KKR ಕಪ್ ಗೆಲ್ಲುತ್ತಾ? – ಮಾಜಿ ಕ್ರಿಕೆಟಿಗರ ಲೆಕ್ಕ ಉಲ್ಟಾ! – 2 ಬಾರಿ ಚಾಂಪಿಯನ್.. KKRಗೆ ಕಪ್?

ಭಾರತದ ಕ್ರಿಕೆಟ್ ಜಗತ್ತು ಈಗ ಐಪಿಎಲ್ ಗುಂಗಲ್ಲಿ ಮುಳುಗೇಳುತ್ತಿದೆ. ಇನ್ನೇನು ಐಪಿಎಲ್ ನಲ್ಲಿ ಪ್ಲೇ ಆಫ್ ಬಂದೇ ಬಿಟ್ಟಿದೆ. ಯಾವ ಟೀಂಗಳು ಪ್ಲೇಆಪ್ ಗೆ ಬರುತ್ತವೆ ಅಂತ ಕ್ರಿಕೆಟ್ ಪ್ರೇಮಿಗಳು ಲೆಕ್ಕ ಹಾಕ್ತಿದ್ದಾರೆ..ಆದ್ರೆ ಕೊನೆ ಹಂತದಲ್ಲೂ ಪ್ಲೇಆಪ್ ಸಸ್ಪೆನ್ಸ್ ಹಾಗೆಯೇ ಉಳಿದಿದೆ.. ಪ್ಲೇಆಫ್ ರೇಸ್ ಕೂಡ ರನ್‌ರೇಟ್, ಇವರಸೋಲು.. ಅವರ ಗೆಲುವು ಎಂಬ ಲೆಕ್ಕಾಚಾರಗಳಲ್ಲೇ ಸಾಗ್ತಿದೆ.. ಈ ಸೀಸನ್‌ನಲ್ಲಿ ಟೇಬಲ್ ಟಾಪರ್ ಆಗಿ ಕೆಕೆಆರ್ ಮಾತ್ರ ನಂ.1 ಸ್ಥಾನ ಖಚಿತಪಡಿಸಿಕೊಂಡಿದೆ.. ಇದೇ ಕಾರಣಕ್ಕೆ ಐಪಿಎಲ್ ನಲ್ಲಿ ಈ ಬಾರಿ ಕೆಕೆಆರ್ ಕಪ್ ಗೆದ್ರೂ ಆಶ್ಚರ್ಯವಿಲ್ಲ.
ಇದನ್ನೂ ಓದಿ: ಅವಕಾಶಕ್ಕಾಗಿ ದ್ರಾವಿಡ್‌ಗೆ ಸುಳ್ಳು! – ಸಂಜು ಸ್ಯಾಮ್ಸನ್ ಮಾಡಿದ್ದೇನು? – 6 ಸಿಕ್ಸ್ ಹೊಡೆದಿದ್ರಾ?
ಈ ಬಾರಿ ಐಪಿಎಲ್ ಪಂದ್ಯ ಭಾರಿ ಕುತೂಹಲ ಕೆರಳಿಸಿದೆ.. ಐಪಿಎಲ್ 2024 ಕೊನೆ ಹಂತಕ್ಕೆ ಬಂದರೂ ಪ್ಲೇಆಪ್ ಗೆ ತಲುಪುವ ತಂಡಗಳ ಬಗ್ಗೆ ಸ್ಪಷ್ಟವಾಗಿಲ್ಲ. ಪ್ಲೇಆಫ್ ರೇಸ್ ಮತ್ತಷ್ಟು ಕಠಿಣವಾಗುತ್ತಿದೆ. ಐಪಿಎಲ್ ಸೀಸನ್‌ಗೂ ಮುನ್ನ ನಿರ್ದಿಷ್ಟ ತಂಡ ಗೆಲ್ಲುತ್ತದೆ ಎಂಬುದು ಮಾಜಿ ಕ್ರಿಕೆಟಿಗರ ಲೆಕ್ಕಾಚಾರ ಆಗಿತ್ತು. ಐದು ಬಾರಿ ಪ್ರಶಸ್ತಿ ಗೆದ್ದಿರುವ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಈ ರೇಸ್ ನಲ್ಲಿ ಮುಂದಿವೆ ಎಂದು ವಿಶ್ಲೇಷಿಸಿದ್ದರು. ಆದರೆ ಈಗ ಎಲ್ಲ ಲೆಕ್ಕಾಚಾರ ಉಲ್ಟಾ ಆಗಿದೆ. ಕೆಕೆಆರ್ ತಂಡ ಉಳಿದ ತಂಡಗಳನ್ನು ಹೆದರಿಸುತ್ತದೆ.
ಕೆಕೆಆರ್ ಮುಂದೆ ಎದುರಾಳಿಗಳಿಗೆ ನಿಲ್ಲಲು ಸಾಧ್ಯವಾಗುತ್ತಿಲ್ಲ. ಬ್ಯಾಟಿಂಗ್ ಮತ್ತು ಬೌಲಿಂಗ್, ಫೀಲ್ಡಿಂಗ್ ಹೀಗೆ ಎಲ್ಲಾ ವಿಭಾಗಗಳಲ್ಲೂ ಕೆಕೆಆರ್ ಮೇಲುಗೈ ಸಾಧಿಸಿದೆ. ಹೀಗೆ ಐಪಿಎಲ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಅಬ್ಬರಿಸುತ್ತಿದೆ. ಈಗ ಅಗ್ರಸ್ಥಾನದಲ್ಲಿರುವ ಕೆಕೆಆರ್ ಪ್ಲೇಆಫ್ ನಲ್ಲಿ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕಣಕ್ಕಿಳಿಯಲಿದೆ.. ಅದಕ್ಕೆ ಮುಖಾಮುಖಿಯಾಗುವ ತಂಡ ಯಾವುದು ಎಂಬುದು ಖಾತ್ರಿಯಿಲ್ಲ.. ಆರ್ ಆರ್ ಈಗ ನಂ2ನಲ್ಲಿದ್ದರೂ ಕೆಕೆಆರ್ ವಿರುದ್ಧದ ಕಡೆಯ ಲೀಗ್ ಪಂದ್ಯದಲ್ಲಿ ಗೆದ್ದರೆ ಮಾತ್ರ ತನ್ನ ಸ್ಥಾನ ಉಳಿಸಿಕೊಳ್ಳಲಿದೆ. ಪಂಜಾಬ್ ವಿರುದ್ಧ ಆರ್ ಆರ್ ಬುಧವಾರ ಸೋತಿದ್ದರಿಂದ ರಾಜಸ್ಥಾನದ ಸ್ಥಾನವೇ ಅಲುಗಾಡಲು ಶುರುವಾಗಿದೆ.. ಕೆಕೆಆರ್ ಇನ್ನೊಂದು ಪಂದ್ಯದಲ್ಲಿ ಸೋತರೂ ಟಾಪ್-1 ನಲ್ಲೇ ನಿಲ್ಲಲಿದೆ. ಹೀಗಾಗಿ ಮೇ 21 ರಂದು ನಡೆಯಲಿರುವ ಕ್ವಾಲಿಫೈಯರ್ ಪಂದ್ಯವನ್ನು ಕೆಕೆಆರ್ ಆಡುವುದು ಖಚಿತವಾಗಿದೆ.
ಇನ್ನು ಕೆಕೆಆರ್ ಇಷ್ಟೊಂದು ಸಲೀಸಾಗಿ ಪ್ಲೇಆಫ್ ರೇಸ್ ಗೆ ಬರಲು ಕೂಡ ಕಾರಣ ಇದೆ.. ಈ ಬಾರಿ ತಂಡದಲ್ಲಿ ಟಾಪ್ ಟು ಬಾಟಮ್ ಮ್ಯಾಚ್ ವಿನ್ನರ್ ಗಳಿದ್ದಾರೆ. ಬಹುತೇಕ ಎಲ್ಲಾ ಆಟಗಾರರು ಭರ್ಜರಿ ಪ್ರದರ್ಶನ ನೀಡ್ತಿದ್ದಾರೆ. ಸುನಿಲ್ ನರೈನ್, ಫಿಲ್ ಸಾಲ್ಟ್, ಶ್ರೇಯಸ್ ಅಯ್ಯರ್, ರಿಂಕು ಸಿಂಗ್, ಆಂಡ್ರೆ ರಸೆಲ್ ಮತ್ತು ವೆಂಕಟೇಶ್ ಅಯ್ಯರ್ ಬ್ಯಾಟಿಂಗ್ ನಲ್ಲಿ ತಂಡವನ್ನು ಗೆಲ್ಲಿಸುತ್ತಿದ್ದಾರೆ. ಇವರಲ್ಲಿ ಯಾರೇ ಕ್ರೀಸ್‌ನಲ್ಲಿದ್ದರೂ ಯಾವ ಕ್ಷಣದಲ್ಲಿ ಬೇಕಾದ್ರೂ ಆಟವನ್ನು ಬದಲಾಯಿಸುವ ಸಾಮಥ್ಯ ಹೊಂದಿದ್ದಾರೆ… ಅದರಲ್ಲೂ ರಸೆಲ್, ಸುನಿಲ್ ನರೈನ್ ಮತ್ತು ರಿಂಕು ಸಿಂಗ್ ಬ್ಯಾಟಿಂಗ್ ಅಬ್ಬರ ಎದುರಾಳಿಗಳನ್ನು ಕಂಗೆಡಿಸುತ್ತಿದೆ. ಜೊತೆಗೆ ವಿಶ್ವ ದರ್ಜೆಯ ಬೌಲರ್ ಮಿಚೆಲ್ ಸ್ಟಾರ್ಕ್ ತಂಡದ ಬೌಲಿಂಗ್ ಅನ್ನು ಮುನ್ನಡೆಸುತ್ತಿದ್ದಾರೆ. ಫಸ್ಟ್ ಹಾಫ್ ನಲ್ಲಿ ಸಿಕ್ಕಾಪಟ್ಟೆ ಹೊಡೆಸಿಕೊಂಡರೂ, ಸೆಕೆಂಡ್ ರೌಂಡ್‌ನಲ್ಲಿ ಪ್ರಮುಖ ಪಂದ್ಯಗಳಲ್ಲಿ ಸ್ಟಾರ್ಕ್ ಮಿಂಚಿದ್ದಾರೆ. ಸ್ಟಾರ್ಕ್ ಜೊತೆಗೆ ಯುವ ಬೌಲರ್‌ಗಳಾದ ವೈಭವ್ ಅರೋರಾ ಮತ್ತು ಹರ್ಷಿತ್ ರಾಣಾ ಕೂಡ ತಮ್ಮ ಸಾಮರ್ಥ್ಯ ತೋರುತ್ತಿದ್ದಾರೆ. ಸುನಿಲ್ ನರೈನ್ ಮತ್ತು ಆಂಡ್ರೆ ರಸೆಲ್ ಅವರಂತಹ ಸ್ಟಾರ್ ಆಲ್ ರೌಂಡರ್ ಗಳು ಇರುವುದು ತಂಡಕ್ಕೆ ಪ್ಲಸ್ ಪಾಯಿಂಟ್. ಅದರಲ್ಲೂ ಸ್ಪಿನ್ ವಿಭಾಗದಲ್ಲಿ ವರುಣ್ ಚಕ್ರವರ್ತಿ ಮತ್ತು ಸುನಿಲ್ ನರೈನ್ ಅವರಂತಹ ಟಾಪ್ ಸ್ಪಿನ್ನರ್‌ಗಳಿದ್ದಾರೆ. ಇವರಿಬ್ಬರ ಬೌಲಿಂಗ್ ನಲ್ಲಿ ರನ್ ಗಳಿಸುವುದು ತುಂಬಾ ಕಷ್ಟ. ಇದರೊಂದಿಗೆ ಕೆಕೆಆರ್ ತಂಡ ಈ ಬಾರಿ ಕಪ್ ಗೆಲ್ಲುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕೆಕೆಆರ್ ಅಭಿಮಾನಿಗಳು ಹಾಗೂ ಮಾಜಿ ಕ್ರಿಕೆಟಿಗರು ಅಭಿಪ್ರಾಯಪಟ್ಟಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ತಂಡದ ಮೆಂಟರ್ ಆಗಿ ಗೌತಮ್‌ಗಂಭೀರ್ ಇರೋದೇ ಕೆಕೆಆರ್ ಪ್ಲಸ್ ಪಾಯಿಂಟ್.. ಮೆಂಟರ್ ಆಗಿದ್ದರೂ ಗಂಭೀರ್ ಈಗಲೂ ಅಗ್ರೆಸಿವ್ ನಿರ್ಧಾರ ಕೈಗೊಳ್ಳುತ್ತಾರೆ..
ಇನ್ನು ವಿಶೇಷ ಏನಂದ್ರೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಐಪಿಎಲ್ ಇತಿಹಾಸದಲ್ಲಿ ಕೇವಲ 2 ಬಾರಿ ಮಾತ್ರ ಮೊದಲ ಕ್ವಾಲಿಫೈಯರ್ ಪಂದ್ಯಗಳನ್ನಾಡಿದೆ. ಆ ಎರಡು ಸೀಸನ್ಗಳಲ್ಲೂ ಕೆಕೆಆರ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ. ಅಂದರೆ ಗೌತಮ್ ಗಂಭೀರ್ ನಾಯಕತ್ವದಲ್ಲಿ 2012 ರಲ್ಲಿ ಮತ್ತು 2014 ರಲ್ಲಿ ಕೆಕೆಆರ್ ತಂಡ ಮೊದಲ ಕ್ವಾಲಿಫೈಯರ್ ಪಂದ್ಯವಾಡಿ ಫೈನಲ್ಗೆ ಪ್ರವೇಶಿಸಿತ್ತು. ಹೀಗೆ ಫೈನಲ್ಗೆ ಪ್ರವೇಶಿಸಿದ್ದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 2 ಬಾರಿ ಕೂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸುವಲ್ಲಿ ಯಶಸ್ವಿಯಾಗಿತ್ತು.
ಇದೀಗ 10 ವರ್ಷಗಳ ಬಳಿಕ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಮೊದಲ ಕ್ವಾಲಿಫೈಯರ್ ಪಂದ್ಯವಾಡಲು ಸಜ್ಜಾಗಿದೆ. ಹಿಂದೆ ಕಪ್ ಗೆದ್ದಾಗ ಗಂಭೀರ್ ನಾಯಕನಾಗಿದ್ದರು. ಹೀಗಾಗಿಯೇ ಈ ಬಾರಿ ಕೂಡ ಕಪ್ ನಮ್ದೆ ಎನ್ನುವ ಖುಷಿಯಲ್ಲಿದ್ದಾರೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಫ್ಯಾನ್ಸ್. ಅದರಂತೆ ಕೆಕೆಆರ್ ತಂಡವು ಮೂರನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಲಿದೆಯಾ ಕಾದು ನೋಡಬೇಕಿದೆ.