ಕೆಎಲ್ ರಾಹುಲ್ ಮನೆಗೆ ಕಾಲಿಟ್ಟ ಮಹಾಲಕ್ಷ್ಮಿ – ಹೆಣ್ಣು ಮಗುವಿನ ತಂದೆಯಾದ ಕೆ.ಎಲ್. ರಾಹುಲ್, ಅತಿಯಾ

ಟೀಂ ಇಂಡಿಯಾ ಆಟಗಾರ ಕೆ ಕೆಎಲ್ ರಾಹುಲ್ ಮನೆಗೆ ಮಹಾಲಕ್ಷ್ಮೀಯ ಆಗಮನವಾಗಿದೆ. ರಾಹುಲ್ ಮತ್ತು ಬಾಲಿವುಡ್ ನಟಿ ಅಥಿಯಾ ಶೆಟ್ಟಿ ದಂಪತಿಗೆ ಹೆಣ್ಣು ಮಗು ಜನನವಾಗಿದೆ. ಈ ಶುಭಸುದ್ದಿಯನ್ನು ದಂಪತಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ದೆಹಲಿಯಿಂದ ಅಲಹಾಬಾದ್ ಹೈಕೋರ್ಟ್ಗೆ ನ್ಯಾ. ಯಶವಂತ್ ವರ್ಮಾ ವರ್ಗಾ
ನಮಗೆ ಹೆಣ್ಣು ಮಗುವಿನ ಜನನವಾಗಿದೆ ಎಂದು ಕೆ.ಎಲ್ ರಾಹುಲ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಜೋಡಿಗೆ ನಟಿ ಪೂಜಾ ಹೆಗ್ಡೆ, ಅಹಾನ್ ಶೆಟ್ಟಿ, ಸುನೀಲ್ ಶೆಟ್ಟಿ, ವಿಕ್ರಾಂತ್ ಮಾಸ್ಸಿ ಸೇರಿದಂತೆ ಅನೇಕರು ಶುಭ ಹಾರೈಸಿದ್ದಾರೆ.
2023 ಜ.23ರಂದು ಕೆ.ಎಲ್ ರಾಹುಲ್ ಜೊತೆ ಅಥಿಯಾ ಅದ್ಧೂರಿಯಾಗಿ ಮದುವೆಯಾಗಿದ್ದರು. ಇನ್ನೂ ಕಳೆದ ನವೆಂಬರ್‌ನಲ್ಲಿ, ಅಥಿಯಾ ಶೆಟ್ಟಿ ತಾಯಿಯಾಗುತ್ತಿರುವ ವಿಚಾರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು.
2024ರ ಐಪಿಎಲ್ ಸೀಸನ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಆಡಿದ್ದ ಕೆಎಲ್ ರಾಹುಲ್ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿದಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ತೊರೆದ ಕೆ.ಎಲ್ ರಾಹುಲ್ ಐಪಿಎಲ್ ಹರಾಜಿಗೆ ಬಂದಿದ್ದರು. 14 ಕೋಟಿ ರೂ.ಗೆ ಇವರನ್ನು ಡೆಲ್ಲಿ ಕ್ಯಾಪಿಟಲ್ಸ್ ಖರೀದಿ ಮಾಡಿದೆ. ತಂದೆಯಾದ ಸಂಭ್ರಮದಲ್ಲಿರೂ ಕೆ.ಎಲ್ ರಾಹುಲ್ ಇಂದು ಸೇರಿ ಮೂರು ಪಂದ್ಯಗಳಿಗೆ ಲಭ್ಯರಿಲ್ಲ ಎನ್ನಲಾಗಿದೆ.