ಡ್ರೆಸ್ಸಿಂಗ್ ರೂಮ್ ನಲ್ಲಿ ರೋಹಿತ್ & ವಿರಾಟ್ ಆಬ್ಸೆನ್ಸ್ ಕಾಡುತ್ತೆ – ಬೇಸರ ಹೊರ ಹಾಕಿದ ಕೆಎಲ್ ರಾಹುಲ್

ಡ್ರೆಸ್ಸಿಂಗ್ ರೂಮ್ ನಲ್ಲಿ ರೋಹಿತ್ & ವಿರಾಟ್ ಆಬ್ಸೆನ್ಸ್ ಕಾಡುತ್ತೆ – ಬೇಸರ ಹೊರ ಹಾಕಿದ ಕೆಎಲ್ ರಾಹುಲ್

ಒಂದ್ಕಡೆ ಬಲಿಷ್ಠ ಇಂಗ್ಲೆಂಡ್ ತಂಡ.. ಮತ್ತೊಂದೆಡೆ ಯುವಪಡೆಯೇ ತುಂಬಿರೋ ಯಂಗ್ ಇಂಡಿಯಾ. ಸೋ ಈ ಬ್ಯಾಟಲ್​ನ ನೋಡೋಕೆ ಕ್ರಿಕೆಟ್ ಫ್ಯಾನ್ಸ್ ಎಲ್ರೂ ಕಾಯ್ತಿದ್ದಾರೆ. ಅದ್ರಲ್ಲೂ ಈ ಫೈಟ್​ನಲ್ಲಿ ಎಲ್ಲರ ಕಣ್ಣು ಕೆಎಲ್ ರಾಹುಲ್ ಮೇಲಿದೆ. ಇರೋರಲ್ಲಿ ಕೆಎಲ್ ರಾಹುಲ್​ಗೆ ಇಂಗ್ಲೆಂಡ್​ನಲ್ಲಿ ಹೆಚ್ಚು ಮ್ಯಾಚ್​ಗಳನ್ನ ಆಡಿರೋ ಅನುಭವ ಇದೆ. ಹೀಗಿದ್ರೂ ಇಂಗ್ಲೆಂಡ್ ಸರಣಿ ರಾಹುಲ್ ಪಾಲಿಗೆ ಸ್ವಲ್ಪ ವಿಚಿತ್ರವಾಗಿ ಕಾಣ್ತಿದೆ. ಯಾಕಂದ್ರೆ ಈ ಸಲ ರಾಹುಲ್ ಪಾಲಿಗೆ ಮೆಂಟರ್, ಗೈಡರ್, ವೆಲ್ ವಿಶರ್ ಎಲ್ಲವೂ ಆಗಿದ್ದ ರೋಹಿತ್ & ಕೊಹ್ಲಿ ಜೊತೆಗಿಲ್ಲ.

ಇದನ್ನೂ ಓದಿ : 10 ಅಲ್ಲ 11 ದಿನಗಳ ಕಾಲ ಮೈಸೂರು ದಸರಾ – 410 ವರ್ಷದಲ್ಲಿ ಇದೇ ಮೊದಲ ಬಾರಿಗೆ 11ದಿನ ದಸರಾ

ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಸೆಣಸಾಡಲಿದ್ದು, ಪಂದ್ಯದ ಆರಂಭಕ್ಕೂ ಮುನ್ನ ಮಾತ್ನಾಡಿರೋ ರಾಹುಲ್ ಇಬ್ಬರು ದಿಗ್ಗಜ ಆಟಗಾರರ ಬಗ್ಗೆ ತಮ್ಮ ಅಂತರಂಗ ಬಿಚ್ಚಿಟ್ಟಿದ್ದಾರೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ಡ್ರೆಸ್ಸಿಂಗ್ ರೂಮ್‌ನಲ್ಲಿ ಮಿಸ್ ಮಾಡಿಕೊಳ್ಳುತ್ತೇವೆ. ಕಳೆದೊಂದು ದಶಕದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಭಾರತೀಯ ಕ್ರಿಕೆಟ್‌ನ ಆಧಾರಸ್ತಂಭಗಳಾಗಿದ್ದರು. ಅವರಿಬ್ಬರ ಅನುಪಸ್ಥಿತಿಯು ಮೈದಾನದ ಒಳಗೆ ಮತ್ತು ಹೊರಗೆ ಆಳವಾಗಿ ಕಾಡುತ್ತೆ. ತಮ್ಮ ವೃತ್ತಿಜೀವನದುದ್ದಕ್ಕೂ, ಈ ಇಬ್ಬರು ಐಕಾನ್‌ಗಳಲ್ಲಿ ಕನಿಷ್ಠ ಒಬ್ಬರೊಂದಿಗೆ ನಾನು ಯಾವಾಗಲೂ ಆಡಿದ್ದೇನೆ. ನಾನು ಆಡಿರುವ 50 ಟೆಸ್ಟ್ ಪಂದ್ಯಗಳಲ್ಲಿ ವಿರಾಟ್ ಅಥವಾ ರೋಹಿತ್ ಅಥವಾ ಇಬ್ಬರೂ ತಂಡದಲ್ಲಿ ಇರ್ತಿದ್ರು. ಅವ್ರಿಲ್ಲದ ಡ್ರೆಸ್ಸಿಂಗ್ ರೂಂಗೆ ಹೋಗುವುದು ಸ್ವಲ್ಪ ವಿಚಿತ್ರವೆನಿಸುತ್ತದೆ. ಆದರೆ, ನಾವು ಅವರ ನಿವೃತ್ತಿ ನಿರ್ಧಾರವನ್ನು ಗೌರವಿಸಬೇಕಾಗುತ್ತದೆ’ ಎಂದಿದ್ದಾರೆ.

ರೋಹಿತ್ ಮತ್ತು ವಿರಾಟ್ ಇಲ್ಲದ ತಂಡದಲ್ಲಿ ರಾಹುಲ್ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಯಾಕಂದ್ರೆ ಇಂಗ್ಲೆಂಡ್​ನಲ್ಲಿ 9 ಟೆಸ್ಟ್ ಪಂದ್ಯಗಳನ್ನಾಡಿದ ಅನುಭವ ರಾಹುಲ್​​ಗೆ ಇದೆ. ಒಂಭತ್ತು ಪಂದ್ಯಗಳಲ್ಲಿ 18 ಇನಿಂಗ್ಸ್ ಆಡಿರುವ ರಾಹುಲ್ 614 ರನ್​ ಕಲೆಹಾಕಿದ್ದಾರೆ. ಅಂದರೆ 34.11 ಸರಾಸರಿಯಲ್ಲಿ ಆಂಗ್ಲರ ನಾಡಿನಲ್ಲಿ ರನ್​ಗಳಿಸಿದ್ದಾರೆ. ಈ 18 ಇನಿಂಗ್ಸ್​ಗಳಲ್ಲಿ ಕೆಎಲ್ ರಾಹುಲ್ ಬ್ಯಾಟ್​ನಿಂದ 2 ಭರ್ಜರಿ ಶತಕಗಳು ಸಹ ಮೂಡಿಬಂದಿವೆ. ಹಾಗೆಯೇ ಒಂದು ಅರ್ಧಶತಕವನ್ನು ಸಹ ಬಾರಿಸಿದ್ದಾರೆ. ಪ್ರಸ್ತುತ ಟೀಮ್ ಇಂಡಿಯಾದಲ್ಲಿರುವ ಬ್ಯಾಟರ್​ಗಳ ಪಟ್ಟಿಯಲ್ಲಿ ಇಂಗ್ಲೆಂಡ್ ವಿರುದ್ಧ ಅತ್ಯಧಿಕ ರನ್ ಕಲೆಹಾಕಿದ ಭಾರತೀಯ ಬ್ಯಾಟರ್ ಕೂಡ ಕೆಎಲ್ ರಾಹುಲ್. ಇಂಗ್ಲೆಂಡ್ ವಿರುದ್ಧ ಈವರೆಗೆ 24 ಇನಿಂಗ್ಸ್ ಆಡಿರುವ ಕೆಎಲ್ ರಾಹುಲ್ ಒಟ್ಟು 955 ರನ್ ಕಲೆಹಾಕಿದ್ದಾರೆ. ಹೀಗಾಗಿ  ಆಂಗ್ಲರ ವಿರುದ್ಧ ಟೀಮ್ ಇಂಡಿಯಾ ಸರಣಿ ಗೆಲ್ಲಬೇಕಿದ್ದರೆ ರಾಹುಲ್ ಪಾತ್ರ ನಿರ್ಣಾಯಕವಾಗಲಿದೆ.

Shantha Kumari