ಕೆಕೆಆರ್ ಮಣಿಸಲು ರೆಡಿಯಾದ ಡಿಸಿ – ಹ್ಯಾಟ್ರಿಕ್ ಗೆಲುವಿನ ಕನವರಿಕೆಯಲ್ಲಿ ಕೆಕೆಆರ್

ಕೆಕೆಆರ್ ಮಣಿಸಲು ರೆಡಿಯಾದ ಡಿಸಿ – ಹ್ಯಾಟ್ರಿಕ್ ಗೆಲುವಿನ ಕನವರಿಕೆಯಲ್ಲಿ ಕೆಕೆಆರ್

ಬಲಿಷ್ಠ ಸಿಎಸ್‌ಕೆ ತಂಡವನ್ನು ಬಗ್ಗು ಬಡಿದಿರುವ ಜೋಶ್‌ನಲ್ಲಿದೆ ಡೆಲ್ಲಿ ಕ್ಯಾಪಿಟಲ್ಸ್. ಇದೀಗ ಇದೇ ಉತ್ಸಾಹದಲ್ಲಿ ಮತ್ತೊಂದು ಸ್ಟ್ರಾಂಗ್ ಟೀಮ್ ಕೊಲ್ಕೋತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣಸಾಡಲಿದೆ. ಭರ್ಜರಿ ಕಮ್‌ಬ್ಯಾಕ್ ಮಾಡಿರುವ ಡಿಸಿ ಕ್ಯಾಪ್ಟನ್ ರಿಷಭ್ ಪಂತ್ ಆತ್ಮವಿಶ್ವಾಸದಿಂದ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

ಇದನ್ನೂ ಓದಿ:ತವರಿನಲ್ಲೇ ಆರ್​ಸಿಬಿಗೆ ಹೀನಾಯ ಸೋಲು – ಲಕ್ನೋ ಸೂಪರ್​ ಜೈಂಟ್ಸ್​ಗೆ 28 ರನ್‌ಗಳ ಸೂಪರ್‌ ಜಯ

ಡಿಸಿ ಆರಂಭಿಕ ಬ್ಯಾಟರ್‌ಗಳಾದ ಪೃಥ್ವಿಶಾ ಮತ್ತು ಎಕ್ಸ್‌ಪೀರಿಯನ್ಸ್ ಬ್ಯಾಟರ್ ಡೇವಿಡ್ ವಾರ್ನರ್ ಸಿಎಸ್‌ಕೆ ಎದುರು ಅಬ್ಬರಿಸಿ ಗೆಲುವಿನ ರೂವಾರಿಯಾಗಿದ್ದರು. ಕೆಕೆಆರ್ ಎದುರು ಕೂಡಾ ಇದೇ ರೀತಿ ಅಬ್ಬರದ ಬ್ಯಾಟಿಂಗ್ ಮುಂದುವರಿಸೋ ನಿರೀಕ್ಷೆಯಲ್ಲಿದ್ದಾರೆ. ಸಕಾಲದಲ್ಲಿ ಸೂಪರ್ ಆಗಿಯೇ ಬ್ಯಾಟ್ ಮಾಡುವ ರಿಷಭ್ ಪಂತ್ ಕೂಡಾ ತಂಡದ ಬೆನ್ನೆಲುಬು.

ಎರಡು ಪಂದ್ಯಗಳಲ್ಲಿ ಜಯದ ಪತಾಕೆ ಹಾರಿಸಿರುವ ಕೊಲ್ಕೊತ್ತಾ ನೈಟರ್ ರೈಡರ್ಸ್, ಡಿಸಿ ಎದುರು ಗೆದ್ದು ಹ್ಯಾಟ್ರಿಕ್ ಜಯದ ಕನವರಿಕೆಯಲ್ಲಿದೆ. ಕೆಕೆಆರ್ ಟೀಮ್‌ನಲ್ಲಿ ತ್ರಿಬಲ್ ಆರ್ ಸೆಂಟರ್ ಆಫ್ ಅಟ್ರಾಕ್ಷನ್. ಜೊತೆಗೆ ಟೀಮ್‌ನ ಸ್ಟ್ರೆಂತ್ ಕೂಡಾ ಇದೇ ತ್ರಿಬಲ್ ಆರ್ ಗಳು. ರಸ್ಸೆಲ್, ರಾಣಾ, ರಿಂಕು ಸಿಂಗ್ ಇದ್ದಲ್ಲಿ ಸೋಲಿನ ಮಾತೆಲ್ಲಿ ಎಂಬಂತೆ ಕೆಕೆಆರ್ ಗೆಲುವಿನ ಓಟ ಮುಂದುವರೆಸುವ ವಿಶ್ವಾಸದಲ್ಲಿದೆ. ಬ್ಯಾಟಿಂಗ್‌ನಲ್ಲೂ ಆರಂಭಿಕರಾದ ಫಿಲ್ ಸಾಲ್ಟ್, ಸುನಿಲ್ ನರೈನ್, ವೆಂಕಟೇಶ್ ಅಯ್ಯರ್ ಕೂಡಾ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಟೀಮ್ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಕೂಡಾ ಭರ್ಜರಿ ಫಾರ್ಮ್‌ನಲ್ಲಿರುವುದು ಕೆಕೆಆರ್ ಟೀಮ್‌ ಡಿಸಿ ಎದುರು ಅಬ್ಬರದ ಹೋರಾಟ ಮಾಡುವ ನಿರೀಕ್ಷೆಯಿದೆ.

ಐಪಿಎಲ್ ಇತಿಹಾಸದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಒಟ್ಟು 32 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಕೆಕೆಆರ್ ತಂಡವು ಅಲ್ಪ ಮುನ್ನಡೆ ಸಾಧಿಸಿದೆ. ಕೆಕೆಆರ್ ತಂಡವು 16 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವು 15 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ.

 

Sulekha