ಡಿಸಿಗೆ ಕೆಕೆಆರ್ ಸವಾಲ್ – ತವರಿನಲ್ಲಿ ಪಂತ್‌ಗೆ ಸೋಲುಣಿಸಲು ಕಾಯ್ತಿದೆ ಕೆಕೆಆರ್ ಟೀಮ್

ಡಿಸಿಗೆ ಕೆಕೆಆರ್ ಸವಾಲ್ – ತವರಿನಲ್ಲಿ ಪಂತ್‌ಗೆ ಸೋಲುಣಿಸಲು ಕಾಯ್ತಿದೆ ಕೆಕೆಆರ್ ಟೀಮ್

ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ ಕಮ್ ಬ್ಯಾಕ್ ಮಾಡಿದೆ. ಇವತ್ತು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸೆಣಸಾಡಲಿದೆ. ಜೇಕ್ ಪ್ರೇಸರ್ ಸ್ಫೋಟಕ ಆಟ ಡೆಲ್ಲಿಯ ಕಮ್‌ಬ್ಯಾಕ್‌ಗೆ ಪ್ರಮುಖ ಕಾರಣ. 2 ಪಂದ್ಯಗಳಲ್ಲಿ ತಲಾ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿರುವ 22ರ ಆಸೀಸ್ ಆಟಗಾರ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಜೊತೆಗೆ ಕ್ಯಾಪ್ಟನ್ ಪಂತ್, ಟ್ರಿಸ್ಟನ್ ಸ್ಟಲ್ಸ್ ಕೂಡಾ ಸ್ಟ್ರಾಂಗ್ ಆಗಿಯೇ ಬ್ಯಾಟ್ ಬೀಸುತ್ತಿದ್ದಾರೆ. ಇದು ಡಿಸಿ ಟೀಮ್‌ನ ಪ್ಲಸ್ ಪಾಯಿಂಟ್. ಆದ್ರೆ, ಬೌಲಿಂಗ್ ವಿಭಾಗ ಹಿಡಿತ ಕಳೆದುಕೊಂಡಿರೋದು ತಂಡಕ್ಕೆ ತಲೆನೋವಾಗಿದೆ.

ಇದನ್ನೂ ಓದಿ: ಗುಜರಾತ್ ಟೈಟಾನ್ಸ್‌ ಗೆ ರೋಚಕ ಸೋಲು – – 9 ವಿಕೆಟ್ ಗಳಿಂದ ಗೆದ್ದು ಬೀಗಿದ ಆರ್ ಸಿಬಿ!

ಆರಂಭಿಕ ಹಂತದಲ್ಲಿ ಸತತ ಸೋಲಿಗೆ ತುತ್ತಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ಇದೀಗ ಬಲಿಷ್ಠ ತಂಡಗಳಿಗೆ ಸೋಲುಣಿಸುವ ಮೂಲಕ ಅಂಕಪಟ್ಟಿಯಲ್ಲಿ ಮೇಲೇರಿದೆ. ಇತ್ತ ಆರಂಭಿಕ ಪಂದ್ಯಗಳಲ್ಲಿ ಸತತವಾಗಿ ಗೆದ್ದು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದ ಕೆಕೆಆರ್​ ಆ ಬಳಿಕ ಸೋಲಿನ ಹಾದಿ ಹಿಡಿದಿದೆ. ಕೆಕೆಆರ್ ತಂಡದಲ್ಲಿ ಸುನಿಲ್ ನರೈನ್ ಬಿಟ್ಟರೆ ಬ್ಯಾಟರ್ ಗಳು ಡಲ್ ಆಗಿದ್ದಾರೆ. ಅದರಲ್ಲೂ ತವರಿನಲ್ಲಿ ಬ್ಯಾಕ್ ಟು ಬ್ಯಾಕ್ ಸೋಲು ಕೆಕೆಆರ್‌ ನ ಹತಾಶೆಗೂ ಕಾರಣವಾಗಿದೆ. ಇವತ್ತು ಡಿಸಿ ಎದುರು ಸೋಲಿನ ಸರಪಳಿ ಕಳಚಿಕೊಳ್ಳುತ್ತಾ ಅನ್ನೋ ಕುತೂಹಲ ಫ್ಯಾನ್ಸ್‌ಗೂ ಇದೆ.

ಸಂಭವನೀಯ ಆಟಗಾರರ ಪಟ್ಟಿ

ಕೋಲ್ಕತಾ ನೈಟ್ ರೈಡರ್ಸ್: ಫಿಲ್ ಸಾಲ್ಟ್, ಸುನಿಲ್ ನರೈನ್, ಅಂಗಕೃಷ್ ರಘುವಂಶಿ, ವೆಂಕಟೇಶ್‌ ಅಯ್ಯರ್, ಶ್ರೇಯಸ್ ಅಯ್ಯರ್(ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣ್‌ ದೀಪ್, ಚಮೀರ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ

ಡೆಲ್ಲಿ ಕ್ಯಾಪಿಟಲ್ಸ್: ಪ್ರೇಸರ್, ಅಭಿಷೇಕ್ ಪೋರೆಲ್, ಶಾಯ್ ಹೋಪ್, ರಿಷಭ್ ಪಂತ್(ನಾಯಕ), ಟ್ರಿಸ್ಟಿನ್ ಸ್ಟಬ್ಸ್, ಅಕ್ಷರ್ ಪಟೇಲ್, ಕುಮಾರ್ ಕುಶಾಗ್ರ, ಕುಲ್ದೀಪ್ ಯಾದವ್, ಲಿಜಾರ್ಡ್ ವಿಲಿಯಮ್ಸ್, ಮುಕೇಶ್ ಕುಮಾರ್, ಖಲೀಲ್ ಅಹಮದ್.

Sulekha