KL ಮೇಲೆ ಬಿತ್ತು CSK ಕಣ್ಣು? – ಕ್ಯಾಪ್ಟನ್, ಬ್ಯಾಟರ್, ಕೀಪರ್ ಟಾಸ್ಕ್!
KKR ಆಫರ್ ತಿರಸ್ಕರಿಸಿದ್ರಾ ರಾಹುಲ್?

KL ಮೇಲೆ ಬಿತ್ತು CSK ಕಣ್ಣು? – ಕ್ಯಾಪ್ಟನ್, ಬ್ಯಾಟರ್, ಕೀಪರ್ ಟಾಸ್ಕ್!KKR ಆಫರ್ ತಿರಸ್ಕರಿಸಿದ್ರಾ ರಾಹುಲ್?

18ನೇ ಸೀಸನ್ ಇಂಡಿಯನ್ ಪ್ರೀಮಿಯರ್ ಲೀಗ್ ಮುಗ್ದು ಜಸ್ಟ್ 2 ತಿಂಗಳಷ್ಟೇ ಆಗಿದೆ. 2026ರ ಸೀಸನ್ ಸ್ಟಾರ್ಟ್ ಆಗ್ಬೇಕು ಅಂದ್ರೆ ಇನ್ನೂ 8 ತಿಂಗಳು ಕಾಯ್ಬೇಕು. ಹೀಗಿದ್ರೂ ಐಪಿಎಲ್ ಫ್ರಾಂಚೈಸಿಗಳಲ್ಲಿ ಮಾತ್ರ ಮುಂದಿನ ಆವೃತ್ತಿಗೆ ಈಗಿನಿಂದಲೇ ಮಾಸ್ಟರ್ ಪ್ಲ್ಯಾನ್ಸ್ ರೆಡಿ ಆಗ್ತಿವೆ. ಟ್ರೇಡ್ ವಿಂಡೋ ಮೂಲಕ ಪ್ಲೇಯರ್ಸ್ ಎಕ್ಸ್ ಚೇಂಜ್, ಖರೀದಿಗಾಗಿ ಲೆಕ್ಕಾಚಾರಗಳು ನಡೀತಿವೆ. ಆಲ್ರೆಡಿ ರೇಸ್​ನಲ್ಲಿ ಒಂದಷ್ಟು ಹೆಸ್ರುಗಳು ಓಡಾಡ್ತಿದ್ದು ಇದ್ರಲ್ಲಿ ಕನ್ನಡಿಗ ಕೆಎಲ್ ರಾಹುಲ್ ಕೂಡ ಬಂದಿದ್ದಾರೆ.

ಇದನ್ನೂ ಓದಿ : INDಗೆ ಬ್ಯಾಕ್ ಟು ಬ್ಯಾಕ್ ಫೈಟ್ – WI, AUS, SA ಸರಣಿ ಫಿಕ್ಸ್

ಇಂಗ್ಲೆಂಡ್ ಟೂರ್ ನಲ್ಲಿ ಸ್ಥಿರ ಪ್ರದರ್ಶನ ನೀಡಿರೋ ಕೆಎಲ್ ರಾಹುಲ್ ಫುಲ್ ಶೈನ್ ಆಗ್ತಿದ್ದಾರೆ. ಅವ್ರೆಂಥಾ ಸ್ಟಾರ್ ಆಟಗಾರ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರನೇ. ಐಪಿಎಲ್ ನಲ್ಲೂ ರಾಹುಲ್ ಬಿಗ್ ಪ್ಲೇಯರ್. ಲಕ್ನೋ ತಂಡದಲ್ಲಿದ್ದ ರಾಹುಲ್ ಅವ್ರನ್ನ 2025ರ ಐಪಿಎಲ್ ಗೆ ಡೆಲ್ಲಿ ಕ್ಯಾಪಿಟಲ್ಸ್ ಖರೀದಿ ಮಾಡಿತ್ತು. 18ನೇ ಸೀಸನ್ ನಲ್ಲಿ ಡಿಸಿ ಪರ ರಾಹುಲ್ ಒಳ್ಳೆ ಪ್ರದರ್ಶನ ನೀಡಿದ್ರು. ಬಟ್ ಅದ್ಯಾಕೋ ನೆಕ್ಸ್ಟ್ ಸೀಸನ್​ಗೆ ರಾಹುಲ್ ಬೇರೆ ಟೀಂ ಪಾಲಾಗ್ತಾರೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ಅದ್ರಲ್ಲೂ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕಣ್ಣಿಟ್ಟಿವೆ ಅನ್ನೋ ಬ್ರೇಕಿಂಗ್ ನ್ಯೂಸ್ ಇದೆ. ಯಾಕಂದ್ರೆ ಕಳೆದ ಬಾರಿ ಈ ಎರಡೂ ತಂಡಗಳಿಂದಲೂ ನಿರೀಕ್ಷಿತ ಪ್ರದರ್ಶನ ಬಂದಿರಲಿಲ್ಲ. ಹೀಗಾಗಿ ನೆಕ್ಸ್ ಟ್ ಸೀಸನ್ ಗೆ ಮತ್ತಷ್ಟು ಸ್ಟ್ರಾಂಗ್ ಆಗಲು ಕೆಎಲ್ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. ವರದಿಗಳ ಪ್ರಕಾರ ಈ ಎರಡೂ ಟೀಮ್ ಗಳು ತಮ್ಮ ತಂಡಕ್ಕೆ ರಾಹುಲ್ ರನ್ನ ಕರೆ ತಂದು ಕ್ಯಾಪ್ಟನ್ಸಿ ನೀಡೋ ಪ್ಲ್ಯಾನ್ ನಲ್ಲಿವೆ ಅನ್ನೋ ಸುದ್ದಿ ಹರಿದಾಡ್ತಿದೆ. ಅಷ್ಟಕ್ಕೂ ಕೆಎಲ್ ಟಾರ್ಗೆಟ್ ಮಾಡೋಕೆ ಕಾರಣನೂ ಇದೆ.

ರಾಹುಲ್ ಮೇಲೆ ಕಣ್ಣು!

ಕೊಲ್ಕತ್ತಾ ಕ್ಯಾಪ್ಟನ್ ಅಜಿಂಕ್ಯ ರಹಾನೆಗೆ 37 ವರ್ಷ ವಯಸ್ಸು
ನಿವೃತ್ತಿ ಸಾಧ್ಯತೆ, ಕೆಕೆಆರ್ ನಲ್ಲಿ ಯಾರೊಬ್ರೂ ಸ್ಟಾರ್ ಪ್ಲೇಯರ್ ಇಲ್ಲ

ಸಿಎಸ್ ಕೆ ರುತುರಾಜ್ ಗಾಯಕ್ವಾಡ್ ಗೆ ಕ್ಯಾಪ್ಟನ್ಸಿ ನೀಡಿದ್ರೂ ಕ್ಲಿಕ್ ಆಗ್ತಿಲ್ಲ

2025ರಲ್ಲಿ ಧೋನಿ ಮತ್ತೆ ಸಿಎಸ್ ಕೆ ಕ್ಯಾಪ್ಟನ್ ಆದ್ರೂ ನಿರೀಕ್ಷಿತ ಯಶಸ್ಸು ಸಿಗ್ಲಿಲ್ಲ

ಎರಡೂ ತಂಡಗಳ ಕ್ಯಾಪ್ಟನ್ ಹುಡುಕಾಟಕ್ಕೆ ಪರ್ಫೆಕ್ಟ್ ಆಗಿ ಕಾಣ್ತಿರೋದು ಕೆಎಲ್

ಕ್ಯಾಪ್ಟನ್ ಆಗಿ ಮುನ್ನಡೆಸ್ತಾರೆ, ಸ್ಟಂಪ್ಸ್ ಹಿಂದೆ ನಿಂತು ವಿಕೆಟ್ ಕೀಪಿಂಗ್

ಓಪನರ್ ಟು ಮಿಡಲ್ ಆರ್ಡರ್ ಯಾವ ಸ್ಲಾಟ್ ನಲ್ಲಿ ಕಣಕ್ಕಿಳಿಸಿದ್ರೂ ರನ್ಸ್

145 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು 46ರ ಸರಾಸರಿಯಲ್ಲಿ 5,222 ರನ್‌ ಕಲೆ

5 ಶತಕ, 40 ಅರ್ಧಶತಕ, 452 ಬೌಂಡರಿ, 208 ಸಿಕ್ಸರ್‌ ಬಾರಿಸಿದ್ದಾರೆ

2025 ಸೀಸನ್ ನಲ್ಲೂ ಡೆಲ್ಲಿ ಪರ 150 ರ ಸ್ಟ್ರೈಕ್ ರೇಟ್ ನಲ್ಲಿ 539 ರನ್

ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ಬಿಡ್ತಾರೆ ಅನ್ನೋದು ಎಷ್ಟು ನಿಜನೋ ಸುಳ್ಳೋ ಗೊತ್ತಿಲ್ಲ. ಡೆಲ್ಲಿಗಂತೂ ರಾಹುಲ್ ಅನಿವಾರ್ಯತೆ ಇದ್ದೇ ಇದೆ. ಸೋ ತಂಡದಿಂದ ಬಿಟ್ಟುಕೊಡೋದು ಡೌಟ್ ಇದೆ. ಆದ್ರೆ ಕೆಕೆಆರ್ ಮತ್ತು ಸಿಎಸ್ ಕೆ ಮಾತ್ರ ಹೊಸ ಕ್ಯಾಪ್ಟನ್ ಗಳ ಹುಡುಕಾಟದಲ್ಲಿ ಇರೋದಂತೂ ಪಕ್ಕಾ.

Shantha Kumari