IPL ಹರಾಜಿಗೆ ಬರಲೇಬೇಕು KL – RCBಗೆ ಬರಲು ಒಪ್ಪಿದ್ರೂ ಟ್ರೇಡ್ ಇಲ್ಲ
ಫ್ರಾಂಚೈಸಿಗೆ ಉಳಿದಿರೋ ದಾರಿ ಒಂದೇ!
ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಮ್ಯಾಚ್ನಲ್ಲಿ ಕನ್ನಡಿಗ ಕೆಎಲ್ ರಾಹುಲ್ ಬ್ಯಾಟ್ ಅಷ್ಟೇನು ಸದ್ದು ಮಾಡಿರಲಿಲ್ಲ. ಇದೀಗ ಕಾನ್ಪುರದಲ್ಲಿ ನಡೀತಾ ಇರೋ ಸೆಕೆಂಡ್ ಮ್ಯಾಚ್ನಲ್ಲಾದ್ರೂ ಧಮಾಕೇಧಾರ್ ಪರ್ಫಾಮೆನ್ಸ್ ನೀಡಲಿ ಅನ್ನೋದು ಕೋಟ್ಯಂತರ ಅಭಿಮಾನಿಗಳ ಆಶಯ. ಹಾಗೇ ಕನ್ನಡಡಿಗರ ಮತ್ತೊಂದು ಮಹದಾಸೆ ಅಂದರೆ ಕೆಎಲ್ ರಾಹುಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡ್ಬೇಕು ಅನ್ನೋದು. ರಾಹುಲ್ ಕೂಡ ಬೆಂಗಳೂರು ಫ್ರಾಂಚೈಸಿ ಸೇರ್ಪಡೆ ಬಗ್ಗೆ ಪಾಸಿಟಿವ್ ಆಗಿಯೇ ರಿಪ್ಲೈ ಕೊಟ್ಟಿದ್ದಾರೆ. ಬಟ್ ಕೆಎಲ್ ಆರ್ಸಿಬಿಗೆ ಸೇರೋಕೆ ರೆಡಿ ಇದ್ರೂ ಅವ್ರನ್ನ ನೇರವಾಗಿ ಟ್ರೇಡ್ ಮಾಡಿಕೊಳ್ಳೋಕೆ ಆಗಲ್ಲ. ಹಾಗಾದ್ರೆ ಕಳೆದ ವರ್ಷ ಇದ್ದಿದ್ದ ಆ ರೂಲ್ಸ್ ಈ ವರ್ಷ ಯಾಕೆ ಅಪ್ಲೈ ಆಗಲ್ಲ? ಹರಾಜಿನಲ್ಲೇ ಖರೀದಿ ಮಾಡ್ಬೇಕಾ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಕಾಮಿಡಿ ಸ್ಟಾರ್ ಗಿಲ್ಲಿನಟ ಯಾರು? – ಗಗನಾಳನ್ನ ಮದುವೆ ಆಗ್ತಾರಾ?
ಕೆಎಲ್ ರಾಹುಲ್ ಹೆಸರು ಕೇಳಿದ್ರೆ ಸಾಕು ಕನ್ನಡಿಗರು ಅಲರ್ಟ್ ಆಗ್ತಾರೆ. ಅದು ಟೀಂ ಇಂಡಿಯಾ ಪಂದ್ಯಗಳೇ ಇರಲಿ ಅಥವಾ ಐಪಿಎಲ್ ಟೂರ್ನಿಯೇ ಇರಲಿ. ಅದ್ರಲ್ಲೂ ಆರ್ಸಿಬಿಗಾಗಿ ಕೆಎಲ್ ಆಡ್ಲಿ ಅನ್ನೋದು ಎಷ್ಟೋ ಅಭಿಮಾನಿಗಳ ಕನಸು. ಆದ್ರೆ ಕೆಎಲ್ ರಾಹುಲ್ ಒಪ್ಪಿದ್ರೂ ಕೂಡ ಐಪಿಎಲ್ 18ನೇ ಆವೃತ್ತಿಯ ಹರಾಜಿಗೂ ಮುನ್ನ ಅವರನ್ನು ತಂಡಕ್ಕೆ ಟ್ರೇಡ್ ಮಾಡಿಕೊಳ್ಳೋಕೆ ತಂಡಕ್ಕೆ ಸಾಧ್ಯವಾಗಲ್ಲ. ಇದಕ್ಕೆ ಮುಖ್ಯ ಕಾರಣ ಐಪಿಎಲ್ನ ಮೆಗಾ ಹರಾಜು ನಿಯಮ. ಹೌದು ಈ ನಿಯಮದ ಪ್ರಕಾರ ಆಟಗಾರರ ಟ್ರೇಡಿಂಗ್ಗೆ ಅವಕಾಶವಿಲ್ಲ. ಯಾಕೆ ಮತ್ತು ಹೇಗೆ ಅನ್ನೋದನ್ನ ಹೇಳ್ತೇನೆ ನೋಡಿ.
ರಾಹುಲ್ ಟ್ರೇಡಿಂಗ್ ಆಗಲ್ವಾ?
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಸಿದ್ಧತೆಗಳು ಜೋರಾಗಿದ್ದು, ಮೆಗಾ ಹರಾಜು ಇರೋದ್ರಿಂದ ಯಾರೆಲ್ಲಾ ಹರಾಜಿಗೆ ಬರಬಹುದು ಅನ್ನೋ ಕ್ಯೂರಿಯಾಸಿಟಿ ಇದೆ. ಅದ್ರಲ್ಲೂ ಕನ್ನಡಿಗರ ಕೆಎಲ್ ರಾಹುಲ್ ನಡೆಯ ಸುತ್ತಲೇ ಕನ್ನಡಿಗರ ಚಿತ್ತ ನೆಟ್ಟಿದೆ. ಈಗಾಗ್ಲೇ ಲಕ್ನೋ ಸೂಪರ್ ಜೈಂಟ್ಸ್ ಮಾಲೀಕ ಸಂಜೀವ್ ಗೋಯೆಂಕಾ ಮತ್ತು ಕೆಎಎಲ್ ರಾಹುಲ್ ನಡುವಿನ ಮನಸ್ಥಾಪ ನಿಮಗೆಲ್ಲಾ ಗೊತ್ತೇ ಇದೆ. ಮೇಲ್ನೋಟಕ್ಕೆ ಎಲ್ಲವೂ ಸರಿ ಇದೆ ಎಂಬಂತೆ ತೋರಿಸಿಕೊಳ್ತಾ ಇದ್ರೂ ಕೂಡ ತಂಡದಿಂದ ಕನ್ನಡಿಗ ಹೊರಬರುವುದು ಬಹುತೇಕ ಖಚಿತ. ಇದನ್ನು ಪುಷ್ಠೀಕರಿಸುವಂತೆ ರಾಹುಲ್ ಕೂಡ ಆರ್ಸಿಬಿ ಪರ ಕಣಕ್ಕಿಳಿಯುವ ತಮ್ಮ ಕನಸನ್ನ ಎರಡೆರಡು ಬಾರಿ ಹೇಳಿಕೊಂಡಿದ್ದಾರೆ. ಆದರೆ ಆರ್ಸಿಬಿ ಪರ ಮತ್ತೆ ಆಡುವ ಆಸೆ ಇಟ್ಕೊಂಡಿದ್ರೂ ಕೂಡ ಕೆಎಲ್ ರಾಹುಲ್ ನೇರವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಯ್ಕೆಯಾಗುವುದಿಲ್ಲ. ಅಂದರೆ ಮೆಗಾ ಹರಾಜಿಗೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ರಾಹುಲ್ ಅವರನ್ನು ಟ್ರೇಡ್ ಮಾಡಲು ಅವಕಾಶವಿಲ್ಲ. ಬದಲಾಗಿ ಮೆಗಾ ಹರಾಜಿನ ಮೂಲಕವೇ ಖರೀದಿ ಮಾಡ್ಬೇಕಾಗುತ್ತೆ. ಐಪಿಎಲ್ ನಿಯಮಗಳ ಪ್ರಕಾರ, ಮೆಗಾ ಹರಾಜಿನ ಸಂದರ್ಭಗಳಲ್ಲಿ ಆಟಗಾರರ ಟ್ರೇಡಿಂಗ್ಗೆ ಅವಕಾಶವಿಲ್ಲ. ಮಿನಿ ಹರಾಜಿನ ವೇಳೆ ಮಾತ್ರ ಆಟಗಾರರನ್ನು ಟ್ರೇಡಿಂಗ್ಗೆ ಅವಕಾಶ ನೀಡಲಾಗುತ್ತದೆ. ಹೀಗಾಗಿ ಈ ಬಾರಿಯ ಹರಾಜಿಗೂ ಮುನ್ನ RCBಗೆ ಕೆಎಲ್ ರಾಹುಲ್ ಅವರನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ಪರಿಣಾಮ ಕೆಎಲ್ ಬಿಡ್ನಲ್ಲಿ ಭಾಗಿಯಾಗಲೇ ಬೇಕು. ಕೆಎಲ್ ರಾಹುಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡರೆ ಇತರೆ ಫ್ರಾಂಚೈಸಿಗಳು ಕೂಡ ಅವರ ಖರೀದಿಗೆ ಮುಂದಾಗಲಿವೆ. ಹೇಳಿ ಕೇಳಿ ರಾಹುಲ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್. ಅದರಲ್ಲೂ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳನ್ನು ಮುನ್ನಡೆಸಿದ ಅನುಭವವನ್ನು ಸಹ ಹೊಂದಿದ್ದಾರೆ. ಹೀಗಾಗಿ ಕೆಎಲ್ ರಾಹುಲ್ ಅವರ ಖರೀದಿಯಿಂದ ಕ್ಯಾಪ್ಟನ್, ವಿಕೆಟ್ ಕೀಪರ್ ಹಾಗೂ ಓಪನರ್ ಸ್ಥಾನಗಳನ್ನು ತುಂಬಬಹುದು. ಹೀಗೆ ಒಂದೇ ಆಯ್ಕೆಯಿಂದ ಮೂರು ಸ್ಥಾನಗಳನ್ನು ತುಂಬಬಲ್ಲ ಆಟಗಾರರ ಖರೀದಿಗೆ ಹೆಚ್ಚಿನ ಫ್ರಾಂಚೈಸಿಗಳು ಆಸಕ್ತಿವಹಿಸಲಿವೆ. ಹೀಗಾಗಿ ಮೆಗಾ ಹರಾಜಿನ ಮೂಲಕ ಆರ್ಸಿಬಿ ಕೆಎಲ್ ರಾಹುಲ್ ಅವರ ಖರೀದಿಗೆ ಮುಂದಾದರೂ ಕೂಡ ಹೆಚ್ಚಿನ ಪೈಪೋಟಿ ನಡೆಸಬೇಕಾಗುತ್ತೆ.
ಇನ್ನು ಕೆಎಲ್ ರಾಹುಲ್ ಆರ್ಸಿಬಿಗೆ ಬರೋದ್ರಿಂದ ಫ್ರಾಂಚೈಸಿಗೂ ಕೂಡ ಮೂರ್ಮೂರು ಲಾಭಗಳಿವೆ. ಹಾಲಿ ನಾಯಕ ಫಾಫ್ ಡುಪ್ಲೆಸಿಸ್ ಮುಂದಿನ ಸೀಸನ್ ಆಡ್ತಾರೋ ಇಲ್ವೋ ಹೇಳೋಕಾಗಲ್ಲ. ಸೋ ಕೆಎಲ್ ಬಂದ್ರೆ ಕ್ಯಾಪ್ಟನ್ ಆಗಿ ಓಪನರ್ ಆಗಿ ತಂಡವನ್ನ ಲೀಡ್ ಮಾಡಬಹುದು. ಅಲ್ದೇ ಬೆಂಗಳೂರು ತಂಡದಲ್ಲಿ ವಿರಾಟ್ ಕೊಹ್ಲಿಯನ್ನ ಹೊರತು ಪಡಿಸಿದ್ರೆ ಮತ್ಯಾವ ಪ್ಲೇಯರ್ ಕೂಡ ಸ್ಟೇಬಲ್ ಪರ್ಫಾಮೆನ್ಸ್ ನೀಡ್ತಿಲ್ಲ. ಹೀಗಾಗಿ ಕೊಹ್ಲಿಗೂ ಉತ್ತಮ ಸಾಥ್ ಸಿಕ್ಕಂತಾಗುತ್ತೆ,. ಇದೆಲ್ಲಕ್ಕಿಂತ ಹೆಚ್ಚಾಗಿ ಐಪಿಎಲ್ಗೂ ನಿವೃತ್ತಿ ಘೋಷಣೆ ಮಾಡಿರೋ ದಿನೇಶ್ ಕಾರ್ತಿಕ್ ಅವ್ರ ಸ್ಥಾನಕ್ಕೆ ಉತ್ತಮ ಆಯ್ಕೆಯಾಗಲಿದ್ದಾರೆ. ವಿಕೆಟ್ ಕೀಪರ್ ಬ್ಯಾಟರ್ ಆಗಿ ಸ್ಟ್ರೆಂಥ್ ಹೆಚ್ಚಿಸಲಿದ್ದಾರೆ. ಹೀಗಾಗಿ ಕೆಎಲ್ ರಾಹುಲ್ ಮೆಗಾ ಆಕ್ಷನ್ನಲ್ಲಿ ಕಾಣಿಸಿಕೊಂಡ್ರೆ ಹೆಚ್ಚಿನ ಪೈಪೋಟಿ ಇರೋದಂತೂ ಗ್ಯಾರಂಟಿ.