ಬಟ್ಟೆ ಬಿಚ್ಚಿಟ್ಟು ವಿಡಿಯೋ ಮಾಡಿದ ಖ್ಯಾತ ನಟಿ – ಸ್ಯಾಂಡಲ್‌ವುಡ್‌ ಸುಂದರಿಗೆ ಇದೆಲ್ಲಾ ಬೇಕಿತ್ತಾ?  

ಬಟ್ಟೆ ಬಿಚ್ಚಿಟ್ಟು ವಿಡಿಯೋ ಮಾಡಿದ ಖ್ಯಾತ ನಟಿ – ಸ್ಯಾಂಡಲ್‌ವುಡ್‌ ಸುಂದರಿಗೆ ಇದೆಲ್ಲಾ ಬೇಕಿತ್ತಾ?  

ಸ್ಯಾಂಡಲ್‌ ವುಡ್‌ ನ ಕಿರಿಕ್‌ ಸುಂದರಿ ಸಂಯುಕ್ತ ಹೆಗ್ಡೆ ಎಲ್ಲರಿಗೂ ಚಿರ ಪರಿಚಿತ. ಸದಾ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಾಗುತ್ತಿರುತ್ತಾರೆ. ತಮ್ಮ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ಮಾದಕ ಫೋಟೋ, ವಿಡಿಯೋಗಳನ್ನು ಶೇರ್‌ ಮಾಡುತ್ತಿರುತ್ತಾರೆ. ತಮ್ಮ ಹಾಟ್ ಫೋಟೋಗಳ ಮೂಲಕವಾಗಿ ಅದೆಷ್ಟೋ ಬಾರಿ ಪಡ್ಡೆ ಹುಡುಗರ ನಿದ್ದೆಗೆ ಕನ್ನ ಹಾಕಿದ್ದಾರೆ. ಆದರೆ ಈ ಬಾರಿ ವಿಡಿಯೋ ನೋಡಿ ಜನರು ಬಾಯಿ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:  ಸಮಂತಾಗೆ ಮತ್ತೆ ಕೈ ಕೊಟ್ಟ ಆರೋಗ್ಯ.. 6 ತಿಂಗಳು ಅಮೆರಿಕದಲ್ಲಿ ಚಿಕಿತ್ಸೆ?

ಕಿರಿಕ್‌  ಸುಂದರಿ ಈ ಬಾರಿ ಪಡ್ಡೆ ಹುಡುಗರ ನಿದ್ದೆಗೆಡಿಸುವ ವಿಡಿಯೋವೊಂದನ್ನು ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ. ಟಾಪ್‌ಲೆಸ್ ವೀಡಿಯೋವೊಂದನ್ನ ಹಂಚಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ನಿಮ್ಮ ದೇಹ, ನಿಮ್ಮ ಆಸ್ತಿ ಎಂದು ನಟಿ ವೀಡಿಯೋದಲ್ಲಿ ಪಾಠ ಮಾಡಿದ್ದಾರೆ.

ತಮ್ಮ ಇನ್ಸ್‌ಸ್ಟಾಗ್ರಾಂ ನಲ್ಲಿ ಖಾತೆಯಲ್ಲಿ ಟಾಪ್‌ಲೆಸ್‌ ವಿಡಿಯೋ ಪೋಸ್ಟ್‌ ಮಾಡಿ, ನಿಮ್ಮ ದೇಹ, ನಿಮ್ಮ ಆಸ್ತಿ. ನೀವು ಯಾವುದೇ ಸಾಮಾಜಿಕ ಮಾನದಂಡಗಳ ಮಾಲಿಕತ್ವ ಹೊಂದಿಲ್ಲ. ಮಹಿಳೆಯರು ಫ್ರಿಡಂ, ಆತ್ಮವಿಶ್ವಾಸಕ್ಕೆ ಅವಕಾಶವಿದೆ. ಶಕ್ತಿ ಎನ್ನುವುದು ಪುರುಷ ಮತ್ತು ಸ್ತ್ರಿ ಎನ್ನುವುದು ಅಲ್ಲ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಮೂಲಕವಾಗಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ.

ಕಿರಿಕ್ ಬೆಡಗಿ, ದೇಹ ಪ್ರದರ್ಶಿಸಿರುವ ವೀಡಿಯೋ ಶೇರ್ ಮಾಡುವ ಮೂಲಕ ಸೋಶಿಯಲ್‌ ಮೀಡಿಯಾದಲ್ಲಿ ಹೈಪ್ ಕ್ರಿಯೆಟ್ ಮಾಡಿದ್ದಾರೆ. ನಟಿ ಟಾಪ್‌ಲೆಸ್ ಆಗಿರುವ ವೀಡಿಯೋ ನೋಡಿ ಅಭಿಮಾನಿಗಳು ದಂಗಾಗಿದ್ದಾರೆ. ಕೆಲವರು ನಿಮ್ಮ ಬ್ಯಾಕ್ ಪೋಸಿಂಗ್ ಏನೋ ಚೆನ್ನಾಗಿದೆ. ಆದರೆ, ಫ್ರೆಂಟ್ ಪೋಸಿಂಗ್ ನೋಡಬೇಕು ಅನ್ನೋ ಅರ್ಥದಲ್ಲಿ ಕಾಮೆಂಟ್ ಕೊಟ್ಟಿದ್ದಾರೆ.

‘ಕಿರಿಕ್ ಪಾರ್ಟಿ’ ಚಿತ್ರಕ್ಕೆ ರಕ್ಷಿತ್ ಶೆಟ್ಟಿಗೆ ನಾಯಕಿಯಾಗುವ ಮೂಲಕ ಬಣ್ಣದ ಬದುಕಿಗೆ ಲಗ್ಗೆಯಿಟ್ಟರು. ರಕ್ಷಿತ್, ರಶ್ಮಿಕಾ ಜೊತೆ ಸಂಯುಕ್ತಾ ಕೂಡ ಮೊದಲ ಚಿತ್ರದಲ್ಲೇ ಗಮನ ಸೆಳೆದರು. ಕನ್ನಡ ಸೇರಿದಂತೆ ತೆಲುಗು, ತಮಿಳು ಸಿನಿಮಾದಲ್ಲೂ ನಟಿ ಮಿಂಚಿದ್ದರು. ಕೆಲ ತಿಂಗಳುಗಳ ಹಿಂದೆ ಸಿನಿಮಾವೊಂದರ ಚಿತ್ರೀಕರಣದಲ್ಲಿ ಸಂಯುಕ್ತಾ ಕಾಲಿಗೆ ಪೆಟ್ಟಾಗಿತ್ತು. ಬಳಿಕ ಸೂಕ್ತ ಚಿಕಿತ್ಸೆಯ ನಂತರ ನಟಿ ಚೇತರಿಸಿಕೊಂಡಿದ್ದಾರೆ. 5 ತಿಂಗಳ ಬೆಡ್ ರೆಸ್ಟ್ ನಂತರ ಮತ್ತೆ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ.

suddiyaana