KKRನಲ್ಲಿ RRR ಮಿಸ್ಸಿಂಗ್ – ಡಿಫೆನ್ಸ್ ನಲ್ಲೇ ಕಿಶನ್ ಫಸ್ಟ್ ವಿಕ್ಟರಿ!
ಖದರ್ ಕಳ್ಕೊಂಡ್ರಾ ರಿಂಕು ಸಿಂಗ್?

KKRನಲ್ಲಿ RRR ಮಿಸ್ಸಿಂಗ್ – ಡಿಫೆನ್ಸ್ ನಲ್ಲೇ ಕಿಶನ್ ಫಸ್ಟ್ ವಿಕ್ಟರಿ!ಖದರ್ ಕಳ್ಕೊಂಡ್ರಾ ರಿಂಕು ಸಿಂಗ್?

ಫೈನಲಿ ಈ ಬಾರಿಯ ಐಪಿಎನಲ್ಲಿ ತಂಡವೊಂದು ಫಸ್ಟ್ ಬ್ಯಾಟಿಂಗ್ ಮಾಡಿ ತಮ್ಮ ಸ್ಕೋರ್ ಡಿಫೆನ್ಸ್ ಮಾಡಿಕೊಂಡು ಗೆದ್ದಿದೆ.  ಮೊದಲ ಐದು ಪಂದ್ಯಗಳಲ್ಲಿ ಚೇಸಿಂಗ್ ತಂಡಗಳೇ ವಿನ್ ಆಗಿದ್ವು. ಈಗ ಕೆಕೆಆರ್ ವಿರುದ್ದ ಹೈದ್ರಾಬಾದ್ ತಂಡ ಡಿಫೆನ್ಸ್ ಮಾಡಿಕೊಂಡು ವಿನ್ ಆಗಿದೆ. ಬ್ಯಾಕ್ ಟು ಬ್ಯಾಕ್ ಸೋತಿರೋ ಕೊಲ್ಕತ್ತಾ ವೀಕ್​ನೆಸ್ ರಿವೀಲ್ ಆಗಿದೆ. ಕೆಕೆಆರ್​​ನಲ್ಲಿ ತ್ರಿಬ್ಬಲ್ ಆರ್ ಮಿಸ್ಸಿಂಗ್ ಎದ್ದು ಕಾಣ್ತಿದೆ.

ಇದನ್ನೂ ಓದಿ : KKR ಸೋಲಿಸಿ ಗೆಲುವಿನ ಖಾತೆ ತೆರೆದ ಸನ್‌ರೈಸರ್ಸ್‌ ಹೈದರಾಬಾದ್‌

ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಟಾಸ್ ಸೋತು ಪಸ್ಟ್ ಬ್ಯಾಟಿಂಗ್ ಮಾಡ್ತು. ಅಭಿಷೇಕ್ ಮತ್ತು ಟ್ರಾವಿಸ್ ಹೆಡ್ ಅದ್ಭುತ ಓಪನಿಂಗ್ ಬಂತು. ಌಂಡ್ ಕ್ಲಾಸೆನ್, ನಿತೀಶ್ ರೆಡ್ಡಿ ಆಲ್​ರೌಂಡ್ ಪ್ರದರ್ಶನದಿಂದ 226 ರನ್ ಗಳಿಸಿ ಬಿಗ್ ಟಾರ್ಗೆಟ್ ಸೆಟ್ ಮಾಡಿದ್ರು. ಆದ್ರೆ ಟಾರ್ಗೆಟ್ ಬೆನ್ನಟ್ಟಿದ ಕೆಕೆಆರ್ ಬಿಗ್ ಮಾರ್ಜಿನ್​ನಿಂದ ಸೋಲಬೇಕಾಯ್ತು.

ಹೈದ್ರಾಬಾದ್ ಬೊಂಬಾಟ್ ಆಟ!

ಟಾಸ್ ಗೆದ್ದು ಬೌಲಿಂಗ್ ನಲ್ಲಿ ದುಬಾರಿಯಾದ ಕೆಕೆಆರ್ 226 ರನ್ಸ್

ಪವರ್ ಪ್ಲೇ ನಲ್ಲೇ ಹೆಡ್ & ಅಭಿಷೇಕ್ ಪವರ್ ಗೆ 80+ ರನ್ಸ್

ನಿತೀಶ್ ರೆಡ್ಡಿ ಬ್ಯಾಟ್ (39) ಮತ್ತು ಬಾಲ್ (2)ನಲ್ಲೂ ಇಂಪ್ಯಾಕ್ಟ್

ಟಾರ್ಗೆಟ್ ಬೆನ್ನಟ್ಟಿದ ಕೆಕೆಆರ್ ಗೆ ಫಿನ್ ಅಲೆನ್ ಸೂಪರ್ ಸ್ಟಾರ್ಟ್

ರಘುವಂಶಿ ಅಗ್ರೆಸ್ಸಿವ್ ಆಗ್ತಿದ್ರೂ ರನ್ ಔಟ್, ಗ್ರೀನ್ ರನ್ ಔಟ್

ಪವರ್ ಹಿಟ್ಟರ್ ಸುನಿಲ್ ನರೈನ್ 8ನೇ ಸ್ಲಾಟ್ ನಲ್ಲಿ ಬ್ಯಾಟಿಂಗ್

ಬಿಗ್ ಪಾರ್ಟ್ನರ್ ಶಿಪ್ ಇಲ್ಲದೆ 65 ರನ್ ಗಳಿಂದ ಸೋತ ಕೆಕೆಆರ್

ಹೀಗೆ ಕೆಕೆಆರ್ ತನ್ನದೇ ಮಿಸ್ಟೇಕ್ಸ್​​ಗಳಿಂದ ಸೋತಿದೆ. ಅಲ್ದೇ ಈ ಸಲ ಐಪಿಎಲ್ ಆರಂಭಕ್ಕೂ ಮೊದ್ಲೇ ಸಾಕಷ್ಟು ಸೆಟ್​ಬ್ಯಾಕ್ ಆಗಿದೆ. ಮುಸ್ತಫಿಜುರ್ ರೆಹಮಾನ್​ರನ್ನ ಕೈಬಿಟ್ರು. ನಿತೀಶ್ ರಾಣಾ ರೂಲ್ಡ್ ಔಟ್ ಹಾಗೇ ಆಕಾಶ್ ದೀಪ್ ಕೂಡ ರೂಲ್ಡ್ ಔಟ್ ಆದ್ರು. ಹೀಗೆ ಬೌಲಿಂಗ್ ವಿಭಾಗ ಕಂಪ್ಲೀಟ್ ಫೇಲ್ ಆಗಿದೆ. ಇದೇ ಕಾರಣಕ್ಕೆ ಮುಂಬೈ ವಿರುದ್ಧದ ಮೊದಲ ಮ್ಯಾಚಲ್ಲಿ 220 ರನ್ಸ್ ಹೊಡೆದ್ರೂ ಡಿಫೆನ್ಸ್ ಮಾಡಿಕೊಳ್ಳೋಕೆ ಆಗ್ಲಿಲ್ಲ. ಈಗ ಹೈದ್ರಾಬಾದ್ ವಿರುದ್ಧ ಕೂಡ 226 ರನ್ಸ್ ಹೊಡೆಸಿಕೊಂಡಿದ್ದಾರೆ. ಌಂಡ್ ಇಲ್ಲಿ ತ್ರಿಬಲ್ R ಟ್ರಬಲ್ ಕಾಣ್ತಿದೆ.

ರಸೆಲ್ ಮತ್ತು ರಾಣಾ ಇಲ್ಲ.. ರಿಂಕು ಖದರ್ ಮಿಸ್ಸಿಂಗ್!

ಕೆಕೆಆರ್​ನ ಮ್ಯಾಚ್ ವಿನ್ನಿಂಗ್ ಜೋಡಿಯೇ ತ್ರಿಬಲ್ ಆರ್. ಮೊದಲೇನಾಗಿ ಌಂಡ್ರೆ ರಸೆಲ್. ಬ್ಯಾಟ್ ಮತ್ತು ಬಾಲ್ ಎರಡ್ರಲ್ಲೂ ಬೆಸ್ಟ್. ಕ್ರೂಶಿಯಲ್ ಟೈಮಲ್ಲಿ ಬ್ರೇಕ್ ಥ್ರ್ಯೂ ತಂದುಕೊಡ್ತಿದ್ರು. ಆದ್ರೆ 2026ರ ಐಪಿಎಲ್​ಗೂ ಮುನ್ನ ರಿಟೈರ್​ಮೆಂಟ್ ತಗೊಂಡ್ರು. ಇನ್ನು ಬೌಲಿಂಗ್ ಟೀಂ ಸ್ಟ್ರೆಂಥ್ ಆಗಿದ್ದ ನಿತೀಶ್ ರಾಣಾ ಇಂಜುರಿಯಿಂದ ರೂಲ್ಡ್ ಔಟ್.. ಇತ್ತ ಫಿನಿಶರ್ ರಿಂಕು ಸಿಂಗ್ ಖದರ್ ಕಾಣ್ತಿಲ್ಲ. ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ಬರ್ತಿಲ್ಲ. ಸೋ ಇದನ್ನೆಲ್ಲಾ ನೋಡ್ದಾಗ ಕೆಕೆಆರ್ ಈ ಸಲ ಕಂ ಬ್ಯಾಕ್ ಮಾಡೋದು ಚಾಲೆಂಜಿಂಗ್ ಆಗಿದೆ. ಮತ್ತೊಂದೆಡೆ ಇಶಾನ್ ಕಿಶನ್ ಕ್ಯಾಪ್ಟನ್ಸಿಯಲ್ಲಿ ಮೊದಲ ಗೆಲುವು ಸಾಧಿಸಿದ್ದಾರೆ.

Shantha Kumari