ಕನ್ನಡಿಗನ ಮೇಲೆ ಡೆಲ್ಲಿ ಭವಿಷ್ಯ – KL ಜೊತೆ ಕರುಣ್ ಬ್ಯಾಟಿಂಗ್ ಪಕ್ಕಾ?
ಅಕ್ಷರ್ ಗೇಮ್ ಪ್ಲ್ಯಾನ್ ಹೇಗಿದೆ?

ಕನ್ನಡಿಗನ ಮೇಲೆ ಡೆಲ್ಲಿ ಭವಿಷ್ಯ – KL ಜೊತೆ ಕರುಣ್ ಬ್ಯಾಟಿಂಗ್ ಪಕ್ಕಾ?ಅಕ್ಷರ್ ಗೇಮ್ ಪ್ಲ್ಯಾನ್ ಹೇಗಿದೆ?

ಐಪಿಎಲ್​ನಲ್ಲಿ ಮೊದ್ಲೆಲ್ಲಾ ಡೆಲ್ಲಿ ಕ್ಯಾಪಿಟಲ್ಸ್ ಅಂದ್ರೆ ಕ್ರೇಜೇ ಇರ್ಲಿಲ್ಲ. ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋ ಥರ ಟ್ರೀಟ್ ಮಾಡ್ತಿದ್ರು. ಬಟ್ 2025ರ ಐಪಿಎಲ್​ನಲ್ಲಿ ವೀ ಆರ್ ಆಲ್ಸೋ ಕಾಂಪಿಟೇಟರ್ಸ್ ಅನ್ನೋ ಥರ ಪರ್ಫಾಮೆನ್ಸ್ ನೀಡಿದ್ರು. ಲಾಸ್ಟ್ ಮೂಮೆಂಟ್​ನಲ್ಲಿ ಪ್ಲೇಆಫ್ ಮಿಸ್ ಮಾಡ್ಕೊಂಡಿದ್ರು. ಌಂಡ್ ಪಾಯಿಂಟ್ಸ್ ಪಟ್ಟಿಯಲ್ಲಿ ನಂಬರ್ 5ನಲ್ಲಿ ಸೀಸನ್ ಮುಗಿಸಿದ್ರು. ಈಗ ಮಿನಿ ಆಕ್ಷನ್​ನಲ್ಲಿ ಮತ್ತಷ್ಟು ಸ್ಟ್ರಾಂಗ್ ಆಗಿ ನೆಕ್ಸ್​ಟ್ ಸೀಸನ್​ಗೆ ರೆಡಿಯಾಗಿದ್ದಾರೆ. ಕನ್ನಡಿಗರಿಗೂ ಕೂಡ ಈ ಟೀಂ ತುಂಬಾನೇ ಸ್ಪೆಷಲ್. ಯಾಕಂದ್ರೆ ಕನ್ನಡಿಗ ಕೆಎಲ್ ರಾಹುಲ್ ಇದೇ ಟೀಮ್​ನಲ್ಲಿದ್ದಾರೆ.

ಇದನ್ನೂ ಓದಿ : ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಕೆ.ಎಲ್ ರಾಹುಲ್? – ಕ್ಯಾಪ್ಟನ್ ಪಟ್ಟದಿಂದ ಅಕ್ಷರ್ ಪಟೇಲ್ ಔಟ್

21.80 ಕೋಟಿ ರೂಪಾಯಿಯೊಂದಿಗೆ ಮಿನಿ ಆಕ್ಷನ್​ನಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐವರು ವಿದೇಶಿ ಪ್ಲೇಯರ್ಸ್ ಸೇರಿದಂತೆ ಒಟ್ಟು 8 ಆಟಗಾರರನ್ನ ಖರೀದಿ ಮಾಡಿದೆ. ಬ್ಯಾಟಿಂಗ್ ಹಾಗೇ ಬೌಲಿಂಗ್ ಎರಡ್ರಲ್ಲೂ ಫೈರ್ ಪವರ್ ಪ್ಲೇಯರ್​ಗಳನ್ನೇ ಪಿಕ್ ಮಾಡಿದೆ. ಅದ್ರಲ್ಲೂ ಜಮ್ಮು ಮತ್ತು ಕಾಶ್ಮೀರದ ವೇಗಿ ಔಕಿಬ್ ನಬಿ ದಾರ್ ಅವರನ್ನು 8.40 ಕೋಟಿ ರೂಪಾಯಿಗೆ ಖರೀದಿಸಿದೆ. ಹಾಗೇ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಡೇವಿಡ್ ಮಿಲ್ಲ‌ರ್ ಮತ್ತು ಇಂಗ್ಲೆಂಡ್‌ ಬೆನ್ ಡಕೆಟ್ ಇಬ್ಬರನ್ನೂ 2 ಕೋಟಿ ಮೂಲ ಬೆಲೆಗೆ ಖರೀದಿಸಿದೆ. ಲುಂಗಿ ಎನ್‌ ಗಿಡಿ ಮತ್ತು ಕೈಲ್ ಜೇಮಿಸನ್ ಅವರಿಗೂ 2 ಕೋಟಿ ನೀಡಿದೆ. ಪಾತುಮ್ ನಿಸ್ಸಾಂಕಾ ಅವರನ್ನು 4 ಕೋಟಿಗೆ ಸೇರಿಸಿಕೊಂಡಿದೆ. ಜೊತೆಗೆ ಮಾಜಿ ಆಟಗಾರ ಪೃಥ್ವಿ ಶಾಗೆ ಬಿಡ್ ಮಾಡಿದ್ದು ವಿಶೇಷವಾಗಿತ್ತು. ಸೋ ಹರಾಜಿನಲ್ಲಿ ಒಳ್ಳೆ ಸೆಲೆಕ್ಷನ್ ಮಾಡಿಕೊಂಡಿರೋ ಡೆಲ್ಲಿ ನೆಕ್ಸ್​ಟ್ ಸೀಸನ್​ಗೆ ಒನ್ ಆಫ್ ದಿ ಡೇಂಜರಸ್ ಟೀಂ ಆಗಿ ಕಾಣ್ತಿದೆ. ಅಕ್ಷರ್ ಪಟೇಲ್ ನಾಯಕತ್ವದಲ್ಲಿ ಚೊಚ್ಚಲ ಕಪ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಡೆಲ್ಲಿ ತಂಡಕ್ಕೆ ಬ್ಯಾಟಿಂಗ್ ಬಲವೇ ಕೆಎಲ್ ರಾಹುಲ್!

ಐಪಿಎಲ್​ನಲ್ಲಿ ಚೊಚ್ಚಲ ಕಪ್ ನಿರೀಕ್ಷೆಯಲ್ಲಿರೋ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಬ್ಯಾಟಿಂಗ್ ಬೆನ್ನೆಲುವೇ ಕನ್ನಡಿಗ ಕೆಎಲ್ ರಾಹುಲ್. ಅನುಭವಿ ಹಾಗೇ ಟೀಂ ಇಂಡಿಯಾದ ಸ್ಟಾರ್ ಆಟಗಾರನಾಗಿರೋ ರಾಹುಲ್ ಡೆಲ್ಲಿಗೆ ಪ್ಲಸ್ ಪಾಯಿಂಟ್. ಐಪಿಎಲ್ 2025 ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದು, 13 ಪಂದ್ಯಗಳಲ್ಲಿ 539 ರನ್ ಗಳಿಸಿದ್ದಾರೆ. ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ, ರಾಹುಲ್ 46.21 ರ ಸರಾಸರಿಯಲ್ಲಿ 5,222 ರನ್ ಗಳಿಸಿದ್ದಾರೆ, ಇದು ಅವರ ಸ್ಥಿರತೆಯನ್ನು ಎತ್ತಿ ತೋರಿಸುತ್ತದೆ. ಕೆಎಲ್ ರಾಹುಲ್ ನೇತೃತ್ವದಲ್ಲಿ ಬ್ಯಾಟಿಂಗ್ ನಡೆಯಲಿದ್ದು ನಿತೀಶ್ ರಾಣಾ, ಟ್ರಿಸ್ಟನ್ ಸ್ಟಬ್ಸ್, ಕರುಣ್ ನಾಯರ್, ಸಮೀರ್ ರಿಜ್ಜಿ ಮತ್ತು ಅಭಿಷೇಕ್ ಪೊರೆಲ್ ಒಳ್ಳೆ ಸಾಥ್ ಕೊಡ್ತಾರೆ. ಆಲ್‌ರೌಂಡರ್‌ಗಳಾದ ಅಕ್ಷ‌ರ್ ಪಟೇಲ್ ಮತ್ತು ಅಶುತೋಷ್ ಶರ್ಮಾ ಇರೋದು ಮಿಡಲ್ ಓವರ್​ಗಳಲ್ಲಿ ತಂಡವನ್ನ ಬ್ಯಾಲೆನ್ಸ್ ಮಾಡುತ್ತೆ. ಬೌಲಿಂಗ್ ನಲ್ಲಿ ಮಿಚೆಲ್ ಸ್ಟಾರ್ಕ್, ಕುಲ್ದೀಪ್ ಯಾದವ್, ಟಿ ನಟರಾಜನ್, ಮುಖೇಶ್ ಕುಮಾರ್‌ ಮತ್ತು ದುಷ್ಮಂತ ಚಮೀರ ಅವ್ರ ಪೇಸ್-ಸ್ಪಿನ್ ಕಾಂಬಿನೇಷನ್ ಬಲಿಷ್ಠವಾಗಿದೆ. ಈ ಮೂಲಕ ಪವರ್ ಹಿಟ್ಟರ್ ಬ್ಯಾಟರ್ಸ್, ಕ್ವಾಲಿಟಿ ಆಲ್‌ರೌಂಡರ್ಸ್ ಮತ್ತು ಬಲಿಷ್ಠ ಬೌಲಿಂಗ್ ತಂಡದೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ 19ನೇ ಆವೃತ್ತಿಗೆ ಕಾಲಿಡ್ತಿದೆ.

ಟಾಪ್ ಆರ್ಡರ್ ಓಕೆ.. ಮಿಡಲ್ ಆರ್ಡರ್ ಮರೆತ್ರಾ?

ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಸ್ಟ್ರಾಂಗ್ ಆಗಿ ಕಾಣ್ತಿದ್ರೂ ಬ್ಯಾಟ್ಸ್‌ಮನ್‌ಗಳು ಮತ್ತು ಎಡಗೈ ಬೌಲರ್‌ಗಳ ಕಡೆಗೆ ಜಾಸ್ತಿ ಕಾನ್ಸಂಟ್ರೇಟ್ ಮಾಡಿದ್ದಾರೆ. ಬ್ಯಾಟಿಂಗ್ ಡೆಪ್ತ್ ಚೆನ್ನಾಗಿದ್ರೂ ಒಂದೇ ರೀತಿಯ ಪ್ರೊಫೈಲ್ ಹೊಂದಿರುವ ಅನೇಕ ಆಟಗಾರರು ಒಂದೇ ಸ್ಲಾಟ್​ಗೆ ಫೈಟ್ ಕೊಡಬಹುದು. ಌಂಡ್ ಮಧ್ಯಮ ಕ್ರಮಾಂಕದಲ್ಲಿ ಯಾರು ಅನ್ನೋ ಕನ್ಫ್ಯೂಷನ್ಸ್ ಬರ್ಬೋದು. ಜೊತೆಗೆ ಎಕ್ಸ್​ಪೀರಿಯನ್ಸ್​ಡ್ ಇಂಡಿಯನ್ ಫಿನಿಶರ್ ಕೊರತೆ ಎದ್ದು ಕಾಣ್ತಿದೆ.  ಇನ್ನು ಪದೇಪದೆ ಇಂಜುರಿಗೆ ತುತ್ತಾಗುವ ಆಕಿಬ್​ಗೆ ಅಷ್ಟು ದೊಡ್ಡ ಅಮೌಂಟ್ ಕೊಟ್ಟಿದ್ದು ಕೂಡ ಎಫೆಕ್ಟ್ ಆಗ್ಬಹುದು. ಸೋ ಮಿನಿ ಆಕ್ಷನ್​ನಲ್ಲಿ ಟಾಪ್ ಆರ್ಡರ್​ ಬ್ಯಾಟರ್​ಗಳನ್ನೇ ಟಾರ್ಗೆಟ್ ಮಾಡೋ ಬದ್ಲು  ಭಾರತೀಯ ಫಿನಿಷರ್ ಮೇಲೆ ಹೂಡಿಕೆ ಮಾಡ್ಬೋದಿತ್ತು.

Shantha Kumari