ಮೊದಲ ಗೆಲುವಿನ ಉತ್ಸಾಹದಲ್ಲಿದ್ದ ಚೆನ್ನೈಗೆ ಕೆಕೆಆರ್ ಸವಾಲ್ – ಸೋಲಿನ ಸುಳಿಯಿಂದ ಹೊರಬರುತ್ತಾ ನೈಟ್ ರೈಡರ್ಸ್

ಮೊದಲ ಗೆಲುವಿನ ಉತ್ಸಾಹದಲ್ಲಿದ್ದ ಚೆನ್ನೈಗೆ ಕೆಕೆಆರ್ ಸವಾಲ್ – ಸೋಲಿನ ಸುಳಿಯಿಂದ ಹೊರಬರುತ್ತಾ ನೈಟ್ ರೈಡರ್ಸ್

ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಗೆಲುವು ಕಂಡಿರುವ ಉತ್ಸಾಹದಲ್ಲಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ಸೋಲಿನ ಸುಳಿಯಲ್ಲಿ ಒದ್ದಾಡುತ್ತಿದೆ. ಮಂಗಳವಾರ ರಾತ್ರಿ (ಏಪ್ರಿಲ್ 14)  ಕೊನೇ ಎರಡು ಸ್ಥಾನಗಳಲ್ಲಿರುವ ತಂಡಗಳ ನಡುವೆ ಸೆಣಸಾಟ ನಡೆಯಲಿದೆ.

ಇದನ್ನೂ ಓದಿ:ಅಂಪೈರ್ ಸತಾಯಿಸಿ, ಸತಾಯಿಸಿ ಚೆಂಡಾಟ – RCB ಟಿಮ್ ಡೇವಿಡ್‌ಗೆ ಬಿತ್ತು ಭಾರಿ ದಂಡ

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸಿಎಸ್‌ಕೆ ಈ ಸೀಸನ್‌ನ ಮೊದಲ ಗೆಲುವು ದಾಖಲಿಸಿತ್ತು. ಈ ಪಂದ್ಯದಲ್ಲಿ ಬ್ಯಾಟಿಂಗ್​, ಬೌಲಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿತು. ಚೆನ್ನೈ ಪರ ಬ್ಯಾಟಿಂಗ್ ವಿಭಾಗದಲ್ಲಿ ಸಂಜು ಸ್ಯಾಮ್ಸನ್ , ಶಿವಂ ದುಬೆ, ಸರ್ಫರಾಜ್ ಖಾನ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಆಯುಷ್ ಮ್ಹಾತ್ರೆ 133 ರನ್‌ಗಳೊಂದಿಗೆ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಮತ್ತೊಂದೆಡೆ ಡಿಸಿ ವಿರುದ್ಧ ಚೆನ್ನೈ ಆಟಗಾರರು ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ್ದಾರೆ. ಅನ್ಶುಲ್ ಕಾಂಬೋಜ್, ಜೇಮೀ ಓವರ್ಟನ್  ಉತ್ತಮ ಫಾರ್ಮ್‌ನಲ್ಲಿದ್ದಾರೆ.

ಮತ್ತೊಂದೆಡೆ ಕೆಕೆಆರ್​ ತಂಡದ ಪ್ರದರ್ಶನ ಕೂಡಾ ಚೆನ್ನೈಗಿಂತ ಭಿನ್ನವಾಗಿಲ್ಲ. ಅಂಗ್‌ಕ್ರಿಶ್ ರಘುವಂಶಿ ಬ್ಯಾಟಿಂಗ್ ಲೈನ್ಅಪ್ ಚೆನ್ನಾಗಿದೆ. ವೈಭವ್ ಅರೋರಾ ನಾಲ್ಕು ಪಂದ್ಯಗಳಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇವರಿಬ್ಬರನ್ನು ಬಿಟ್ಟರೆ ಉಳಿದ ಆಟಗಾರರು ಇನ್ನೂ ಕೂಡಾ ಫಾರ್ಮ್‌ಗೆ ಬಂದಿಲ್ಲ. ಹೀಗಾಗಿ ಕೆಕೆಆರ್ ತಂಡ ಗೆಲುವಿಗಾಗಿ ಹರಸಾಹಸ ಪಡುತ್ತಿದೆ.

ಈ ಹಿಂದೆ ಚೆಪಾಕ್ ಕ್ರೀಡಾಂಗಣದ ಪಿಚ್ ಸ್ಪಿನ್ ಸ್ನೇಹಿಯಾಗಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ಇದು ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚ ಸಹಾಯ ಮಾಡುತ್ತಿದೆ. ಇಬ್ಬನಿಯಿಂದಾಗಿ ಚೇಸಿಂಗ್ ಸುಲಭವಾಗುತ್ತದೆ, ಆದ್ದರಿಂದ ತಂಡಗಳು ಟಾಸ್ ಗೆದ್ದ ನಂತರ ಬೌಲಿಂಗ್ ಆಯ್ಕೆ ಮಾಡಬಹುದು. ಈ ಋತುವಿನಲ್ಲಿ ಇಲ್ಲಿ ಎರಡು ಪಂದ್ಯಗಳನ್ನು ಆಡಲಾಗಿದ್ದು, ಎರಡೂ ಪಂದ್ಯಗಳಲ್ಲಿ 200+ ಸ್ಕೋರ್‌ ದಾಖಲಾಗಿವೆ. ಮೊದಲ ಪಂದ್ಯದಲ್ಲಿ ಪಂಜಾಬ್ ತಂಡ ಆತಿಥೇಯ ತಂಡದ ವಿರುದ್ಧ 210 ರನ್ ಗಳ ಗುರಿಯನ್ನು ಬೆನ್ನಟ್ಟಿತ್ತು. ಆದರೆ, ಎರಡನೇ ಪಂದ್ಯದಲ್ಲಿ ಚೆನ್ನೈ ವಿರುದ್ಧ 212 ರನ್ ಗಳ ಗುರಿಯನ್ನು ಬೆನ್ನಟ್ಟುವಲ್ಲಿ ದೆಹಲಿ ವಿಫಲವಾಯಿತು. ಇಲ್ಲಿಯವರೆಗೆ ಒಟ್ಟು 93 ಐಪಿಎಲ್ ಪಂದ್ಯಗಳು ಈ ಮೈದಾನದಲ್ಲಿ ನಡೆದಿವೆ. ಇವುಗಳಲ್ಲಿ, ಮೊದಲು ಬ್ಯಾಟ್ ಮಾಡಿದ ತಂಡ 52 ಪಂದ್ಯಗಳನ್ನು ಗೆದ್ದಿದ್ದರೆ, ಚೇಸಿಂಗ್ ತಂಡ 41 ಪಂದ್ಯಗಳನ್ನು ಗೆದ್ದಿದೆ.

Sulekha