KL ಆಟಕ್ಕೆ BCCI ಶೇಪ್ ಔಟ್ – ಕ್ಯಾಪ್ಟನ್ಸಿ ಕೊಟ್ರೂ ಸ್ಲಾಟ್ ಮೋಸ?
RO-KO ಜೊತೆ ಅಗ್ನಿಪರೀಕ್ಷೆ ಗೆದ್ರಾ?

ಟೀಂ ಇಂಡಿಯಾದಲ್ಲಿ ಪದೇಪದೆ ಯಾರನ್ನಾದ್ರೂ ಫಿಲ್ ಇನ್ ದಿ ಬ್ಲಾಂಕ್ಸ್ ಅನ್ನೋ ಥರ ಬಳಸಿಕೊಳ್ತಿದ್ದಾರೆ ಅಂದ್ರೆ ಅದು ಕೆಎಲ್ ರಾಹುಲ್ರನ್ನ ಮಾತ್ರ. ಪಂದ್ಯದಿಂದ ಪಂದ್ಯಕ್ಕೆ ಎಕ್ಸ್ಪೆರಿಮೆಂಟ್ ನಡೀತಾನೇ ಇರುತ್ತೆ. ಈಗ ಕ್ಯಾಪ್ಟನ್ ಆದ್ಮೇಲೂ ಆ ಪ್ರಯೋಗ ನಿಂತಿಲ್ಲ. ಸೌತ್ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲೇ ಮತ್ತೆ ಬಿಸಿಸಿಐ ಮೋಸ ಮಾಡಿದೆ.
ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಗೆಲ್ಲೋದು ಟೀಂ ಇಂಡಿಯಾಗೆ ಎಷ್ಟು ಮುಖ್ಯನೋ ಈ ಮೂವರು ಆಟಗಾರರಿಗೂ ಅಷ್ಟೇ ಮುಖ್ಯವಾಗಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಬಗ್ಗೆ ಸೊಲ್ಲೆತ್ತಿದವ್ರಿಗೆ ತಕ್ಕ ಪಾಠ ಕಲಿಸ್ತಿದ್ದಾರೆ. ಌಂಡ್ ಈ ಸರಣಿ ಕನ್ನಡಿಗ ಕೆಎಲ್ ರಾಹುಲ್ ನಾಯಕತ್ವಕ್ಕೂ ಅಗ್ನಿಪರೀಕ್ಷೆಯಾಗಿದೆ. ಕ್ಯಾಪ್ಟನ್ ಆಗೋಕೆ ಸರ್ವಸಮರ್ಥನಾಗಿದ್ರೂ ಸೈಡ್ಲೈನ್ ಮಾಡಿದವರ ಸೊಕ್ಕಡಗಿಸಬೇಕಿದೆ. ಈ ಕೆಲಸವನ್ನ ಮೊದಲ ಪಂದ್ಯದಲ್ಲೇ ಮಾಡಿ ತೋರಿಸಿದ್ದಾರೆ. ಆದ್ರೆ ಇಲ್ಲೂ ಕೂಡ ಬಿಸಿಸಿಐ ತನ್ನ ನರಿಬುದ್ಧಿಯನ್ನ ತೋರಿಸಿದೆ.
ಇದನ್ನೂ ಓದಿ : RO-KO ಅಬ್ಬರದ ಜೊತೆಯಾಟ ಗೆದ್ದ ಟೀಮ್ ಇಂಡಿಯಾ – ರಾಂಚಿಯಲ್ಲಿ ಕ್ರಿಕೆಟ್ ರಾಜನ 52ನೇ ಶತಕ
ಕ್ಯಾಪ್ಟನ್ ಆದ್ರೂ ಬ್ಯಾಟಿಂಗ್ ಬಡ್ತಿ ನೀಡದ ಬಿಸಿಸಿಐ!
ಟೀಂ ಇಂಡಿಯಾ ಪಾಲಿನ ಆಲ್ರೌಂಡರ್ ಆಗಿರೋ ಕೆಎಲ್ ರಾಹುಲ್ ನಿಜಕ್ಕೂ ಟ್ಯಾಲೆಂಟೆಡ್ ಪ್ಲೇಯರ್. ಆದ್ರೆ ಬಿಸಿಸಿಐ ಮಾತ್ರ ಆತನ ವಿಚಾರದಲ್ಲಿ ಪದೇಪದೆ ಎಕ್ಸ್ಪೆರಿಮೆಂಟ್ ಮಾಡ್ತಾನೇ ಇರುತ್ತೆ. ಓಪನರ್ ಕೈಕೊಟ್ರೆ ಓಪನರ್, ಒನ್ ಡೌನ್ ಬ್ಯಾಟರ್, ವಿಕೆಟ್ ಕೀಪರ್, ಮಿಡಲ್ ಆರ್ಡರ್ ಌಂಡ್ ಫಿನಿಶರ್. ಕೊನೆಗೆ ಕ್ಯಾಪ್ಟನ್ ಇಲ್ದಿದ್ರೆ ಎಮರ್ಜಿಂಗ್ ಕ್ಯಾಪ್ಟನ್ ಬೇರೆ. ಈಗ ರಾಹುಲ್ ತಂಡಕ್ಕಾಗಿ ಇಷ್ಟೆಲ್ಲಾ ಪಾತ್ರ ನಿಭಾಯಿಸ್ತಿದ್ದಾರೆ ಅಂದ್ರೆ ಆತನಿಗಾಗಿ ಬಿಸಿಸಿಐ ಏನ್ ಮಾಡ್ತಿದೆ. ಈಗ ಶುಭ್ಮನ್ ಗಿಲ್ ಆಬ್ಸೆನ್ಸ್ನಲ್ಲಿ ಸೌತ್ ಆಫ್ರಿಕಾ ವಿರುದ್ಧದ ಸರಣಿಗೆ ಕ್ಯಾಪ್ಟನ್ ಮಾಡಿದ್ರು. ಓಕೆ ಒಳ್ಳೆ ನಿರ್ಧಾರನೇ ಒಪ್ಕೊಳ್ಳೋಣ. ಆದ್ರೆ ನಾಯಕನನ್ನಾಗಿ ಮಾಡಿದ ಮೇಲಾದ್ರೂ ಬ್ಯಾಟಿಂಗ್ ಬಡ್ತಿ ಕೊಡ್ಬೋದಿತ್ತಲ್ವ. 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಅಕ್ಷರ್ ಪಟೇಲ್ಗೆ 5ನೇ ಸ್ಥಾನ ಕೊಟ್ಟು ರಾಹುಲ್ರನ್ನ 6ನೇ ಸ್ಥಾನಕ್ಕೆ ಕಳಿಸ್ತಿದ್ರು. ಈಗ ನಾಯಕ ಆದ್ಮೇಲಾದ್ರೂ ಆತನಿಗೆ ಇಂಪಾರ್ಟೆನ್ಸ್ ಕೊಡ್ತಾರೆ ಅಂದ್ರೆ ವಾಷಿಂಗ್ಟನ್ ಸುಂದರ್ ಆದ್ಮೇಲೆ ಮತ್ತೆ 6ನೇ ಸ್ಥಾನದಲ್ಲೇ ಬ್ಯಾಟಿಂಗ್ಗೆ ಇಳ್ಸಿದ್ದಾರೆ. ಇದು ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಪ್ಯೂರ್ ಬ್ಯಾಟರ್ ರಾಹುಲ್ರನ್ನ ಕೆಳ ಕ್ರಮಾಂಕಕ್ಕೆ ಕಳಿಸ್ತಿರೋದು ಯಾಕೆ ಅಂತಾ ಪ್ರಶ್ನೆ ಮಾಡಿದ್ದಾರೆ. ಮಾಜಿ ಕ್ರಿಕೆಟಿಗ ಕೆ.ಶ್ರೀಕಾಂತ್ ಕೂಡ ರಾಹುಲ್ರನ್ನ ನಂಬರ್ 5 ಬ್ಯಾಟಿಂಗ್ ಒಳಗೆ ಕಳಿಸ್ಬೋದಿತ್ತು,. ಸುಂದರ್ರನ್ನ ಮೊದ್ಲೇ ಹೇಗೆ ಕಳಿಸಿದ್ರೋ ಗೊತ್ತಿಲ್ಲ ಎಂದಿದ್ದಾರೆ. ಬಟ್ ಯಾವ ಸ್ಲಾಟ್ ಆದ್ರೇನು ನಾನು ಕೋಟದಿಂದ ಬಂದಿರೋ ಪ್ಲೇಯರ್ ಅಲ್ಲ ಆಟದಿಂದಲೇ ಸ್ಥಾನ ಗಿಟ್ಟಿಸಿಕೊಂಡವನು ಅನ್ನೋದನ್ನ ರಾಹುಲ್ ಮತ್ತೆ ಪ್ರೂವ್ ಮಾಡಿದ್ದಾರೆ.
ಬ್ಯಾಟಿಂಗ್ ಜೊತೆ ಕ್ಯಾಪ್ಟನ್ಸಿಯನ್ನೂ ಗೆದ್ದ ರಾಹುಲ್!
ರಾಂಚಿ ಮೈದಾನದಲ್ಲಿ ಸೌತ್ ಆಫ್ರಿಕಾ ವಿರುದ್ಧ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ರಾಹುಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ರು. 56 ಎಸೆತಗಳಲ್ಲಿ 3 ಸಿಕ್ಸ್, 2 ಫೋರ್ಗಳೊಂದಿಗೆ 60 ರನ್ ಕಲೆ ಹಾಕಿದ್ರು. ಹಾಗೇ ತಂಡದ ಪರ ಕೊಹ್ಲಿ ಸೆಂಚುರಿ ಬಿಟ್ರೆ ಸೆಕೆಂಡ್ ಹೈಯೆಸ್ಟ್ ಸ್ಕೋರರ್ ಎನಿಸಿಕೊಂಡ್ರು. ಹಾಗೇ ಈ ಪಂದ್ಯದಲ್ಲಿ ಕೆಲ ದಾಖಲೆಗಳ ಜೊತೆ ತುಂಬಾನೇ ಕ್ಲೆವರ್ ಡಿಸಿಷನ್ಸ್ ಕೂಡ ತಗೊಂಡ್ರು. ವಿಕೆಟ್ ಕೀಪರ್ ಆಗಿ ನಾಲ್ಕು ಕ್ಯಾಚ್ಗಳನ್ನ ಹಿಡಿದ್ರು. ಡಿಆರ್ಎಸ್ ಮೂಲಕ ರಿವ್ಯೂ ತಗೊಂಡು ಒಂದು ವಿಕೆಟ್ ಎಗರಿಸಿದ್ರು. ಹಾಗೇ ಹರ್ಷಿತ್ ರಾಣಾಗೆ ಒಂದಷ್ಟು ಸಜೇಷನ್ಸ್ ಕೊಡ್ತಾ ಇದ್ದದ್ದು ಕಾಣ್ತಿತ್ತು. ಇದೆಲ್ಲಕ್ಕಿಂತ ಮೇನ್ ಏನಂದ್ರೆ ರಾಹುಲ್ ನಾಯಕತ್ವದಲ್ಲಿ ರೋಹಿತ್ ಶರ್ಮಾ-ಕೊಹ್ಲಿ ಸೇರಿದಂತೆ ತಂಡದ ಆಟಗಾರರೆಲ್ಲಾ ಒಂಥರಾ ಫ್ರೀ ಮೈಂಡ್ಸೆಟ್ನಲ್ಲಿ ಖುಷಿ ಖುಷಿಯಾಗಿ ಆಡಿದ್ರು. ಹೀಗೆ ರಾಹುಲ್ ತಮ್ಮ ಕ್ಯಾಪ್ಟನ್ಸಿಯ ಮೊದಲ ಅಗ್ನಿಪರೀಕ್ಷೆ ಗೆದ್ದಿದ್ದಾರೆ.

ನೋಡಿರಿ

