RCB ವಿರುದ್ಧ ಗೆದ್ದ ಬಳಿಕ ಮಂಕಾದ್ರಾ KL ರಾಹುಲ್‌? – DC ಪ್ಲೇ ಆಫ್‌ಗೆ ಹೋಗಲ್ವಾ?  

RCB ವಿರುದ್ಧ ಗೆದ್ದ ಬಳಿಕ ಮಂಕಾದ್ರಾ KL ರಾಹುಲ್‌? – DC ಪ್ಲೇ ಆಫ್‌ಗೆ ಹೋಗಲ್ವಾ?  

ಡೆಲ್ಲಿ ಕ್ಯಾಪಿಟಲ್ಸ್. ಈ ಬಾರಿ ಕಪ್ ಗೆಲ್ಲುವ ಪೆವರೇಟ್ ಟೀಮ್‌ಗಳಲ್ಲಿ ಇದೂ ಒಂದು ಅಂತಾನೇ ಹೇಳಲಾಗ್ತಿತ್ತು. ಅದ್ರಲ್ಲೂ ಕನ್ನಡಿಗ ಕೆ.ಎಲ್ ರಾಹುಲ್ ಫ್ಯಾನ್ಸ್ ಅಂತೂ ಡಿಸಿ ಕಪ್ ಗೆದ್ರೆ ಕನ್ನಡಿಗನ ಸಾಮರ್ಥ್ಯ ಎಲ್ರಿಗೂ ಗೊತ್ತಾಗುತ್ತೆ ಅಂತಾ ಹೇಳಿದ್ರು.. ಆದ್ರೆ, ಈಗ ಡಿಸಿ, ಆರಕ್ಕೇರದೇ, ಮೂರಕ್ಕಿಳಿಯದೇ, ಫ್ಲೇ ಆಫ್ ರೇಸ್‌ಗೆ ಅರ್ಹತೆ ಪಡೆಯಲು ಕೂಡಾ ಒದ್ದಾಡ್ತಿದೆ. ಇದ್ರ ಮಧ್ಯೆ ಬೆಂಗಳೂರಲ್ಲಿ ಸಿಡಿದ ಕನ್ನಡದ ಹುಲಿ ಕೆ.ಎಲ್ ರಾಹುಲ್ ಕೂಡಾ ಮಂಕಾಗಿದ್ದಾರೆ. ಕೆ.ಎಲ್ ಯಾಕೆ ಮೌನವಾದ್ರು.

ಇದನ್ನೂ ಓದಿ: ಪಾಕ್ ಭಾರತದ ನಡುವೆ ಯುದ್ಧದ ಕಾರ್ಮೋಡ – ಸರ್ವಪಕ್ಷ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ತಾರಾ?

ಪಾಯಿಂಟ್ಸ್ ಟೇಬಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 11 ಪಂದ್ಯಗಳಿಂದ 13 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಪ್ಲೇಆಫ್‌ಗೆ ಅರ್ಹತೆ ಪಡೆಯಲು, ಡೆಲ್ಲಿ ತನ್ನ ಉಳಿದ ಮೂರು ಪಂದ್ಯಗಳನ್ನು ಗೆಲ್ಲಲೇಬೇಕು. ಈ ಬಾರಿ ಡಿಸಿ ನಾಯಕ ಅಕ್ಷರ್ ಪಟೇಲ್‌ ನೇತೃತ್ವದಲ್ಲಿ ಸೂಪರ್ ಆಗಿಯೇ ಪಂದ್ಯಗಳನ್ನಾಡ್ತಿತ್ತು. ಮೊದಲ ನಾಲ್ಕು ಪಂದ್ಯಗಳಲ್ಲಿ ಸತತ ಗೆಲುವುಗಳನ್ನು ದಾಖಲಿಸಿ, ಡೆಲ್ಲಿ ತನ್ನ ಸಾಮರ್ಥ್ಯವನ್ನು ತೋರಿಸಿತ್ತು. ಕ್ರಿಕೆಟ್ ಅಭಿಮಾನಿಗಳಂತೂ ಡೆಲ್ಲಿ ಈ ಬಾರಿ ಕಪ್ ಗೆಲ್ಲುವ ನೆಚ್ಚಿನ ತಂಡ ಅಂತಾನೇ ಭಾವಿಸಿದ್ರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿರುದ್ಧದ ಪಂದ್ಯವಂತೂ ಡೆಲ್ಲಿ ಫ್ಯಾನ್ಸ್. ಅದ್ರಲ್ಲೂ ಕನ್ನಡಿಗ ಕೆ.ಎಲ್ ರಾಹುಲ್ ಫ್ಯಾನ್ಸ್ ಮರೆಯೋ ಹಾಗೇ ಇಲ್ಲ. ಈ ಪಂದ್ಯದಲ್ಲಿ ಕೆಎಲ್ ರಾಹುಲ್ ತಮ್ಮ ಬ್ಯಾಟಿಂಗ್‌ ಮೂಲಕ ಡಿಸಿಯನ್ನ ಗೆಲ್ಲಿಸಿದ್ದೇ ರೋಚಕ. ಗೆಲುವಿನ ಶಾಟ್‌ನ ನಂತರ, ರಾಹುಲ್ ಕನ್ನಡ ಸಿನಿಮಾ ‘ಕಾಂತಾರ’ ಶೈಲಿಯಲ್ಲಿ ಸಂಭ್ರಮಿಸಿದ್ದರು. ಬೆಂಗಳೂರು ನನ್ನ ಮನೆ ಎಂದು ಹೇಳಿದ್ದಲ್ಲದೇ, ಆರ್‌ಸಿಬಿ ಮ್ಯಾನೇಜ್‌ಮೆಂಟ್ ಗೂ ಟಾಂಗ್ ಕೊಟ್ಟಿದ್ರು. ಇದೇ ಕೊನೇ ನೋಡಿ. ಅಲ್ಲಿಂದ ಡಿಸಿ ಸೋಲ್ತಾ  ಬಂದಿದೆ. ಅದ್ರ ಜೊತೆ ಕೆ.ಎಲ್ ರಾಹುಲ್ ಬ್ಯಾಟ್‌ ಕೂಡ ಸೈಲೆಂಟ್ ಆಗಿದೆ. ಕೆ.ಎಲ್ ಬ್ಯಾಟ್‌ನಿಂದ ರನ್ ಬರ ಎದುರಾಗಿದೆ.

ಹೌದು, ಕೆಎಲ್‌ ರಾಹುಲ್‌ ಈ ವರ್ಷದ ಟೂರ್ನಿಯಲ್ಲಿ ಮೊದಲ ಪಂದ್ಯಕೆ ಗೈರಾಗಿದ್ದು, ಇನ್ನುಳಿದ 10 ಪಂದ್ಯಗಳಲ್ಲಿ ಆಡಿದ್ದಾರೆ. ಈ 10 ಪಂದ್ಯದಲ್ಲಿ ಕೆಎಲ್‌ ಒಟ್ಟು 381 ರನ್‌ಗಳನ್ನ ಕಲೆ ಹಾಕಿದ್ದಾರೆ.  ಇದ್ರಲ್ಲಿ ಎಪ್ರಿಲ್‌ 5 ರಂದು ಸಿಎಸ್‌ಕೆ ವಿರುದ್ಧ ನಡೆದ ಮ್ಯಾಚ್‌ನಲ್ಲಿ 51 ಎಸೆತದಲ್ಲಿ 77 ರನ್‌ ಬಾರಿಸಿದ್ರು.. ಅದಾದ್ಮೇಲೆ ಏಪ್ರಿಲ್‌ 10 ರಂದು ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ 53 ಎಸೆತದಲ್ಲಿ 93 ರನ್‌ ಬಾರಿಸಿ ತಂಡದ ಗೆಲುವಿಗೆ ನೆರವಾಗಿದ್ರು. ಈ ಎರಡು ಪಂದ್ಯದಲ್ಲಿ ಕೆಎಲ್‌ ಉತ್ತಮ ಪ್ರದರ್ಶನ ನೀಡಿದ್ದು ಬಿಟ್ರೆ, ಉಳಿದ ಪಂದ್ಯದಲ್ಲಿ ಕೆಎಲ್‌ ರಾಹುಲ್‌ ಕಳಪೆ ಪ್ರದರ್ಶನ ನೀಡಿದ್ದಾರೆ. ಇದು ರಾಹುಲ್‌ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ಇನ್ನು ಆರ್‌ಸಿಬಿ ವಿರುದ್ಧದ ಗೆಲುವಿನ ನಂತರ, ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಮಂಕಾಗಿದೆ. ಈ ಮ್ಯಾಚ್‌ ಆದ್ಮೇಲೆ ಡೆಲ್ಲಿ ಕ್ಯಾಪಿಟಲ್ಸ್ ಏಳು ಪಂದ್ಯಗಳನ್ನ ಆಡಿದ್ದು,  ಕೇವಲ ಎರಡನ್ನು ಮಾತ್ರ ಗೆದ್ದಿದೆ. ನಾಲ್ಕರಲ್ಲಿ ಸೋತಿದೆ. ಪ್ಲೇಆಫ್‌ಗೆ ಅರ್ಹತೆ ಪಡೆಯಲು, ಡೆಲ್ಲಿ ತನ್ನ ಉಳಿದ ಮೂರು ಪಂದ್ಯಗಳನ್ನು ಗೆಲ್ಲಲೇಬೇಕು. ಹಾಗೇನಾದರೂ ಆದರೆ 19 ಅಂಕಗಳಿಗೆ ಕೊಂಡೊಯ್ಯುತ್ತದೆ. ಇದು 4 ನೇ ಸ್ಥಾನವನ್ನು ಖಚಿತಪಡಿಸುತ್ತದೆ. ಆದರೆ, ಈ ಪಂದ್ಯಗಳು ಪಂಜಾಬ್ ಕಿಂಗ್ಸ್, ಗುಜರಾತ್ ಟೈಟಾನ್ಸ್, ಮತ್ತು ಮುಂಬೈ ಇಂಡಿಯನ್ಸ್‌ನಂತಹ ಬಲಿಷ್ಠ ತಂಡಗಳ ವಿರುದ್ಧವಾಗಿರುವುದರಿಂದ ಇದು ಡೆಲ್ಲಿಗೆ ಕಠಿಣ ಸವಾಲಾಗಿದೆ. ಜೊತೆಗೆ ಕೆ,ಎಲ್ ರಾಹುಲ್ ಕೂಡಾ ಸಿಡಿಯಬೇಕು. ಕೆ.ಎಲ್ ಬ್ಯಾಟಿಂಗ್ ಡಿಸಿ ತಂಡಕ್ಕೆ ಸ್ಟ್ರೆಂಥ್ ನೀಡ್ತಿತ್ತು. ಮೊದಲ ವಿಕೆಟ್‌ಗಳು ಉದುರಿಹೋದ್ರೂ ಕೂಡಾ ಕೆ.ಎಲ್ ತನ್ನ ತಂಡಕ್ಕೆ ಬ್ಯಾಟಿಂಗ್ ಶಕ್ತಿಯಾಗಿ ನಿಂತಿದ್ದರು. ಆದ್ರೆ, ಯಾಕೋ. ಕೆ.ಎಲ್ ಬ್ಯಾಟ್ ಸೈಲೆಂಟ್ ಆಗಿರೋದು ಡಿಸಿ ತಂಡಕ್ಕೆ ದೊಡ್ಡ ಹೊಡೆತ ನೀಡಿದೆ. ಇನ್ನುಳಿದ ಮೂರು ಪಂದ್ಯಗಳಲ್ಲಿ ಕೆ.ಎಲ್ ರಾಹುಲ್ ಸೌಂಡ್ ಮಾಡಿದ್ರೆ, ಡಿಸಿ ಗೆದ್ದರೆ, ಕಪ್ ಗೆಲ್ಲೋ ಚಾನ್ಸಸ್ ಖಂಡಿತಾ ಇದೆ.

Shwetha M

Leave a Reply

Your email address will not be published. Required fields are marked *