ಲಾರ್ಡ್ಸ್ ಮ್ಯೂಸಿಯಂನಲ್ಲಿ KL ಜೆರ್ಸಿ – ವಿಶ್ವಶ್ರೇಷ್ಠರ ಸಾಲಿಗೆ ಸೇರಿದ ಕನ್ನಡಿಗ
ಪವಿತ್ರ ಮೈದಾನದಲ್ಲಿ ರಾಹುಲ್ ಹೆಜ್ಜೆಗುರುತು  

ಲಾರ್ಡ್ಸ್ ಮ್ಯೂಸಿಯಂನಲ್ಲಿ KL ಜೆರ್ಸಿ – ವಿಶ್ವಶ್ರೇಷ್ಠರ ಸಾಲಿಗೆ ಸೇರಿದ ಕನ್ನಡಿಗಪವಿತ್ರ ಮೈದಾನದಲ್ಲಿ ರಾಹುಲ್ ಹೆಜ್ಜೆಗುರುತು  

ಮೂರನೇ ಪಂದ್ಯದ ಸೋಲಿನ ನಡುವೆಯೂ ಲಾರ್ಡ್ಸ್‌ನಲ್ಲಿ ಕೆಎಲ್ ರಾಹುಲ್ ಸಿಡಿಸಿದ ಶತಕ ಜೀವಂತವಾಗಿದೆ. ಕೆಎಲ್ ರಾಹುಲ್ ಲಾರ್ಡ್ಸ್‌ ಮೈದಾನದಲ್ಲಿ ತಮ್ಮ ಹತ್ತನೇ ಟೆಸ್ಟ್ ಶತಕ ಮತ್ತು ಇದೇ ಮೈದಾನದಲ್ಲಿ ಎರಡನೇ ಶತಕವನ್ನು ಸಿಡಿಸಿದ್ರು. ಬಳಿಕ ತಾವು ಸಹಿ ಮಾಡಿದ ಜೆರ್ಸಿಯನ್ನು ಲಾರ್ಡ್ಸ್ ಮ್ಯೂಸಿಯಂಗೆ ನೀಡಿದ್ದಾರೆ. ರಾಹುಲ್ ಸಹಿಯೊಂದಿಗೆ ನೀಡಿದ ಜೆರ್ಸಿಯನ್ನು ಮ್ಯೂಸಿಯಂನಲ್ಲಿ ಪ್ರದರ್ಶಿಸಲಾಗಿದೆ. ಕ್ರಿಕೆಟ್​ನ ಅತ್ಯಂತ ಪವಿತ್ರ ಮೈದಾನದಲ್ಲಿ ತಮ್ಮ ಹೆಸರುಗಳನ್ನು ಕೆತ್ತಿದ ಕ್ರಿಕೆಟ್ ಲೋಕದ ಸರ್ವಶ್ರೇಷ್ಠರ ಪ್ಯಾಂಥಿಯನ್‌ಗೆ ರಾಹುಲ್ ಜೆರ್ಸಿ ಶಾಶ್ವತ ಸೇರ್ಪಡೆಯಾಗಿದೆ.

ಇದನ್ನೂ ಓದಿ :  ಜು. 23 ರಿಂದ ಯುಕೆ- ಮಾಲ್ಡೀವ್ಸ್‌ಗೆ ಪ್ರಧಾನಿ ಮೋದಿ ಪ್ರವಾಸ – ಭಾರತದ ರಾಜತಾಂತ್ರಿಕ ಸಂಬಂಧಗಳನ್ನು ಬಲಪಡಿಸುವ ಗುರಿ

33 ವರ್ಷದ ರಾಹುಲ್ ನಿರ್ಣಾಯಕ ಇನ್ನಿಂಗ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ರು. ಟೆಸ್ಟ್ ಸರಣಿಯ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನ ರಾಹುಲ್ 177 ಎಸೆತಗಳಲ್ಲಿ 13 ಬೌಂಡರಿಗಳೊಂದಿಗೆ 100 ರನ್ ಗಳಿಸಿ ಈ ಹೆಜ್ಜೆಗುರುತು ಮೂಡಿಸಿದ್ರು. ಆದ್ರೆ ಶತಕ ಬಾರಿಸಿದ ನಂತರ ರಾಹುಲ್ ಅವರನ್ನು ಶೋಯೆಬ್ ಬಶೀರ್ ಔಟ್ ಮಾಡಿದ್ರು. ಭಾರತದ 387 ರನ್‌ಗಳ ಮೊತ್ತದಲ್ಲಿ 100 ರನ್ ಗಳಿಸಿ ಗರಿಷ್ಠ ಸ್ಕೋರ್ ಗಳಿಸಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ರಾಹುಲ್ ಕೂಡ ಹೋರಾಟದ 39 ರನ್ ಗಳಿಸಿದರು, ಆದಾಗ್ಯೂ, ಭಾರತ ಪಂದ್ಯವನ್ನ ಸೋಲಬೇಕಾಯ್ತು. ಅಷ್ಟೇ ಅಲ್ದೇ ಇದೇ ಮೈದಾನದಲ್ಲೇ ಈ ಹಿಂದೆ 2021 ರಲ್ಲಿ ಶತಕ ಗಳಿಸಿದರು. 250 ಎಸೆತಗಳಲ್ಲಿ 129 ರನ್ ಗಳಿಸಿದರು. ಟೀಮ್ ಇಂಡಿಯಾ ಆ ಟೆಸ್ಟ್ ಪಂದ್ಯವನ್ನು 5 ನೇ ದಿನದಂದು 151 ರನ್‌ಗಳ ಅಂತರದಿಂದ ಗೆದ್ದುಕೊಂಡಿತು. ಟೀಮ್ ಇಂಡಿಯಾ ಪರ ಲಾರ್ಡ್ಸ್​ ಮೈದಾನದಲ್ಲಿ 2 ಶತಕ ಸಿಡಿಸಿದ 2ನೇ ಆಟಗಾರ ಎಂಬ ಹೆಗ್ಗಳಿಕೆಯನ್ನು ಕೆಎಲ್ ರಾಹುಲ್ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ದಿಲೀಪ್ ವೆಂಗ್​ಸರ್ಕಾರ್ ಲಾರ್ಡ್ಸ್​ನಲ್ಲಿ 3 ಶತಕ ಸಿಡಿಸಿದ್ದರು. ಇದೀಗ 2ನೇ ಶತಕದೊಂದಿಗೆ ಕೆಎಲ್ ರಾಹುಲ್ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಕ್ಲಾಸಿಕ್ ಬ್ಯಾಟಿಂಗ್​ನಿಂದಲೇ ಸದ್ದು ಮಾಡ್ತಿರೋ ರಾಹುಲ್ ಟೆಸ್ಟ್ ನಲ್ಲಿ ಹಲವು ದಾಖಲೆಗಳನ್ನ ಬರೆದಿದ್ದಾರೆ. ಇಂಗ್ಲೆಂಡ್‌ನಲ್ಲಿ 4 ಟೆಸ್ಟ್ ಶತಕಗಳನ್ನು ಗಳಿಸಿದ ಭಾರತದ ಏಕೈಕ ಆರಂಭಿಕ ದಾಂಡಿಗ ಕೆಎಲ್ ರಾಹುಲ್. ಆಗಿದ್ದಾರೆ. ಹಾಗೇ ಸೌತ್ ಆಫ್ರಿಕಾ, ಇಂಗ್ಲೆಂಡ್, ನ್ಯೂಝಿಲೆಂಡ್, ಆಸ್ಟ್ರೇಲಿಯಾ ಅಂದ್ರೆ SENA ದೇಶಗಳಲ್ಲಿ ಆರಂಭಿಕನಾಗಿ ಕಣಕ್ಕಿಳಿದು ಅತೀ ಹೆಚ್ಚು ರನ್​ಗಳಿಸಿದ ಬ್ಯಾಟರ್​ಗಳ ಪಟ್ಟಿಯಲ್ಲಿ ಕೆಎಲ್ ರಾಹುಲ್ ದ್ವಿತೀಯ ಸ್ಥಾನಕ್ಕೇರಿದ್ದಾರೆ. ಸುನಿಲ್ ಗವಾಸ್ಕರ್ ಅಗ್ರಸ್ಥಾನದಲ್ಲಿದ್ದಾರೆ. ಅಲ್ದೇ ಕೆಎಲ್ ರಾಹುಲ್ ಟೆಸ್ಟ್ ಕ್ರಿಕೆಟ್​ನಲ್ಲಿ ಈವರೆಗೆ 10 ಶತಕ ಸಿಡಿಸಿದ್ದಾರೆ. ಇದರಲ್ಲಿ 9 ಸೆಂಚುರಿಗಳು ಮೂಡಿಬಂದಿರುವುದು ವಿದೇಶದಲ್ಲಿ ಎಂಬುದು ವಿಶೇಷ.

Shantha Kumari