ರಣಜಿಯಲ್ಲೂ KL ಆವರೇಜ್ ಸ್ಕೋರ್ – ಕಳಪೆ ಫಾರ್ಮ್ Or ರೆಸ್ಟ್ ಬೇಕೋ?
ಕೆಎಲ್ ರಾಹುಲ್. ಟೀಂ ಇಂಡಿಯಾದ ಸೂಪರ್ ಸ್ಟಾರ್ ಪ್ಲೇಯರ್. ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್ ಆಗಿ ಮಿಡಲ್ ಆರ್ಡರ್ನ ಸ್ಟ್ರೆಂಥ್ ಆಗಿದ್ದಾರೆ. ಆದ್ರೆ ಇತ್ತಿಚೆಗೆ ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್ನಲ್ಲಿ ಬ್ಯಾಕ್ ಟು ಬ್ಯಾಕ್ ಸೋಲು ಕಂಡಿತ್ತು. ಹೀಗಾಗಿ ಬಿಸಿಸಿಐ ಟೀಂ ಇಂಡಿಯಾ ಆಟಗಾರರಿಗೆ ರಣಜಿಯಲ್ಲಿ ಆಡೋದನ್ನ ಕಡ್ಡಾಯ ಮಾಡಿತ್ತು. ಅದ್ರಂತೆ ಇವತ್ತು ಕೆಎಲ್ ರಾಹುಲ್ ಕರ್ನಾಟಕ ತಂಡದ ಪರ ಪ್ಳೇಯಿಂಗ್ 11ನಲ್ಲಿ ಕಣಕ್ಕಿಳಿದಿದ್ರು.
ಇದನ್ನೂ ಓದಿ : ಒಬ್ಬನಿಗಾಗಿ ಕಾದು ಕುಳಿತ PAK.. ಟೀಂ ಅನೌನ್ಸ್ ಗೂ ಭಯ – ಚಾಂಪಿಯನ್ಸ್ ಟ್ರೋಫಿ ಆಡೋರೇ ಇಲ್ವಾ?
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಹರ್ಯಾಣ ವಿರುದ್ಧದ ರಣಜಿ ಪಂದ್ಯದಲ್ಲಿ ಕರ್ನಾಟಕ ಪರ ಕೆಎಲ್ ರಾಹುಲ್ ಕಣಕ್ಕಿಳಿದಿದ್ದಾರೆ. ಕೆಎಲ್ ರಾಹುಲ್ ಕೊನೆಯ ಬಾರಿ ಕರ್ನಾಟಕ ಪರ ಕಣಕ್ಕಿಳಿದದ್ದು 2020 ರಲ್ಲಿ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಬಂಗಾಳ ವಿರುದ್ಧ ಬ್ಯಾಟ್ ಬೀಸಿದ್ದ ರಾಹುಲ್ ಮೊದಲ ಇನಿಂಗ್ಸ್ನಲ್ಲಿ 26 ರನ್ ಬಾರಿಸಿದ್ದರು. ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ ಡಕ್ ಔಟ್ ಆಗಿದ್ರು. ಇದಾದ ಬಳಿಕ ರಾಹುಲ್ ಮತ್ತೆ ರಣಜಿ ಪಂದ್ಯವಾಡಿರಲಿಲ್ಲ. ಇದೀಗ 4 ವರ್ಷಗಳ ಬಳಿಕ ಕೆಎಲ್ಆರ್ ದೇಶೀಯ ಅಂಗಳದಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದ ಹರ್ಯಾಣ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಅದರಂತೆ ಕರ್ನಾಟಕ ತಂಡ ಇನಿಂಗ್ಸ್ ಆರಂಭಿಸಿದ್ದು, ಅನೀಶ್ ಕೆವಿ ಹಾಗೂ ಮಯಾಂಕ್ ಅಗರ್ವಾಲ್ ಓಪನರ್ಸ್ ಆಗಿ ಕಣಕ್ಕಿಳಿದ್ರು. ಈ ವೇಳೆ ಓಪನರ್ ಆಗಿದ್ದ ಕೆವಿ ಅನೀಶ್ 67 ಎಸೆತಗಳಲ್ಲಿ 17 ರನ್ ಗಳಿಸಿ ಔಟಾದ್ರು. ಆ ಬಳಿಕ 3ನೇ ಸ್ಲಾಟ್ನಲ್ಲಿ ಕ್ರಿಸ್ಗೆ ಬಂದ ಕೆಎಲ್ ರಾಹುಲ್ ಮೇಲೆ ತುಂಬಾನೇ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದ್ರೆ 37 ಎಸೆತಗಳಲ್ಲಿ 4 ಫೋರ್ಗಳ ನೆರವಿನಿಂದ 26 ರನ್ ಗಳಿಸಿ ಕ್ಯಾಚ್ ಕೊಟ್ಟು ವಿಕೆಟ್ ಒಪ್ಪಿಸಿದ್ರು. 67 ನಿಮಿಷಗಳ ಕಾಲ ಬ್ಯಾಟ್ ಬೀಸಿದ್ರು. ಸೋ ಇಲ್ಲೂ ಕೂಡ ಹೆಚ್ಚು ಹೊತ್ತು ನಿಂತು ಆಡಲೇ ಇಲ್ಲ. ಹೀಗಾಗಿ ಕೆಎಲ್ ರಾಹುಲ್ ಆಟ ನೋಡೋಕೆ ಅಂತಾ ಮೈದಾನಕ್ಕೆ ತೆರಳಿದ್ದ ಫ್ಯಾನ್ಸ್ ಕೊಂಚ ನಿರಾಸೆಗೊಂಡಿದ್ದಾರೆ.