14-6=1.. ಗುಡ್ ಬೈ KKR – ಗ್ರೀನ್ ಸಿಗ್ನಲ್ ಸಿಕ್ರೂ ಗೆಲ್ಲೋಕಾಗ್ತಿಲ್ವಾ?         
ಗುಜರಾತ್ ಗೆ ಗಿಲ್ ಗುಡ್ ನ್ಯೂಸ್   

14-6=1.. ಗುಡ್ ಬೈ KKR – ಗ್ರೀನ್ ಸಿಗ್ನಲ್ ಸಿಕ್ರೂ ಗೆಲ್ಲೋಕಾಗ್ತಿಲ್ವಾ?         ಗುಜರಾತ್ ಗೆ ಗಿಲ್ ಗುಡ್ ನ್ಯೂಸ್   

ಟಾಸ್ ಸೋತ್ರೂ ಅಷ್ಟೇ ಗೆದ್ರೂ ಅಷ್ಟೇ.. ಫಸ್ಟ್ ಚೇಸಿಂಗ್ ಮಾಡ್ತೀವಿ ಅಂದ್ರೂ ಅಷ್ಟೇ ಇಲ್ಲ ಡಿಫೆನ್ಸ್ ಮಾಡಿಕೊಳ್ತಿವಿ ಅಂದ್ರೂ ಅಷ್ಟೇ. ಎದುರಾಳಿ ತಂಡಗಳೂ ಚೇಂಜ್ ಆಗ್ತಿವೆ. ಆದ್ರೆ ಕೆಕೆಆರ್ ನಸೀಬು ಮಾತ್ರ ಬದ್ಲಾಗ್ತಿಲ್ಲ. ಸೋಲಿನ ಟ್ರ್ಯಾಕ್ ಬಿಟ್ಟು ಬರ್ತಿಲ್ಲ. ಈವರೆಗೆ ಒಂದೇ ಒಂದು ಪಂದ್ಯವನ್ನೂ ಗೆಲ್ಲೋಕಾಗ್ದೇ ಕೊನೇ ಸ್ಥಾನದಲ್ಲಿರೋ ಕೊಲ್ಕತ್ತಾ ಈಗ ಪ್ಲೇ ಆಫ್ ರೇಸ್​ನಿಂದಲೇ ಹೊರಬೀಳೋ ಸ್ಟೇಜ್​ನಲ್ಲಿದೆ.

ಇದನ್ನೂ ಓದಿ : ಇಂದು RCB VS DC ಬಿಗ್ ಫೈಟ್‌ – ಚಿನ್ನಸ್ವಾಮಿ ಕಡೆ ಹೋಗುವ ವಾಹನ ಸವಾರರೇ ಎಚ್ಚರ!

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ನಡೆದ ಗುಜರಾತ್ ವರ್ಸಸ್ ಕೆಕೆಆರ್ ನಡುವಿನ ಮ್ಯಾಚಲ್ಲಿ ಟಾಸ್ ಗೆದ್ದ ಕೊಲ್ಕತ್ತಾ ಫಸ್ಟ್ ಬ್ಯಾಟಿಂಗ್​ನೇ ಚೂಸ್ ಮಾಡಿಕೊಳ್ತು. ಬಟ್ ಬ್ಯಾಡ್​ಲನ್ ಬ್ಯಾಟರ್​ಗಳದ್ದು ಅದೇ ಪೆವಿಲಿಯನ್ ಪರೇಡ್. ಕ್ಯಾಮರೂನ್ ಗ್ರೀನ್ ಸಿಂಗಲ್ಲಾಗಿ ನಿಂತು ಇವತ್ತಾದ್ರೂ ಗೆಲ್ಲೋಣ ಅಂತಾ ಬಿಗ್ ಇನ್ನಿಂಗ್ಸ್ ಮೂಲಕ ಸಪೋರ್ಟ್ ಕೊಟ್ರೂ ಉಳಿದವರ್ಯಾರು ಇದಕ್ಕೆ ರೆಡಿ ಇರ್ಲಿಲ್ಲ. ಹೀಗಾಗಿ 20 ಓವರ್​ಗಳಲ್ಲಿ 180 ರನ್ಸ್ ಕಲೆ ಹಾಕಿ ಆಲೌಟ್ ಆದ್ರು. ಟಾರ್ಗೆಟ್ ಬೆನ್ನಟ್ಟಿದ ಜಿಟಿ ಪವರ್ ಪ್ಳೇನಲ್ಲೇ 70ಪ್ಲಸ್ ರನ್ಸ್ ಬಂತು. ಬಟ್ ಲಾಸ್ಟ್ ಓವರ್​ನಲ್ಲಿ ಮತ್ತೆ ಡ್ರಾಮಾ ಇತ್ತು. ಕೊನೆಯ ಓವರ್‌ನಲ್ಲಿ, ಗೆಲುವಿಗೆ ಐದು ರನ್‌ಗಳು ಬೇಕಾಗಿದ್ದಾಗ, ಗ್ಲೆನ್ ಫಿಲಿಪ್ಸ್ 16 ಎಸೆತಗಳಲ್ಲಿ 19 ರನ್‌ಗಳಿಗೆ ಔಟಾದರು. ಈ ಟೈಮಲ್ಲಿ ಕೆಕೆಆರ್​ಗೆ ಸಣ್ಣ ಹೋಪ್ಸ್ ಬಂದ್ರೂ ಕೂಡ ಶಾರುಖ್ ಖಾನ್ ಮತ್ತು ಟೆವಾಟಿಯಾ ಪಂದ್ಯವನ್ನ ಫಿನಿಶ್ ಮಾಡಿದ್ರು. ಇನ್ನು ಎರಡು ಬಾಲ್ ಇರುವಂತೆ ಗುಜರಾತ್ ವಿನ್ ಆಯ್ತು.

ಸೋಲಿನಲ್ಲೇ ಬಿದ್ದು ಒದ್ದಾಡ್ತಿದೆ ಕೆಕೆಆರ್!

ಫಸ್ಟ್ ಬ್ಯಾಟಿಂಗ್ ಗೆ ಬಂದ ಕೆಕೆಆರ್ ಬ್ಯಾಟರ್ಸ್ ಪೆವಿಲಿಯನ್ ಪರೇಡ್

ಸೈಫರ್ಟ್ 19 ರನ್ಸ್, ರಹಾನೆ, ಡಕ್, ರಘುವಂಶಿ 8 ರನ್ ಗಳಿಗೆ ಔಟ್

32 ರನ್ಸ್ ಆಗುವಷ್ಟ್ರಲ್ಲೇ 3 ವಿಕೆಟ್.. ಗ್ರೀನ್ ಏಕಾಂಗಿ ಹೋರಾಟ (79) ವ್ಯರ್ಥ

ರಿಂಕು ಸಿಂಗ್ 1, ಸುನಿಲ್ ನರೈನ್ 0.. ಕೈಕೊಟ್ಟ ಸ್ಟಾರ್ ಪ್ಲೇಯರ್ಸ್

ಗುಜರಾತ್ ಪರ ಶುಭ್ ಮನ್ ಗಿಲ್ 86 ರನ್ ಗಳಿಸಿ ಆರೆಂಜ್ ಕ್ಯಾಪ್ (251)

ಬೇರೆ ಬೇರೆ ತಂಡಗಳು ಸೋಲು ಗೆಲುವು ಅಂತಾ  ಕಾಣ್ತಿದ್ರೆ ಕೆಕೆಆರ್ ಮಾತ್ರ ಸೋಲಿನಲ್ಲೇ ಬಿದ್ದು ಒದ್ದಾಡ್ತಿದೆ. ಲೀಗ್ ಸ್ಟೇಜ್​ನಲ್ಲಿ ಟೋಟಲ್ 14 ಪಂದ್ಯಗಳ ಪೈಕಿ ಈಗ ಆಲ್ರೆಡಿ 6 ಮ್ಯಾಚಸ್ ಮುಗ್ದಿವೆ. ಇದ್ರಲ್ಲಿ ಕೆಕೆಆರ್ ಮಳೆ ಕಾರಣಕ್ಕೆ ಪಂದ್ಯ ರದ್ದಾಗಿ 1 ಅಂಕ ಸಿಕ್ಕಿದ್ದು ಬಿಟ್ರೆ ಉಳಿದ 5 ಪಂದ್ಯಗಳನ್ನ ಸೋತಿದೆ. ಸೋ ಉಳಿದಿರೋದು ಇನ್ನು 8 ಪಂದ್ಯ. ಎಂಟಕ್ಕೆ ಎಂಟೂ ಪಂದ್ಯ ಗೆದ್ರೆ ಮಾತ್ರವೇ ಪ್ಲೇಆಫ್ ರೇಸ್​ನಲ್ಲಿ ಇರ್ತಾರೆ. ಇಲ್ದೇ ಇದ್ರೇ ಟೂರ್ನಿಗೆ ಮೊದಲನೇ ತಂಡವಾಗಿ ಗುಡ್ ಬೈ ಹೇಳೋದು ಪಕ್ಕಾ ಆಗುತ್ತೆ.

Shantha Kumari