VHTಯಲ್ಲಿ ಗಿಲ್ ಅದೃಷ್ಟ ಪರೀಕ್ಷೆ – ರಾಹುಲ್, ಜಡ್ಡು ಬೆನ್ನು ಬಿದ್ದ BCCI
ಡೊಮೆಸ್ಟಿಕ್ ಟೆಸ್ಟ್ ನಲ್ಲಿ ಯಾರೆಲ್ಲಾ ಪಾಸ್?

VHTಯಲ್ಲಿ ಗಿಲ್ ಅದೃಷ್ಟ ಪರೀಕ್ಷೆ – ರಾಹುಲ್, ಜಡ್ಡು ಬೆನ್ನು ಬಿದ್ದ BCCIಡೊಮೆಸ್ಟಿಕ್ ಟೆಸ್ಟ್ ನಲ್ಲಿ ಯಾರೆಲ್ಲಾ ಪಾಸ್?

ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಶತಕಗಳ ಸುರಿಮಳೆಯಾಗ್ತಿದೆ. ಬಿಸಿಸಿಐನಿಂದ ನೆಗ್ಲೆಕ್ಟ್ ಆದವ್ರೆಲ್ಲಾ ಡೊಮೆಸ್ಟಿಕ್​ನಲ್ಲಿ ಅಬ್ಬರಿಸ್ತಿದ್ದಾರೆ. ಬುಧವಾರದ ಮ್ಯಾಚಲ್ಲಿ ಸರ್ಫರಾಜ್ ಖಾನ್ ಅಂತೂ ಬ್ಯಾಟಿಂಗ್​ನಲ್ಲೇ ಬಿಗ್ ಮೆಸೇಜ್ ಪಾಸ್ ಮಾಡಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ದಿಗ್ಗಜ ಕ್ರಿಕೆಟಿಗರೂ ವಿಹೆಟ್​ಟಿ ಅಖಾಡಕ್ಕೆ ಇಳ್ದಿದ್ದು, ಈಗ ಹೊಸ ವರ್ಷದ ಆರಂಭದಲ್ಲೇ ಮತ್ತಷ್ಟು ಸ್ಟಾರ್ ಕಳೆ ಬರಲಿದೆ. ಕೆಎಲ್ ರಾಹುಲ್, ಶುಭ್​ಮನ್ ಗಿಲ್, ರವೀಂದ್ರ ಜಡೇಜಾ ಸೇರಿದಂತೆ ಭಾರತದ ಸ್ಟಾರ್ ಆಟಗಾರರೆಲ್ಲಾ ಮೈದಾನಕ್ಕಿಳಿಯಲಿದ್ದಾರೆ.

ಇದನ್ನೂ ಓದಿ : RCBಯಲ್ಲಿ ವೆಂಕಿಗೆ ₹7 ಕೋಟಿ ವೇಸ್ಟ್ – ನಂ.3ನಲ್ಲಿ ಪಡಿಕ್ಕಲ್ ಆಡೋದೇ ಬೆಸ್ಟ್

ಟೀಂ ಇಂಡಿಯಾದ ಕೇಂದ್ರೀಯ ಒಪ್ಪಂದದ ಆಟಗಾರರು ದೇಶೀಯ ಕ್ರಿಕೆಟ್‌ನಲ್ಲೂ ಆಡ್ಬೇಕು ಅಂತಾ ಬಿಸಿಸಿಐನ ಬಾಸ್​ಗಳು ಕಟ್ಟಾಜ್ಞೆ ಹೊರಡಿಸಿದ್ರು. ಅಲ್ದೇ ಈಗ ವಿಜಯ್ ಹಜಾರೆ ಟ್ರೋಫಿಯಲ್ಲೂ ಆಡುವಂತೆ ಆದೇಶ ಹೊರಡಿಸಿದ್ದಾರೆ. 50 ಓವರ್​ಗಳ ಪಂದ್ಯಗಳಲ್ಲಿ ಆಡೋದ್ರಿಂದ ಫಿಟ್​ನೆಸ್, ಫಾರ್ಮ್ ಜೊತೆ ಭಾರತದ ಪರ ಪಂದ್ಯಗಳ ಪ್ರದರ್ಶನಕ್ಕೂ ಸಹಾಯಕವಾಗುತ್ತೆ ಅನ್ನೋದು ಮ್ಯಾನೇಜ್​ಮೆಂಟ್ ಪ್ಲ್ಯಾನ್. ಅದ್ರಂತೆ ಈಗ ನ್ಯೂಇಯರ್ ಆರಂಭದಲ್ಲೇ ಮತ್ತಷ್ಟು ಸ್ಟಾರ್ ಕ್ರಿಕೆಟರ್ಸ್ ದೇಶೀಯ ಟೂರ್ನಿಯಲ್ಲಿ ಮೈದಾನದಕ್ಕಿಯಲಿದ್ದಾರೆ.

ವಿಜಯ್ ಹಜಾರೆಗೆ ಸೂಪರ್ ಸ್ಟಾರ್ಸ್!

ಆಟಗಾರ                    ರಾಜ್ಯ ತಂಡ           ನಿರೀಕ್ಷಿತ ಪಂದ್ಯಗಳು              ಎದುರಾಳಿಗಳು

ಶುಭಮನ್ ಗಿಲ್             ಪಂಜಾಬ್              ಜ.3 ಮತ್ತು 6                            ಸಿಕ್ಕಿಂ, ಗೋವಾ

ರವೀಂದ್ರ ಜಡೇಜಾ            ಸೌರಾಷ್ಟ್ರ              ಜ.6 ಮತ್ತು 8                        ಸರ್ವಿಸೆಸ್, ಗುಜರಾತ್

ಕೆಎಲ್ ರಾಹುಲ್           ಕರ್ನಾಟಕ                ಜ.3 ಮತ್ತು 6                          ತ್ರಿಪುರಾ, ರಾಜಸ್ಥಾನ

ಸದ್ಯ ಈ ಮೂವರು ಆಟಗಾರರು 2025-26ಇದುವರೆಗೆ ನಡೆದರೋ ವಿಜಯ್ ಹಜಾರೆ ಟೂರ್ನಿಯ ಯಾವುದೇ ಪಂದ್ಯಗಳಲ್ಲೂ ಕಣಕ್ಕಿಳಿದಿಲ್ಲ. ಸೋ ಮುಂದಿನ ಪಂದ್ಯಗಳಲ್ಲಿ ಕಾಣಿಸಿಕೊಳ್ತಾರೆ. ಅದ್ರಲ್ಲೂ ಭಾರತ ತಂಡದ ನಾಯಕ ಶುಭಮನ್ ಗಿಲ್ ಇತ್ತೀಚೆಗೆ ಭಾರತದ ಟಿ20 ವಿಶ್ವಕಪ್ ತಂಡದಿಂದ ಹೊರಗುಳಿದಿದ್ರು. ಈಗ ದೇಶೀಯ ಪಂದ್ಯದಲ್ಲಿ ಕಾಣಿಸಿಕೊಳ್ತಾರೆ. ಯಾಕಂದ್ರೆ ಪಂಜಾಬ್ ವಿಹೆಚ್​ಟಿಯಲ್ಲಿ ಆಡಿದ ಬಳಿಕ  ಜನವರಿ 11 ರಂದು ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ತಂಡವನ್ನ ಕೂಡಿಕೊಳ್ತಾರೆ. ಇನ್ನು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕೂಡ ತಮ್ಮ ತಮ್ಮ ತವರು ತಂಡಗಳ ಪರ ಎರಡೆರಡು ಪಂದ್ಯಗಳನ್ನ ಆಡಿದ್ದಾರೆ. ಮೊದಲ ಮ್ಯಾಚಲ್ಲಿ ಇಬ್ಬರೂ ಸೆಂಚುರಿ ಸಿಡಿಸಿದ್ರು. ಬಟ್ ಎರಡನೇ ಮ್ಯಾಚಲ್ಲಿ ರೋಹಿತ್ ಡಕ್​ಔಟ್ ಆದ್ರೆ ವಿರಾಟ್ 77 ರನ್ ಗಳಿಸಿ ಹೈಯೆಸ್ಟ್ ರನ್ ಸ್ಕೋರರ್ ಆಗಿದ್ರು. ಸದ್ಯ ರೋಹಿತ್ ಮುಂಬೈ ಪರ 2 ಪಂದ್ಯಗಳನ್ನಷ್ಟೇ ಆಡೋದು ಎನ್ನಲಾಗಿದೆ. ಬಟ್ ವಿರಾಟ್ ಕೊಹ್ಲಿ ಜನವರಿ 6 ರಂದು ರೈಲ್ವೇಸ್ ವಿರುದ್ಧ ದೆಹಲಿ ಪರ ಮೂರನೇ ಪಂದ್ಯ ಆಡಲಿದ್ದಾರೆ.

ಮುಂಬೈ ಪರ ರೋಹಿತ್ ಸ್ಥಾನದಲ್ಲಿ ಜೈಸ್ವಾಲ್ ಪ್ರದರ್ಶನ!

ಇನ್ನು ಅನಾರೋಗ್ಯದ ಕಾರಣ ಆಸ್ಪತ್ರೆ ಸೇರಿದ್ದ ಯಶಸ್ವಿ ಜೈಸ್ವಾಲ್ ಈಗ ಕಂಪ್ಲೀಟ್ ಆಗಿ ರಿಕವರ್ ಆಗಿದ್ದು ಮುಂಬೈ ತಂಡವನ್ನ ಸೇರಿಕೊಂಡಿದ್ದಾರೆ. ಗ್ರೂಪ್ ಸಿನಲ್ಲಿ ಮುಂಬೈ ಪ್ರಾಬಲ್ಯ ಹೊಂದಿದೆ ಮತ್ತು ಸತತ 4 ಗೆಲುವುಗಳೊಂದಿಗೆ ಗ್ರೂಪ್ ಸಿ ನಲ್ಲಿ ಅಗ್ರಸ್ಥಾನದಲ್ಲಿದೆ. ಅದ್ರಲ್ಲೂ ನಾಲ್ಕನೇ ಪಂದ್ಯದಲ್ಲಿ ಮುಂಬೈ ಪರ ಸರ್ಫರಾಜ್ ಖಾನ್ ಅದ್ಬುತ ಪ್ರದರ್ಶನ ನೀಡಿದ್ರು. ಗೋವಾ ವಿರುದ್ಧ 56 ಎಸೆತಗಳಲ್ಲೇ ಸೆಂಚುರಿ ಬಾರಿಸಿದ ಸರ್ಫರಾಜ್ 75 ಎಸೆತಗಳಲ್ಲಿ 157 ರನ್ ಗಳಿಸಿ ಔಟಾದ್ರು. ಇನ್ನು ಭಾರತದ ಪರ ಟೀಂ ಇಂಡಿಯಾದ ಆಟಗಾರರಾದ ಅಭಿಷೇಕ್ ಶರ್ಮಾ, ಹಾರ್ದಿಕ್ ಪಾಂಡ್ಯ, ಜಿತೇಶ್ ಶರ್ಮಾ, ಮೊಹಮ್ಮದ್ ಶಮಿ, ನಿತೀಶ್ ರೆಡ್ಡಿ, ಆಕಾಶ್ ದೀಪ್, ಶಹ್ಬಾಜ್ ಅಹ್ಮದ್, ರಿಷಭ್ ಪಂತ್, ಹರ್ಷಿತ್ ರಾಣಾ, ಇಶಾನ್ ಕಿಶನ್,  ರುತುರಾಜ್ ಗಾಯಕ್ವಾಡ್, ಅರ್ಶದೀಪ್ ಸಿಂಗ್, ರಿಂಕು ಸಿಂಗ್, ಧ್ರುವ್ ಜುರೇಲ್ ಸೇರಿದಂತೆ ಸಾಕಷ್ಟು ಆಟಗಾರರು ವಿಜಯ್ ಹಜಾರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವರು ಮುಂದಿನ ಪಂದ್ಯಗಳಲ್ಲಿ ಕಣಕ್ಕಿಳೀತಾರೆ. ಸೋ ಸದ್ಯಕ್ಕೆ ಟೀಂ ಇಂಡಿಯಾ ಆಟಗಾರರಿಗೆ ಡೊಮೆಸ್ಟಿಕ್ ಟೆಸ್ಟ್ ನಡೀತಿದ್ದು ಕೆಲವ್ರು ಪಾಸ್ ಆದ್ರೆ ಇನ್ನೂ ಕೆಲವ್ರೂ ಇಲ್ಲೂ ಸ್ಟ್ರಗಲ್ ಪಡ್ತಿದ್ದಾರೆ.

Shantha Kumari