RCBಗೆ ಸವಾಲಾಗುತ್ತಾ KKR? – SRH ವೀಕ್ನೆಸ್ EXPOSSED!- ಕೊಲ್ಕೊತ್ತಾಗೆ ಅಯ್ಯರ್ ಬಲ!

RCBಗೆ ಸವಾಲಾಗುತ್ತಾ KKR? – SRH ವೀಕ್ನೆಸ್ EXPOSSED!- ಕೊಲ್ಕೊತ್ತಾಗೆ ಅಯ್ಯರ್ ಬಲ!

ಎಸ್‌ಆರ್‌ಹೆಚ್‌ ತಂಡವನ್ನು ನಿರೀಕ್ಷೆಯಂತೆಯೇ ಕೆಡವಿದ ಕೆಕೆಆರ್‌ ಫೈನಲ್‌ ಪ್ರವೇಶಿಸಿದೆ.. ಟೇಬಲ್ ಟಾಪರ್‌ ಕೆಕೆಆರ್‌ಗೆ ಯಾವುದೇ ಹಂತದಲ್ಲೂ ಹೈದ್ರಾಬಾದ್‌ ತಂಡ ಸವಾಲೆನಿಸಲೇ ಇಲ್ಲ.. ಕ್ವಾಲಿಫೈಯರ್‌ ಪಂದ್ಯ ಯಾವುದೇ ಫೈರ್‌ ಇಲ್ಲದೆ ಮುಕ್ತಾಯ ಕಂಡಿದೆ.. ಹೈದ್ರಾಬಾದ್‌ನ ಬೆನ್ನೆಲುಬನ್ನು ಆರಂಭದಲ್ಲೇ ಮುರಿದ ಕೆಕೆಆರ್‌ ಬೌಲರ್‌ಗಳು ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದ್ರು.. ಹೈದ್ರಾಬಾದ್‌ ತಂಡ ಈಗ ಎಲಿಮಿನೇಟರ್‌ನಲ್ಲಿ ಗೆದ್ದ ತಂಡವನ್ನು ಎದುರಿಸಲು ಸಜ್ಜಾಗಿ ನಿಂತಿದೆ.. ಆರ್‌ಸಿಬಿ ಮೊದಲ ಎಲಿಮಿನೇಟರ್‌ ಗೆಲ್ಲೋದ್ರಲ್ಲಿ ಅನುಮಾನವಿಲ್ಲ.. ಆದ್ರೆ ಆರ್‌ಸಿಬಿಗೆ ನಿಜವಾದ ಸವಾಲಿರೋದು ಕೂಡ ಇದೇ ಹೈದ್ರಾಬಾದ್‌ ತಂಡದ ವಿರುದ್ಧ.. ಯಾಕಂದ್ರೆ ಆರ್‌ಸಿಬಿಯ ವೀಕ್‌ ಬೌಲಿಂಗ್‌ ಮೇಲೆ ಪ್ರಾಬಲ್ಯ ಹೊಂದುವ ಎಲ್ಲಾ ಅವಕಾಶ ಹೈದ್ರಾಬಾದ್‌ನ ಬ್ಯಾಟ್ಸ್‌ಮನ್‌ಗಳಿಗಿದೆ.. ಇನ್ನೊಂದೆಡೆ ಹೈದ್ರಾಬಾದ್‌ನ ವೀಕ್ನೆಸ್‌ ಕೂಡ ಮೊದಲ ಕ್ವಾಲಿಫೈಯರ್‌ನಲ್ಲಿ ಎಕ್ಸ್‌ಪೋಸ್‌ ಆಗಿದೆ..

ಇದನ್ನೂ ಓದಿ: RCB Vs RR.. ಮಳೆ ಬಂದ್ರೆ? – ಪಂದ್ಯ ರದ್ದಾದ್ರೆ ಯಾರಿಗೆ ಪ್ಲಸ್?

ಅಹದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಕೆಕೆಆರ್‌ ಪಾರಮ್ಯ ಮೆರೆದಿತ್ತು.. ಪವರ್‌ ಪ್ಲೇ ಮುಗಿಯೋದಿಕ್ಕೂ ಮೊದಲೇ ಹೈದ್ರಾಬಾದ್‌ನ ನಾಲ್ಕು ವಿಕೆಟ್‌ ಕಿತ್ತ ಕೆಕೆಆರ್‌, ಪಂದ್ಯದ ಎರಡನೇ ಎಸೆತದಲ್ಲೇ ಟ್ರಾವಿಸ್‌ ಹೆಡ್‌ ಔಟ್‌ ಮಾಡುವ ಮೂಲಕ ಹಿಡಿತ ಸಾಧಿಸಿತ್ತು.. ಸ್ಟಾರ್ಕ್‌ ಎಸೆತದಲ್ಲಿ ಕ್ಲೀನ್‌ ಬೌಲ್ಡ್‌ ಆಗುವ ಮೂಲಕ ಟ್ರಾವಿಸ್‌ ಹೆಡ್‌ ನಿರಾಸೆ ಮೂಡಿಸಿದ್ರೆ, ತಂಡಕ್ಕೆ ಇದುವರೆಗೆ ಆಸರೆಯಾಗುತ್ತಿದ್ದ ಅಭಿಷೇಕ್‌ ಶರ್ಮಾ ಕೂಡ ಕೇವಲ ಮೂರು ರನ್‌ಗೆ ಔಟಾಗುವ ಮೂಲಕ ತಂಡಕ್ಕೆ ಆಘಾತ ತಂದಿತ್ತು.. 39 ರನ್‌ಗೆ ನಾಲ್ಕು ವಿಕೆಟ್‌ ಕಳೆದುಕೊಂಡ ತಂಡಕ್ಕೆ ಹೆನ್ರಿಚ್‌ ಕ್ಲಾಸೆನ್‌ ಮತ್ತು ರಾಹುಲ್‌ ತ್ರಿಪಾಠಿ ಉತ್ತಮ ಜೊತೆಯಾಟವಾಡಿದ್ರು.. ಇದೇ ಜೋಡಿ ತಂಡದ ರನ್‌ ನೂರರ ಗಡಿ ದಾಟಿಸಿತ್ತು.. ಆದ್ರೆ ಕ್ಲಾಸೆನ್‌ ಔಟಾಗುತ್ತಿದ್ದಂತೆ ತಂಡ ಮತ್ತೆ ಸಂಕಷ್ಟಕ್ಕೆ ಸಿಲುಕಿತು.. ಅದರಲ್ಲೂ ಇಲ್ಲದ ರನ್‌ಗಾಗಿ ಓಡಿ, ರಾಹುಲ್‌ ತ್ರಿಪಾಠಿಯನ್ನು ಔಟ್‌ ಮಾಡಿಸಿದ ಅಬ್ದುಲ್ ಸಮದ್‌ ತಂಡಕ್ಕೆ ವಿಲನ್‌ ಆಗಿ ಮಾರ್ಪಟ್ಟರು.. ಇಲ್ಲದೇ ಹೋಗಿದ್ರೆ ಎಸ್‌ಆರ್‌ಹೆಚ್‌ಗೆ ಕನಿಷ್ಠ 200 ರನ್‌ಗಳಿಸುವ ಅವಕಾಶ ದಟ್ಟವಾಗಿ ಗೋಚರಿಸುತ್ತಿತ್ತು.. ಒಳ್ಳೆಯ ಪಾರ್ಟ್‌ನರ್‌ ಶಿಪ್‌ ಬಿಲ್ಡ್‌ ಆಗುವ ಲಕ್ಷಣವೂ ಇತ್ತು.. ಆದ್ರೆ ತ್ರಿಪಾಠಿ ಔಟಾದ ನಂತರ ಎಸ್‌ಆರ್‌ಹೆಚ್‌ ಪ್ಯಾಟ್‌ ಕಮಿನ್ಸ್‌ ಬಿಟ್ಟರೆ ಬೇರೆ ಯಾರಿಂದಲೂ ಒಳ್ಳೆಯ ಕೊಡುಗೆ ಸಿಗಲೇ ಇಲ್ಲ.. ಹೀಗಾಗಿ 159 ರನ್‌ಗಳ ಸಾಧಾರಣ ಮೊತ್ತ ದಾಖಲಿಸಲು ಮಾತ್ರ ಸಾಧ್ಯವಾಯಿತು.. ಆದ್ರೆ ಎಸ್‌ಆರ್‌ಹೆಚ್‌ ಬ್ಯಾಟ್ಸ್‌ಮನ್‌ಗಳು ಈ ಲೋ ಸ್ಕೋರ್‌ ಮ್ಯಾಚ್‌ನಲ್ಲೂ ಸುನಿಲ್‌ ನರೈನ್‌ಗೆ ನಾಲ್ಕು ಓವರ್‌ಗಳಲ್ಲಿ ನಲ್ವತ್ತು ರನ್‌ ಹೊಡೆದಿದ್ದು ಗಮನಾರ್ಹ.. ಇದುವರೆಗೆ ಐಪಿಎಲ್‌ನಲ್ಲಿ ಪಾರಮ್ಯ ಮೆರೆದಿದ್ದ ನರೈನ್‌ಗೆ ಹೈದ್ರಾಬಾದ್‌ ಬ್ಯಾಟ್ಸ್‌ಮನ್‌ಗಳು ಮಾತ್ರ ಸಿಕ್ಕಾಪಟ್ಟೆ ಚಚ್ಚಿ ಹಾಕಿದ್ದು ವಿಶೇಷ..

ಹೈದ್ರಾಬಾದ್‌ನ 160 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಕೆಕೆಆರ್‌ ಆರಂಭದಿಂದಲೇ ಎಸ್‌ಆರ್‌ಹೆಚ್‌ ಬೌಲರ್‌ಗಳ ಮೇಲೆ ಹಿಡಿತ ಸಾಧಿಸಿತ್ತು.. ಯಾವುದೇ ಹಂತದಲ್ಲೂ ಕೆಕೆಆರ್‌ ಬ್ಯಾಟ್ಸ್‌ಮನ್‌ಗಳು ಒತ್ತಡಕ್ಕೆ ಒಳಗಾಗಲೇ ಇಲ್ಲ.. ಅದರಲ್ಲೂ ಎರಡು ವಿಕೆಟ್‌ ಕಳೆದುಕೊಂಡ ನಂತರ ಜೊತೆಯಾದ ವೆಂಕಟೇಶ್‌ ಅಯ್ಯರ್‌ ಮತ್ತು ಶ್ರೇಯಸ್‌ ಅಯ್ಯರ್‌, ಬಿರುಸಿನ ಹೊಡೆತಕ್ಕೆ ಕೈಹಾಕಿದ್ದರಿಂದ 14ನೇ ಓವರ್‌ನಲ್ಲೇ ಹೈದ್ರಾಬಾದ್‌ನ ಟಾರ್ಗೆಟ್‌ ರೀಚ್‌ ಆಗುವಲ್ಲಿ ಕೆಕೆಆರ್‌ ಯಶಸ್ವಿಯಾಯಿತು.. ಫೈನಲ್‌ಗೂ ಮುಂಚಿತವಾಗಿ ಶ್ರೇಯಸ್‌ ಅಯ್ಯರ್ ಉತ್ತಮ ಫಾರ್ಮ್‌ನಲ್ಲಿ ಬ್ಯಾಟ್‌ ಬೀಸಿದ್ದು ಕೆಕೆಆರ್‌ಗೆ ಅತಿದೊಡ್ಡ ಪ್ಲಸ್‌ ಪಾಯಿಂಟ್‌.. ಜೊತೆಗೆ ವೆಂಕಟೇಶ್‌ ಅಯ್ಯರ್‌ ಮತ್ತೆ, ತಾವು ಈ ತಂಡದ ಪ್ರಮುಖ ಆಟಗಾರು ಎನ್ನುವುದನ್ನು ಬ್ಯಾಟ್‌ ಮೂಲಕವೇ ತೋರಿಸಿಕೊಟ್ಟಿದ್ದಾರೆ.. ಕ್ವಾಲಿಫೈಯರ್‌ನಲ್ಲಿ ಕೆಕೆಆರ್‌ ಸಿಡಿದ ರೀತಿಯನ್ನು ಗಮನಿಸಿದ್ರೆ ಐಪಿಎಲ್‌ನ ಫೈನಲ್‌ ಮೆಗಾ ಫೈಟ್‌ಗೆ ಸಾಕ್ಷಿಯಾಗೋದು ಗ್ಯಾರಂಟಿ.. ಕೆಕೆಆರ್‌ ವಿರುದ್ಧ ಮುಗ್ಗರಿಸಿ ಬಿದ್ದ ಹೈದ್ರಾಬಾದ್‌ ಎದುರಿಸಲು ಇಂದು ಆರ್‌ಸಿಬಿ ಮತ್ತು ಆರ್‌ಆರ್‌ ಮುಖಾಮುಖಿಯಾಗುತ್ತಿವೆ.. ಇಂದು ಆರ್‌ಸಿಬಿ ಗೆಲುವಿಗೆ ಯಾವುದೇ ತೊಂದರೆ ಎದುರಾಗುವ ಸಾಧ್ಯತೆ ಕಡಿಮೆ.. ಹೀಗಾಗಿ ಹೈದ್ರಾಬಾದ್‌ ತಂಡವನ್ನು ಕೆಡವಿದ್ರೆ ಕೆಕೆಆರ್‌ಅನ್ನು ಫೈನಲ್‌ನಲ್ಲಿ ಆರ್‌ಸಿಬಿ ಎದುರಿಸಬೇಕಾಗುತ್ತದೆ.. ಇದುವರೆಗೂ ಅಸಾಧ್ಯವನ್ನು ಸಾಧ್ಯ ಮಾಡಿರುವ ಆರ್‌ಸಿಬಿ ಫೈನಲ್‌ನಲ್ಲೂ ಗೆದ್ದು ಬೀಗಲಿ ಎನ್ನುವುದೇ ಅಭಿಮಾನಿಗಳ ಹಾರೈಕೆ..

 

Sulekha