ಹೊರಗೆ ಸ್ಟಾರ್.. ಮನೆಯಲ್ಲಿ ಆಳು! – ಕರ್ಣ ಸೀರಿಯಲ್‌ ವಿಷ್ಣುವರ್ಧನ್ ಚಿತ್ರದ ಸ್ಟೋರಿನಾ?

ಹೊರಗೆ ಸ್ಟಾರ್.. ಮನೆಯಲ್ಲಿ ಆಳು! – ಕರ್ಣ ಸೀರಿಯಲ್‌ ವಿಷ್ಣುವರ್ಧನ್ ಚಿತ್ರದ ಸ್ಟೋರಿನಾ?

ಕನ್ನಡ ಕಿರುತೆರೆಯಲ್ಲಿ ಹೊಸ ಅಲೆ ಸೃಷ್ಟಿ ಮಾಡಿರುವಂತಹ ಧಾರಾವಾಹಿಗಳ ಪೈಕಿ ‘ಕನ್ನಡತಿ’ಯೂ ಒಂದು. ಈ ಸೀರಿಯಲ್‌ ಮುಗಿದು ಎರಡು ವರ್ಷ ಕಳೆಯುತ್ತಾ ಬಂತು.. ಆದ್ರೂ ಈ ಸೀರಿಯಲ್‌ ಹವಾ ಮಾತ್ರ ನಿಂತಿಲ್ಲ.. ಇಂದಿಗೂ ಕಿರಣ್ ರಾಜ್ ಅವರನ್ನು ಕನ್ನಡತಿ ಹರ್ಷ ಎಂದೇ ಜನ ಗುರುತಿಸುತ್ತಾರೆ. ಇದೀಗ ಹ್ಯಾಂಡ್ಸಮ್‌ ಹೀರೋ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಹೊಸ ಸೀರಿಯಲ್‌ ಕರ್ಣ ದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.. ಇದೀಗ ಈ ಸೀರಿಯಲ್‌ ಬಗ್ಗೆ ನಾನಾ ಚರ್ಚೆ ನಡೆತಿದೆ.. ಸೀರಿಯಲ್‌ ಹಿರೋಯಿನ್‌ ಯಾರು? ವಿಷ್ಟುವರ್ಧನ್‌ ನಟನೆಯ ಕರ್ಣ ಸಿನಿಮಾದ ಸ್ಟೋರಿನಾ ಅಂತಾ ಸೀರಿಯಲ್‌ ಫ್ಯಾನ್ಸ್‌ ಕೇಳ್ತಿದ್ದಾರೆ.. ಅಷ್ಟಕ್ಕೂ ಈ ಪ್ರಶ್ನೆ ಹುಟ್ಟಿಕೊಂಡಿದ್ದು ಯಾಕೆ? ಕರ್ಣ ಸೀರಿಯಲ್‌ ಗೂ ಸಿನಿಮಾಗೂ ಇರೋ ನಂಟೇನು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: GT ಸೋಲಿಸಿದ್ದೇ ವೈಶಾಕ್ ವಿಜಯ್ ಪಂಜಾಬ್‌ಗೆ ಕನ್ನಡಿಗನ ಬಲ

ಜೀ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿ ಕರ್ಣ ಶುರುವಾಗಲಿದೆ. ಕನ್ನಡತಿ ಸೀರಿಯಲ್‌ನಲ್ಲಿ ಮಿಂಚಿದ್ದ ಕಿರಣ್‌ ರಾಜ್‌  ಕರ್ಣನಾಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಕರ್ಣ ಸೀರಿಯಲ್‌ ಪ್ರೋಮೋ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಕರ್ಣ ಎಂಬುದು ಈ ಧಾರಾವಾಹಿಯ ಪ್ರಮುಖ ನಾಯಕನ ಹೆಸರು. ಕರ್ಣ ಎಂಬ ಪಾತ್ರದಲ್ಲಿ ಕಿರಣ್‌ ರಾಜ್ ವೈದ್ಯನಾಗಿ ಕಾಣಿಸಿಕೊಂಡಿದ್ದಾರೆ. ಏನೇ ಸಾಧನೆ‌ ಮಾಡಿದ್ರೂ ತಮ್ಮವರ ನಡುವೆ ಅನಾಥ. ಎಲ್ಲರೂ ಆತನನ್ನ ಮನೆ ಕೆಲಸದವರಂತೆ ನಡೆಸಿಕೊಳ್ತಾರೆ.. ಆನೇ ಆದ್ರೂ ಅದನ್ನ ನಗುಮೊಗದಲ್ಲೇ ಸ್ವೀಕರಿಸೋ ಮನಸ್ಸು ಕರ್ಣನನದ್ದು. ಕರ್ಣ ಸ್ನೇಹಜೀವಿ ಅನ್ನೋದನ್ನ ಪೋಮೋದಲ್ಲಿ ತೋರಿಸಲಾಗಿದೆ. ಇದೀಗ ಕರ್ಣನಿಗೆ ಹೀರೋಯಿನ್‌ ಯಾರು ಎಂಬುದರ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.

ಕರ್ಣ ಧಾರಾವಾಹಿಯ ಮೊದಲ ಪ್ರೋಮೋದಲ್ಲಿ ಕರ್ಣ ಮತ್ತು ಮನೆಯವರನ್ನ ಮಾತ್ರ ಪರಿಚಯ ಮಾಡಲಾಗಿದೆ. ಹಾಗೇ, ಕರ್ಣನ ವೃತ್ತಿಯೇನು ಅನ್ನೋದೂ ಜಗಜ್ಜಾಹೀರಾಗಿದೆ. ಆತನ ಫ್ಯಾಮಿಲಿಯಲ್ಲಿ ಹಿರಿಯ ನಟಿ ಆಶಾ ರಾಣಿ, ನಟ – ನಿರ್ದೇಶಕ ನಾಗಾಭರಣ, ಒಲವಿನ ನಿಲ್ದಾಣ ಸೀರಿಯಲ್ ಖ್ಯಾತಿಯ ವರಲಕ್ಷ್ಮೀ ಶ್ರೀನಿವಾಸ್ ಮತ್ತು ಒಲವಿನ ನಿಲ್ದಾಣ ನಟಿ ಶ್ಯಾಮ್ ಸಿಮ್ರನ್ ಇರೋದನ್ನ ಪ್ರೋಮೋದಲ್ಲಿ ತೋರಿಸಲಾಗಿದೆ. ಆದರೆ, ಕರ್ಣನಿಗೆ ಜೋಡಿಯಾಗಿರೋದ್ಯಾರು ಎಂಬುದನ್ನ ಮಾತ್ರ ರಿವೀಲ್ ಮಾಡಿಲ್ಲ. ಕರ್ಣ ಸೀರಿಯಲ್‌ನಲ್ಲಿ ನಟ ಕಿರಣ್ ರಾಜ್‌ಗೆ ಹೀರೋಯಿನ್ ಯಾರು ಎಂಬ ಪ್ರಶ್ನೆ ಸೀರಿಯಲ್‌ ಫ್ಯಾನ್ಸ್‌ ಗೆ ಕಾಡುತ್ತಿದೆ.  ಕನ್ನಡತಿ ಜೋಡಿ ಇಲ್ಲೂ ಮುಂದುವರೆಯಬೇಕು.. ಕಿರಣ್ ರಾಜ್‌ಗೆ ಮತ್ತೆ ರಂಜನಿ ರಾಘವನ್‌ ಹೀರೋಯಿನ್‌ ಆಗಬೇಕು ಅಂತ ಫ್ಯಾನ್ಸ್ ಪಟ್ಟು ಹಿಡಿದಿದ್ದಾರೆ. ಇನ್ನೂ ಕೆಲವರು ಕಿರಣ್‌ ರಾಜ್‌ಗೆ ನಾಯಕಿಯಾಗಿ ಗೀತಾ ಸೀರಿಯಲ್ ಖ್ಯಾತಿಯ ಭವ್ಯಾ ಗೌಡ ಬರಬೇಕು ಅಂತ ಒತ್ತಾಯಿಸುತ್ತಿದ್ದಾರೆ. ಹಲವರು ಪಾರು  ಖ್ಯಾತಿಯ  ಮೋಕ್ಷಿತಾ ಪೈ ಕರ್ಣನಿಗೆ ಜೋಡಿಯಾಗ್ಬೇಕು ಅಂತ ಆಸೆ ಪಡುತ್ತಿದ್ದಾರೆ. ಆದ್ರೆ ಮೂಲಗಳ ಪ್ರಕಾರ, ಹೀರೋಯಿನ್‌ ಇನ್ನೂ ಫೈನಲಿಸ್ ಆಗಿಲ್ಲ. ಕರ್ಣ ಸೀರಿಯಲ್‌ನ ನಾಯಕಿ ಪಾತ್ರಕ್ಕೆ ನಿರ್ಮಾಪಕಿ ಶ್ರುತಿ ನಾಯ್ಡು ಫ್ರೆಶ್‌ ಫೇಸ್‌ ಹುಡುಕುತ್ತಿದ್ದಾರೆ.   ಎಲ್ಲವೂ ಪ್ಲಾನ್ ಪ್ರಕಾರ ನಡೆದರೆ ಕರ್ಣನಿಗೆ ಜೋಡಿಯಾಗಿ ಹೊಸ ಹೀರೋಯಿನ್‌ ಎಂಟ್ರಿಕೊಡಲಿದ್ದಾರೆ ಎಂದು ಹೇಳಲಾಗ್ತಿದೆ.

ಇನ್ನು ಕರ್ಣ ಧಾರಾವಾಹಿಗೆ ಡಾ. ವಿಷ್ಣುವರ್ಧನ್‌ ನಟನೆಯ ಕರ್ಣ ಸಿನಿಮಾ ಸ್ಫೂರ್ತಿನಾ ಎಂಬ ಪ್ರಶ್ನೆ ಕಾಡುತ್ತಿದೆ. 1986 ಜನವರಿ 10 ರಂದು ರಿಲೀಸ್ ಆದ ಕರ್ಣ  ಸಿನಿಮಾ ಸೂಪರ್ ಡ್ಯೂಪರ್ ಹಿಟ್ ಆಗಿತ್ತು. ಈ  ಚಿತ್ರದಲ್ಲಿ ಒಂದು ದೃಶ್ಯ ಇದೆ. ಕಿತ್ತೋದ ಚಪ್ಪಲಿಯನ್ನ ಹೊಲಿಸಿ ತರುವಂತೆ ಕರ್ಣನಿಗೆ ಅತ್ತಿಗೆ ಸೂಚಿಸುತ್ತಾರೆ. ಮನಸ್ಸಿಗೆ ಬೇಸರವಾದರೂ, ಅದಕ್ಕೆ ಕರ್ಣ ಇಲ್ಲ ಅನ್ನೋದಿಲ್ಲ. ಕಿತ್ತೋದ ಚಪ್ಪಲಿಯನ್ನ ಕೈಯಲ್ಲೇ ಹಿಡಿಯುತ್ತಾರೆ ಕರ್ಣ. ಅದನ್ನ ಕಂಡ ವಿಷ್ಣುವರ್ಧನ್‌ ಫ್ಯಾನ್ಸ್‌ಗೆ ಅಂದು ಬೇಸರವಾಗಿದ್ದು ಸುಳ್ಳಲ್ಲ. ಅವತ್ತಿಗೆ ಚರ್ಚೆ ಹುಟ್ಟುಹಾಕಿದ್ದ ಇದೇ ದೃಶ್ಯ ಇದೀಗ ಕರ್ಣ ಧಾರಾವಾಹಿಯಲ್ಲೂ ಇದೆ. ಕರ್ಣ  ಸೀರಿಯಲ್‌ನಲ್ಲೂ ಹೀರೋ ಕರ್ಣನ ಕೈಗೆ ಅತ್ತಿಗೆಯೇ ಕಿತ್ತೋದ ಚಪ್ಪಲಿಯನ್ನ ಕೊಟ್ಟು, ಹೊಲಿಸಿ ತರುವಂತೆ ಸೂಚಿಸಿದ್ದಾರೆ. ಕರ್ಣ ಚಿತ್ರದಲ್ಲಿ ಹೀರೋ ಫುಟ್‌ಬಾಲ್‌ ತಂಡದ ಗೋಲ್‌ ಕೀಪರ್ ಆಗಿದ್ದರೆ, ಕರ್ಣ ಸೀರಿಯಲ್‌ನಲ್ಲಿ ಹೀರೋ ಯಶಸ್ವಿ ಗೈನಕಾಲಜಿಸ್ಟ್. ಕರ್ಣಚಿತ್ರದಲ್ಲೂ ಕರ್ಣನನ್ನ ಮನೆಯವರೇ ಕೀಳಾಗಿ ಕಾಣ್ತಾರೆ. ಕರ್ಣ ಧಾರಾವಾಹಿಯ ಪ್ರೋಮೋದಲ್ಲೂ ಇದೇ ಇದೆ. ತನ್ನವರ ಮಧ್ಯವೇ ಅನಾಥವಾಗಿರುವ ಮನೆ ಮಗನ ಕಥೆಯೇ ಕರ್ಣ ಸೀರಿಯಲ್‌ ಕತೆ. ಹೀಗಾಗೇ ಸೀರಿಯಲ್‌ ಫ್ಯಾನ್ಸ್‌ ಇದು ಕರ್ಣ ಸಿನಿಮಾದ ಕತೆನಾ ಅಂತಾ ಕೇಳ್ತಿದ್ದಾರೆ.. ಈ ಪ್ರಶ್ನೆಗೆ ಉತ್ತರ ಸಿಗೋದು ಕರ್ಣ ಸೀರಿಯಲ್‌ ಆರಂಭವಾದ್ಮೇಲೆ. ಆದರೆ, ತಿಪ್ಪೆಯಲ್ಲಿ ಬಿದ್ದವನನ್ನ ಎತ್ತಿಕೊಂಡು ಬಂದಿದ್ದೀರಾ. ಅವನನ್ನ ನಾನು ಮಗ ಅಂತ ಒಪ್ಪಿಕೊಳ್ಳೋದಿಲ್ಲ ಅಂತ ಹೀರೋ ತಂದೆ ಹೇಳಿರೋದು ಕರ್ಣ  ಸೀರಿಯಲ್ ಕುರಿತಾಗಿ ಕುತೂಹಲ ಹೆಚ್ಚಿಸಿದೆ.

Shwetha M

Leave a Reply

Your email address will not be published. Required fields are marked *