ಆರ್‌ಸಿಬಿಯ ಕೆಜಿಎಫ್ ಎದುರಿಸಲು ಕೆಕೆಆರ್ ರೆಡಿ – ತ್ರಿಮೂರ್ತಿಗಳಿಗೆ ಆರ್‌ಆರ್‌ಆರ್ ಸವಾಲ್

ಆರ್‌ಸಿಬಿಯ ಕೆಜಿಎಫ್ ಎದುರಿಸಲು ಕೆಕೆಆರ್ ರೆಡಿ – ತ್ರಿಮೂರ್ತಿಗಳಿಗೆ ಆರ್‌ಆರ್‌ಆರ್ ಸವಾಲ್

ಮೊದಲ ಪಂದ್ಯವನ್ನು ದೇವ್ರಿಗೆ ಬಿಟ್ಟಿದ್ದ ಆರ್‌ಸಿಬಿ, ಎರಡನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಗೆಲುವು ಸಾಧಿಸಿದೆ. ಇದೀಗ ಕೆಕೆಆರ್ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಆರ್‌ಸಿಬಿ ತನ್ನ ಪ್ಲೇಯಿಂಗ್ ಇಲೆವೆನ್ನಲ್ಲಿ ಕೆಲ ಚೇಂಜಸ್ ಮಾಡಿಕೊಳ್ಳಲಿದೆ. ಯಾಕೆಂದರೆ, ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದು ಬೀಗಿದ್ದೇನೋ ನಿಜವೇ. ಆದ್ರೆ ಆರ್‌ಸಿಬಿಯ ಕೆಜಿಎಫ್‌ ಇನ್ನೂ ಜೊತೆಯಾಗಿ ಸಿಡಿದಿಲ್ಲ… ಕಿಂಗ್‌ ಕೊಹ್ಲಿ ಮಾತ್ರ ತಮ್ಮ ಎಂದಿನ ಅಗ್ರೆಸ್ಸಿವ್‌ ಆಟಕ್ಕೆ ಮರಳಿದ್ದು ಅಭಿಮಾನಿಗಳಿಗೆ ಸಮಾಧಾನ ತಂದಿದೆ.. ಆರ್‌ಸಿಬಿಯ ಕೆಜಿಎಫ್‌ ಎದುರಿಸಲು ಈಗ ಕೆಕೆಆರ್‌ನ ಆರ್‌ಆರ್‌ಆರ್‌ ಸಜ್ಜಾಗಿದೆ..

ಇದನ್ನೂ ಓದಿ: SRH V/s MI ಮುರಿದ ದಾಖಲೆಗಳೆಷ್ಟು? – ಹಾರ್ದಿಕ್ ಪಾಂಡ್ಯಾಗೆ ಇದಕ್ಕಿಂತ ಶಿಕ್ಷೆ ಬೇಕಾ?

ರಿಂಕುಸಿಂಗ್, ರಸ್ಸೆಲ್, ರಾಣಾ.. ಈ ಮೂವರೇ ಈಗ ಕೆಕೆಆರ್‌ನ ತ್ರಿಬಲ್‌ ಆರ್‌ ಜೋಡಿ.. ಆರ್‌ಸಿಬಿಯ ಕೆಜಿಎಫ್‌ಗೆ ಈಗ ಈ ಆರ್‌ಆರ್‌ಆರ್‌ ಸವಾಲಾಗಿದೆ.. ಆರ್‌ಆರ್‌ಆರ್‌ ಜೊತೆಯಾದ್ರೆ ಎದುರಾಳಿಗಳನ್ನು ಧೂಳೀಪಟ ಮಾಡಬಹುದು ಅನ್ನೋದೇನು ನಿಜ.. ಆದ್ರೆ ಕೆಜಿಎಫ್‌ನ ದೊಡ್ಡಮ್ಮನ ರೀತಿಯಲ್ಲಿ ಕೆಜಿಎಫ್‌ ಸಿಡಿದರೆ, ಆರ್‌ಆರ್‌ಆರ್‌ ಅಲ್ಲ.. ಅದಕ್ಕಿಂತ ದೊಡ್ಡ ಜೋಡಿಯೂ ಛಿದ್ರ ಆಗೋದ್ರಲ್ಲಿ ಅನುಮಾನವೇ ಬೇಕಿಲ್ಲ..

ಈಗ ಕೆಕೆಆರ್‌ ವಿಚಾರಕ್ಕೆ ಬಂದ್ರೆ  ಶ್ರೇಯಸ್‌ ಅಯ್ಯರ್‌ ನೇತೃತ್ವದ ಟೀಂ ಸಖತ್‌ ವೇರಿಯೇಷನ್‌ ಹೊಂದಿರುವ ತಂಡ.. ಅದರಲ್ಲೂ ಕೆಕೆಆರ್‌ನ ಬ್ಯಾಟ್ಸ್‌ಮನ್‌ಗಳು ಐದು ಓವರ್‌ಗಳಲ್ಲೇ ಪಂದ್ಯದ ದಿಕ್ಕು ದೆಸೆ ಬದಲಿಸಬಲ್ಲರು.. ರಸ್ಸೆಲ್‌ ಮತ್ತು ರಿಂಕು ಸಿಂಗ್‌ ಏನಾದ್ರೂ ಬ್ಯಾಟಿಂಗ್‌ನಲ್ಲಿ ಸೆಟ್‌ ಆದ್ರೂ ಅಂದ್ರೆ ಆ ದಿನ ಅವರ ಮುಂದೆ ಬೌಲರ್‌ಗಳ ಯಾವ ಪ್ರಯತ್ನ ಕೂಡ ಫಲ ಕೊಡಲು ಸಾಧ್ಯವೇ ಇಲ್ಲ.. ಈ ಇಬ್ಬರಿಗೆ ಗೊತ್ತಿರೋದು ಕೇವಲ ಬಾಲನ್ನು ಬೌಂಡರಿ ಗೆರೆ ದಾಟಿಸೋದು ಮಾತ್ರ.. ಅಷ್ಟರಮಟ್ಟಿಗೆ ರಿಂಕು-ರಸ್ಸೆಲ್‌ ಜೋಡಿಯ ಬಗ್ಗೆ ಎಚ್ಚರಿಕೆಯಿಂದ ಇರಲೇಬೇಕು.. ಆದರೆ ನಾಯಕ ಶ್ರೇಯಸ್‌ ಅಯ್ಯರ್‌ ಹೇಳಿಕೊಳ್ಳುವಂತಹ ಪ್ರದರ್ಶನ ಇತ್ತೀಚೆಗೆ ನೀಡುತ್ತಿಲ್ಲ.. ವೆಂಕಟೇಶ್‌ ಅಯ್ಯರ್‌ ಕೂಡ ಹಿಂದಿದ್ದ ಫಾರ್ಮ್‌ನಲ್ಲಿ ಕಾಣುತ್ತಿಲ್ಲ.. ಇದು ಸ್ವಲ್ಪ ಮಟ್ಟಿಗೆ ಪಾಸಿಟಿವ್‌ ಅಂಶವಾದರೂ ಟಿ-20ಯಲ್ಲಿ ಕೇವಲ ಎರಡು ಓವರ್‌ನಲ್ಲೇ ಎಲ್ಲಾ ಲೆಕ್ಕಾಚಾರ ಕೂಡ ಉಲ್ಟಾ ಆಗುವ ಅವಕಾಶ ಇದ್ದೇ ಇರುತ್ತದೆ.. ಹೀಗಾಗಿ ಆರ್‌ಸಿಬಿ ಬೌಲರ್ಸ್ ತಮ್ಮೆಲ್ಲಾ ಶಕ್ತಿ ಪ್ರದರ್ಶನ ಮಾಡಲೇಬೇಕು. ಆರ್‌ಸಿಬಿಯ ಮ್ಯಾನೇಜ್‌ಮೆಂಟ್‌ ನಮ್ಮಲ್ಲಿ ಕೆಜಿಎಫ್‌ ಇರೋದ್ರಿಂದ ಯಾರ ಮೇಲೆ ಬೇಕಿದ್ದರೂ ಗೆಲ್ಲಬಹುದು ಅಂತ ಯೋಚಿಸಿಯೋ ಏನೋ ಬಿಡ್ಡಿಂಗ್‌ ವೇಳೆ ಒಳ್ಳೆಯ ಬೌಲರ್‌ ಆಯ್ಕೆ ಗೋಜಿಗೆ ಹೋಗಿರಲೇ ಇಲ್ಲ.. ಇಲ್ಲಾಂದ್ರೆ ಯಜುವೇಂದ್ರ ಚಹಾಲ್‌ರಂತಹ ಮಿಸ್ಟರ್‌ ಗ್ಯಾರಂಟಿ ಬೌಲರ್‌ಅನ್ನು ಕಳೆದುಕೊಳ್ಳುವ ಚಾನ್ಸೇ ಇರಲಿಲ್ಲ.. ಈ ಆರ್‌ಸಿಬಿ ತಂಡದ ಮೇನ್‌ ವೀಕ್ನೆಸ್‌ ಅಂದ್ರೆ ಬೌಲಿಂಗ್‌ ಯುನಿಟ್‌.. ಎದುರಾಳಿಗಳಿಗೆ ರನ್‌ ದಾನ ಮಾಡೋದ್ರಲ್ಲಿ ಇವರದ್ದು ಎತ್ತಿದ ಕೈ.. ಕೆಕೆಆರ್‌ ವರ್ಸಸ್‌ ಎಸ್‌ಆರ್‌ಹೆಚ್‌ ನಡುವಿನ ಪಂದ್ಯದಲ್ಲಿ ಆದಂತೆ ಆರ್‌ಸಿಬಿಯ ಬೌಲರ್‌ಗಳಾಗಿರುತ್ತಿದ್ದರೆ ಮ್ಯಾಚ್‌ ಗೆಲ್ಲೋಕೆ ಸಾಧ್ಯವೇ ಇರಲಿಲ್ಲ.. ಕೆಕೆಆರ್‌ ತಂಡದ ರಾಣಾ ಒತ್ತಡದ ಸಂದರ್ಭದಲ್ಲಿ, ಅದರಲ್ಲೂ ಮಿಚೆಲ್‌ ಸ್ಟಾರ್ಕ್‌ಗೆ ಅಷ್ಟೆಲ್ಲಾ ಸಿಕ್ಸ್‌ ಫೋರ್‌ ಹೊಡೆದರೂ ಕಡೆಯ ಓವರ್‌ನಲ್ಲಿ ಪಂದ್ಯ ಕೆಕೆಆರ್‌ ಪರ ವಾಲುವಂತೆ ನೋಡಿಕೊಂಡಿದ್ದರು.. ಅಂತಹ ಮ್ಯಾಚ್‌ ವಿನ್ನಿಂಗ್‌ ಬೌಲರ್‌ನ ಕೊರತೆ ಈಗಲೂ ಆರ್‌ಸಿಬಿಗೆ ಇದೆ ಅಂದ್ರೆ ಆರ್‌ಸಿಬಿಯ ಕಟ್ಟಾ ಪ್ಯಾನ್ಸ್‌ ಕೂಡ ಒಪ್ಪಿಕೊಳ್ತಾರೆ..  ಹೀಗಾಗಿಯೇ ಆರ್‌ಸಿಬಿ ಬೌಲಿಂಗ್ ವಿಭಾಗದಲ್ಲಿ ಚೇಂಜಸ್ ಮಾಡಿಕೊಳ್ಳಬಹುದು. ಕಳೆದ ಎರಡು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಅಲ್ಝಾರಿ ಜೋಸೆಫ್ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 3.4 ಓವರ್ಗಳಲ್ಲಿ 38 ರನ್ ನೀಡಿದ್ದ ಅಲ್ಝಾರಿ, ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 4 ಓವರ್ಗಳಲ್ಲಿ 43 ರನ್ ಬಿಟ್ಟು ಕೊಟ್ಟಿದ್ದರು. ಈ ವೇಳೆ ಪಡೆದಿರುವುದು ಕೇವಲ 1 ವಿಕೆಟ್ ಮಾತ್ರ. ಹೀಗಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಿಂದ ಅಲ್ಝಾರಿ ಜೋಸೆಫ್ ಅವರನ್ನು ಕೈ ಬಿಡುವ ಸಾಧ್ಯತೆ ಹೆಚ್ಚಿದೆ. ಜೋಸೆಫ್‌ ಬದಲು ರೀಸ್ ಟೋಪ್ಲಿ ಅಥವಾ ಲಾಕಿ ಫರ್ಗುಸನ್ಗೆ ಚಾನ್ಸ್ ನೀಡಬಹುದು. ಒಂದು ವೇಳೆ ಆರ್ಸಿಬಿ ತಂಡವು ಚೇಸಿಂಗ್ ಮಾಡುವುದಾದರೆ, ಮೊಹಮ್ಮದ್ ಸಿರಾಜ್ ಬದಲಿಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಮಹಿಪಾಲ್ ಲೋಮ್ರರ್ ಅವರನ್ನು ಬಳಸಿಕೊಳ್ಳಲಿದೆ. ಏಕೆಂದರೆ ಕಳೆದ ಪಂದ್ಯದಲ್ಲಿ ಇಂಪ್ಯಾಕ್ಟ್ ಸಬ್ ಆಗಿ ಕಣಕ್ಕಿಳಿದ ಲೋಮ್ರರ್ ಭರ್ಜರಿ ಪ್ರದರ್ಶನ ನೀಡಿದ್ದರು. ಹೀಗಾಗಿ ಅವರನ್ನೇ ಈ ಬಾರಿ ಕೂಡ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಿಕೊಳ್ಳುವ ಸಾಧ್ಯತೆಯಿದೆ. ಇನ್ನು ಆರ್‌ಸಿಬಿ ಬ್ಯಾಟಿಂಗ್ ವಿಚಾರಕ್ಕೆ ಬಂದ್ರೆ, ವಿರಾಟ್ ಕೊಹ್ಲಿ ವಿರಾಟ ರೂಪ ತೋರಿಸಿದ್ರೆ, ದಿನೇಶ್ ಕಾರ್ತಿಕ್ ತನ್ನ ಬ್ಯಾಟಿಂಗ್‌ನ ಖದರ್ ತೋರಿಸಿದ್ದಾರೆ. ಆದ್ರೆ, ತ್ರಿಮೂರ್ತಿಗಳಲ್ಲಿ ಇರುವ ಒಬ್ಬರಾಗಿರುವ ಮ್ಯಾಕ್ಸಿ ಬ್ಯಾಟ್‌ನಲ್ಲಿ ಯಾಕೋ ರನ್ನೇ ಬರ್ತಿಲ್ಲ. ಕೆಜಿಎಫ್‌ ಸಿಡಿದ್ರೆ ಎದುರಾಳಿಗಳೇ ಇಲ್ಲ.. ಆದ್ರೆ ಗ್ಲೆನ್‌ ಬ್ಯಾಟಿಂಗ್‌ ಇನ್ನೂ ಅಬ್ಬರಿಸಿಲ್ಲ. ಬೌಲಿಂಗ್‌ನಲ್ಲಿ ಇನ್ನಷ್ಟು ಕರಾರುವಾಕ್‌ ಆಗಿ ಆರ್‌ಸಿಬಿ ಬೌಲಿಂಗ್‌ ಮಾಡಲೇಬೇಕಿದೆ.

ಮತ್ತೊಂದೆಡೆ ಕೆಕೆಆರ್ ಟೀಮ್ ಯಾರಿಗೂ ಕಮ್ಮಿಯಿಲ್ಲ. ಟೀಮ್‌ನಲ್ಲಿ ತ್ರಿಬಲ್ ಆರ್ ಶಕ್ತಿಗಳಿವೆ. ಈ ಆರ್‌ಆರ್‌ಆರ್‌ ಜೊತೆ ಮಿಚೆಲ್‌ ಸ್ಟಾರ್ಕ್‌ ಎಂಬ ವರ್ಲ್ಡ್‌ ಕ್ಲಾಸ್‌ ಬೌಲರ್‌ ಯಾವುದೇ ಕ್ಷಣದಲ್ಲಿ ಬೇಕಿದ್ದರೂ ಎದುರಾಳಿಗಳಿಗೆ ಅಪಾಯಕಾರಿ ಆಗಬಹುದು.. ಸ್ಪಿನ್‌ ವಿಭಾಗದಲ್ಲೂ ಕೆಕೆಆರ್‌ ಸ್ಟಾಂಗ್‌ ಟೀಂ.. ನರೈನ್‌ ತನ್ನ ನಾಲ್ಕು ಓವರ್‌ಗಳಲ್ಲಿ ಏನು ಮ್ಯಾಜಿಕ್‌ ಮಾಡ್ತಾರೆ ಅಂತ ಊಹಿಸೋದು ಕಷ್ಟವಿದೆ.. ಇನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಮುಜೀಬ್ ಉರ್ ರೆಹಮಾನ್ ಬದಲಿಗೆ 16 ವರ್ಷದ ಅಲ್ಲಾ ಮೊಹಮ್ಮದ್ ಘಜನ್‌ಫರ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಈ ಅಲ್ಲಾ ಮೊಹಮ್ಮದ್ ಘಜನ್‌ಫರ್ ಕೂಡ ಅಫ್ಘಾನಿಸ್ತಾನ ಕ್ರಿಕೆಟಿಗ.. ಇದುವರೆಗೆ 2 ಏಕದಿನ ಪಂದ್ಯಗಳಲ್ಲಿ ಅಫ್ಘಾನಿಸ್ತಾನ ತಂಡವನ್ನು ಪ್ರತಿನಿಧಿಸಿರುವ ಉದಯೋನ್ಮುಖ ಆಟಗಾರ.. ಈ ಬಾರಿ ಕೆಕೆಆರ್‌ನಲ್ಲಿ ಅವಕಾಶ ಸಿಕ್ಕಿರೋದ್ರಿಂದ ಯಂಗ್‌ ಪ್ಲೇಯರ್‌ಗೆ ಅದ್ಭುತ ಅವಕಾಶವೊಂದು ದೊರೆತಿದೆ..

ಈ ಕೆಕೆಆರ್‌ ಪಂದ್ಯದ ಫೈಟ್‌ ಕೇವಲ ಫೀಲ್ಡ್‌ನಲ್ಲಿ  ಮಾತ್ರ ನಡೆಯೋದಿಲ್ಲ.. ಅದಕ್ಕಿಂತ ದೊಡ್ಡ ಫೈಟ್‌ ಇನ್ನೊಂದಿದೆ.. ಅದೇ ಗಂಭೀರ್‌ ವರ್ಸಸ್‌ ಕೊಹ್ಲಿ ಫೈಟ್‌.. ಗೌತಮ್‌ ಗಂಭೀರ್‌ ಈ ಬಾರಿ ಕೆಕೆಆರ್‌ನ ಮೆಂಟರ್‌ ಆಗಿದ್ದಾರೆ.. ಹೀಗಾಗಿ ಗಂಭೀರ್‌ ಅವರನ್ನು ಉರಿಸೋದಿಕ್ಕೆ ಬೇಕಿರುವ ಪ್ರತಿಯೊಂದು ಅವಕಾಶವನ್ನೂ ಕೊಹ್ಲಿ ಬಳಸಿಕೊಳ್ಳೋದ್ರಲ್ಲಿ ಅನುಮಾನವೇ ಇಲ್ಲ. ಮ್ಯಾಚ್‌ ನಡೀತಿದ್ದರೂ ಡಗೌಟ್‌ನಲ್ಲಿ ಕುಳಿತಿರುವ ಗಂಭೀರ್‌ ಹಾಗೂ ಅದಕ್ಕೆ ರಿಯಾಕ್ಟ್‌ ಮಾಡುವ ಕೊಹ್ಲಿ ನಡುವೆಯೇ ಕ್ಯಾಮರಾ ಜಾಸ್ತಿ ಹೊತ್ತು ಫೋಕಸ್‌ ಆಗಬಹುದು.. ಗಂಭೀರ್‌ ಟೀಂಗೆ ಪಾಠ ಹೇಳೋದಿಕ್ಕೆ ಎಲ್ಲರಿಗಿಂತ ಜಾಸ್ತಿ ಕಾಯ್ತಿರೋದು ಕೊಹ್ಲಿ.. ಹೀಗಾಗಿ ಇಂದು ಆರ್‌ಸಿಬಿ ಫ್ಯಾನ್ಸ್‌ ಕಣ್ಣಿಗೆ ಕ್ರಿಕೆಟ್‌ ಹಬ್ಬ ಎದುರಾಗೋದ್ರ ಬಗ್ಗೆ ಡೌಟೇ ಬೇಡ..

Sulekha