KLಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್ – ರಾಹುಲ್ ಗೆ KKR ಕ್ಯಾಪ್ಟನ್ಸಿ ಫಿಕ್ಸ್?
1 ಕಲ್ಲು.. 3 ಹಕ್ಕಿ.. ಶಾರುಖ್ ಖುಷ್!

ನವೆಂಬರ್ 15ರ ರಿಲೀಸ್ ಡೆಡ್ಲೈನ್.. ಡಿಸೆಂಬರ್ 15ರೊಳಗೆ ಮಿನಿ ಆಕ್ಷನ್.. 2026ರ ಐಪಿಎಲ್ಗೆ ಸಜ್ಜಾಗ್ತಿರೋ ಫ್ರಾಂಚೈಸಿಗಳು ನೆಕ್ಸ್ಟ್ ಸೀಸನ್ಗೆ ಸೂಪರ್ ಸ್ಟ್ರಾಂಗ್ ಆಗಿ ಕಮ್ ಬ್ಯಾಕ್ ಮಾಡೋ ಲೆಕ್ಕಾಚಾರ ನಡೀತಿದೆ. ಒಂದಷ್ಟು ಆಟಗಾರರ ಮೇಲೂ ಕಣ್ಣಿಟ್ಟಿದ್ದಾರೆ. ಅದ್ರಲ್ಲೂ ಕನ್ನಡಿಗ ಕೆಎಲ್ ರಾಹುಲ್ ಗಂತೂ ಡಿಮ್ಯಾಂಡಪ್ಪೋ ಡಿಮ್ಯಾಂಡ್. ಕೆಎಲ್ನ ಬಂದ್ರೆ ಒಂದೇ ಕಲ್ಲಲ್ಲಿ ಮೂರು ಹಕ್ಕಿ ಹೊಡೆಯೋ ಪ್ಲ್ಯಾನ್ ಅದು.
ಇದನ್ನೂ ಓದಿ : RCB ಫ್ರಾಂಚೈಸಿ ಸೇಲ್ ಸೇಲ್ – 17,587 ಕೋಟಿ ರೂ.. 6 ಕಂಪನಿ ರೇಸ್
19ನೇ ಸೀಸನ್ ಐಪಿಎಲ್ಗೆ ಉಳಿದಿರೋದೇ ಇನ್ನು ಐದು ತಿಂಗಳು. 2026ರ ಫೆಬ್ರವರಿಯಲ್ಲಿ ಟಿ-20 ವಿಶ್ವಕಪ್ ಬೇರೆ ಇರೋದ್ರಿಂದ ಐಪಿಎಲ್ ಆಡ್ದಂಗ್ ಬಂದ್ ಬಿಡುತ್ತೆ. ಸದ್ಯ ಟೀಂ ಇಂಡಿಯಾ ಸಾಲು ಸಾಲು ಸಿರೀಸ್ಗಳಲ್ಲಿ ಬ್ಯುಸಿಯಾಗಿದೆ. ಬ್ಯಾಕ್ ಟು ಬ್ಯಾಕ್ ಶೆಡ್ಯೂಲ್ ಇದೆ. ಇದ್ರ ನಡುವೆಯೇ ಮುಂದಿನ ಆವೃತ್ತಿಯ ಐಪಿಎಲ್ನ ಒಂದಷ್ಟು ಪ್ರೊಸೀಜರ್ಸ್ ಕೂಡ ನಡೀತಿದೆ. ಆಲ್ರೆಡಿ ಟ್ರೇಡ್ ವಿಂಡೋ ಓಪನ್ ಇದ್ರೂ ಇದುವರೆಗೂ ಯಾವುದೇ ತಂಡಗಳ ನಡುವೆ ಸ್ವ್ಯಾಪ್ ಡೀಲ್ ಆಗಿಲ್ಲ. ಅಥವಾ ಖರೀದಿನೂ ಮಾಡಿಲ್ಲ. ಸೋ ಮಿನಿ ಆಕ್ಷನ್ನಲ್ಲೇ ಬಿಡ್ ಮಾಡೋ ಗೇಮ್ ಪ್ಲ್ಯಾನ್ನಲ್ಲಿದ್ದಾರೆ. ಅದ್ರಲ್ಲೂ ಕೆಎಲ್ ರಾಹುಲ್ ಮೇಲೆ ಕೆಕೆಆರ್ ಟೀಂ ಕಣ್ಣಿಟ್ಟಿದೆ.
ರಾಹುಲ್ ಬಂದ್ರೆ ಓಪನರ್, ಕೀಪರ್ & ಕ್ಯಾಪ್ಟನ್ಸಿ!
ಸದ್ಯ ಟೀಂ ಇಂಡಿಯಾದಲ್ಲಿ ಕೆಎಲ್ ರಾಹುಲ್ ಟಿ-20 ಫಾರ್ಮೆಟ್ನಿಂದ ಹೊರ ಬಿದ್ದಿದ್ದಾರೆ. ಬಟ್ ಹೀಗಿದ್ರೂ ಐಪಿಎಲ್ನಲ್ಲಿ ಮಾತ್ರ ಫುಲ್ ಬೇಡಿಕೆಯಲ್ಲಿದ್ದಾರೆ. ಓಪನಿಂಗ್ ಬ್ಯಾಟ್ಸ್ಮನ್ ಆಗಿ, ವಿಕೆಟ್ ಕೀಪರ್ ಆಗಿ ಹಾಗೇ ಕ್ಯಾಪ್ಟನ್ ಆಗಿ ತಂಡವನ್ನು ಲೀಡ್ ಮಾಡಿರೋ ಅನುಭವವಿರೋ ರಾಹುಲ್ಗಾಗಿ ಸಾಕಷ್ಟು ಫ್ರಾಂಚೈಸಿಗಳು ಕಣ್ಣಿಟ್ಟಿವೆ. ಕಳೆದ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿಕೊಂಡಿದ್ದ ರಾಹುಲ್ ಕೇವಲ ಆಟಗಾರನಾಗಿ ಕಣಕ್ಕಿಳಿದಿದ್ರು. ಆದ್ರೀಗ ಮುಂಬರೋ ಸೀಸನ್ಗೆ ಕೆಕೆಆರ್ ಫ್ರಾಂಚೈಸಿ ರಾಹುಲ್ ರನ್ನ ಕರೆತರೋ ಪ್ಲ್ಯಾನ್ನಲ್ಲಿದೆ. ಶಾರುಖ್ ಖಾನ್ ಒಡೆತನದ ಕೆಕೆಆರ್ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದೆ ಅನ್ನೋ ಸುದ್ದಿ ಇದೆ. ಈಗಿರೋ ಮಾಹಿತಿ ಪ್ರಕಾರ ರಾಹುಲ್ರನ್ನು ತಂಡಕ್ಕೆ ಸೇರಿಸಿಕೊಳ್ಳುವುದು ಮಾತ್ರವಲ್ಲದೆ ಅವರಿಗೆ ತಂಡದ ನಾಯಕತ್ವ, ಆರಂಭಿಕನ ಜವಾಬ್ದಾರಿ ಮತ್ತು ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ವಹಿಸಲು ಕೆಕೆಆರ್ ಪ್ಲ್ಯಾನ್ ಮಾಡ್ಕೊಂಡಿದೆ.
ರಹಾನೆ ನಾಯಕತ್ವದಲ್ಲಿ ಶೈನ್ ಆಗದ ಶಾರುಖ್ ಟೀಂ!
ಅಷ್ಟಕ್ಕೂ ಕೆಕೆಆರ್ ತಂಡಕ್ಕೆ ಹೊಸ ಕ್ಯಾಪ್ಟನ್ನ ಅಗತ್ಯ ಇದ್ದೇ ಇದೆ. 2024ರಲ್ಲಿ ಚಾಂಪಿಯನ್ ಪಟ್ಟಕ್ಕೇರಿದ್ದ ಕೆಕೆಆರ್ ನ ಆ ಆವೃತ್ತಿಯಲ್ಲಿ ಶ್ರೇಯಸ್ ಅಯ್ಯರ್ ಲೀಡ್ ಮಾಡಿದ್ರು. ಆದ್ರೆ 2025ರ ಐಪಿಎಲ್ ಗೂ ಮುನ್ನ ಶ್ರೇಯಸ್ ಪಂಜಾಬ್ ತಂಡ ಸೇರ್ಕೊಂಡಿದ್ರು. ಹೀಗಾಗಿ ಕೆಕೆಆರ್ ಅಜಿಂಕ್ಯ ರಹಾನೆ ಅವರನ್ನು ನಾಯಕನನ್ನಾಗಿ ನೇಮಿಸಿತು. ಆದರೆ ರಹಾನೆ ನಾಯಕತ್ವದಲ್ಲಿ ಕೆಕೆಆರ್ ಪ್ರದರ್ಶನ ತೀರ ಕಳಪೆಯಾಗಿತ್ತು. ತಂಡಕ್ಕೆ ಪ್ಲೇಆಫ್ ತಲುಪಲು ಸಾಧ್ಯವಾಗಲಿಲ್ಲ. ಹೀಗಾಗಿ ಮುಂದಿನ ಸೀಸನ್ನಲ್ಲಿ ರಹಾನೆ ನಾಯಕತ್ವ ಎಂಡ್ ಆಗಬಹುದು. ಸೋ ರಹಾನೆ ಬದಲಿಗೆ ರಾಹುಲ್ಗೆ ಪಟ್ಟಕಟ್ಟೋ ಪ್ಲ್ಯಾನ್ ನಡೀತಿದೆ.
ವೆಂಕಟೇಶ್ ಅಯ್ಯರ್ ನ ರಿಲೀಸ್ ಮಾಡಲು ಕೊಲ್ಕತ್ತಾ ಪ್ಲ್ಯಾನ್!
ಕಳೆದ ಸೀಸನ್ ನಲ್ಲಿ ಕೆಕೆಆರ್ ತಂಡ ಆ ಮಟ್ಟಿಗೆ ಫ್ಲ್ಯಾಪ್ ಶೋ ತೋರಿಸೋಕೆ ಕಾರಣವೇ ವೆಂಕಟೇಶ್ ಅಯ್ಯರ್. ಕಳೆದ ಮೆಗಾ ಹರಾಜಿನಲ್ಲಿ ಬರೋಬ್ಬರಿ 23.75 ಕೋಟಿ ರೂ.ಗೆ ಖರೀದಿ ಮಾಡಿತ್ತು. ಬಟ್ ಕೊಟ್ಟ ಹಣಕ್ಕೂ ಪರ್ಫಾಮೆನ್ಸ್ಗೂ ತಾಳೆನೆ ಆಗಿರ್ಲಿಲ್ಲ. ಕೆಕೆಆರ್ ಪರ ಕಳೆದ ಸೀಸನ್ನಲ್ಲಿ ಕೇವಲ 142 ರನ್ ಅಷ್ಟೇ ಕಲೆ ಹಾಕಿದ್ರು. ಹೀಗಾಗಿ ದುಬಾರಿ ಮೊತ್ತದ ವೆಂಕಿಯನ್ನ ಕೆಕೆಆರ್ ರಿಲೀಸ್ ಮಾಡಿದ್ರೆ 23ಕೋಟಿ ಸೇವಿಂಗ್ಸ್ ಆಗುತ್ತೆ. ಆಗ ಈ ಹಣವನ್ನ ಬೇರೊಬ್ಬ ಸ್ಟಾರ್ ಪ್ಲೇಯರ್ ಮೇಲೆ ಬಿಡ್ ಮಾಡಬಹುದು. ಇದೇ ಕಾರಣಕ್ಕೆ ರಾಹುಲ್ ಮೇಲೆ ಕಣ್ಣಿಟ್ಟಿದ್ದಾರೆ. ಕೆಎಲ್ ರಾಹುಲ್ ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದಾರೆ. ಕಳೆದ ವರ್ಷ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ 14 ಕೋಟಿಗೆ ಖರೀದಿಸಿತ್ತು. ಕಳೆದ ಸೀಸನ್ನಲ್ಲಿ ರಾಹುಲ್ ಒಂದು ಶತಕ ಮತ್ತು ಮೂರು ಅರ್ಧಶತಕಗಳು ಸೇರಿದಂತೆ ಸುಮಾರು 54 ಸರಾಸರಿಯಲ್ಲಿ 539 ರನ್ ಗಳಿಸಿದ್ದರು. ಸೋ ರಾಹುಲ್ ಕೆಕೆಆರ್ ಸೇರಿದ್ರೆ ಕ್ಯಾಪ್ಟನ್ಸಿ ಫಿಕ್ಸ್ ಆಗುತ್ತೆ.
ಕೆಎಲ್ ರಾಹುಲ್ ದೆಹಲಿ ತಂಡವನ್ನು ಬಿಡ್ತಾರೋ ಇಲ್ವೋ ಅನ್ನೋದು ಇನ್ನೂ ಕನ್ಫರ್ಮ್ ಆಗಿಲ್ಲ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯಿಂದ ರಾಹುಲ್ ಹೊರಬರಬಹುದು ಅನ್ನೋ ಟಾಕ್ ಇದೆ. ಹಾಗೇನಾದ್ರೂ ಬಂದ್ರೆ ಕೆಕೆಆರ್ ಟೀಂ ಗಾಳ ಹಾಕಬಹುದು. ರಾಹುಲ್ ಕೆಕೆಆರ್ ಸೇರಿದ್ರೆ ಕ್ಯಾಪ್ಟನ್ ಆಗೋದಂತೂ ಗ್ಯಾರಂಟಿ. ಯಾಕಂದ್ರೆ ರಾಹುಲ್ ನಿಜಕ್ಕೂ ಟ್ಯಾಲೆಂಟೆಂಡ್ ಪ್ಲೇಯರ್ ಌಂಡ್ ಆಲ್ ರೌಂಡ್ ಆಟಗಾರ.

ನೋಡಿರಿ

