KKR ಸ್ಟಾರ್ ಅಯ್ಯರ್ ಮದುವೆ – ಶ್ರುತಿ ಕೈಹಿಡಿದ ವೆಂಕಟೇಶ್ ಅಯ್ಯರ್

KKR ಸ್ಟಾರ್ ಅಯ್ಯರ್ ಮದುವೆ – ಶ್ರುತಿ ಕೈಹಿಡಿದ ವೆಂಕಟೇಶ್ ಅಯ್ಯರ್

ವೆಂಕಟೇಶ್ ಅಯ್ಯರ್.. ಈ ಬಾರಿಯ ಐಪಿಎಲ್‌ನಲ್ಲಿ ಕೆಕೆಆರ್‌ ಗೆ ಕಪ್‌ ಗೆಲ್ಲಿಸಿ ಕೊಡುವಲ್ಲಿ  ಪ್ರಮುಖ ಪಾತ್ರ ವಹಿಸಿದ್ದಾರೆ. ಭರ್ಜರಿ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿರುವ ವೆಂಕಟೇಶ್‌ ಅಯ್ಯರ್‌ ಕಪ್‌ ಗೆದ್ದ ಖುಷಿಯೊಂದಿಗೆ ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಭಾನುವಾರ  ಶ್ರುತಿ ರಘುನಾಥನ್ ಅವರನ್ನು ವಿವಾಹವಾಗಿದ್ದಾರೆ. ಅಷ್ಟಕ್ಕೂ ಈ ಶ್ರುತಿ ರಘುನಾಥನ್‌ ಯಾರು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಕನ್ನಡದಲ್ಲೂ ಹಾರ್ದಿಕ್ ಹೆಂಡ್ತಿ ಡ್ಯಾನ್ಸ್!! – ನತಾಶಾಗೆ ಸಿಕ್ಕ ಪಾಲೆಷ್ಟು?

ಟೀಂ ಇಂಡಿಯಾದ ಸ್ಫೋಟಕ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್, 17 ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ಆಡಿದ್ರು.. ಫೈನಲ್‌ನಲ್ಲೇ ಹಾಫ್ ಸೆಂಚುರಿ ಬಾರಿಸೋ ಮೂಲಕ ಕೆಕೆಆರ್‌ ಕಪ್‌ ಗೆಲ್ಲಿಸಿಕೊಟ್ಟಿದ್ರು.. ವೆಂಕಟೇಶ್ ಅಯ್ಯರ್ ಈ ಐಪಿಎಲ್ ಟೂರ್ನಿಯಲ್ಲಿಒಳ್ಳೆ ಪ್ರದರ್ಶನ ನೀಡಿದ್ರೂ ಕೂಡ, 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ. ಆದ್ರೆ ಈಗ ಸ್ಟೈಲಿಶ್‌ ಆಲ್‌ರೌಂಡರ್‌ ಅಯ್ಯರ್‌ ಜೀವನದ ಹೊಸ ಇನ್ನಿಂಗ್ಸ್‌ ಶುರು ಮಾಡಿದ್ದಾರೆ.. ಬಹುಕಾಲದ ಗೆಳತಿಯ ಶ್ರುತಿ ರಘುನಾಥನ್‌ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ..

2023ರ ನವೆಂಬರ್ ತಿಂಗಳಲ್ಲೇ ವೆಂಕಟೇಶ್ ಅಯ್ಯರ್ ಹಾಗೂ ಶ್ರುತಿ ರಘುನಾಥನ್ ಅವರ ನಿಶ್ಚಿತಾರ್ಥ ನಡೆದಿತ್ತು. ನಿನ್ನೆ ತಮ್ಮ ಕುಟುಂಬದವರು ಹಾಗೂ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದಾರೆ. ವೆಂಕಟೇಶ್ ಅಯ್ಯರ್ ಹಾಗೂ ಶೃತಿ ರಘುನಾಥನ್ ಅವರ ವಿವಾಹ ಸಮಾರಂಭ ಸರಳವಾಗಿ ನಡೆದಿದೆ. ಅವರ ಮದುವೆಯ ಪೋಟೋಗಳನ್ನು ಕೆಕೆಆರ್ ತಂಡದ ಸಿಇಒ ವೆಂಕಿ ಮೈಸೂರು ಅವರು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದಾರೆ. ಕೆಕೆಆರ್ ಸಹ ಆಟಗಾರ ವರುಣ್ ಚಕ್ರವರ್ತಿ ಕೂಡ ಸಮಾರಂಭಕ್ಕೆ ಸಾಕ್ಷಿಯಾದರು. ದಕ್ಷಿಣ ಭಾರತದ ಸಂಪ್ರದಾಯದಂತೆ ವಿವಾಹವಾಗಿರುವ ಜೋಡಿಗೆ ಕೆಕೆಆರ್ ಮ್ಯಾನೇಜ್ಮೆಂಟ್, ನಾಯಕ ಶ್ರೇಯಸ್ ಅಯ್ಯರ್ ಹಾಗೂ ಅಭಿಮಾನಿಗಳು ಶುಭ ಕೋರಿದ್ದಾರೆ.

ಇನ್ನು ವೆಂಕಟೇಶ್‌ ಅವರ ಪತ್ನಿ ಪಿಎಸ್‌ಜಿ ಸೈನ್ಸ್ ಮತ್ತು ಸೈನ್ಸ್ ಕಾಲೇಜಿನಲ್ಲಿ ಪದವಿ ಪಡೆದ್ದಾರೆ. ಅಷ್ಟೇ ಅಲ್ಲದೇ ಶ್ರುತಿ ರಘುನಾಥನ್ ಅವರು ನಂತರ ಎನ್ ಐಎಫ್ ಟಿಯಲ್ಲಿ ಫ್ಯಾಷನ್ ಮ್ಯಾನೇಜ್ಮೆಂಟ್ ನಲ್ಲಿ ಮಾಸ್ಟರ್ಸ್ ಪದವಿ ಪಡೆದಿದ್ದಾರೆ. ಪ್ರಸ್ತುತ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಲೈಫ್ ಸ್ಟೈಲ್ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

Shwetha M

Leave a Reply

Your email address will not be published. Required fields are marked *