KL ಬಾಯಲ್ಲಿ ನಿವೃತ್ತಿ ಮಾತು – ವೃತ್ತಿ ಜೀವನ ಸ್ವಲ್ಪ ಮಾತ್ರ ಉಳಿದಿದ್ಯಾ?
RO-KO ಹಾದೀಲಿ ಹೊರಟ್ರಾ?

ಕೆಎಲ್ ರಾಹುಲ್.. ಟೀಂ ಇಂಡಿಯಾದ ಆಲ್ರೌಂಡರ್.. ಓಪನರ್, ಒನ್ ಡೌನ್ ಬ್ಯಾಟರ್, ಫಿನಿಶರ್, ವಿಕೆಟ್ ಕೀಪರ್ ಹೀಗೆ ಯಾವ ರೋಲ್ ಕೊಟ್ರೂ ದಿ ಬೆಸ್ಟ್ ಪರ್ಫಾಮೆನ್ಸ್ ಕೊಡುವಂತ ಸ್ಟಾರ್ ಪ್ಲೇಯರ್. ಈಗಂತೂ ಟೆಸ್ಟ್ನಲ್ಲಿ ಓಪನರ್ ಆಗಿ ಏಕದಿನದಲ್ಲಿ ಮಿಡಲ್ ಆರ್ಡರ್ ಬ್ಯಾಟರ್ ಆಗಿ ಭಾರತದ ಪಾಲಿಗೆ ಆಪತ್ಬಾಂಧವನಾಗಿದ್ದಾರೆ. ತಮ್ಮ ಕ್ರಿಕೆಟ್ ಕೆರಿಯರ್ನ ಪೀಕ್ನಲ್ಲಿರುವಾಗ್ಲೇ ರಾಹುಲ್ ಬಾಯಲ್ಲಿ ನಿವೃತ್ತಿ ಮಾತು ಕೇಳಿ ಬಂದಿದೆ. ರಿಟೈರ್ಮೆಂಟ್ ಘೋಷಿಸೋಕೆ ನಾಟಕ ಎಲ್ಲಾ ಮಾಡಲ್ಲ ಅಂತಾ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ : ಕರ್ನಾಟಕ ಟೀಂಗೆ KL ಕಂ ಬ್ಯಾಕ್ – ದೇವದತ್ ಪಡಿಕ್ಕಲ್ ಗೆ ಕ್ಯಾಪ್ಟನ್ಸಿ
ಟೀಂ ಇಂಡಿಯಾದ ಲೆಜೆಂಡರಿ ಪ್ಲೇಯರ್ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಬಗ್ಗೆ ಪದೇಪದೆ ನಿವೃತ್ತಿ ವಿಚಾರ ಚರ್ಚೆಯಲ್ಲಿರುತ್ತೆ. ಈಗ ಕೆಎಲ್ ರಾಹುಲ್ ಕೂಡ ನಿವೃತ್ತಿ ಬಗ್ಗೆ ಮಾತನಾಡಿದ್ದಾರೆ. ಟೀಂ ಇಂಡಿಯಾದ ಮಿಸ್ಟರ್ ಡಿಫೆಂಡೇಬಲ್ ಅಂತಾನೇ ಕರೆಸಿಕೊಳ್ತಿರೋ ರಾಹುಲ್ ಈ ಬಗ್ಗೆ ಮಾತನಾಡಿರೋದೇ ಅಚ್ಚರಿ ಮೂಡಿಸಿದೆ. ಕೋಟ್ಯಂತರ ಭಾರತೀಯ ಅಭಿಮಾನಿಗಳಿಗೆ ಶಾಕ್ ಕೊಡ್ತಾರಾ ಎನ್ನುವಂಥ ಪ್ರಶ್ನೆ ಮೂಡಿದೆ.
ಸಮಯ ಬಂದಾಗ ನಿವೃತ್ತಿಯಿಂದ ಹಿಂದೆ ಸರಿಯಲ್ಲ ಎಂದ ರಾಹುಲ್!
ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ ನಿವೃತ್ತಿ ಬಗ್ಗೆ ಮಾತನಾಡಿದ್ದಾರೆ. ಇಂಗ್ಲೆಂಡ್‌ನ ಮಾಜಿ ನಾಯಕ ಕೆವಿನ್ ಪೀಟರ್ಸನ್ ಅವರೊಂದಿಗಿನ ಇಂಟರ್ವ್ಯೂನಲ್ಲಿ ಅಚ್ಚರಿಯ ವಿಚಾರಗಳನ್ನ ಬಾಯಿ ಬಿಟ್ಟಿದ್ದಾರೆ. ನಿವೃತ್ತಿಯ ಬಗ್ಗೆ ಯೋಚಿಸಿದ್ದೇನೆ ಆದರೆ ಆಟದಿಂದ ಹಿಂದೆ ಸರಿಯುವ ಟೈಂ ಇನ್ನೂ ದೂರದಲ್ಲಿದೆ. ಸಮಯ ಸರಿಯಾಗಿದೆ ಅಂತಾ ಅನ್ನಿಸಿದ್ರೆ ತಮ್ಮ ವೃತ್ತಿಜೀವನವನ್ನು ಮುಂದುವರಿಸುವುದಿಲ್ಲ ಎಂದಿದ್ದಾರೆ. ಹಾಗೇ ಕ್ರಿಕೆಟ್ ಅಷ್ಟೇ ಅಲ್ಲದೆ ವೈಯಕ್ತಿಕ ಜೀವನವೂ ಇದೆ ಅನ್ನೋದನ್ನೂ ಒತ್ತಿ ಹೇಳಿದ್ದಾರೆ. ಕ್ರಿಕೆಟ್ ಮೀರಿ ಜೀವನ ಇರೋದ್ರಿಂದ ನಿವೃತ್ತಿ ಘೋಷಿಸುವುದು ಕಠಿಣ ನಿರ್ಧಾರವೇನೂ ಅಲ್ಲ. ನಾನು ನಿವೃತ್ತಿ ಬಗ್ಗೆಯೂ ಯೋಚಿಸಿದ್ದೇನೆ. ಅದು ಕಷ್ಟವಾಗಿರುತ್ತೆ ಅಂತಾ ನನಗೇನು ಅನ್ನಿಸಲ್ಲ ಎಂದಿದ್ದಾರೆ. ಹಾಗೇ 33 ವರ್ಷದ ರಾಹುಲ್ ವೃತ್ತಿಜೀವನದ ಅಂತ್ಯವನ್ನು ಪರಿಗಣಿಸುವಾಗ ತನ್ನೊಂದಿಗೆ ಪ್ರಾಮಾಣಿಕವಾಗಿರುವುದು ಮುಖ್ಯ. ತಾನು ಸಕ್ಸಸ್ನ ಪೀಕ್ನ ದಾಟಿದ ನಂತರೂ ಸುಮ್ದೇ ಟೈಂ ವೇಸ್ಟ್ ಮಾಡಲ್ಲ. ಅದ್ರ ಬದಲು ಕ್ರಿಕೆಟ್ನಿಂದಲೇ ಹೊರ ನಡೆಯೋದನ್ನ ಇಷ್ಟ ಪಡ್ತೇನೆ ಎಂದಿದ್ದಾರೆ. ಹಾಗೇ ಕ್ರಿಕೆಟ್ ಭವಿಷ್ಯದ ಬಗ್ಗೆಯೂ ಮನಬಿಚ್ಚಿದ್ದಾರೆ.
ಯಾವುದೇ ವ್ಯಕ್ತಿ ಕ್ರೀಡೆಗೆ ಅನಿವಾರ್ಯವಲ್ಲ!
ಇನ್ನು ಕ್ರೀಡೆಯಲ್ಲಿ ವ್ಯಕ್ತಿ ಪೂಜೆ ಇರಲ್ಲ. ಌಂಡ್ ಯಾರೊಬ್ಬರು ಕೂಡ ಕ್ರೀಡೆಗೆ ಅನಿವಾರ್ಯವಲ್ಲ. ನಮ್ಮ ದೇಶದಲ್ಲಿ ಕ್ರಿಕೆಟ್ ಮುಂದುವರಿಯುತ್ತದೆ. ಜಗತ್ತಿನಲ್ಲಿ ಕ್ರಿಕೆಟ್ ಮುಂದುವರಿಯುತ್ತದೆ. ನಮಗೆ ಮೊದಲ ಮಗು ಜನಿಸಿದಾಗಿಂತ ನಾನು ಇದೇ ಮೈಂಡ್ಸೆಟ್ನಲ್ಲೇ ಇದ್ದೇನೆ. ಜೀವನವನ್ನು ನೋಡುವ ರೀತಿಯೂ ಬದಲಾಗಿದೆ ಎಂದಿದ್ದಾರೆ. ಇದೇ ವೇಳೆ ಇಂಜುರಿ ಬಗ್ಗೆಯೂ ಮಾತನಾಡಿದ್ದು, ನಾನು ಮ್ಯಾಚ್ ಟೈಮಲ್ಲಿ ಸಾಕಷ್ಟು ಸಲ ಗಾಯಗೊಂಡಿದ್ದೇನೆ. ನೀವು ಎದುರಿಸಬೇಕಾದ ಅತ್ಯಂತ ಕಠಿಣ ಹೋರಾಟ ಕೂಡ ಇದು. ಒಂದು ರೀತಿಯ ಮಾನಸಿಕ ಯುದ್ಧ. ಕ್ರಿಕೆಟ್‌ನಿಂದ ಸಾಕಷ್ಟು ಹಣವನ್ನು ಗಳಿಸಿದ್ದೇನೆ. ಇನ್ಮುಂದೆ ಹೋರಾಡುವ ಅಥವಾ ತಮ್ಮನ್ನು ತಾವು ಸಾಬೀತುಪಡಿಸುವ ಅಗತ್ಯವಿಲ್ಲ ಎಂದಿದ್ದಾರೆ. ಈ ಮೂಲಕ ನಿವೃತ್ತಿ ಟೈಂ ಅಂತಾ ಬಂದಾಗ ಹಿಂದೆ ಮುಂದೆ ನೋಡದೆ ನಿರಾಳ ಮನಸ್ಸಿನಿಂದಲೇ ಎದ್ದು ಹೊರ ನಡೆಯುತ್ತೇನೆ ಎಂದಿದ್ದಾರೆ.
2014ರ ಡಿಸೆಂಬರ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಪರ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ರಾಹುಲ್ ದಶಕದಿಂದಲೂ ಭಾರತದ ಪ್ರಮುಖ ಆಟಗಾರನಾಗಿದ್ದಾರೆ. ಭಾರತದ ಪರ 67 ಪಂದ್ಯಗಳಲ್ಲಿ 35.86 ಸರಾಸರಿಯಲ್ಲಿ 4,053 ರನ್ ಗಳಿಸಿದ್ದಾರೆ. 11 ಶತಕಗಳು ಮತ್ತು 20 ಅರ್ಧಶತಕಗಳನ್ನು ಹೊಂದಿದ್ದಾರೆ. ಹಾಗೇ ಏಕದಿನ ಮಾದರಿಯಲ್ಲಿ 94 ಏಕದಿನ ಪಂದ್ಯಗಳನ್ನು ಆಡಿದ್ದಾರೆ ಮತ್ತು 50.90 ಸರಾಸರಿ ಮತ್ತು 90.44 ಸ್ಟ್ರೈಕ್ ರೇಟ್‌ನಲ್ಲಿ 3,360 ರನ್ ಗಳಿಸಿದ್ದಾರೆ, ಇದರಲ್ಲಿ ಎಂಟು ಶತಕಗಳು ಮತ್ತು 20 ಅರ್ಧಶತಕಗಳು ಸೇರಿವೆ. ಹಾಗೇ ಭಾರತಕ್ಕಾಗಿ 72 ಟಿ20ಐಗಳಲ್ಲಿಯೂ ಆಡಿದ್ದಾರೆ, 37.75 ಸರಾಸರಿ ಮತ್ತು 139.16 ಸ್ಟ್ರೈಕ್ ರೇಟ್‌ನಲ್ಲಿ 2,265 ರನ್ ಗಳಿಸಿದ್ದಾರೆ, ಇದರಲ್ಲಿ ಎರಡು ಶತಕಗಳು ಮತ್ತು 22 ಅರ್ಧಶತಕಗಳಿವೆ. ಪ್ರಸ್ತುತ ಟೀಂ ಇಂಡಿಯಾದ ಟೆಸ್ಟ್ ಮತ್ತು ಏಕದಿನದಲ್ಲಿ ಪ್ರಮುಖ ಆಟಗಾರನಾಗಿದ್ದು ಒಳ್ಳೆ ಫಾರ್ಮ್ನಲ್ಲೇ ಇದ್ದಾರೆ. ಆದ್ರೂ ಕೂಡ ನಿವೃತ್ತಿ ಬಗ್ಗೆ ಮಾತನಾಡಿರೋದು ಹಾಗೇ ಟೈಂ ಬಂದಾಗ ಹಿಂದೆ ಮುಂದೆ ನೋಡಲ್ಲ ಅಂದಿರೋದನ್ನ ನೋಡಿದಾಗ ರೋಹಿತ್ ಮತ್ತು ಕೊಹ್ಲಿಯ ಹಾದಿಯನ್ನೇ ಹಿಡಿಯುತ್ತಾರಾ ಅನ್ನೋ ಪ್ರಶ್ನೆಗಳು ಮೂಡಿವೆ.

ನೋಡಿರಿ

