KL ಕಡೆಗಣಿಸಿ ಕೆಟ್ಟ BCCI – ಗಿಲ್ ಗೆ ಕ್ಯಾಪ್ಟನ್ಸಿ ಕೊಟ್ಟಿದ್ದೇ ತಪ್ಪಾ?
T-20Iನಂತೆ ODIನಿಂದಲೂ ಔಟ್?

ರೋಹಿತ್ ಶರ್ಮಾರನ್ನ ಟೀಂ ಇಂಡಿಯಾ ಏಕದಿನ ಕ್ಯಾಪ್ಟನ್ಸಿಯಿಂದ ಕೆಳಗಿಳಿಸಿ ಶುಭ್ಮನ್ ಗಿಲ್ಗೆ ಪಟ್ಟಾಭಿಷೇಕ ಮಾಡಿದಾಗ್ಲೇ ಸಾಕಷ್ಟು ಜನ ಆಪೋಸ್ ಮಾಡಿದ್ರು. ಹಿಟ್ಮ್ಯಾನ್ ತಂಡದಲ್ಲಿ ಇದ್ದಾಗ್ಲೇ ಇಷ್ಟು ಅರ್ಜೆನ್ಸಿ ಯಾಕೆ ಬೇಕಿತ್ತು ಅಂತಾ ಬಿಸಿಸಿಐಗೆ ಪ್ರಶ್ನೆ ಮಾಡಿದ್ರು. ಆದ್ರೆ ಈಗ ಅದಕ್ಕೆ ತಕ್ಕಂತೆಯೇ ಟೀಂ ಇಂಡಿಯಾ ಪರ್ಫಾಮ್ ಮಾಡ್ತಿದೆ. ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿ ಸೋತಿದೆ. ಭಾರತ ತಂಡದ ಇದೇ ಫೇಲ್ಯೂರ್ ಈಗ ಶುಭ್ಮನ್ ಗಿಲ್ ಕ್ಯಾಪ್ಟನ್ಸಿಯನ್ನ ಪ್ರಶ್ನೆ ಮಾಡುವಂತೆ ಮಾಡಿದೆ.
ಇದನ್ನೂ ಓದಿ : RO-KO ಆಟ ನೋಡಲು 5 ತಿಂಗಳು ಕಾಯಬೇಕು – ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಕಣಕ್ಕಿಳಿಯುವುದು ಯಾವಾಗ?
ಟೀಂ ಇಂಡಿಯಾದ ಪ್ರಿನ್ಸ್ ಅಂತಾನೇ ಕರೆಸಿಕೊಳ್ತಿದ್ದ ಶುಭ್ಮನ್ ಗಿಲ್ ಟೀಂ ಇಂಡಿಯಾದ ಆಲ್ಫಾರ್ಮೆಟ್ ಕ್ಯಾಪ್ಟನ್ ಅನ್ನೋ ಥರನೇ ಬಿಸಿಸಿಐ ಅವ್ರನ್ನ ಪ್ರೆಡಿಕ್ಟ್ ಮಾಡ್ಕೊಳ್ತಾ ಬಂದಿತ್ತು. ಅದ್ರಂತೆ ಮೊದ್ಲಿಗೆ ಟೆಸ್ಟ್ ಕ್ಯಾಪ್ಟನ್ಸಿಯನ್ನ ನೀಡ್ತಾರೆ.. ನೆಕ್ಸ್ಟ್ ಏಕದಿನ ಮಾದರಿಯ ಸಾರಥ್ಯವನ್ನೂ ವಹಿಸ್ತಾರೆ.. ನೆಕ್ಸ್ಟ್ ಟಿ-20ಐ ಟೀಮ್ಗೆ ಕರೆಸಿ ವೈಸ್ ಕ್ಯಾಪ್ಟನ್ಸಿಯನ್ನೂ ಕೊಡ್ತಾರೆ. ಆದ್ರೆ ಅದ್ಯಾಕೋ ಏನೋ ಗಿಲ್ಗೆ ಬ್ಯಾಟರ್ ಆಗಿ ಸಿಕ್ಕಷ್ಟು ಸಕ್ಸಸ್ ಕ್ಯಾಪ್ಟನ್ ಆದ್ಮೇಲೆ ಸಿಕ್ತಿಲ್ಲ.
ಆಸೀಸ್ ನಲ್ಲೂ ಗೆಲ್ಲಲಿಲ್ಲ.. ಭಾರತದಲ್ಲೂ ಜಯ ಸಿಗಲಿಲ್ಲ!
2025ರ ಅಕ್ಟೋಬರ್ನಲ್ಲಿ ಶುಭ್ಮನ್ ಗಿಲ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ಸರಣಿ ಆಡಿದ್ರು. ಆದ್ರೆ ಮೊದಲ ಸರಣಿಯಲ್ಲೇ ಸೋಲು. ಆ ನಂತ್ರ ಈಗ ಗಿಲ್ ಅಡಿಯಲ್ಲಿ ಭಾರತದಲ್ಲೇ ನ್ಯೂಜಿಲೆಂಡ್ ವಿರುದ್ಧ 2ನೇ ಏಕದಿನ ಸರಣಿ ಆಡಿಸಲಾಯ್ತು. ಆದ್ರೆ ಇಲ್ಲೂ ಗೆಲುವು ಧಕ್ಕಲಿಲ್ಲ. ಸೋ ಅಲ್ಲಿಗೆ ಎರಡಕ್ಕೆ ಎರಡೂ ಸರಣಿಗಳಲ್ಲೂ ಭಾರತ ಸೋಲನ್ನ ಕಂಡಿದೆ.
ಗಿಲ್ ಕ್ಯಾಪ್ಟನ್ಸಿ ರೆಕಾರ್ಡ್ಸ್!
ಪಂದ್ಯಗಳು ಗೆಲುವು ಸೋಲು ಗೆಲುವಿನ ಪರ್ಸೆಂಟೇಜ್
6 2 4 33.33%
ಸೋ ಅಲ್ಲಿಗೆ ಗಿಲ್ ಗೆದ್ದಿರೋದೇ 2 ಮ್ಯಾಚ್. ಆದ್ರೆ ಅದೇ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಬರೋಬ್ಬರಿ 56 ಏಕದಿನ ಪಂದ್ಯಗಳನ್ನ ಆಡಿದೆ. ಌಂಡ್ ವಿಕ್ಟರಿ ಪರ್ಸೆಂಟೇಜ್ 75 ಪರ್ಸೆಂಟ್ ಇದೆ. ಇದನ್ನ ನೋಡಿದ್ರೇನೇ ಗೊತ್ತಾಗುತ್ತೆ ಇಬ್ಬರಲ್ಲಿ ಯಾರು ಬೆಸ್ಟ್ ಅನ್ನೋದು. ಸೋ 26 ವರ್ಷದ ಗಿಲ್ಗೆ ಆತುರಾತುರವಾಗಿ ನಾಯಕತ್ವ ನೀಡೋ ಬದ್ಲು ತಂಡದಲ್ಲಿರೋ ಮತ್ತೊಬ್ಬ ಅನುಭವಿ ಆಟಗಾರ ಕೆಎಲ್ ರಾಹುಲ್ಗೆ ನಾಯಕತ್ವ ನೀಡಬಹುದಿತ್ತು ಅನ್ನೋದು ಕೆಲವರ ವಾದ. ರಾಹುಲ್ಗೆ ಪಟ್ಟ ಕಟ್ಟಬಹುದಿತ್ತು ಅನ್ನೋದಕ್ಕೆ ಒಂದಷ್ಟು ಸಾಲಿಡ್ ರೀಸನ್ಸ್ ಕೂಡ ಇದೆ.
ಗಿಲ್ ಗಿಂತ ರಾಹುಲ್ ಬೆಸ್ಟ್ ಪರ್ಫಾಮೆನ್ಸ್!
ಟೀಮ್ ಇಂಡಿಯಾದಲ್ಲಿ ಪ್ರಸ್ತುತ ಮಿಸ್ಟರ್ ಡಿಫೆಂಡೇಬಲ್ ಅಂತಾನೇ ಕರೆಸಿಕೊಳ್ತಿರೋ ರಾಹುಲ್ ಕ್ಯಾಪ್ಟನ್ ಆಗೋದು ಅರ್ಹತೆ ಜಾಸ್ತಿನೇ ಇದೆ. ಬಟ್ ಬಿಸಿಸಿಐ ಮನಸ್ಸು ಮಾಡ್ತಿಲ್ಲ ಅಥವಾ ಬೇರೆ ಯಾರದ್ದೋ ಲಾಬಿಗೆ ಮಣಿತಿದ್ದರೋ ಗೊತ್ತಿಲ್ಲ. ಇನ್ನು ಗಿಲ್ ಕ್ಯಾಪ್ಟನ್ ಆದ ಮೊದಲ ಸರಣಿಯಲ್ಲೇ ಅಂದ್ರೆ ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳಿಂದ 43 ರನ್ಸ್ ಕಲೆ ಹಾಕಿದ್ರು. ಈಗ ನ್ಯೂಜಿಲೆಂಡ್ ವಿರುದ್ಧ ಮೊದಲ ಎರಡು ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿದ್ರೂ 3ನೇ ಪಂದ್ಯದಲ್ಲಿ ಕ್ರೂಶಿಯಲ್ ಟೀಮಲ್ಲೇ ಕೈಕೊಟ್ರು. ಇನ್ನು ಕೆಎಲ್ ರಾಹುಲ್ ಕ್ಯಾಪ್ಟನ್ ಆಗಿ ಸೌತ್ ಆಫ್ರಿಕಾ ಸರಣಿಯನ್ನ ಗೆಲ್ಲಿಸಿಕೊಟ್ಟಿದ್ರು. 2 ಪಂದ್ಯಗಳಿಂದ 126 ರನ್ ಕಲೆ ಹಾಕಿದ್ರು. ಌಂಡ್ ನ್ಯೂಜಿಲೆಂಡ್ ವಿರುದ್ಧ ಮೊದಲ ಪಂದ್ಯವನ್ನ ಗೆಲ್ಲಿಸಿದ್ದೂ ರಾಹುಲ್. ಌಂಡ್ 2ನೇ ಪಂದ್ಯದಲ್ಲಿ ಟಾಪ್ ಆರ್ಡರ್ ಬ್ಯಾಟರ್ಸ್ ಕೈಕೊಟ್ರೂ ಕ್ರೀಸ್ ಕಟ್ಟಿ ನಿಂತು ಶತಕ ಬಾರಿಸಿದ್ರು. ಮೂರನೇ ಮ್ಯಾಚಲ್ಲಿ ಬಿಗ್ ಇನ್ನಿಂಗ್ಸ್ ಬಂದಿಲ್ಲ ಹೌದು ಬಟ್ ಅವ್ರ ಬ್ಯಾಟಿಂಗ್ನಲ್ಲಿ ವೇರಿಯೇಷನ್ಸ್ ಇದ್ದೇ ಇರುತ್ತೆ. ಗೇಮ್ ಚೇಂಜಿಂಗ್ ಪರ್ಫಾಮೆನ್ಸ್ ಬಂದೇ ಬರುತ್ತೆ. ಆದ್ರೆ ಗಿಲ್ ಮಾತ್ರ ಕಳೆದೊಂದು ವರ್ಷದಿಂದ ವೈಟ್ ಬಾಲ್ ಫಾರ್ಮೆಟ್ನಲ್ಲಿ ಅಷ್ಟೇನು ಸದ್ದು ಮಾಡ್ತಿಲ್ಲ.
ಟಿ-20 ಯಂತೆಯೇ ಏಕದಿನ ತಂಡದಿಂದಲೂ ಹೊರ ಬೀಳ್ತಾರಾ?
ಇನ್ನು ಶುಭ್ಮನ್ ಕಳೆದ ವರ್ಷ ಟಿ-20 ಫಾರ್ಮೆಟ್ನಲ್ಲಿ ಒಂದೇ ಒಂದು ಅರ್ಧಶತಕ ಬಾರಿಸಿರಲಿಲ್ಲ. ಹೀಗಾಗೇ ಟಿ-20 ಮಾದರಿಯಿಂದಲೇ ಗೇಟ್ ಪಾಸ್ ಕೊಟ್ಟಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಟಿ-20 ಸರಣಿ ಹಾಗೇ ಟಿ-20 ವಿಶ್ವಕಪ್ನಿಂದಲೂ ಹೊರಗಿಟ್ಟಿದ್ದಾರೆ. ಬಹುಶಃ ಏಕದಿನ ಮಾದರಿಯಲ್ಲೂ ಮುಂದಿನ ದಿನಗಳಲ್ಲಿ ನಾಯಕತ್ವ ಕಳ್ಕೊಳ್ತಾರಾ ಅನ್ನೋ ಚರ್ಚೆ ಶುರುವಾಗಿದೆ. ಹಾಗೇ ಭಾರತದ ಸೋಲಿಗೆ ಗಿಲ್ ಅಷ್ಟೇ ಅಲ್ಲ ಉಳಿದ ಆಟಗಾರರ ಕಳಪೆ ಪ್ರದರ್ಶನವೂ ಕಾರಣವೇ. ಆದ್ರೆ ಆನ್ಫೀಲ್ಡ್ನಲ್ಲಿ ಫಿಲ್ಡಿಂಗ್ ಸೆಟ್ಟಿಂಗ್ ಹಾಗೇ ಬೌಲಿಂಗ್ ಆಪ್ಶನ್ಸ್ ಬಗ್ಗೆಯೂ ಇನ್ಎಕ್ಸ್ಪೆರಿಯನ್ಸ್ ಕಾಣ್ತಿದೆ. ಹೀಗಾಗಿ 2027ರ ಏಕದಿನ ವಿಶ್ವಕಪ್ ಕಥೆ ಏನು ಅನ್ನೋ ಆತಂಕ ಶುರುವಾಗಿದೆ. ಸೋ ನೆಕ್ಸ್ಟ್ ಬಿಸಿಸಿಐ ಯಾವ ನಿರ್ಧಾರ ಕೈಗೊಳ್ಳುತ್ತೆ ಅನ್ನೋದೇ ಈಗಿರೋ ಪ್ರಶ್ನೆ.

ನೋಡಿರಿ

