ಕ್ವಿಂಟನ್ ಡಿಕಾಕ್ ಸಿಡಿಲಬ್ಬರದ ಬ್ಯಾಟಿಂಗ್! RR ವಿರುದ್ಧ ಗೆದ್ದು ಬೀಗಿದ KKR

ಕ್ವಿಂಟನ್ ಡಿಕಾಕ್ ಸಿಡಿಲಬ್ಬರದ ಬ್ಯಾಟಿಂಗ್! RR ವಿರುದ್ಧ ಗೆದ್ದು ಬೀಗಿದ KKR

ರಾಜಸ್ಥಾನ ರಾಯಲ್ಸ್‌ ಹಾಗೂ ಕೆಕೆಆರ್‌ ನಡುವಿನ ಹೈವೋಲ್ಟೇಜ್‌ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದೆ. ಕ್ವಿಂಟನ್‌ ಡಿಕಾಕ್‌ ಬ್ಯಾಟಿಂಗ್‌ ಅಬ್ಬರಕ್ಕೆ ಕೋಲ್ಕತ್ತಾ ವಿರುದ್ಧ ರಾಯಲ್ಸ್‌ಗೆ 8 ವಿಕೆಟ್‌ಗಳ ಸೋಲಾಗಿದೆ.

ಇದನ್ನೂ ಓದಿ:ದೇವರ ದರ್ಶನಕ್ಕೂ ಬಂತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌! – ಹೊಸ ವ್ಯವಸ್ಥೆಗೆ ಮುಂದಾದ TTD

ಗುವಾಹಟಿಯಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್‌ ರಾಯಲ್ಸ್‌ ವೈಫಲ್ಯ ಅನುಭವಿಸಿತು. 20 ಓವರ್‌ಗಳಿಗೆ 9 ವಿಕೆಟ್‌ ನಷ್ಟಕ್ಕೆ 151 ರನ್‌ ಕಲೆ ಹಾಕಿತು. ಕೋಲ್ಕತ್ತಾ ನೈಟ್‌ ರೈಡರ್ಸ್‌ 17.3 ಓವರ್‌ಗೆ 2 ವಿಕೆಟ್‌ ನಷ್ಟಕ್ಕೆ ಗುರಿ ತಲುಪಿ ಗೆದ್ದು ಬೀಗಿತು.

ಬ್ಯಾಟಿಂಗ್‌ನಲ್ಲಿ ರಿಯಾನ್ ಪರಾಗ್ ಪಡೆ ಮುಗ್ಗರಿಸಿತು. ಯಶಸ್ವಿ ಜೈಸ್ವಾಲ್ 29, ಸಂಜು ಸ್ಯಾಮ್ಸನ್ 13, ರಿಯಾನ್‌ ಪರಾಗ್‌ 25, ಧ್ರುವ್ ಜುರೆಲ್ 33, ಜೋಫ್ರಾ ಆರ್ಚರ್ 16 ರನ್‌ ಗಳಿಸಿದರು. ಪ್ರಮುಖ ಬ್ಯಾಟರ್‌ಗಳೇ ಕೈಕೊಟ್ಟಿದ್ದು ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು.

ಕೋಲ್ಕತ್ತಾ ಬೌಲರ್‌ಗಳು ರಾಯಲ್ಸ್‌ ಬ್ಯಾಟರ್‌ಗಳನ್ನು ಚೆಂಡಾಡಿದರು. ವೈಭವ್ ಅರೋರಾ, ಹರ್ಷಿತ್‌ ರಾಣಾ, ಮೊಯಿಲ್‌ ಅಲಿ, ವರುಣ್‌ ಚಕ್ರವರ್ತಿ ತಲಾ 2 ಹಾಗೂ ಸ್ಪೆನ್ಸರ್ ಜಾನ್ಸನ್ 1 ವಿಕೆಟ್‌ ಕಿತ್ತರು.

ಆರ್‌ಆರ್‌ ನೀಡಿದ 152 ರನ್‌ ಗುರಿ ಬೆನ್ನತ್ತಿದ ಕೆಕೆಆರ್‌ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿತು. ಕ್ವಿಂಟನ್‌ ಡಿಕಾರ್‌ 61 ಬಾಲ್‌ಗೆ 97 ರನ್ (8 ಬೌಂಡರಿ, 6 ಸಿಕ್ಸರ್‌) ಗಳಿಸಿ ಮಿಂಚಿದರು. ಕ್ಯಾಪ್ಟನ್‌ ಅಜಿಂಕ್ಯಾ ರಹಾನೆ (18), ಅಂಗ್‌ಕ್ರಿಶ್ ರಘುವಂಶಿ (22) ಬ್ಯಾಟಿಂಗ್‌ನಲ್ಲಿ ತಂಡದ ಗೆಲುವಿಗೆ ಸಹಕಾರಿಯಾದರು.

Shwetha M