಿ 60+ ರನ್ಸ್ ಕಲೆ ಹಾಕಿತ್ತು. ಅಷ್ಟ್ರಲ್ಲೇ 30 ರನ್​​ಗಳಿಗೆ ಸಾಯಿ ಸುದರ್ಶನ್ ವಿಕೆಟ್ ಒಪ್ಪಿಸಿದ್ರು. ಇನ್ನು ನಾಲ್ಕನೇ ಸ್ಲಾಟ್​ನಲ್ಲಿ ಬಂದ ಗಿಲ್ ಆದ್ರೂ ಸಾಥ್ ಕೊಡ್ತಾರೆ ಅಂದ್ರೆ ಗಿಲ್ ಕೂಡ 8 ರನ್​ಗಳಿಗೆ ಔಟಾಗೋ ಮೂಲಕ ನಿರಾಸೆ ಮೂಡಿಸಿದ್ರು. 100 ರನ್ ದಾಟೋ ಮುನ್ನವೇ ಭಾರತ 3 ವಿಕೆಟ್ ಕಳ್ಕೊಂಡಿತ್ತು. ಇಂಥ ಟೈಮಲ್ಲಿ ಕೂಲ್ ಌಂಡ್ ಕಾಮ್ ಆಗಿ ಬ್ಯಾಟ್ ಬೀಸಿದ ರಾಹುಲ್ ಇಂಗ್ಲೆಂಡ್ ಬೌಲರ್​ಗಳನ್ನ ಕಾಡಿದ್ರು. ತಾಳ್ಮೆಯಿಂದಲೇ ಬ್ಯಾಟಿಂಗ್ ಮಾಡಿ ನಿಧಾನವಾಗಿಯೇ ರನ್​ಗಳನ್ನ ಪೇರಿಸಿದ್ರು.

ಫಸ್ಟ್ ಇನ್ನಿಂಗ್ಸ್ ಸೆಂಚುರಿ.. ಸೆಕೆಂಡ್ ಇನ್ನಿಂಗ್ಸ್ ಸಿಂಗಲ್ ಡಿಜಿಟ್!

ಅಸಲಿಗೆ ಮೊದಲನೇ ಇನ್ನಿಂಗ್ಸ್ ನಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಶುಭ್​ಮನ್ ಗಿಲ್ ಸೆಂಚುರಿ ಬಾರಿಸಿದ್ರು. ಜೈಸ್ವಾಲ್ 101 ರನ್ ಬಾರಿಸಿದ್ರೆ ಗಿಲ್ 147 ರನ್ ಕಲೆ ಹಾಕಿದ್ರು. ಹೀಗಾಗಿ ಎರಡನೇ ಇನ್ನಿಂಗ್ಸ್​ನಲ್ಲೂ ಈ ಇಬ್ಬರ ಬ್ಯಾಟ್​ನಿಂದ ಒಂದೊಳ್ಳೆ ಸ್ಕೋರ್ ಬರುತ್ತೆ ಅಂತಾನೇ ನಿರೀಕ್ಷೆ ಮಾಡಲಾಗಿತ್ತು. ಆದ್ರೆ ಇಬ್ಬರೂ ಕೂಡ ಸಿಂಗಲ್ ಡಿಜಿಟ್​ಗೆ ಔಟಾದ್ರು. ಮೂರನೇ ದಿನದಾಟದಲ್ಲಿ ಜೈಸ್ವಾಲ್ 4 ರನ್​ಗಳಿಗೆ ಔಟಾದ್ರೆ ಶುಭ್​ಮನ್ ಗಿಲ್ ನಾಲ್ಕನೇ ದಿನದಾಟದ ಆರಂಭದಲ್ಲೇ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರು. ಪರಿಣಾಮ 100 ರನ್ ಮುಟ್ಟೋ ಮುನ್ನವೇ ಭಾರತ ಪ್ರಮುಖ 3 ವಿಕೆಟ್​ಗಳನ್ನ ಕಳ್ಕೊಂಡಿತ್ತು.

ಟೀಂ ಇಂಡಿಯಾದಿಂದ ಸಾಲು ಸಾಲು ಮಿಸ್ಟೇಕ್ಸ್!

ಇಂಗ್ಲೆಂಡ್ ವಿರುದ್ಧದ ಮೊದಲ ಇನ್ನಿಂಗ್ಸ್​ನಲ್ಲಿ ಭಾರತದ ಪರ ಮೂವರು ಸೆಂಚುರಿ ಸಿಡಿಸಿದ್ರು. ಯಶಸ್ವಿ ಜೈಸ್ವಾಲ್, ಶುಭ್​ಮನ್ ಗಿಲ್ ಹಾಗೇ ರಿಷಭ್ ಪಂತ್. ಕೆಎಲ್ ರಾಹುಲ್ 42 ರನ್ಸ್ ಕಲೆ ಹಾಕಿದ್ರು. ಆದ್ರೆ ಉಳಿದವರ್ಯಾರಿಂದಲೂ ನಿರೀಕ್ಷಿತ ಪ್ರದರ್ಶನ ಬರ್ಲಿಲ್ಲ. ಹೀಗಾಗಿಭಾರತ ತಂಡ 471 ರನ್ ಗಳಿಸಿತ್ತು. ಇನ್ನು, ಇಂಗ್ಲೆಂಡ್ ತಂಡವು 465 ರನ್​ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿತ್ತು. ಌಕ್ಚುಲಿ ಓಲಿ ಪೋಪ್ ಮತ್ತು ಹ್ಯಾರಿ ಬ್ರೂಕ್ ಹೊರತುಪಡಿಸಿ ಇಂಗ್ಲೆಂಡ್‌ನ ಯಾವುದೇ ಬ್ಯಾಟ್ಸ್‌ಮನ್ ದೊಡ್ಡ ಇನ್ನಿಂಗ್ಸ್ ಕಟ್ಟಲಿಲ್ಲ. ಆದ್ರೂ ಭಾರತದ ಟಾರ್ಗೆಟ್​ಗೆ ಕ್ಲೋಸ್ ಬಂದಿದ್ರು. ಅದಕ್ಕೆ ಕಾರಣ ಭಾರತದ ಆಟಗಾರರ ಮಿಸ್ಟೇಕ್ಸ್. ಹ್ಯಾರಿ ಬ್ರೂಕ್ ಯಾವುದೇ ರನ್​ ಗಳಿಸದೇ ಶೂನ್ಯಕ್ಕೆ ಹೋಗಬೇಕಾಗಿತ್ತು. ಆದ್ರೆ ಬುಮ್ರಾ ಎಸೆದ ಬಾಲ್ ನೋ ಬಾಲ್ ಆಗಿತ್ತು. ಈ ಜೀವದಾನ ಪಡೆದ ಬುಮ್ರಾ 99 ರನ್​ಗಳಿಸಿ ಔಟ್ ಆದರು. ಇದಕ್ಕಿಂತ ಬೇಸರದ ಸಂಗತಿ ಅಂದ್ರೆ ಕಳಪೆ ಫೀಲ್ಡಿಂಗ್. ಇಡೀ ಇನ್ನಿಂಗ್ಸ್​ನಲ್ಲಿ 6 ಕ್ಯಾಚ್​ಗಳನ್ನ ಡ್ರಾಪ್ ಮಾಡಿದ್ರು. ಇನ್ನು ಬೌಲಿಂಗ್​ನಲ್ಲೂ ಕೂಡ ಬುಮ್ರಾ ಹೊರತುಪಡಿಸಿ ಉಳಿದವರಿಂದ ನಿರೀಕ್ಷಿತ ಪ್ರದರ್ಶನ ಬರ್ಲಿಲ್ಲ. ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ವಿಕೆಟ್ ತೆಗೆದ್ರೂ ಕೂಡ ಸಾಕಷ್ಟು ರನ್​ಗಳನ್ನ ಬಿಟ್ಟುಕೊಟ್ಟು ದುಬಾರಿಯಾದ್ರು. ಬಟ್ ಸೆಕೆಂಡ್ ಇನ್ನಿಂಗ್ಸ್ ಬೌಲಿಂಗ್​ನಲ್ಲಿ ಈ ಮಿಸ್ಟೇಕ್ಸ್​ನ ಮತ್ತೆ ರಿಪೀಟ್ ಮಾಡಬಾರದು ಅಷ್ಟೇ.

ಆಸ್ಟ್ರೇಲಿಯಾ ಹೆಸರಿನಲ್ಲಿಗೆ ಹೈಯೆಸ್ಟ್ ರನ್ ಚೇಸ್ ದಾಖಲೆ!

ಹೆಡಿಂಗ್ಲೆ ಕ್ರೀಡಾಂಗಣ ಟೆಸ್ಟ್ ಕ್ರಿಕೆಟ್‌ನಲ್ಲಿ ದೊಡ್ಡ ದೊಡ್ಡ ಚೇಸಿಂಗ್‌ಗಳಿಗೆ ಹೆಸರಾಗಿದೆ. 1948ರಲ್ಲಿ ಆಸ್ಟ್ರೇಲಿಯಾ ತಂಡವು 404 ರನ್‌ಗಳ ಗುರಿಯನ್ನು 7 ವಿಕೆಟ್‌ಗಳಿಗೆ ಯಶಸ್ವಿಯಾಗಿ ಬೆನ್ನಟ್ಟಿತ್ತು. ಇದು ಈ ಕ್ರೀಡಾಂಗಣದ ಗರಿಷ್ಠ ಚೇಸಿಂಗ್ ದಾಖಲೆಯಾಗಿದೆ. ಆ ಪಂದ್ಯದಲ್ಲಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್​​ನಲ್ಲಿ 496ರನ್​ಗಳಿಸಿದರೆ, ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ 458 ರನ್​ಗಳಿಸಿತ್ತು. ನಂತರ ಇಂಗ್ಲೆಂಡ್ 38 ರನ್​ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್​​ನಲ್ಲಿ 365 ರನ್​ಗಳಿಸಿ ಡಿಕ್ಲೇರ್ ಘೋಷಿಸಿ ಆಸೀಸ್​ಗೆ 404 ರನ್​ಗಳ ಗುರಿ ನೀಡಿತ್ತು. ಈ ಮೊತ್ತವನ್ನ ಚೇಸ್ ಮಾಡಿದ ಕಾಂಗರೂ ಪಡೆ 6 ವಿಕೆಟ್​ಗಳ ಜಯ ಸಾಧಿಸಿತ್ತು. 77 ವರ್ಷಗಳಿಂದ ಈ ದಾಖಲೆ ಆಸ್ಟ್ರೇಲಿಯಾ ಹೆಸರಿನಲ್ಲಿಯೇ ಇದೆ. ಸೋ ಭಾರತ 400+ ರನ್ಸ್ ಕಲೆ ಹಾಕಿದ್ರೂ ಸೇಫ್ ಅಂತಾ ಹೇಳೋಕೆ ಆಗಲ್ಲ.

Shwetha M