PAK ವಿರುದ್ಧವೂ KOHLI ಫೇಲ್  – ಪಿಚ್ ಎಫೆಕ್ಟಾ.. ಓಪನರ್ ತಪ್ಪಾ..?
IND Vs USA.. ಜೈಸ್ವಾಲ್ ಗೆ ಚಾನ್ಸ್!

PAK ವಿರುದ್ಧವೂ KOHLI ಫೇಲ್  – ಪಿಚ್ ಎಫೆಕ್ಟಾ.. ಓಪನರ್ ತಪ್ಪಾ..?IND Vs USA.. ಜೈಸ್ವಾಲ್ ಗೆ ಚಾನ್ಸ್!

ಪಾಕಿಸ್ತಾನ ಎದುರು ಇನ್ನೇನು ಭಾರತ ಸೋತೇ ಬಿಡ್ತು ಎಂದು ಇಡೀ ಕ್ರಿಕೆಟ್ ಜಗತ್ತೇ ಅಂದುಕೊಳ್ತಿತ್ತು. ಬಟ್ ಮಿರಾಕಲ್ ಅಂತಾರಲ್ಲ ಹಂಗೆ 19ನೇ ಓವರ್ನಲ್ಲಿ ಮ್ಯಾಚ್ ಭಾರತದ ಕಡೆ ಟರ್ನ್ ಆಗಿತ್ತು. ಇಂಥಾದ್ದೊಂದು  ಮ್ಯಾಜಿಕ್ ಮಾಡಿದ್ದು ಬುಮ್ ಬುಮ್ ಬೂಮ್ರಾ. ಸೋ ಫೈನಲಿ ಭಾರತ 6 ರನ್ಗಳಿಂದ ವಿಶ್ವಕಪ್ನಲ್ಲಿ ಮತ್ತೊಮ್ಮೆ ಪಾಕಿಸ್ತಾನವನ್ನ ಬಗ್ಗು ಬಡಿದಿದೆ. ಭಾರತೀಯರು ಕೂಡ ಖುಷಿಯಲ್ಲಿದ್ದಾರೆ. ಆದ್ರೂ ಕೂಡ ಒಂದಷ್ಟು ಕ್ರಿಕೆಟ್ ಫ್ಯಾನ್ಸ್ ಬೇಸರದಲ್ಲಿದ್ದಾರೆ. ಅದಕ್ಕೆ ಕಾರಣ ವಿರಾಟ್ ಕೊಹ್ಲಿಯವ್ರ ಬ್ಯಾಟ್ ಸದ್ದು ಮಾಡದೇ ಇರೋದು. ಯಾಕಂದ್ರೆ ಇಂಡಿಯಾ-ಪಾಕ್ ಮ್ಯಾಚ್ ನೋಡೋಕೆ ಒಂದಷ್ಟು ಅಭಿಮಾನಿಗಳು ಕಾಯ್ತಾ ಇದ್ರೆ ಮತ್ತೊಂದಷ್ಟು ಫ್ಯಾನ್ಸ್ ಕೊಹ್ಲಿಯವ್ರ ಬ್ಯಾಟಿಂಗ್ ನೋಡೋಕಂತ್ಲೇ ತುದಿಗಾಲಲ್ಲಿ ನಿಂತಿದ್ರು. ಬಟ್ ಈ ಮ್ಯಾಚ್ನಲ್ಲೂ ಕಿಂಗ್ ವಿರಾಟ್ ಫೇಲ್ಯೂರ್ ಆದ್ರು. ಈ ಮೂಲಕ ಒಂದು ಕೆಟ್ಟ ದಾಖಲೆಯನ್ನೂ ಬರೆದ್ರು. ಪಾಕ್ ವಿರುದ್ಧ ಸದಾ ವೀರಾವೇಷ ತೋರುತ್ತಿದ್ದ ವಿರಾಟ್ ಭಾನುವಾರದ ಪಂದ್ಯದಲ್ಲಿ ಶರಣಾಗಿದ್ದೇಕೆ? ಅಮೆರಿಕದ ಪಿಚ್ನ ಜಡ್ಜ್ ಮಾಡೋಕೆ ಆಗ್ತಿಲ್ವಾ? ಹೀಗೆ ಆದ್ರೆ ಮುಂದಿನ ಪಂದ್ಯಗಳ ಕಥೆ ಏನು? ಕ್ರಿಕೆಟರ್ಸ್ ಕೂಡ ಬೇಸರಗೊಂಡಿದ್ದೇಕೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ದೊಡ್ಮನೆ ಕುಟುಂಬದಲ್ಲಿ ಬಿರುಗಾಳಿ – ಯುವ ರಾಜ್‌ಕುಮಾರ್ ಡಿವೋರ್ಸ್‌

ಪಾಕಿಸ್ತಾನ ವಿರುದ್ಧ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹಾಗೇ ರನ್ ಮಷಿನ್ ವಿರಾಟ್ ಕೊಹ್ಲಿ  ಕ್ರೀಸ್ಗೆ ಬಂದಾಗ ರನ್ ಮಳೆಯೇ ಹರಿಯುತ್ತೆ. ಕಿಂಗ್ ಕೊಹ್ಲಿ ಈ ಪಂದ್ಯದಲ್ಲಿ ಅಬ್ಬರಿಸೋದು ಪಕ್ಕಾ ಅಂತಾ ಫ್ಯಾನ್ಸ್ ಫಿಕ್ಸ್ ಆಗಿದ್ರು. ಬಟ್ ಅಲ್ಲಾಗಿದ್ದೇ ಬೇರೆ. ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಓಪನರ್ ಆಗಿ ಕಣಕ್ಕಿಳಿದಿದ್ದ ಕಿಂಗ್ ಕೇವಲ ಒಂದು ರನ್ ಗಳಿಸಿ ಪೆವಿಲಿಯನ್ ಸೇರಿದ್ರು. ಇದೀಗ ಪಾಕ್ ವಿರುದ್ಧ ಕೂಡ 3 ಬಾಲ್ಗಳನ್ನ ಎದುರಿಸಿ ಜಸ್ಟ್ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರು. ನಿಜ ಹೇಳ್ಬೇಕಂದ್ರೆ ಪಾಕ್ ವಿರುದ್ಧದ ಟಿ-20 ಪಂದ್ಯದಲ್ಲಿ ಇತಿಹಾಸದಲ್ಲೇ ಇದೇ ಮೊದಲ ಬಾರಿ ವಿರಾಟ್ ಈ ರೀತಿ ಔಟಾಗಿರೋದು. ಟಿ20 ವಿಶ್ವಕಪ್ ಇತಿಹಾಸದಲ್ಲಿ ಪಾಕಿಸ್ತಾನ ವಿರುದ್ಧ ಕೊಹ್ಲಿ ಎಂದೂ ಕೂಡ ಇಷ್ಟು ಕಡಿಮೆ ಮೊತ್ತಕ್ಕೆ ಔಟಾದವರಲ್ಲ.ಒಂದಂಕಿಗೆ ಔಟಾದವರಲ್ಲ. ಚುಟುಕು ವಿಶ್ವಕಪ್ನಲ್ಲಿ ಇದೇ ಮೊದಲ ಬಾರಿಗೆ ಕೊಹ್ಲಿ ಒಂದಂಕಿಗೆ ಔಟಾಗಿದ್ದಾರೆ. 2012ರಲ್ಲಿ ಕೊಲಂಬೋದಲ್ಲಿ ನಡೆದಿದ್ದ ಪಂದ್ಯದಲ್ಲಿ 78 ರನ್ ಬಾರಿಸಿ ಅಜೇಯವಾಗಿ ಉಳಿದಿದ್ರು. 2014ರಲ್ಲಿ ಮಣಿಪುರದಲ್ಲಿ ನಡೆದಿದ್ದ ಪಂದ್ಯದಲ್ಲಿ 36 ರನ್ ಸಿಡಿಸಿದ್ರು. ಇನ್ನು 2014ರಲ್ಲಿ ಕೊಲ್ಕತ್ತಾದ ಗ್ರೌಂಡ್ನಲ್ಲಿ 55 ರನ್,  2021ರಲ್ಲಿ ದುಬೈನಲ್ಲಿ ನಡೆದ ಪಂದ್ಯದಲ್ಲಿ 57 ರನ್ ಚಚ್ಚಿದ್ದರು. 2022ರಲ್ಲಿ ಮೆಲ್ಬರ್ನ್ನಲ್ಲಿ 82 ರನ್ ಬಾರಿಸಿ ನಾಟೌಟ್ ಆಗಿ ಉಳಿದಿದ್ರು. ಇದು ಪಾಕ್ ವಿರುದ್ಧ ಕೊಹ್ಲಿಯವ್ರ ಹೈಯೆಸ್ಟ್ ಸ್ಕೋರ್. ಬಟ್ ಈ ಮ್ಯಾಚ್ನ ಬಹುಶಃ ಯಾವೊಬ್ಬ ಕ್ರಿಕೆಟ್ ಫ್ಯಾನ್ ಕೂಡ ಮರೆಯೋಕೆ ಸಾಧ್ಯನೇ ಇಲ್ಲ ಬಿಡಿ. ಸಿಂಗಲ್ಲಾಗಿ ನಿಂತು ಆವತ್ತು ಭಾರತವನ್ನ ಗೆಲ್ಲಿಸಿದ್ದು ಇದೇ ವಿರಾಟ್. ಫಸ್ಟ್ ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ 159 ರನ್ ಗಳಿಸಿತ್ತು. 160 ರನ್ಗಳರನ್ರನ್ನ ಟಾರ್ಗೆಟ್ ಬೆನ್ನತ್ತಿದ್ದ ಟೀಂ ಇಂಡಿಯಾ ಪರ ಕೊಹ್ಲಿ ಒಬ್ರನ್ನ ಹೊರತುಪಡಿಸಿದ್ರೆ ಯಾರೂ ಕೂಡ ಕ್ರೀಸ್ನಲ್ಲಿ ಹೆಚ್ಚು ಹೊತ್ತು ನಿಲ್ಲಲೇ ಇಲ್ಲ. ಬಟ್ ಕಿಂಗ್ ವಿರಾಟ್ ಮಾತ್ರ 53 ಬಾಲ್ನಲ್ಲಿ 82 ರನ್ ಗಳಿಸಿ ಭಾರತವನ್ನ ಗೆಲುವಿನ ದಡ ಮುಟ್ಟಿಸಿದ್ರು.ಗೆಲ್ಲಿಸಿಕೊಟ್ಟಿದ್ರು. ಹೀಗೆ ಪಾಕ್ ಎದುರುಎದುತು ರಣಧೀರನಂತೆ ನಿಂತು ಆಡ್ತಿದ್ದ ಅದೇ ಕೊಹ್ಲಿ ಭಾನುವಾರ ನ್ಯೂಯಾರ್ಕ್ನಲ್ಲಿ ನಡೆದ ಪಂದ್ಯದಲ್ಲಿ ಮಾತ್ರ ಕಮಾಲ್ ಮಾಡೋಕೆ ಆಗ್ಲಿಲ್ಲ. 3 ಬಾಲ್ ಫೇಸ್ ಮಾಡಿ ಜಸ್ಟ್ 4 ರನ್ ಗಳಿಸಿ ಔಟಾದ್ರು. ನಸೀಮ್ ಶಾ ಎಸೆದ ಎರಡನೇ ಓವರ್ನ ಮೊದಲ ಎಸೆತದಲ್ಲಿ ಬೌಂಡರಿ ಸಿಡಿಸಿದ ಕೊಹ್ಲಿ, 2ನೇ ಬಾಲ್ ಅನ್ನು ಡಾಟ್ ಮಾಡಿದರು. ಆದರೆ, ಮೂರನೇ ಎಸೆತದಲ್ಲಿ ಉಸ್ಮಾನ್ ಖಾನ್ಗೆ ಕ್ಯಾಚ್ ನೀಡಿ ಡ್ರೆಸ್ಸಿಂಗ್ ರೂಮ್ಗೆ ಮರಳಿದರು. ಈ ಮೂಳಕ ವಿಶ್ವಕಪ್ನ ಎರಡನೇ ಪಂದ್ಯದಲ್ಲಿ ವಿರಾಟ್ ನಿರಾಸೆ ಮೂಡಿಸಿದ್ರು.

ಐಪಿಎಲ್ ನಲ್ಲಿ ಆರಂಭಿಕರಾಗಿ ಅಬ್ಬರಿಸಿ ಆರೆಂಜ್ ಕ್ಯಾಪ್ ಗೆದ್ದ ವಿರಾಟ್ ಕೊಹ್ಲಿ ಐಸಿಸಿ ಟಿ20 ವಿಶ್ವಕಪ್ನಲ್ಲಿ ಬ್ಯಾಕ್ ಟು ಬ್ಯಾಕ್ ಪಂದ್ಯದಲ್ಲಿ ಮುಗ್ಗರಿಸಿದ್ದಾರೆ. ಮೊದಲ ಐರ್ಲೆಂಡ್ ಪಂದ್ಯದಲ್ಲಿ 1 ರನ್ ಮತ್ತು ಪಾಕಿಸ್ತಾನ ವಿರುದ್ಧ 4 ರನ್ ಗಳಿಸಿ ಔಟ್ ಆದರು. ಹೀಗಾಗಿ ವಿರಾಟ್ರನ್ನ ಆರಂಭಿಕರಾಗಿ ಕಣಕ್ಕಿಳಿಸುತ್ತಿರೋದೇ ತಪ್ಪಾ ಎಂಬ ಬಗ್ಗೆ ಚರ್ಚೆಯಾಗ್ತಿದೆ. ಯಾಕಂದ್ರೆ ವಿರಾಟ್ ಸಾಮಾನ್ಯವಾಗಿ ಟೀಮ್ ಇಂಡಿಯಾದಲ್ಲಿ ನಂಬರ್ -3 ರಲ್ಲಿನಲ್ಲಿ ಆಡ್ತಾರೆ.. ಆದರೆ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆರಂಭಿಕರಾಗಿ ಕಣಕ್ಕಿಳಿದು ಅತೀ ಹೆಚ್ಚು ಸ್ಕೋರ್ ಮಾಡಿದ್ರು. ಇದೇ ಕಾರಣಕ್ಕೆ ಟೀಂ ಇಂಡಿಯಾದಲ್ಲೂ ಅದೇ ಫಾರ್ಮೂಲಾ ಪ್ರಯೋಗ ಮಾಡಲಾಗ್ತಿದೆ. ಬಟ್ ಇಲ್ಲಿ ಅದು ವರ್ಕೌಟ್ ಆಗ್ತಿಲ್ಲ. ಹೀಗಾಗಿ ತಂಡದ ಪ್ಲೇಯಿಂಗ್ 11 ಆಯ್ಕೆ ವಿಚಾರದಲ್ಲಿ ಟೀಮ್ ಮ್ಯಾನೇಜ್ಮೆಂಟ್ ಪ್ರಮಾದ ಎಸಗುತ್ತಿದೆ ಎಂದು ಮಾಜಿ ಕ್ರಿಕೆಟರ್ಸ್ ಸಿಟ್ಟಾಗಿದ್ದಾರೆ.ಆರೋಪ ಮಾಡ್ತಿದ್ದಾರೆ. ಯಶಸ್ವಿ ಜೈಸ್ವಾಲ್ ಅವರನ್ನು 2ನೇ ಪಂದ್ಯಕ್ಕೂ ಕೈಬಿಟ್ಟಿರುವುದು ಕೂಡ ಆಕ್ರೋಶಕ್ಕೆ ಕಾರಣವಾಗಿದೆ.ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರಂಭಿಕ ಸ್ಥಾನಕ್ಕೆ ಯಶಸ್ವಿ ಜೈಸ್ವಾಲ್ ಅವರು ತಂಡದಲ್ಲಿದ್ದರೂ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಅವರನ್ನು ಬೆಂಚ್ಗೆ ಸೀಮಿತ ಮಾಡಲಾಗಿದೆ. ಪಾಕಿಸ್ತಾನ ಮತ್ತು ಐರ್ಲೆಂಡ್ ವಿರುದ್ಧದ ಪಂದ್ಯಕ್ಕೂ ಅವಕಾಶ ಪಡೆಯದ ಜೈಸ್ವಾಲ್ ಅವರನ್ನು ಮುಂದಿನ ಪಂದ್ಯದಲ್ಲಿ ಆಡಿಸಬೇಕು ಎಂಬ ಆಗ್ರಹ ಕೇಳಿ ಬರ್ತಿದೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದರೆ ಉತ್ತಮ ಎಂಬುದು ತಜ್ಞರ ಅಭಿಪ್ರಾಯ.

ಸ್ನೇಹಿತರೇ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ವಿರಾಟ್ ಮಾಸ್ ಹೀರೋ. ಅದ್ರಲ್ಲೂ ಪಾಕ್ ವಿರುದ್ಧದ ಪಂದ್ಯ ಅಂದ್ರಂತೂ ವೀರಾವೇಶ ತಾಳ್ತಾರೆ. ಇದೇ ಮೊದಲ ಬಾರಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಇಷ್ಟು ಕಡಿಮೆ ರನ್ಗೆ ಔಟಾಗಿದ್ದಾರೆ. ಬಟ್ ಇಲ್ಲಿ ವಿರಾಟ್ಗೆ ಸಮಸ್ಯೆ ಆಗ್ತಿರೋದು ಬೌಲರ್ಸ್ ಅಲ್ಲ. ಬದಲಾಗಿ ಪಿಚ್. ಅಮೆರಿಕ ಟಿ20 ವಿಶ್ವಕಪ್ಗೆ ಆತಿಥ್ಯ ವಹಿಸಿದ್ದು, ಟೂರ್ನಿಗಾಗಿ ತಾತ್ಕಾಲಿಕ ಪಿಚ್ಗಳನ್ನು ನಿರ್ಮಿಸಿವೆ. ಆದರೆ, ಈ ಪಿಚ್ಗಳಲ್ಲಿ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಗುತ್ತಿಲ್ಲ. ಬ್ಯಾಟರ್ಸ್ ಬ್ಯಾಟ್ ಬೀಸೋಕೆ ಹೆಣಗಾಡುತ್ತಿದ್ರೆ ಬೌಲರ್ಸ್ ಹೆಚ್ಚು ಮೇಲುಗೈ ಸಾಧಿಸುತ್ತಿದ್ದಾರೆ. ಘಟಾನುಘಟಿ ಆಟಗಾರರೇ ಅನನುಭವಿಅನಾನುಭವಿ ಬೌಲರ್ಗಳ ಎದುರು ರನ್ ಗಳಿಸಲು ಪರದಾಡುತ್ತಿರೋದೇ ಇದಕ್ಕೆ ಸಾಕ್ಷಿ. ಇನ್ನು ಟೀಂ ಇಂಡಿಯಾ ತನ್ನ ಮುಂದಿನ ಪಂದ್ಯವನ್ನು ಅಮೆರಿಕ ವಿರುದ್ಧ ಆಡಲಿದೆ.  ಸೋ ಈ ಪಂದ್ಯದಲ್ಲಾದ್ರೂ ಪ್ಲೇಯಿಂಗ್ ಇಲೆವೆನ್ ಆರ್ಡರ್ ಬದ್ಲಾಗುತ್ತಾ? ವಿರಾಟ್ ಒನ್ ಡೌನ್ ಬ್ಯಾಟಿಂಗ್ಗೆ ಬದಲಾವಣೆ ಮಾಡ್ತಾರಾ ಅನ್ನೋದನ್ನ ಕಾದು ನೋಡ್ಬೇಕು.

Shwetha M

Leave a Reply

Your email address will not be published. Required fields are marked *