ಕೆಎಲ್, ಕೃಷ್ಣ, ಕರುಣ್ ಬ್ರೋ ಮ್ಯಾನ್ಸ್ – ಕನ್ನಡ ಡಿಂಡಿಮ.. ಕೆಣಕಿದ್ರೆ ಖಲ್ಲಾಸ್
ಇಂಗ್ಲೆಂಡ್ ನಲ್ಲಿ ಕನ್ನಡಿಗರ ಬಾಂಡಿಂಗ್

ಕೆಎಲ್, ಕೃಷ್ಣ, ಕರುಣ್ ಬ್ರೋ ಮ್ಯಾನ್ಸ್ – ಕನ್ನಡ ಡಿಂಡಿಮ.. ಕೆಣಕಿದ್ರೆ ಖಲ್ಲಾಸ್ಇಂಗ್ಲೆಂಡ್ ನಲ್ಲಿ ಕನ್ನಡಿಗರ ಬಾಂಡಿಂಗ್

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಕನ್ನಡಿಗರ ಪಾಲಿಗೆ ಒಂಥರಾ ಸ್ಪೆಷಲ್ ಅಂದ್ರೂ ತಪ್ಪಾಗಲ್ಲ. ಯಾಕಂದ್ರೆ ಟೀಂ ಇಂಡಿಯಾ ಸ್ಕ್ವಾಡ್​ನಲ್ಲಿ ಮೂವರು ಕನ್ನಡಿಗರಿಗೆ ಚಾನ್ಸ್ ಸಿಕ್ಕಿದೆ. ಅದ್ರಲ್ಲೂ ಪ್ಲೇಯಿಂಗ್ 11ನಲ್ಲೂ ಕೂಡ ಒಟ್ಟೊಟ್ಟಿಗೆ ಆಡೋಕೆ ಅವಕಾಶ ಸಿಕ್ಕಿದೆ. ಸರಣಿಯುದ್ಧಕ್ಕೂ ಕೆಎಲ್ ರಾಹುಲ್ ಟೀಂ ಇಂಡಿಯಾದ ಆಧಾರ ಸ್ತಂಭವಾಗಿದ್ರೆ ಕರುಣ್ ನಾಯರ್ ಮತ್ತು ಪ್ರಸಿದ್ಧ್ ಕೃಷ್ಣ ಸಾಕಷ್ಟು ಏಳು ಬೀಳುಗಳನ್ನ ಕಂಡಿದ್ದಾರೆ. ಇಂಥಾ ಟೈಮಲ್ಲಿ ತಂಡದಲ್ಲಿ ಸಾಕಷ್ಟು ಎಕ್ಸ್​​ಪೀರಿಯನ್ಸ್ ಹೊಂದಿರೋ ರಾಹುಲ್ ಈ ಇಬ್ಬರ ಪಾಲಿಗೂ ಅಣ್ಣನಂತೆ ನಿಂತು ಬಲ ತುಂಬುತ್ತಿದ್ದಾರೆ. ಆನ್ ದಿ ಫೀಲ್ಡ್, ಆಫ್ ದಿ ಫೀಲ್ಡ್ ನಲ್ಲೂ ರಾಹುಲ್ ಬೆನ್ನೆಲುಬಾಗಿದ್ದಾರೆ. ಓವಲ್ ಮೈದಾನದಲ್ಲಿ ನಡೆಯುತ್ತಿರೋ ಐದನೇ ಪಂದ್ಯದಲ್ಲೂ ಇದು ರಿಪೀಟ್ ಆಗಿದೆ.

ಇದನ್ನೂ ಓದಿ : ENG ಚೆಂಡಾಡಿದ ಸಿರಾಜ್ & ಪ್ರಸಿದ್ಧ್ – T20I ಬ್ಯಾಟಿಂಗ್ ನಂಬಿ ಕೆಟ್ಟ ಆಂಗ್ಲರು!

ಭಾರತ ಮತ್ತು ಇಂಗ್ಲೆಂಡ್ ನಡುವಿನ ಸರಣಿಯುದ್ದಕ್ಕೂ ಆಟಗಾರರ ನಡುವೆ ಒಂದಿಲ್ಲೊಂದು ವಿಚಾರವಾಗಿ ಕಿರಿಕ್ ಗಳು ಆಗ್ತಾನೇ ಇದೆ. 5ನೇ ಟೆಸ್ಟ್ ಪಂದ್ಯದಲ್ಲೂ ಅದು ಕಂಟಿನ್ಯೂ ಆಯ್ತು. ಈ ಸಲ ಮಾತಿನ ಚಕಮಕಿ ನಡೆಸಿದ್ದು ಟೀಮ್ ಇಂಡಿಯಾ ವೇಗಿ ಪ್ರಸಿದ್ಧ್ ಕೃಷ್ಣ ಹಾಗೂ ಜೋ ರೂಟ್.

ಕೃಷ್ಣ ಬೆನ್ನಿಗೆ ನಿಂತ ರಾಹುಲ್!

22ನೇ ಓವರ್‌ ನಲ್ಲಿ ಜೋ ರೂಟ್ ಬ್ಯಾಕ್ ಟು ಬ್ಯಾಕ್ ಬೌಂಡರಿ

ಜೋ ರೂಟ್ ಬ್ಯಾಟಿಂಗ್​ನಿಂದ ಸ್ವಲ್ಪ ಡಿಸ್ಟರ್ಬ್ ಆದಂತಹ ಬೌಲರ್ ಪ್ರಸಿದ್ಧ್

ಪ್ರಸಿದ್ಧ್ ಕೃಷ್ಣ ವಿರುದ್ಧ ಸಿಟ್ಟು, ಕನ್ನಡಿಗನ ಮೇಲೆ ರೂಟ್ ವಾಗ್ವಾದ ನಡೆಸ್ತಾ ಇದ್ರು

ಕೆಎಲ್ ರಾಹುಲ್ ಜೊತೆ  ಜಗಳ ನಿಲ್ಲಿಸುವಂತೆ ಸೂಚಿಸಿದ ಅಂಪೈರ್ ಧರ್ಮಸೇನಾ

ನಾವು ಸುಮ್ಮನಿರಬೇಕು, ಬ್ಯಾಟ್, ಬೌಲ್ ಮಾಡಿ ಮನೆಗೆ ಹೋಗಬೇಕಾ?

ರಾಹುಲ್ ಹೀಗೆ ಕೋಪಗೊಳ್ಳಲು ಮುಖ್ಯ ಕಾರಣ ಅಂಪೈರ್ ವರ್ತನೆ

ಜೋ ರೂಟ್ ಜಗಳಕ್ಕಿಳಿದಿದ್ದರೂ, ಕುಮಾರ್ ಧರ್ಮಸೇನಾ ಸೈಲೆಂಟ್

ಪ್ರಸಿದ್ಧ್ ಕೃಷ್ಣ ವಿಷಯದಲ್ಲಿ ಮುನ್ನುಗ್ಗಿ ಬಂದ ಕನ್ನಡಿಗ ಕೆಎಲ್ ರಾಹುಲ್

ಅಷ್ಟೇ ಅಲ್ಲ ಪ್ರಸಿದ್ಧ್ ಕೃಷ್ಣಗೆ ಬೌಲಿಂಗ್ ವೇಳೆ ಕನ್ನಡದಲ್ಲೇ ಟಿಪ್ಸ್ ಕೂಡ ಕೊಟ್ರು. ಎಷ್ಟೇ ಹಾಕ್ತಿದ್ರೂ ತಲೆ ಮೇಲೆ ಹೋಗ್ತಿದೆ. ಮಗಾ.. ಬೀಳ್ತಾ ಇದ್ಯಾ ಅದು.. ಹಾಕಕ್ಕೋಗ್ತಿಲ್ಲ ನೀನು.. ಈ ಕಡೆಯಿಂದ ಹಾಕು ಸ್ವಲ್ಪ ಎಂದು ಕನ್ನಡದಲ್ಲೇ ಹೇಳಿದ್ದಾರೆ. ಇವರಿಬ್ಬರ ಈ ಸಂಭಾಷಣೆ ಸ್ಟಂಪ್ ಮೈಕ್ ನಲ್ಲಿ ಸೆರೆಯಾಗಿದೆ. ಮೈದಾನದಲ್ಲಿ ಕನ್ನಡಿಗ ಆಟಗಾರರು ಕನ್ನಡದಲ್ಲೇ ಮಾತನಾಡುವುದನ್ನು ಕೇಳುವುದೇ ಚಂದ ಎಂದೆಲ್ಲಾ ಕಮೆಂಟ್‌ಗಳ ಸುರಿಮಳೆ ಬರುತ್ತಿದೆ. ಇನ್ನು ಕರುಣ್ ನಾಯರ್ ವಿಚಾರದಲ್ಲೂ ರಾಹುಲ್ ಸಪೋರ್ಟ್ ಮೆಚ್ಚಲೇಬೇಕು.

8 ವರ್ಷಗಳ ಬಳಿಕ ಭಾರತ ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ದ ಕರುಣ್ ನಾಯರ್ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಬಂದಿಲ್ಲ. ನಾಲ್ಕನೇ ಪಂದ್ಯದಲ್ಲೂ ಡ್ರಾಪ್ ಮಾಡಲಾಗಿತ್ತು. ಇಂಗ್ಲೆಂಡ್ ವಿರುದ್ಧ ಆಡಿದ ಮೊದಲ ಮೂರು ಪಂದ್ಯಗಳ 6 ಇನಿಂಗ್ಸ್​ಗಳಲ್ಲಿ ಕರುಣ್ ಕಲೆಹಾಕಿದ ಒಟ್ಟು ಸ್ಕೋರ್ 131 ರನ್​ಗಳು ಮಾತ್ರ. ಬಿಗ್ ಇನ್ನಿಂಗ್ಸ್ ಬರದಿದ್ದಕ್ಕೆ ಕರುಣ್ ತೀವ್ರವಾಗಿ ನೊಂದಿದ್ರು. ಡಕೌಟ್ ನಲ್ಲಿ ಕುಳಿತು ಕಣ್ಣೀರು ಹಾಕಿದ್ರು. ಈ ವೇಳೆ ಪಕ್ಕದಲ್ಲೇ ಇದ್ದ ಕೆಎಲ್ ರಾಹುಲ್ ಧೈರ್ಯ ತುಂಬಿದ್ರು. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಅದೂ ಅಲ್ದೇ ರಾಹುಲ್ ಮತ್ತು ಕರುಣ್ ನಾಯರ್ ಇಬ್ಬರೂ ದೀರ್ಘಕಾಲದ ಸ್ನೇಹಿತರು. ಇಬ್ಬರೂ ಒಟ್ಟಿಗೆ ಕ್ರಿಕೆಟ್ ಆಡಿದ್ದಾರೆ. ಇತ್ತೀಚೆಗೆ 2025 ರ IPL ಸೀಸನ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಿದ್ದರು.

Shantha Kumari