ಕೆಎಲ್ ರಾಹುಲ್ ಫಸ್ಟ್ ಚಾಯ್ಸ್ – CTಗೂ ಕನ್ನಡಿಗನೇ ವಿಕೆಟ್ ಕೀಪರ್

ಕೆಎಲ್ ರಾಹುಲ್ ಫಸ್ಟ್ ಚಾಯ್ಸ್ – CTಗೂ ಕನ್ನಡಿಗನೇ ವಿಕೆಟ್ ಕೀಪರ್

ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನ ಗೆದ್ದಿರೋ ಭಾರತ ಇದೀಗ ಚಾಂಪಿಯನ್ಸ್ ಟ್ರೋಫಿಗೆ ಸಿದ್ಧವಾಗಿದೆ. ಮಂಗಳವಾರವಷ್ಟೇ ಐಸಿಸಿ ಟೂರ್ನಿಗಾಗಿ ಪರಿಷ್ಕೃತ ತಂಡವನ್ನೂ ಅನೌನ್ಸ್ ಮಾಡಿದೆ. ಜಸ್ಪ್ರೀತ್ ಬುಮ್ರಾ ಮತ್ತು ಜೈಸ್ವಾಲ್​ರನ್ನ ಹೊರಗಿಟ್ಟು ಹರ್ಷಿತ್ ರಾಣಾ ಮತ್ತು ವರುಣ್ ಚಕ್ರವರ್ತಿಗೆ ಚಾನ್ಸ್ ನೀಡಲಾಗಿದೆ. ಹೀಗಾಗಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾದ ಪ್ಲೇಯಿಂಗ್ 11 ಹೇಗಿರುತ್ತೆ ಅನ್ನೋ ಕುತೂಹಲ ಜೋರಾಗಿದೆ. ಅದ್ರಲ್ಲೂ ವಿಕೆಟ್ ಕೀಪರ್ ರೇಸ್​ನಲ್ಲಿ ರಿಷಭ್ ಪಂತ್ ಮತ್ತು ಕೆಎಲ್ ರಾಹುಲ್ ಇರೋದ್ರಿಂದ ಅಂತಿಮವಾಗಿ ಯಾರು ಕಣಕ್ಕಿಳಿಯಬಹುದು ಅನ್ನೋ ಪ್ರಶ್ನೆಗಳು ಮೂಡಿದ್ವು. ಈ ಅನುಮಾನಗಳಿಗೆ ಕೋಚ್ ಗಂಭೀರ್ ಕ್ಲಾರಿಟಿ ಕೊಟ್ಟಿದ್ದಾರೆ.

ಇದನ್ನೂ ಓದಿ : ಕೊಹ್ಲಿ ಶ್ರೀಕೃಷ್ಣ, ಪಾಟೀದಾರ್ ಅರ್ಜುನ – ಆರ್‌ಸಿಬಿ ನೂತನ ನಾಯಕನಿಗೆ ಕೊಹ್ಲಿ ಶುಭ ಹಾರೈಕೆ

ಫೆಬ್ರವರಿ 19 ರಿಂದ ಚಾಂಪಿಯನ್ಸ್​ ಟ್ರೋಫಿ ಆರಂಭವಾಗಲಿದೆ. ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಕ್ಲೀನ್​ಸ್ವೀಪ್ ಮಾಡಿರುವ ಟೀಂ ಇಂಡಿಯಾ, ಫುಲ್ ಜೋಶ್​ನಲ್ಲಿದೆ. ಬಲಿಷ್ಠ ಪಡೆಗಳನ್ನು ಹೊಂದಿರುವ ಟೀಂ ಇಂಡಿಯಾದಲ್ಲಿ ಯಾರನ್ನು ಆಡಿಸಬೇಕು? ಯಾರನ್ನು ಬೆಂಚ್​ ಕಾಯಿಸಬೇಕು ಅನ್ನೋ ಗೊಂದದಲ್ಲಿ ಮ್ಯಾನೇಜ್ಮೆಂಟ್ ಇದೆ. ಅದರಲ್ಲೂ ವಿಕೆಟ್ ಕೀಪರ್ ವಿಚಾರದಲ್ಲಿ ಪ್ರಬಲ ಪೈಪೋಟಿ ನಡೆಯುತ್ತಿದೆ. ರಿಷಭ್ ಪಂತ್ ಮತ್ತು ಕೆಎಲ್ ರಾಹುಲ್ ನಡುವೆ ಯಾರು ಬೆಸ್ಟ್ ಚಾಯ್ಸ್ ಅನ್ನೋ ಚರ್ಚೆ ನಡೀತಿದೆ. ಆದ್ರೆ ಇದಕ್ಕೆ ಗೌತಮ್ ಗಂಭೀರ್ ಕ್ಲಾರಿಟಿ ಕೊಟ್ಟಿದ್ದಾರೆ. ತಂಡದಲ್ಲಿ ಇಬ್ಬರು ವಿಕೆಟ್ ಕೀಪರ್​ಗಳಿದ್ದಾರೆ. ಹೀಗಿರುವಾಗ ಇಬ್ಬರನ್ನೂ ಆಡಿಸೋಕೆ ಆಗಲ್ಲ. ಚಾಂಪಿಯನ್ಸ್ ಟ್ರೋಫಿಯಲ್ಲಿ ನಮ್ಮ ಮೊದಲ ಆದ್ಯತೆ ಕೆ.ಎಲ್.ರಾಹುಲ್. ನಾವು ಅವರೇ ಆಡಬೇಕು ಎಂದು ಬಯಸುತ್ತೇವೆ. ಪಂತ್​ ಆಡಬಾರದು ಅಂತಲ್ಲ. ಅವರಿಗೆ ಅವಕಾಶ ಸಿಕ್ಕರೆ ಖಂಡಿತ ಅವರನ್ನೂ ಬಳಸಿಕೊಳ್ಳುತ್ತೇವೆ ಎಂದಿದ್ದಾರೆ. ಸೋ ಅಲ್ಲಿಗೆ ರಾಹುಲ್​ಗೆ ಫಸ್ಟ್ ಪ್ರಿಪರೆನ್ಸ್ ಇರಲಿದೆ.

ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಪಂದ್ಯಗಳಲ್ಲಿ ಕೆ.ಎಲ್.ರಾಹುಲ್ ಪ್ರದರ್ಶನ ಕಳಪೆಯಾಗಿತ್ತು. ಇದರಿಂದ ರಾಹುಲ್ ಟೀಕೆಗೆ ಗುರಿಯಾಗಿದ್ದರು. ಅಲ್ದೇ ಅಕ್ಷರ್ ಪಟೇಲ್ ಆದ್ಮೇಲೆ ರಾಹುಲ್​ರನ್ನ ಕಣಕ್ಕಿಳಿಸಿದ್ದೂ ಕೂಡ ಆಕ್ರೋಶಕ್ಕೆ ಕಾರಣವಾಗಿತ್ತು. ರಾಹುಲ್ ನಾರ್ಮಲಿ 5ನೇ ಸ್ಲಾಟ್​ನಲ್ಲೇ ಆಡ್ತಾರೆ. ಆದ್ರೆ 6 ಕ್ರಮಾಂಕದಲ್ಲಿ ಕಳಿಸಿದ್ದಕ್ಕೆ ಅವ್ರ ಪ್ರದರ್ಶನ ಚೆನ್ನಾಗಿಲ್ಲ ಎಂದು ಕಿಡಿ ಕಾಡಿದ್ರು. ರಾಹುಲ್ ಆಯ್ಕೆ ಸಂಬಂಧ ಗಂಭೀರ್ ಮತ್ತು ಕ್ಯಾಪ್ಟನ್ ರೋಹಿತ್ ಮಧ್ಯೆ ಭಿನ್ನಾಭಿಪ್ರಾಯ ಇದೆ. ಪಟ್ಟು ಹಿಡಿದು ರಾಹುಲ್ ಅವರನ್ನೇ ಗಂಭೀರ್ ಇಂಗ್ಲೆಂಡ್ ಸರಣಿಯಲ್ಲಿ ಆಡಿಸಿದ್ದರು. ಆದರೆ ರಾಹುಲ್ ಏನೂ ಆಡಿಲ್ಲ ಎಂಬ ಚರ್ಚೆ ಶುರುವಾಗಿತ್ತು. ಆದರೆ ಮೂರನೇ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಆಡಿದ ಕೆಎಲ್​ ರಾಹುಲ್ ಪ್ರದರ್ಶನ ಇಂಪ್ರೆಸೀವ್ ಆಗಿದೆ. ಹೀಗಾಗಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಕನ್ನಡಿಗ ಕಣಕ್ಕೆ ಇಳಿಯೋದು ಪಕ್ಕಾ ಆಗ್ತಿದೆ.

ಒಂದು ದಶಕಕ್ಕೂ ಹೆಚ್ಚು ಕಾಲ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿರುವ ರಾಹುಲ್ ಅವರನ್ನು ಎಲ್ಲಾ ಕ್ರಮಾಂಕಗಳಲ್ಲೂ ಕಣಕ್ಕಿಳಿಸಲಾಗಿದೆ. ಇನ್ನೂ ಒಂದು ನಿರ್ದಿಷ್ಟ ಸ್ಥಾನದಲ್ಲಿ ರಾಹುಲ್ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿಲ್ಲ. ಆದಾಗ್ಯೂ, ODIಗಳಲ್ಲಿ 5ನೇ ಕ್ರಮಾಂಕದಲ್ಲಿ ಬೆಸ್ಟ್ ಬ್ಯಾಟರ್ ಆಗಿದ್ದಾರೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 111 ಪಂದ್ಯಗಳಲ್ಲಿ 5 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಈ ಸ್ಲಾಟ್​ನಲ್ಲಿ ರಾಹುಲ್ 60 ಕ್ಕಿಂತ ಹೆಚ್ಚು ಸರಾಸರಿ ಮತ್ತು 95 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್ ನಲ್ಲಿ ರನ್ ಗಳಿಸಿರೋ ಏಕೈಕ ಪ್ಲೇಯರ್. ಏಕದಿನ ವಿಕೆಟ್-ಕೀಪರ್ ಬ್ಯಾಟ್ಸ್‌ಮನ್‌ಗಳಲ್ಲಿ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಐದನೇ ಕ್ರಮಾಂಕದಲ್ಲಿ ರಾಹುಲ್ 1,246 ರನ್‌ಗಳನ್ನು ಗಳಿಸಿದ್ದಾರೆ. ಅದೂ ಕೂಡ 62.30 ಸರಾಸರಿ ಮತ್ತು 97.49 ರ ಸ್ಟ್ರೈಕ್ ರೇಟ್‌ನಲ್ಲಿ ಅನ್ನೋದೇ ಅಚ್ಚರಿ. ಹೀಗಾಗಿ ಕ್ರಿಕೆಟ್​ನಲ್ಲಿ ಆಟಗಾರರಿಗೆ ಸ್ಲಾಟ್ ಕೂಡ ಇಂಪಾರ್ಟೆಂಟ್ ಆಗುತ್ತೆ ಅನ್ನೋದು ರಾಹುಲ್ ವಿಚಾರದಲ್ಲೂ ಪ್ರೂವ್ ಆಗ್ತಿದೆ.

Shantha Kumari

Leave a Reply

Your email address will not be published. Required fields are marked *