KKRಗೆ ಕಾಸ್ಟ್ಲಿ ಸ್ಟಾರ್ಸ್ ವರನಾ.. ಶಾಪನಾ – ಪತಿ, ರಾಣಾ, ವರುಣ್ ಆಡಿದ್ರೆ ಸಾಕಾ?
ಬ್ಯಾಟಿಂಗ್ ಓಕೆ.. ಫಿನಿಶಿಂಗ್ ಮರೆತ್ರಾ?

2026ರ ಐಪಿಎಲ್ಗಾಗಿ ನಡೆದ ಮಿನಿ ಆಕ್ಷನ್ನಲ್ಲಿ ಸಾಕಷ್ಟು ಸದ್ದು ಮಾಡಿದ ಟೀಂ ಅಂದ್ರೆ ಅದು ಕೆಕೆಆರ್.. ಹೈಯೆಸ್ಟ್ ಬಜೆಟ್ನೊಂದಿಗೆ ಅಖಾಡಕ್ಕಿಳಿದ ಫ್ರಾಂಚೈಸಿ ಹೈಯೆಸ್ಟ್ ಅಮೌಂಟ್ ಕೊಟ್ಟು ಆಟಗಾರರನ್ನ ಖರೀದಿ ಮಾಡಿದೆ. ಅದ್ರಲ್ಲೂ ಕ್ಯಾಮೆರಾನ್ ಗ್ರೀನ್ಗಾಗಿ 25 ಕೋಟಿ ಸುರಿದಿದೆ. ಮತೀಶ ಪತಿರಾಣ ಕೂಡ ಒನ್ ಆಫ್ ದಿ ಕಾಸ್ಟ್ಲಿಯೆಸ್ಟ್ ಪ್ಲೇಯರ್ ಆಗಿದ್ದಾರೆ.
ಇದನ್ನೂ ಓದಿ : ಬಾಯಿ ಇದೆ ಅಂತ ಬಾಯಿಗೆ ಬಂದ ಹಾಗೆ ಮಾತಾಡ್ತಿಯಾ? – ಮತ್ತೆ ಕಿತ್ತಾಡಿಕೊಂಡ ರಘು- ಗಿಲ್ಲಿ!
ಅಬುದಾಬಿಯಲ್ಲಿ ನಡೆದ ಮಿನಿ ಹರಾಜಿನಲ್ಲಿ 6 ಅತ್ಯಂತ ದುಬಾರಿ ಆಟಗಾರರಲ್ಲಿ ಮೂವರು ಕೆಕೆಆರ್ನಲ್ಲೇ ಇದ್ದಾರೆ. ಈ ಮೂಲಕ ಆಕ್ಷನ್ನಲ್ಲೇ ಡಾಮಿನೇಟ್ ಮಾಡಿದ್ದಾರೆ. ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್‌ಗೆ 25.20 ಕೋಟಿ ರೂಪಾಯಿ ನೀಡಿದೆ. ಌಂಡ್ ಪವರ್ ಪ್ಲೇ ಮತ್ತು ಡೆತ್ ಓವರ್ ಸ್ಪೆಷಲಿಸ್ಟ್ ಬೌಲರ್ ಮತೀಶ ಪತಿರಾಣಗಾಗಿ 18 ಕೋಟಿ ಸುರಿದಿದೆ. ವಿಕೆಟ್ ಕೀಪರ್ಗಳಾಗಿ ಕಿವೀಸ್ ಆಟಗಾರರಾದ ಫಿನ್ ಅಲೆನ್ ಮತ್ತು ಟಿಮ್ ಸೀಫರ್ಟ್ ಹಾಗೂ ತೇಜಸ್ವಿ ಸಿಂಗ್ ಅವರನ್ನು ಪಿಕ್ ಮಾಡಿದೆ.
ಕೆಕೆಆರ್ ಸ್ಟ್ರೆಂಥ್!
ಬ್ಯಾಟರ್ಸ್ : ಅಜಿಂಕ್ಯ ರಹಾನೆ, ರೋವ್ಮನ್ ಪೊವೆಲ್, ಆಂಗ್ ಕ್ರಿಶ್ ರಘುವಂಶಿ, ಮನೀಶ್ ಪಾಂಡೆ, ರಿಂಕು ಸಿಂಗ್, ರಾಹುಲ್ ತ್ರಿಪಾಠಿ
ವಿಕೆಟ್ ಕೀಪರ್ಸ್ : ಫಿನ್ ಅಲೆನ್, ಟಿಮ್ ಸೀಫರ್ಟ್, ತೇಜಸ್ವಿ ಸಿಂಗ್.
ಆಲ್ ರೌಂಡರ್ಸ್: ಅನುಕೂಲ್ ರಾಯ್, ರಮಣದೀಪ್ ಸಿಂಗ್, ಸುನಿಲ್ ನರೈನ್, ಕ್ಯಾಮೆರಾನ್ ಗ್ರೀನ್, ಸಾರ್ಥಕ್ ರಂಜನ್, ದಕ್ಷ್ ಕಮ್ರಾ, ರಚಿನ್ ರವೀಂದ್ರ.
ವೇಗದ ಬೌಲರ್ಸ್ : ಉಮ್ರಾನ್ ಮಲಿಕ್, ಮಥೀಶ ಪತಿರಾನ, ಹರ್ಷಿತ್ ರಾಣಾ, ವೈಭವ್ ಅರೋರಾ, ಕಾರ್ತಿಕ್ ತ್ಯಾಗಿ, ಮುಸ್ತಾಫಿಜುರ್ ರೆಹಮಾನ್, ಆಕಾಶ್ ದೀಪ್
ಸ್ಪಿನ್ನರ್ಸ್ : ವರುಣ್ ಚಕ್ರವರ್ತಿ, ಪ್ರಶಾಂತ್ ಸೋಲಂಕಿ
ಆಕ್ಷನ್ನಲ್ಲಿ ಬಿಗ್ ಪ್ಲೇಯರ್ಗಳನ್ನೇ ಖರೀದಿ ಮಾಡಿದೆ. ಌಂಡ್ ಭವಿಷ್ಯದ ದೃಷ್ಟಿಯಿಂದಲೇ ಬಿಡ್ ಮಾಡಿದ್ದಾರೆ. ಸದ್ಯ ಟೀಮ್ನಲ್ಲಿರೋ ಪ್ಲೇಯರ್ಸ್ ನೋಡಿದಾಗ ಬಹುಶಃ ಮುಂದಿನ ಸೀಸನ್ಗೂ ಅಜಿಂಕ್ಯ ರಹಾನೆ ಅವ್ರೇ ತಂಡದ ನಾಯಕತ್ವ ವಹಿಸೋ ಸಾಧ್ಯತೆಗಳಿವೆ. ಟಾಪ್ ಆರ್ಡರ್ ಬ್ಯಾಟಿಂಗ್ನಲ್ಲಿ ಅಲೆನ್ ಮತ್ತು ಗ್ರೀನ್ ಇರೋದು ಪಕ್ಕಾ. ರಹಾನೆ, ಮನೀಶ್ ಪಾಂಡೆ ಮತ್ತು ರಿಂಕು ಸಿಂಗ್‌ರಂತಹ ಅನುಭವಿಗಳು ನಂತರದ ಕ್ರಮಾಂಕದಲ್ಲಿ ಡೆಪ್ತ್ ಮತ್ತು ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್ ಕೊಡೋ ಸಾಮರ್ಥ್ಯ ಇದೆ. ತೇಜಸ್ವಿ, ಸಾರ್ಥಕ್ ರಂಜನ್‌ರಂತಹ ಯುವ ಪ್ರತಿಭೆಗಳು ಕ್ಲಿಕ್ ಆಗ್ಬೋದು. ರಚಿನ್ ರವೀಂದ್ರ ಕೂಡ ಪ್ಲಸ್ ಆಗ್ಬೋದು.
ಬೌಲಿಂಗ್ ನಲ್ಲಿ ರಾಣಾ, ಪತಿರಾಣ, ವರುಣ್ ಶಕ್ತಿ!
ಕೆಕೆಆರ್ ನ ಮೇನ್ ಸ್ಟ್ರೆಂಥ್ ಅಂದ್ರೆ ಬೌಲಿಂಗ್ ಸ್ಕ್ವಾಡ್. ಡೆತ್ ಓವರ್ ಸ್ಪೆಷಲಿಸ್ಟ್ ಪತಿರಾನ ಪೇಸ್ ಅಟ್ಯಾಕ್ ಲೀಡ್ ಮಾಡ್ತಾರೆ. ಮುಸ್ತಾಫಿಜುರ್ ಅನುಭವಿ ಬ್ಯಾಕಪ್ ಆಗ್ತಾರೆ, ಟೀಮ್ ಇಂಡಿಯಾದ ಆಲ್-ಫಾರ್ಮ್ಯಾಟ್ ಬೌಲರ್ ಹರ್ಷಿತ್ ರಾಣಾ ಇದ್ದಾರೆ. ವೈಭವ್ ಅರೋರಾ ಮತ್ತು ಆಕಾಶ್ ದೀಪ್ ಕ್ವಾಲಿಟಿ ಬ್ಯಾಕಪ್ ಮತ್ತು ಹೊಸ ಬಾಲ್ನಲ್ಲಿ ಇಂಪ್ಯಾಕ್ಟ್ ಮಾಡ್ತಾರೆ. ಯುವ ಲೆಗ್-ಸ್ಪಿನ್ನರ್ ಪ್ರಶಾಂತ್ ಸೋಲಂಕಿ ಅನುಭವಿ ಜೋಡಿಗಳಾದ ವರುಣ್ ಚಕ್ರವರ್ತಿ ಮತ್ತು ನರೈನ್ ಜೊತೆಗೆ ಸಾಥ್ ಕೊಡ್ತಾರೆ. ಮಧ್ಯಮ ಓವರ್‌ಗಳಲ್ಲಿ ರನ್ಸ್ ಕಂಟ್ರೋಲ್ ಮಾಡುವ ಸಾಮರ್ಥ್ಯ ಇದೆ. ಹೀಗಾಗಿ ಬೌಲಿಂಗ್ ಸೂಪರ್ ಸ್ಟ್ರಾಂಗ್ ಆಗಿ ಕಾಣ್ತಿದೆ. ಹಾಗಂತ ವೀಕ್ನೆಸ್ಸೇ ಏನೂ ಇಲ್ವ ಅಂದ್ರೆ ಖಂಡಿತ ಇದೆ.
ರಿಂಕು ಸಿಂಗ್ ಮೇಲೆಯೇ ಫಿನಿಶರ್ ಡಿಪೆಂಡೆನ್ಸಿ!
ಕೆಕೆಆರ್ ಟೀಂ ಸದ್ಯಕ್ಕೆ ಚೆನ್ನಾಗಿ ಕಾಣ್ತಿದ್ರೂ ಲೀಗ್ ಟೈಮಲ್ಲಿ ಕೆಲ ಸಮಸ್ಯೆಗಳು ಎದುರಾಗಬಹುದು. ಗ್ರೀನ್ ಕಂಟಿನ್ಯುಯಸ್ ಆಗಿ ಟಾಪ್ 3 ಸ್ಲಾಟ್ಗಳಲ್ಲಿ ಬ್ಯಾಟಿಂಗ್ ಮಾಡಿದ್ರೆ ಮಿಡಲ್ ಆರ್ಡರ್ನಲ್ಲಿ ರಿಂಕು ಸಿಂಗ್ ಮಾತ್ರವೇ ಬೆಸ್ಟ್ ಫಿನಿಶರ್ ಆಗಿ ಸಿಗ್ತಾರೆ. ಉಳಿದಂತೆ ಅಂಗ್‌ಕ್ರಿಶ್ ರಘುವಂಶಿ, ರಮಣದೀಪ್ ಸಿಂಗ್, ಮನೀಶ್ ಪಾಂಡೆ ಮತ್ತು ಸುನಿಲ್ ನರೈನ್‌ರಂತಹ ಆಟಗಾರರ ಮೇಲೆ ಡಿಪೆಂಡ್ ಆಗ್ಬೇಕಾಗುತ್ತೆ. ಕೆಳ ಕ್ರಮಾಂಕದಲ್ಲಿ ನರೈನ್ ಡಲ್ ಆದ್ರೂ ಅಚ್ಚರಿ ಇಲ್ಲ. ಹೀಗಾಗಿ ಫಿನಿಶರ್ ರೋಲ್ ಸ್ವಲ್ಪ ಇಮ್ ಬ್ಯಾಲೆನ್ಸ್ ಅನ್ನಿಸ್ತಿದೆ. ಇನ್ನು ಬೌಲಿಂಗ್ನಲ್ಲಿ ಪತಿರಾನ, ಮುಸ್ತಾಫಿಜುರ್ ಮತ್ತು ಆಕಾಶ್ ದೀಪ್ ಅವರೆಲ್ಲರೂ ಹಿಂದೆ ಫಿಟ್ನೆಸ್ ಸಮಸ್ಯೆಗಳನ್ನು ಎದುರಿಸಿದ್ದರು. ಅದ್ರಲ್ಲೂ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯಿಂದ ಮುಸ್ತಾಫಿಜುರ್ ಅವರಿಗೆ ಎನ್ಒಸಿ ವಿಚಾರದಲ್ಲಿ ಕೆಲ ಅಡೆತಡೆಗಳು ಆಗೋ ಚಾನ್ಸಸ್ಸೂ ಇದೆ.

ನೋಡಿರಿ

