5ನೇ ಸ್ಲಾಟ್ ನಲ್ಲಿ ಕೊಹಿನೂರ್ KL – Experiment ನಿಲ್ಲಿಸ್ತಾರಾ ಗಂಭೀರ್?
ಇದಕ್ಕಿಂತ ಬೆಸ್ಟ್ ನಂಬರ್ಸ್ ಬೇಕಾ?

5ನೇ ಸ್ಲಾಟ್ ನಲ್ಲಿ ಕೊಹಿನೂರ್ KL – Experiment ನಿಲ್ಲಿಸ್ತಾರಾ ಗಂಭೀರ್?ಇದಕ್ಕಿಂತ ಬೆಸ್ಟ್ ನಂಬರ್ಸ್ ಬೇಕಾ?

ಗೌತಮ್ ಗಂಭೀರ್ ಟೀಂ ಇಂಡಿಯಾ ಹೆಡ್​ಕೋಚ್ ಆದ್ಮೇಲೆ ಸಾಕಷ್ಟು ಏರಿಳಿತಗಳನ್ನ ಕಂಡಿದೆ. ವೈಟ್​ಬಾಲ್​ ಫಾರ್ಮೆಟ್​ನಲ್ಲಿ ಒಳ್ಳೆ ರಿಸಲ್ಟ್ ಇದ್ರೂ ರೆಡ್ ಬಾಲ್ ಕ್ರಿಕೆಟ್​​ನಲ್ಲಿ ಹೀನಾಯ ಸ್ಥಿತಿ ತಲುಪಿದೆ. ಬಟ್ ಮೂರೂ ಮಾದರಿಯಲ್ಲಿ ಇರುವಂಥ ಮೇನ್ ಕಂಪ್ಲೇಂಟ್ ಅಂದ್ರೆ ಪದೇಪದೆ ಬ್ಯಾಟಿಂಗ್ ಆರ್ಡರ್ ಬದಲಾವಣೆ ಮಾಡೋದು. ಅದ್ರಲ್ಲೂ ಕೆಎಲ್ ರಾಹುಲ್​ನಂತೂ ಎಕ್ಸ್​ಪೆರಿಮೆಂಟ್ ಥರ ಬಳಸ್ಕೊಂಡಿದ್ದಾರೆ. ನಿಜ ಹೇಳ್ಬೇಕಂದ್ರೆ ಏಕದಿನ ಮಾದರಿಯಲ್ಲಿ ನಂಬರ್ 5ನಲ್ಲಿ ರಾಹುಲ್ ಬೆಸ್ಟ್ ಪರ್ಫಾಮೆನ್ಸ್ ಕೊಟ್ಟಿದ್ದಾರೆ. ಕಳೆದ ಪಂದ್ಯದಲ್ಲೂ ಇದೇ ಕ್ರಮಾಂಕದಲ್ಲೇ ಶತಕ ಬಾರಿಸಿದ್ದಾರೆ. ಹೀಗಾಗಿ ಮಾಜಿ ಕ್ರಿಕೆಟರ್ಸ್, ಎಕ್ಸ್​ಪರ್ಟ್ಸ್, ಫ್ಯಾನ್ಸ್ ಕೂಡ ನಂಬರ್ 5 ಬೆಸ್ಟ್ ಅಂತಿದ್ದಾರೆ.

ಇದನ್ನೂ ಓದಿ : ಟಗರುಪುಟ್ಟಿ ಡಿಚ್ಚಿಗೆ ಗುಜರಾತ್ ಪಲ್ಟಿ – RCB ಸಿಂಹಿಣಿಯರ Hat-Trick ಗರ್ಜನೆ

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಡು ಆರ್ ಡೈ ಸ್ಟೇಜ್​ನಲ್ಲಿರೋ ಭಾರತ ಇವತ್ತಿನ ಪಂದ್ಯವನ್ನ ಶತಾಯ ಗತಾಯ ಗೆಲ್ಲಲೇಬೇಕು. ಌಂಡ್ ಒನ್ಸ್ ಅಗೇನ್ ಈ ಮ್ಯಾಚಲ್ಲಿ ಎಲ್ಲರ ಕಣ್ಣು ರೋಹಿತ್ ಮತ್ತು ಕೊಹ್ಲಿ ಮೇಲಿರುತ್ತೆ. ಅಟ್ ದಿ ಸೇಮ್ ಟೈಂ ಕೆಎಲ್ ರಾಹುಲ್ ಈಗ ಹೀರೋ ಆಗಿದ್ದಾರೆ. ಕಳೆದ ಎರಡು ಪಂದ್ಯಗಳಲ್ಲಿ ಭಾರತದ ಪರ ಗೇಮ್ ಚೇಂಜಿಂಗ್ ಪರ್ಫಾಮೆನ್ಸ್ ನೀಡಿರೋ ಕೆಎಲ್ ಈ ಮ್ಯಾಚಲ್ಲೂ ಅಂಥದ್ದೇ ಮ್ಯಾಜಿಕ್ ಮಾಡ್ತಾರಾ ಅಂತಾ ಎಲ್ರೂ ಕಾಯ್ತಿದ್ದಾರೆ. ಬಟ್ ಕೆಎಲ್​​ಗೆ ಯಾವ ಸ್ಲಾಟ್ ಕೊಡ್ತಾರೆ ಅನ್ನೋದೇ ಈಗಿರೋ ಪ್ರಶ್ನೆ.. ನಂಬರ್ 5ನಲ್ಲಿ ದಿ ಬೆಸ್ಟ್ ಪರ್ಫಾಮೆನ್ಸ್ ಕೊಡ್ತಿರೋ ರಾಹುಲ್​ಗೆ ಇವತ್ತಿನ ಮ್ಯಾಚಲ್ಲೂ ಅದೇ ಕ್ರಮಾಂಕದಲ್ಲಿ ಆಡ್ಸಿದ್ರೆ ಒಳ್ಳೆ ಪ್ರದರ್ಶನ ನಿರೀಕ್ಷೆ ಮಾಡ್ಬೋದು.

ನ್ಯೂಜಿಲೆಂಡ್ ವಿರುದ್ಧ ಶತಕ ಬಾರಿಸಿದ ಭಾರತದ ಮೊದಲ ವಿಕೆಟ್ ಕೀಪರ್!

ರಾಜ್​ಕೋಟ್​ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಕೆಎಲ್ ರಾಹುಲ್ ಭಾರತದ ಪರ ಶತಕ ಬಾರಿಸಿದ್ರು. ಈ ಮೂಲಕ ನ್ಯೂಜಿಲೆಂಡ್ ವಿರುದ್ಧ ಏಕದಿನ ಮಾದರಿಯಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. 112 ರನ್ ಗಳಿಸಿ ಅಜೇಯರಾಗಿ ಉಳಿದಿದ್ರು. ಌಕ್ಚುಲಿ ಈ ಪಂದ್ಯದಲ್ಲಿ ಶತಕ ಬಾರಿಸಿದ್ರು ಅನ್ನೋದಕ್ಕಿಂತ ನಂಬರ್ 5ನಲ್ಲೇ ರಾಹುಲ್​ರನ್ನ ಆಡಿಸಿ ಅಂತಾ ಒತ್ತಾಯ ಕೇಳಿ ಬರ್ತಿದೆ. ಅದಕ್ಕೆ ಕಾರಣವೂ ಇದೆ.

ರಾಹುಲ್ ದರ್ಬಾರ್!

ಐದನೇ ಸ್ಥಾನದಲ್ಲಿ 33 ಇನ್ನಿಂಗ್ಸ್‌, 64.21 ರ ಆವರೇಜ್, 1,477 ರನ್ಸ್

1,000 ರನ್‌, ಅತೀ ಹೆಚ್ಚು ಆವರೇಜ್ ​ನಲ್ಲಿ ರಾಹುಲ್ 2ನೇ ಸ್ಥಾನದಲ್ಲಿ

ದಕ್ಷಿಣ ಆಫ್ರಿಕಾದ ದಂತಕಥೆ ಎಬಿ ಡಿವಿಲಿಯರ್ಸ್ ಮಾತ್ರ ರಾಹುಲ್

ರಾಜ್‌ ಕೋಟ್‌ ನಲ್ಲಿ ರಾಹುಲ್ ಐದನೇ ಸ್ಥಾನದಲ್ಲಿ ಮೂರನೇ ಏಕದಿನ ಶತಕ

5ನೇ ಸ್ಲಾಟ್ ​ನಲ್ಲಿ ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್ 99.59 ರ ಸ್ಟ್ರೈಕ್ ರೇಟ್ ನಲ್ಲಿ ರನ್ಸ್

1,000 ಕ್ಕೂ ಹೆಚ್ಚು ರನ್ ಗಳಿಸಿದ ನಾಲ್ವರು ಬ್ಯಾಟರ್​ಗಳಲ್ಲಿ ರಾಹುಲ್ ಒಬ್ರು

ಏಕದಿನ ಪಂದ್ಯಗಳಲ್ಲಿ ಐದನೇ ಸ್ಥಾನದಲ್ಲಿ ,1350 ಕ್ಕೂ ಹೆಚ್ಚು ಸ್ಕೋರ್‌

ಏಕದಿನ ಮಾದರಿಯಲ್ಲಿ ರಾಹುಲ್ ಪ್ರಸ್ತುತ  ಅತ್ಯಂತ ವಿಶ್ವಾಸಾರ್ಹ ಬ್ಯಾಟ್ಸ್‌ ಮನ್‌

ಒಟ್ಟಾರೆ 93 ಏಕದಿನ ಪಂದ್ಯಗಳಲ್ಲಿ 51.67 ರ ಸರಾಸರಿಯಲ್ಲಿ 3,359 ರನ್

ನ್ಯೂಜಿಲೆಂಡ್ ವಿರುದ್ಧ 93.80 ರ ಸರಾಸರಿಯಲ್ಲಿ 10 ಇನ್ನಿಂಗ್ಸ್‌, 469 ರನ್ಸ್

ಈ ಅಂಕಿಅಂಶಗಳನ್ನ ನೋಡ್ದಾಗ ರಾಹುಲ್ ನಂಬರ್ 5ನಲ್ಲಿ ದಿ ಬೆಸ್ಟ್ ಅನ್ನೋದು ಗೊತ್ತಾಗ್ತಿದೆ. ಹೀಗಾಗಿ ಇವತ್ತಿನ ಪಂದ್ಯದಲ್ಲೂ ನಂಬರ್ 5ನಲ್ಲೇ ಆಡ್ಸಿದ್ರೆ ಅವ್ರಿಂದ ಮತ್ತೊಂದು ಬಿಗ್ ಸ್ಕೋರ್ ನೋಡ್ಬೋದು. ಬಟ್ ಗೌತಮ್ ಗಂಭೀರ್ ಯಾವಾಗ ಏನ್ ನಿರ್ಧಾರ ತಗೊಳ್ತಾರೋ ಅವ್ರಿಗೇ ಗೊತ್ತು. ಹೀಗಾಗೇ ರಾಹುಲ್ ಕೂಡ ನಾನು ಪ್ಲೇಯಿಂಗ್ 11ನಲ್ಲಿ ಇರೋದಷ್ಟೇ ಮುಖ್ಯ.. ಅದಕ್ಕಾಗಿ ನಾನು ಏನ್ ಬೇಕಾದ್ರೂ ಮಾಡ್ತೀನಿ ಅಂದಿದ್ರು. ಅಂದ್ರೆ ರಾಹುಲ್ ಸ್ಲಾಟ್ ಬಗ್ಗೆ ಕೇರ್ ಮಾಡ್ತಿಲ್ಲ. ಓಪನರ್ ಟು ಡೆತ್ ಓವರ್​ನಲ್ಲಿ ಎಲ್ಲಿ ಆಡ್ಸಿದ್ರೂ ಆಡ್ತೀನಿ ಅನ್ನೋ ಮೈಂಡ್​ಸೆಟ್​ನಲ್ಲಿದ್ದಾರೆ. ಬಟ್ 5ನೇ ಕ್ರಮಾಂಕದಲ್ಲಿ ಡಾಮಿನೇಟಿಂಗ್ ರೆಕಾರ್ಡ್ಸ್ ಹೊಂದಿದ್ದಾರೆ. ಭಾರತದ ಪಾಲಿಗೆ ಕೊಹಿನೂರು ವಜ್ರದಂತಿದ್ದಾರೆ. ಹೀಗಾಗಿ ಅದೇ ಸ್ಥಾನದಲ್ಲಿ ಆಡಿಸಿದ್ರೆ ಬೆಸ್ಟ್ ಅನ್ನೋದು ವಿಶ್ಲೇಷಕರ ವಾದ.

Shantha Kumari