ಐಪಿಎಲ್ ಮೊದಲ ಪಂದ್ಯದಲ್ಲೇ ಫ್ಯಾನ್ಸ್‌ಗೆ ನಿರಾಸೆ –RCB Vs KKR ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ

ಇಂಡಿಯನ್ ಪ್ರೀಮಿಯರ್ ಲೀಗ್ 2025 ಇಂದಿನಿಂದ ಆರಂಭ ಆಗಲಿದೆ. ಅಭಿಮಾನಿಗಳು ಐಪಿಎಲ್ 18 ಸೀಸನ್‌ನ ಮೊದಲ ಪಂದ್ಯ ನೋಡೋಕೆ ಕಾದು ಕುಳಿತಿದ್ದಾರೆ. ಮೊದಲ ಪಂದ್ಯವು ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಕಳೆದ 18 ವರ್ಷಗಳಲ್ಲಿ ಎರಡೂ ತಂಡಗಳ ನಡುವೆ ಅನೇಕ ಹೈವೋಲ್ಟೇಜ್ ಪಂದ್ಯ ನಡೆದಿದ್ದು, ಈ ಬಾರಿ ಕೂಡ ರೋಚಕ ಕಾದಾಟ ನಿರೀಕ್ಷಿಸಲಾಗಿದೆ. ಆದರೆ, ಐಪಿಎಲ್ ಅಭಿಮಾನಿಗಳಿಗೆ ಒಂದು ಕೆಟ್ಟ ಸುದ್ದಿ ಹೊರಬಿದ್ದಿದೆ. ಐಪಿಎಲ್ 2025 ರ ಉದ್ಘಾಟನಾ ಪಂದ್ಯ ರದ್ದಾಗುವ ಸಾಧ್ಯತೆಯಿದೆ.
ಮಳೆಯಿಂದಾಗಿ ಕೆಕೆಆರ್- ಆರ್ಸಿಬಿ ಪಂದ್ಯ ರದ್ದಾಗುವ ಸಾಧ್ಯತೆಯಿದೆ. ಐಪಿಎಲ್ 2025 ರ ಋತುವು ಅದ್ಧೂರಿ ಉದ್ಘಾಟನಾ ಸಮಾರಂಭದೊಂದಿಗೆ ಪ್ರಾರಂಭವಾಗಲಿದ್ದು, ಜನಪ್ರಿಯ ಗಾಯಕಿಯರಾದ ಶ್ರೇಯಾ ಘೋಷಾಲ್, ಕರಣ್ ಔಜ್ಲಾ ಮತ್ತು ನಟಿ ದಿಶಾ ಪಟಾನಿ ಪ್ರದರ್ಶನ ನೀಡಲಿದ್ದಾರೆ. ಆದಾಗ್ಯೂ, ಮಾರ್ಚ್ 22 ರವರೆಗೆ ಕೋಲ್ಕತ್ತಾದಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಪಂದ್ಯವು ಮಳೆಯಿಂದ ಕೊಚ್ಚಿ ಹೋಗುವ ಸಾಧ್ಯ ಇದೆ.