IND Vs NZ.. ಬ್ಯಾಟಿಂಗ್ ಫೈಟ್ – ಭಾರತದ ಸ್ಪಿನ್ನರ್ಸ್ ದುಬಾರಿಯಾದ್ರಾ?

IND Vs NZ.. ಬ್ಯಾಟಿಂಗ್ ಫೈಟ್ – ಭಾರತದ ಸ್ಪಿನ್ನರ್ಸ್ ದುಬಾರಿಯಾದ್ರಾ?

ಫೆಬ್ರವರಿ 7ರಿಂದ ಸ್ಟಾರ್ಟ್ ಆಗಿದ್ದ ಟಿ-20 ವಿಶ್ವಕಪ್​ನ ಕ್ಲೈಮ್ಯಾಕ್ಸ್​ ಸ್ಟೇಜ್​ನಲ್ಲಿದ್ದೇವೆ. 20 ಟೀಮ್​ಗಳಿಂದ ಈಗ 2ಕ್ಕೆ ಬಂದು ನಿಂತಿದ್ದೇವೆ. ಸದ್ಯ ವಿನ್ನರ್ ಯಾರು ಅನ್ನೋದು ಡಿಸೈಡ್ ಆಗೋ ಟೈಂ. ಒಂದ್ಕಡೆ 2 ಸಲ ಕಪ್ ಗೆದ್ದು ನಾಲ್ಕನೇ ಸಲ ಫೈನಲ್​ಗೆ ಬಂದಿರೋ ಭಾರತ. ಮತ್ತೊಂದ್ಕಡೆ ಮೊದಲ ಟ್ರೋಫಿ ಆಸೆಯಲ್ಲಿ 2ನೇ ಸಲ ಫೈನಲ್​ಗೇರಿರೋ ನ್ಯೂಜಿಲೆಂಡ್. ಈ ಟೂರ್ನಿಯಲ್ಲಿ ಅಪ್ಸ್​ ಌಂಡ್ ಡೌನ್ಸ್ ಜೊತೆ ಕ್ರೂಶಿಯಲ್ ಮ್ಯಾಚ್​​ಗಳನ್ನೂ ಫೇಸ್ ಮಾಡಿರೋ ಇಬ್ಬರೂ ಡೇಂಜರಸ್ ಆಗೇ ಇದ್ದಾರೆ. ಒಂದೊಂದು ಕೆಟಗರಿಯಲ್ಲಿ ಒಬ್ಬೊಬ್ರು ಸ್ಟ್ರಾಂಗ್ ಕಾಣ್ತಿದ್ದಾರೆ.

ಇದನ್ನೂ ಓದಿ : 3 ದಿನದ ಹಿಂದಿನ ಸಾಂಬಾರ್‌ ಬಡಿಸಿದ್ದಕ್ಕೆ ಪತಿ ಕಿರಿಕ್!‌ – ಅಯ್ಯಯೋ.. ಗಂಡ ಬೈದಿದ್ದಕ್ಕೆ ಪಾಣಬಿಟ್ಟ ಮಹಿಳೆ!

ಭಾರತ-ನ್ಯೂಜಿಲೆಂಡ್.. ಕ್ರಿಕೆಟ್ ಜಗತ್ತಿನ ಎಲ್ಲರ ಕಣ್ಣೂ ಈಗ ಈ ಎರಡೂ ತಂಡಗಳ ಮೇಲೇ ಇದೆ. ಪ್ರತಿಷ್ಠಿತ ಐಸಿಸಿ ಟೂರ್ನಮೆಂಟ್​ ಗೆದ್ದು ಯಾರು ಚಾಂಪಿಯನ್ಸ್ ಆಗ್ತಾರೆ ಅಂತಾ ಕಾಯ್ತಿದ್ದಾರೆ. ಭಾರತೀಯರಿಗಂತೂ ಇನ್ನೂ ಸ್ಪೆಷಲ್.. ತವರಿನಲ್ಲೇ ಪಂದ್ಯ.. ಭಾರತವೂ ಫೈನಲ್​ನಲ್ಲಿದೆ. ಇದಕ್ಕಿಂತ ಬೆಸ್ಟ್ ಮೂಮೆಂಟ್ ಇನ್ನೊಂದು ಸಿಗ್ಲಿಕ್ಕಿಲ್ಲ. ಌಂಡ್ ಒನ್ ಮೋರ್ ಇಂಟ್ರೆಸ್ಟಿಂಗ್ ಪಾಯಿಂಟ್ ಅಂದ್ರೆ ಯಾವ ಸ್ಟೇಡಿಯಮ್​ನಲ್ಲಿ ಎರಡೂ ತಂಡಗಳು ಅದೂ ಸೌತ್ ಆಫ್ರಿಕಾ ವಿರುದ್ಧವೇ ಸೋತಿದ್ರೋ ಈಗ ಅದೇ ಮೈದಾನದಲ್ಲಿ ಟ್ರೋಫಿಗಾಗಿ ಫೈಟ್ ಮಾಡ್ತಾರೆ. ಅಂದ್ರೆ ಗ್ರೂಪ್ ಸ್ಟೇಜಲ್ಲಿ ನ್ಯೂಜಿಲೆಂಡ್ ಇಲ್ಲಿ ಸೌತ್ ಆಫ್ರಿಕಾ ವಿರುದ್ಧ ಸೋತಿತ್ತು. ಸೂಪರ್ 8  ಸುತ್ತಲ್ಲಿ ಭಾರತ ಇಲ್ಲಿ ಸೌತ್ ಆಫ್ರಿಕಾ ವಿರುದ್ಧ ಸೋಲನ್ನ ಕಂಡಿತ್ತು.

ಭಾರತ 1 ಪಂದ್ಯ, ನ್ಯೂಜಿಲೆಂಡ್ 2 ಪಂದ್ಯಗಳಲ್ಲಿ ಸೋಲು!

ಇನ್ನು ಈ ಬಾರಿಯ ಟೂರ್ನಿಯಲ್ಲಿ ಭಾರತದ ಜರ್ನಿ ನೋಡೋದಾದ್ರೆ ಭಾರತ 8 ಪಂದ್ಯಗಳನ್ನ ಆಡಿದ್ದು ಈ ಪೈಕಿ ಒಂದು ಮ್ಯಾಚ್​ನಲ್ಲಷ್ಟೇ ಸೋತಿದೆ. ಇನ್ನು ನ್ಯೂಜಿಲೆಂಡ್ ಮಳೆಯಿಂದಾಗಿ 1 ಪಂದ್ಯ ಮಿಸ್ ಮಾಡ್ಕೊಂಡಿದೆ. ಌಂಡ್ ಉಳಿದ 7 ಪಂದ್ಯಗಳಲ್ಲಿ 2 ಪಂದ್ಯಗಳನ್ನ ಸೋತಿದೆ. ಬಟ್ ಬ್ಯಾಟಿಂಗ್ ಅಂತಾ ಬಂದಾಗ ನ್ಯೂಜಿಲೆಂಡ್ ತಂಡ ಭಾರತಕ್ಕಿಂತ ಬೆಟರ್ ಆಗಿಯೇ ಪರ್ಫಾಮ್ ಮಾಡಿದೆ.

ಯಾರು ಬಲಿಷ್ಠರು?

ಮಾದರಿ                             ಭಾರತ                    ನ್ಯೂಜಿಲೆಂಡ್

ಆವರೇಜ್ ಬ್ಯಾಟಿಂಗ್                27.31                      41.68

ಡಕ್ ಔಟ್                            11                         2

ಬೌಂಡರಿ/ಸಿಕ್ಸ್                        88/ 128                    57/ 109

200 ಪ್ಲಸ್ ಸ್ಕೋರ್                     3                         0

PP ಸರಾಸರಿ ವಿಕೆಟ್                     2                         1

7-16 ಸರಾಸರಿ ರನ್ಸ್                    93                       89

ಡೆತ್ ಓವರ್ ಸರಾಸರಿ                   44                       39

ಟೋಟಲ್ ವಿಕೆಟ್                       59                       41

ಸ್ಪಿನ್ನರ್ಸ್                                23                        18

ಎಕಾನಮಿ ರೇಟ್                         8.3                      7.5

ಫೈನಲ್ ಪಂದ್ಯದಲ್ಲಿ ಯಾರಾಗ್ತಾರೆ ಗೇಮ್ ಚೇಂಜರ್?

ಭಾರತದ ಪರ ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಮತ್ತು ಸಂಜು ಸ್ಯಾಮ್ಸನ್ ಭಾರತ ಪರ ಟಾಪ್-3 ಸ್ಕೋರರ್‌ಗಳಾಗಿದ್ದಾರೆ. ಇಶಾನ್ ಮತ್ತು ಸೂರ್ಯ ತಲಾ 8 ಪಂದ್ಯಗಳನ್ನು ಆಡಿದ್ದಾರೆ, ಆದರೆ ಸಂಜು ಕೇವಲ 4 ಪಂದ್ಯಗಳಲ್ಲಿ 2 ಅರ್ಧಶತಕಗಳೊಂದಿಗೆ 232 ರನ್ ಗಳಿಸಿದ್ದಾರೆ. ಹೀಗಾಗಿ ಐಸಿಸಿ ಅವರನ್ನು ಟೂರ್ನಮೆಂಟ್‌ನ ಆಟಗಾರನ ರೇಸ್‌ನಲ್ಲಿ ಇರಿಸಿದೆ. ಇನ್ನು ಬೌಲಿಂಗ್ ಅಂತಾ ಬಂದಾಗ ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ 8 ಪಂದ್ಯಗಳಲ್ಲಿ 13 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇನ್ನೊಂದು ವಿಕೆಟ್ ಪಡೆದ್ರೆ ಟೂರ್ನಮೆಂಟ್‌ನ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗ್ತಾರೆ. ಇನ್ನು ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಎಕಾನಮಿ ರೇಟ್ ಕಮ್ಮಿ ಇದೆ. ಬುಮ್ರಾ ಕೇವಲ 6.62 ರ ಎಕಾನಮಿಯೊಂದಿಗೆ 10 ವಿಕೆಟ್‌ಗಳನ್ನು ಕಬಳಿಸಿದರು. ಹಾರ್ದಿಕ್ 9 ಕ್ಕಿಂತ ಕಡಿಮೆ ಎಕಾನಮಿಯೊಂದಿಗೆ 8 ವಿಕೆಟ್‌ಗಳನ್ನು ಪಡೆದಿದ್ದಾರೆ. ನ್ಯೂಜಿಲೆಂಡ್ ಪರ ಫಿನ್ ಅಲೆನ್ ಮತ್ತು ಟಿಮ್ ಸೀಫರ್ಟ್ ಇಬ್ಬರೂ ಡೇಂಜರಸ್ ಆಗಿದ್ದಾರೆ. ಅಲೆನ್ ಅಂತೂ ಸೆಮಿಫೈನಲ್​ನಲ್ಲಿ 33 ಎಸೆತಗಳಲ್ಲಿ ಶತಕ ಭಾರಿಸಿದ್ರು. ಹಾಗೇ ಒಟ್ಟಾರೆ 289 ರನ್‌ಗಳೊಂದಿಗೆ ಪಂದ್ಯಾವಳಿಯ ಮೂರನೇ ಅತಿ ಹೆಚ್ಚು ಸ್ಕೋರರ್ ಆಗಿದ್ದಾರೆ. ಇನ್ನು ಸೀಫರ್ಟ್ 3 ಅರ್ಧಶತಕಗಳೊಂದಿಗೆ 274 ರನ್ ಗಳಿಸಿದ್ದಾರೆ. ನ್ಯೂಜಿಲೆಂಡ್ ಬೌಲಿಂಗ್ ಅಂತಾ ನೋಡ್ದಾಗ ಆಲ್‌ರೌಂಡರ್ ರಾಚಿನ್ ರವೀಂದ್ರ ಬ್ಯಾಟಿಂಗ್‌ಗಿಂತ ಸ್ಪಿನ್ ಬೌಲಿಂಗ್‌ನಲ್ಲಿ ಹೆಚ್ಚಿನ ಕೊಡುಗೆ ನೀಡಿದ್ದಾರೆ. ಅವರು 8 ಪಂದ್ಯಗಳಲ್ಲಿ 11 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಕೇವಲ 6.88 ರ ಎಕಾನಮಿಯಲ್ಲಿ ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಸೆಮಿಫೈನಲ್‌ನಲ್ಲಿ 2 ನಿರ್ಣಾಯಕ ವಿಕೆಟ್‌ಗಳನ್ನು ಕಬಳಿಸಿದ್ದ ಮ್ಯಾಟ್ ಹೆನ್ರಿ 9 ವಿಕೆಟ್‌ಗಳನ್ನು ಹೊಂದಿದ್ದಾರೆ. ಸೋ ಇಷ್ಟು ಆಟಗಾರರ ಮೇಲೆ ತುಂಬಾನೇ ಹೋಪ್ಸ್ ಇದೆ. ಇವ್ರ ಪೈಕಿ ಯಾರು ಟ್ರೋಫಿ ಫೈಟ್​ನ ಗೇಮ್ ಚೇಂಜರ್ ಆಗ್ಬೋದು ಅನ್ನೋ ಕುತೂಹಲ ಹೆಚ್ಚಿಸಿದೆ.

Shantha Kumari