ಮುಂಬೈ ವಿರುದ್ಧ ಕೆಕೆಆರ್ ಗೆ 24 ರನ್‌ಗಳ ಜಯ – ಎರಡನೇ ಸ್ಥಾನಕ್ಕೆ ಜಿಗಿದ ಕೋಲ್ಕತ್ತಾ

ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಕೆಕೆಆರ್ ಭರ್ಜರಿ ಜಯ ಸಾಧಿಸಿದೆ. ಕೋಲ್ಕತ್ತಾ 24 ರನ್‌ಗಳ ಮೂಲಕ ಗೆದ್ದು ಬೀಗಿದೆ.
ಇದನ್ನೂ ಓದಿ: ರಕ್ತವನ್ನೇ ಹೆಪ್ಪುಗಟ್ಟಿಸುತ್ತಾ ಕೊವಿಶೀಲ್ಡ್? – ಲಸಿಕೆ ಪಡೆದಿದ್ದ ಅಪ್ಪು.. ಭವಿಷ್ಯ ನಿಜವಾಯ್ತಾ?
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ 19.5 ಓವರ್‌ಗಳಲ್ಲಿ 169 ರನ್ ಗಳಿಗೆ ಆಲೌಟ್ ಆಯ್ತು. ಈ ಮೊತ್ತವನ್ನು ಬೆನ್ನಟ್ಟಿದ ಮುಂಬೈ 18.5 ಓವರ್‌ಗಳಲ್ಲಿ 145 ರನ್‌ಗಳಿಗೆ ಆಲೌಟ್ ಆಯ್ತು. ಈ ಗೆಲುವಿನೊಂದಿಗೆ ಕೋಲ್ಕತ್ತಾ 14 ಅಂಕಗಳಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದೆ.
ಮುಂಬೈ ಪರ ಸೂರ್ಯಕುಮಾರ್ ಯಾದವ್ 56 ರನ್(35 ಎಸೆತ, 6 ಬೌಂಡರಿ, 2 ಸಿಕ್ಸರ್) ಟೀಮ್ ಡೇವಿಡ್ 24 ರನ್ (20 ಎಸೆತ, 1 ಬೌಂಡರಿ, 1 ಸಿಕ್ಸ್ ) ಹೊಡೆದು ಔಟಾದರು.
ಕೋಲ್ಕತ್ತಾ ಪರ ಸ್ಟಾರ್ಕ್ 33 ರನ್ ನೀಡಿ 4 ವಿಕೆಟ್ ಪಡೆದರೆ ವರುಣ್ ಚಕ್ರವರ್ತಿ, ಸುನಿಲ್ ನರೈನ್, ರಸೆಲ್ ತಲಾ 2 ವಿಕೆಟ್ ಪಡೆದರು.
ಕೋಲ್ಕತ್ತಾ ಪರ ವೆಂಕಟೇಶ್ ಅಯ್ಯರ್ 70 ರನ್ (52 ಎಸೆತ, 6 ಬೌಂಡರಿ, 3 ಸಿಕ್ಸರ್), ಮನೀಷ್ ಪಾಂಡೆ 42 ರನ್(31 ಎಸೆತ, 2 ಬೌಂಡರಿ, 2 ಸಿಕ್ಸರ್) ಸಿಡಿಸಿ ಔಟಾದರು.