ಕ್ಯಾಪ್ಟನ್ಸಿ ಚಾಲೆಂಜ್ ಗೆಲ್ತಾರಾ KL ರಾಹುಲ್ – RO-KO ಜೋಡೆತ್ತಿನ ಬಲ ಸಿಕ್ಕಿತಾ?
ಗಿಲ್ ಗಿಂತ ರಾಹುಲ್ ಹೇಗೆ ಬೆಸ್ಟ್?

ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಏಕದಿನ ಸರಣಿ ಆರಂಭಕ್ಕೆ ಕೌಂಟ್ಡೌನ್ ಶುರುವಾಗಿದೆ. ಮಧ್ಯಾಹ್ನ 1.30ಕ್ಕೆ ರಾಂಚಿಯಲ್ಲಿ ಹೈವೋಲ್ಟೇಜ್ ಮ್ಯಾಚ್ ಸ್ಟಾರ್ಟ್ ಆಗುತ್ತೆ. ಒಂದ್ಕಡೆ ಟೆಸ್ಟ್ ತಂಡದ ಸೋಲಿಗೆ ಸೇಡು ತೀರಿಸಿಕೊಳ್ಳೋಕೆ ಭಾರತ ಕಾಯ್ತಿದ್ರೆ ಅತ್ತ ವೈಟ್ ಬಾಲ್ ಸಿರೀಸ್ನಲ್ಲೂ ಡಾಮಿನೇಟ್ ಮಾಡೋಕೆ ಸೌತ್ ಆಫ್ರಿಕಾ ಸರ್ವಸನ್ನದ್ಧವಾಗಿದೆ. ಅದ್ರಲ್ಲೂ ಈ ಸರಣಿ ಕ್ಯಾಪ್ಟನ್ ಕೆಎಲ್ ರಾಹುಲ್ಗೆ ಮೋಸ್ಟ್ ಇಂಪಾರ್ಟೆಂಟ್ ಆಗುತ್ತೆ.
ಇದನ್ನೂ ಓದಿ : 2026ಕ್ಕೆ RCB 4+12 ಸೂತ್ರ – ಚೀಪ್ ಆದ್ರೂ ಬೆಸ್ಟ್ ಸೆಲೆಕ್ಷನ್
ಟೀಂ ಇಂಡಿಯಾ ಪಾಲಿಗೆ ಸದ್ಯಕ್ಕೆ ಆಪತ್ಬಾಂಧವ ಅಂದ್ರೆ ಅದು ಕೆಎಲ್ ರಾಹುಲ್.. ಯಾವ ಸ್ಲಾಟ್ಗೆ ಬಿಟ್ರೂ ಬ್ಯಾಟಿಂಗ್ ಮಾಡ್ತಾರೆ.. ವಿಕೆಟ್ ಕೀಪಿಂಗ್ ಮಾಡ್ತಾರೆ.. ಅಥವಾ ಎಮರ್ಜಿಂಗ್ ಕ್ಯಾಪ್ಟನ್ ಜಬಾವ್ದಾರಿಯನ್ನೂ ನಿಭಾಯಿಸ್ತಾರೆ. ಸದ್ಯ ಶುಭ್ಮನ್ ಗಿಲ್ ಆಬ್ಸೆನ್ಸ್ನಲ್ಲಿ ಭಾರತ ಏಕದಿನ ತಂಡವನ್ನ ಮುನ್ನಡೆಸೋಕೆ ರೆಡಿಯಾಗಿದ್ದಾರೆ. ತವರಿನಲ್ಲೇ ನಡೆಯಲಿರೋ ಈ ಸರಣಿ ಭಾರತ ತಂಡಕ್ಕೆ ಮಸ್ಟ್ ವಿನ್ ಸಿರೀಸ್ ಆಗಿದೆ. ಟೆಸ್ಟ್ ಸರಣಿಯನ್ನ ಸೋತಿರೋ ಭಾರತ ಏಕದಿನ ಸರಣಿ ಗೆದ್ದು ಸೌತ್ ಆಫ್ರಿಕಾ ವಿರುದ್ಧ ಸೇಡು ತೀರಿಸಿಕೊಳ್ಬೇಕಿದೆ. ಹಾಗೇ ವೈಯಕ್ತಿಯವಾಗಿಯೂ ಈ ಸರಣಿ ರಾಹುಲ್ಗೆ ತುಂಬಾನೇ ಮುಖ್ಯವಾಗಿದೆ.
ಏಕದಿನ ಸರಣಿ ಇಂಪಾರ್ಟೆನ್ಸ್!
ಟೆಸ್ಟ್ ಸರಣಿ ಸೋತಿರೋ ಟೀಂ ಇಂಡಿಯಾ ಸೇಡು
ನಾಯಕನಾಗಿ ಆಯ್ಕೆ ಮಾಡದ ಬಿಸಿಸಿಐಗೆ ರಾಹುಲ್ ಪಾಠ
ಶುಭ್ ಮನ್ ಗಿಲ್ ಗಿಂತ ತಾನು ಹೇಗೆ ಬೆಸ್ಟ್ ಸಾಬೀತು
2027ರ ಏಕದಿನ ವಿಶ್ವಕಪ್ ವರೆಗೂ ಆಡಲು ಅವಕಾಶ
ರೋಹಿತ್ & ಕೊಹ್ಲಿ ಜೊತೆಗಿನ ರಾಹುಲ್ ಅನುಭವ
ಹೀಗೆ ಈ ಸರಣಿ ತಂಡಕ್ಕೆಷ್ಟು ಮುಖ್ಯವೋ ರಾಹುಲ್ಗೂ ಅಷ್ಟೇ ಮುಖ್ಯವಾಗಿದೆ. ಇನ್ನು ಕೆಎಲ್ ರಾಹುಲ್ಗೆ ತಂಡದ ನಾಯಕತ್ವ ಹೊಸದೇನೂ ಅಲ್ಲ. ಆಲ್ರೆಡಿ ಭಾರತ ಏಕದಿನ ತಂಡದ ನಾಯಕನಾಗಿ ಹಲವು ಪಂದ್ಯಗಳಲ್ಲಿ ಗೆಲ್ಲಿಸಿಕೊಟ್ಟಿದ್ದಾರೆ. ರಾಹುಲ್ 2022 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ವಿದೇಶ ಪ್ರವಾಸದಲ್ಲಿ ತಮ್ಮ ಕ್ಯಾಪ್ಟನ್ಸಿ ಕರಿಯರ್ ಆರಂಭಿಸಿದ್ರು. ಬ್ಯಾಡ್ಲಕ್ ಅಂದ್ರೆ ಮೂರು ಪಂದ್ಯಗಳಲ್ಲೂ ತಂಡ ಸೋತಿತ್ತು. ಬಟ್ ಆ ನಂತ್ರದ 9 ಪಂದ್ಯಗಳಲ್ಲಿ 8ರಲ್ಲಿ ಗೆಲುವು ಸಾಧಿಸಿದ್ದಾರೆ. ವಿಶೇಷ ಅಂದ್ರೆ ರಾಹುಲ್ ಮತ್ತೆ ನಾಯಕನಾಗಿ ಕಮ್ ಬ್ಯಾಕ್ ಮಾಡ್ತಿರೋದು ದಕ್ಷಿಣ ಆಫ್ರಿಕಾ ವಿರುದ್ಧವೇ. ಕೆಎಲ್ ರಾಹುಲ್ ನಾಯಕತ್ವದಲ್ಲಿ ಟೀಮ್ ಇಂಡಿಯಾ 12 ಏಕದಿನ ಪಂದ್ಯಗಳನ್ನು ಆಡಿದ್ದು, 8 ಪಂದ್ಯಗಳನ್ನು ಗೆದ್ದು 4 ಪಂದ್ಯಗಳಲ್ಲಿ ಸೋತಿದೆ. ಟೆಸ್ಟ್ ಮಾದರಿಯಲ್ಲಿ ರಾಹುಲ್ 4 ಪಂದ್ಯಗಳಲ್ಲಿ ಟೀಮ್ ಇಂಡಿಯಾದ ನಾಯಕತ್ವ ವಹಿಸಿದ್ದಾರೆ. 2 ಪಂದ್ಯಗಳಲ್ಲಿ ಗೆದ್ದು 1 ಪಂದ್ಯ ಸೋತಿದ್ದಾರೆ. ಒಂದೇ ಟಿ20 ಪಂದ್ಯದಲ್ಲಿ ಭಾರತವನ್ನು ಮುನ್ನಡೆಸಿ ಭಾರತವನ್ನು ಗೆಲುವಿನತ್ತ ಕೊಂಡೊಯ್ದಿದ್ದಾರೆ. ಒಟ್ಟಾರೆಯಾಗಿ, ರಾಹುಲ್ 16 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದು, 11 ಪಂದ್ಯಗಳಲ್ಲಿ ಗೆದ್ದು 5 ಪಂದ್ಯಗಳಲ್ಲಿ ಸೋತಿದ್ದಾರೆ. ಒಟ್ನಲ್ಲಿ ಕ್ಯಾಪ್ಟನ್ ಆಗೋಕೆ ಎಲ್ಲಾ ಅರ್ಹತೆ ಇದ್ರೂ ಯಾರ್ಯಾರದ್ದೋ ಪಾಲಿಟಿಕ್ಸ್ಗೆ ನಾಯಕತ್ವ ಕೈತಪ್ಪಿ ಹೋಗಿದೆ. ಇದೀಗ ಹಂಗಾಮಿ ನಾಯಕನಾಗಿ ಏಕದಿನ ಸರಣಿಗೆ ಸಿದ್ಧವಾಗಿರೋ ರಾಹುಲ್ ಈ ಸಿರೀಸ್ ಗೆದ್ದು ತನ್ನ ಟ್ಯಾಲೆಂಟ್ ಏನೂ ಅನ್ನೋದನ್ನ ಪ್ರೂವ್ ಮಾಡ್ಬೇಕಿದೆ.

ನೋಡಿರಿ

