8ನೇ ಸೋಲು ಕಂಡ ಮುಂಬೈ ಇಂಡಿಯನ್ಸ್ ಹೈರಾಣ – ಬರೋಬ್ಬರಿ 12 ವರ್ಷಗಳ ನಂತರ ಸೇಡು ತೀರಿಸಿಕೊಂಡ ಕೆಕೆಆರ್

8ನೇ ಸೋಲು ಕಂಡ ಮುಂಬೈ ಇಂಡಿಯನ್ಸ್ ಹೈರಾಣ – ಬರೋಬ್ಬರಿ 12 ವರ್ಷಗಳ ನಂತರ ಸೇಡು ತೀರಿಸಿಕೊಂಡ ಕೆಕೆಆರ್

ಸ್ಟಾರ್ ಬ್ಯಾಟರ್ಸ್, ಎದುರಾಳಿಗಳಿಗೆ ನಡುಕ ಹುಟ್ಟಿಸುವ ಬೌಲರ್ಸ್, ಅಷ್ಟೇ ಯಾಕೆ, ಟಿ20 ವಿಶ್ವಕಪ್‌ ಟೀಮ್ ಇಂಡಿಯಾದ ಕ್ಯಾಪ್ಟನ್, ವೈಸ್ ಕ್ಯಾಪ್ಟನ್, ಜೊತೆಗೆ ಟೀಮ್ ಇಂಡಿಯಾದ ಮತ್ತಿಬ್ಬರು ಪ್ಲೇಯರ್ಸ್, ಇವ್ರೆಲ್ಲಾ ಇದ್ದು ಮುಂಬೈ ಇಂಡಿಯನ್ಸ್ ಮಾತ್ರ ಸೋಲಿನ ಸುಳಿಯಲ್ಲಿ ಒದ್ದಾಡುತ್ತಿದೆ. ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ 11 ಪಂದ್ಯಗಳನ್ನಾಡಿದೆ. ಗೆದ್ದಿರುವುದು ಕೇವಲ 3 ಮ್ಯಾಚ್​ಗಳಲ್ಲಿ ಮಾತ್ರ.

ಇದನ್ನೂ ಓದಿ: ಮುಂಬೈ ವಿರುದ್ಧ ಕೆಕೆಆರ್‌ ಗೆ 24 ರನ್‌ಗಳ ಜಯ – ಎರಡನೇ ಸ್ಥಾನಕ್ಕೆ ಜಿಗಿದ ಕೋಲ್ಕತ್ತಾ

ಶುಕ್ರವಾರ ಕೂಡಾ ತವರಿನಲ್ಲೇ ಕೆಕೆಆರ್ ಎದುರು ಮುಂಬೈ ಮಂಡಿಯೂರಿದ್ದು ಫ್ಯಾನ್ಸ್‌ಗೂ ಶಾಕ್ ಆಗಿದೆ. 8 ಪಂದ್ಯಗಳಲ್ಲಿ ಸೋಲನುಭವಿಸುವ ಮೂಲಕ ಇದೀಗ ಅಂಕ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಇದ್ರಿಂದಾಗಿ ಪ್ಲೇಆಫ್ ಪ್ರವೇಶಿಸಲು ಇದ್ದ ಬಾಗಿಲು ಮುಂಬೈ ಇಂಡಿಯನ್ಸ್ ಪಾಲಿಗೆ ಬಹುತೇಕ ಮುಚ್ಚಿದಂತಾಗಿದೆ.

ಮತ್ತೊಂದೆಡೆ ಬರೋಬ್ಬರಿ 12 ವರ್ಷಗಳ ನಂತರ ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿ ಕೊಲ್ಕತ್ತಾ ನೈಟ್ ರೈಡರ್ಸ್ ಸೇಡು ತೀರಿಸಿಕೊಂಡಿದೆ. 2012 ರಲ್ಲಿ ಮುಂಬೈ ವಿರುದ್ಧ ಗೆದ್ದಿದ್ದು ಬಿಟ್ರೆ, ಅಲ್ಲಿಂದ ಕಂಡಿದ್ದೆಲ್ಲಾ ಸೋಲು. ಇದೀಗ 12 ವರ್ಷಗಳ ಬಳಿಕ ಮುಂಬೈ ಪಡೆಗೆ ಸೋಲುಣಿಸಿದ ಕೆಕೆಆರ್ ಗೆಲುವಿನ ಕೆೇಕೆ ಹಾಕಿದೆ. ಈ ಗೆಲುವಿನೊಂದಿಗೆ 12 ವರ್ಷಗಳ ಸೋಲಿನ ಸರಪಳಿಯಿಂದ ಹೊರಬಂದಿದೆ. ಮುಂಬೈ ಇಂಡಿಯನ್ಸ್ ತಂಡವನ್ನು 24 ರನ್​ಗಳಿಂದ ಮಣಿಸಿದ ಕೆಕೆಆರ್ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಮತ್ತೆ ಭದ್ರಪಡಿಸಿಕೊಂಡಿದೆ.

ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಅತ್ಯುತ್ತಮ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್ ಬೌಲರ್​ಗಳು ಕೆಕೆಆರ್ ತಂಡವನ್ನು 19.5 ಓವರ್​ಗಳಲ್ಲಿ 169 ರನ್​ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾದರು. 170 ರನ್​ಗಳ ಸುಲಭ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಅದರಲ್ಲೂ ಕೆಕೆಆರ್ ಸ್ಪಿನ್ನರ್​ಗಳಾದ ಸುನಿಲ್ ನರೈನ್ ಹಾಗೂ ವರುಣ್ ಚಕ್ರವರ್ತಿ ದಾಳಿಯನ್ನು ಎದುರಿಸಲು ತಡಕಾಡಿದ ಮುಂಬೈ ಇಂಡಿಯನ್ಸ್ ಬ್ಯಾಟರ್​ಗಳು ಪೆವಿಲಿಯನ್ ಪರೇಡ್ ನಡೆಸಿದರು. ಪರಿಣಾಮ ಕೊನೆಯ 12 ಎಸೆತಗಳಲ್ಲಿ 32 ರನ್​​ಗಳ ಅವಶ್ಯಕತೆಯಿತ್ತು. 19ನೇ ಓವರ್​ನಲ್ಲಿ 3 ವಿಕೆಟ್​ ಕಬಳಿಸುವ ಮೂಲಕ ಮಿಚೆಲ್ ಸ್ಟಾರ್ಕ್ ಮುಂಬೈ ಇಂಡಿಯನ್ಸ್ ತಂಡವನ್ನು 18.5 ಓವರ್​ಗಳಲ್ಲಿ 145 ರನ್​ಗಳಿಗೆ ಆಲೌಟ್ ಮಾಡಿದರು. ಈ ಮೂಲಕ 12 ವರ್ಷಗಳ ಬಳಿಕ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಮುಂಬೈ ಇಂಡಿಯನ್ಸ್ ತಂಡದ ತವರು ಮೈದಾನದಲ್ಲಿ 24 ರನ್​ಗಳ ಜಯ ಸಾಧಿಸಿತು.

Sulekha