ವಿರಾಟ್ ಟೆಸ್ಟ್ ಚಾಪ್ಟರ್ ಕ್ಲೋಸ್ RRಗೆ ಪಾಂಡ್ಯ..MIಗೆ ಜೈಸ್ವಾಲ್    
ಹರ್ಮನ್ ತಪ್ಪಿನಿಂದ ಸೋತ IND

   ವಿರಾಟ್ ಟೆಸ್ಟ್ ಚಾಪ್ಟರ್ ಕ್ಲೋಸ್  RRಗೆ ಪಾಂಡ್ಯ..MIಗೆ ಜೈಸ್ವಾಲ್    ಹರ್ಮನ್ ತಪ್ಪಿನಿಂದ ಸೋತ IND

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು..

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಟಿ20 ಕ್ರಿಕೆಟ್​​ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.  2026 ರ ಮಹಿಳಾ ಟಿ 20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿಯುತ್ತಿದ್ದಂತೆ  ಅಂತರರಾಷ್ಟ್ರೀಯ ಟಿ 20 ಕ್ರಿಕೆಟ್‌ನಲ್ಲಿ 200 ಪಂದ್ಯಗಳನ್ನು ಆಡಿದ ವಿಶ್ವದ ಮೊದಲ ಕ್ರಿಕೆಟರ್ ಎನಿಸಿಕೊಂಡರು. ಇಲ್ಲಿಯವರೆಗೆ, ವಿಶ್ವದ ಯಾವುದೇ ಮಹಿಳಾ ಅಥವಾ ಪುರುಷ ಕ್ರಿಕೆಟಿಗ ಈ ಮೈಲಿಗಲ್ಲು ಸಾಧಿಸಿಲ್ಲ.  ಇನ್ನೂ  ಈ ಪಂದ್ಯ ಸೋಲಿಗೆ ಹರ್ಮನ್ ಪ್ರೀತ್ ತೆಗೆದುಕೊಂಡ ಕೆಲ ನಿರ್ಧಾರಗಳು ಕಾರಣ ಎನ್ನಲಾಗಿದೆ.

ಇದನ್ನೂ ಓದಿ:ಲಂಕೆಯನ್ನೇ ಸುಟ್ಟ ಸೂರ್ಯವಂಶಿ – ಭಾರತ ಕೆಣಕಿ ಮಣ್ಣು ಮುಕ್ಕಿದ SL

ಕ್ರಿಕೆಟ್‌ನ ದಿಗ್ಗಜ ವಿರಾಟ್ ಕೊಹ್ಲಿ, ಟೆಸ್ಟ್ ಕ್ರಿಕೆಟ್‌ಗೆ ಮರಳುವುದರ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ವಿರಾಟ್ ತಮ್ಮ One -8 ಸ್ಪೋರ್ಟ್ಸ್‌ವೇರ್‌ ಲಾಂಚ್ ಕಾರ್ಯಕ್ರಮದಲ್ಲಿ ನಿರೂಪಕ ಡ್ಯಾನಿಶ್ ಒಂದು ಶೂಗೆ 9230 ರನ್ ನಿಗಧಿ ಪಡಿಸಿದ್ದೀರಾ. ಇನ್ನಷ್ಟು ರನ್ ಗಳಿಸಿ ಶೂ ರೇಟ್ ಹೆಚ್ಚಿಸಲು ಮತ್ತೆ ಟೆಸ್ಟ್ ಕ್ರಿಕೆಟ್‌ಗೆ ಮರಳುತ್ತೀರಾ? ಎಂದು ಪ್ರಶ್ನಿಸಿದರು. ಇದಕ್ಕೆ ತಕ್ಷಣವೇ ಉತ್ತರಿಸಿದ ವಿರಾಟ್ ಕೊಹ್ಲಿ,  ನಾನು ಆ ಅಧ್ಯಾಯವನ್ನು ಮುಗಿಸಿದ್ದೇನೆ, ಶೂ ಬೆಲೆ ಕಮ್ಮಿ ಮಾಡ್ತೀನಿ ಹೊರತು ಮತ್ತೆ ಟೆಸ್ಟ್‌ ಆಡಲ್ಲ ಎಂದಿದ್ದಾರೆ.

ವಿಶ್ವದ ನಂ. 2 ಟಿ20 ಬೌಲರ್ ವರುಣ್ ಚಕ್ರವರ್ತಿ  ಮುಂಬರುವ ಐರ್ಲೆಂಡ್ ಪ್ರವಾಸದ ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ. ಕಾಲ್ಬೆರಳಿನ ಗಾಯದಿಂದ ಚೇತರಿಸಿಕೊಳ್ಳಲು ವಿಫಲರಾದ ಕಾರಣ, ಅವರನ್ನು ಐರ್ಲೆಂಡ್ ಸರಣಿಯಿಂದ ಬಿಡುಗಡೆ ಮಾಡಲಾಗಿದೆ. ಈ ತಿಂಗಳ ಆರಂಭದಲ್ಲಿ ಬಿಸಿಸಿಐ ಪ್ರಕಟಿಸಿದ್ದ 15 ಸದಸ್ಯರ ತಂಡದಲ್ಲಿ ವರುಣ್ ಚಕ್ರವರ್ತಿ ಅವರನ್ನು ಹೆಸರಿಸಲಾಗಿತ್ತು. ಆದರೆ ಅವರು ಫಿಟ್‌ನೆಸ್‌ ಸಾಬೀತುಪಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಬಿಸಿಸಿಐ ಸ್ಪಷ್ಟನೆ ನೀಡಿದೆ.

ಕೇವಲ ಟಿ20 ಕ್ರಿಕೆಟ್​ಗೆ ಮಾತ್ರವಲ್ಲ, ಹಿರಿಯರ ಏಕದಿನ ತಂಡಕ್ಕೂ ಸಿದ್ಧನಿದ್ದೇನೆ ಎಂಬ ನೇರ ಸಂದೇಶವನ್ನು ವೈಭವ್ ಸೂರ್ಯವಂಶಿ ಆಯ್ಕೆಗಾರರಿಗೆ ರವಾನಿಸಿದ್ದಾರೆ. ಶ್ರೀಲಂಕಾ A ವಿರುದ್ಧ ಗೆದ್ದ ನಂತ್ರ ಮಾತನಾಡಿದ ವೈಭವ್ ಸೂರ್ಯವಂಶಿ, ಜನರಿಗೆ ಇದರ ಬಗ್ಗೆ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ, ನಾನು 50 ಓವರ್‌ಗಳ ಕ್ರಿಕೆಟ್ ಅನ್ನು ತುಂಬಾ ಆಡಿದ್ದೇನೆ ಎಂದು ಮಾರ್ಮಿಕವಾಗಿ ನೆನಪಿಸಿದ್ದಾರೆ.

ಪ್ರಸಿದ್ಧ ಉದ್ಯಮಿ ಆನಂದ್ ಮಹೀಂದ್ರಾ ಸೂರ್ಯವಂಶಿಗೆ ಬಗ್ಗೆ ಟ್ವಿಟ್ ಮಾಡಿದ್ದಾರೆ. ತಮ್ಮ ಟ್ವೀಟ್‌ನಲ್ಲಿ, ’11 ಎಸೆತಗಳಲ್ಲಿ ಅರ್ಧಶತಕ, ಅದ್ಭುತ. ಆದರೆ, ನನಗೆ ಇಲ್ಲಿ ಆತನ ಈ ಅಂಕಿ ಅಂಶಕ್ಕಿಂತ ಇನ್ನೊಂದು ವಿಚಾರ ಮೆಚ್ಚುಗೆಯಾಗಿದೆ. ಹಿಂದಿನ ಪಂದ್ಯದಲ್ಲಿ ಮೈದಾನದಲ್ಲಿಯೇ ಮಾತಿನ ಚಕಮಕಿಯಾಗಿತ್ತು. ಆದ್ರೆ ನಂತರ ಪಂದ್ಯದಲ್ಲಿ ಹಿಂದಿದ್ದನ್ನ ಮರೆತು ಬ್ಯಾಟ್‌ನಿಂದಲೇ ಮಾತನಾಡಿದ. ಪ್ರತಿಭೆ ಅನ್ನೋದು ಗಿಫ್ಟ್‌, ಆದರೆ ಟೆಂಪರ್‌ಮೆಂಟ್‌ ಅನ್ನೋದು ಆಯ್ಕೆ. ಇದೇ ಟೆಂಪರ್‌ಮೆಂಟ್‌ ಆತನನ್ನು ಸ್ಟಾರ್ ಆಗಿ ಮಾಡಲಿದೆ’ ಎಂದು ಬರೆದಿದ್ದಾರೆ

IPL 2027ಕ್ಕೆ ಮುಂಬೈ ಇಂಡಿಯನ್ಸ್  ತಂಡ ಕೆಲವು ಬದಲಾವಣೆಗಳನ್ನು ಮಾಡಲು ಮುಂದಾಗಿದ್ದು, ನಾಯಕ ಹಾರ್ದಿಕ್ ಪಾಂಡ್ಯ ಹೊರಬಿದ್ದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ರಾಜಸ್ಥಾನ್ ತಂಡದ ಜೊತೆ ಮಾತುಕತೆ ನಡೆಸುತ್ತಿದ್ದು, ಹಾರ್ದಿಕ್ ಬದಲಿಗೆ ಮುಂಬೈಗೆ ರಾಜಸ್ಥಾನ್ ರಾಯಲ್ಸ್ ಓಪನರ್ ಯಶಸ್ವಿ ಜೈಸ್ವಾಲ್ ಬರಲಿದ್ದಾರೆ ಎನ್ನಲಾಗಿದೆ. ಹಾಗೇ ಪಾಂಡ್ಯ ಆರ್‌ಆರ್ ತಂಡಕ್ಕೆ ಹೋಗಬಹುದು ಅನ್ನೋ ಚರ್ಚೆ ನಡೆಯುತ್ತಿದೆ.

ಆಸ್ಟ್ರೇಲಿಯಾದ ಆಲ್‌ರೌಂಡರ್ ಮಿಚೆಲ್ ಓವನ್  ತಮ್ಮ ವಿಧ್ವಂಸಕ ಬ್ಯಾಟಿಂಗ್​ನಿಂದ ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ವಾಷಿಂಗ್ಟನ್ ಫ್ರೀಡಂ  ಪರ ಆಡುವ ಓವನ್, ಟೂರ್ನಮೆಂಟ್‌ನ ಐದನೇ ಪಂದ್ಯದಲ್ಲಿ ಎಂಐ ನ್ಯೂಯಾರ್ಕ್  ವಿರುದ್ಧ ಸ್ಫೋಟಕ ಬ್ಯಾಟಿಂಗ್​ ಮಾಡಿ 155 ರನ್ ಬಾರಿಸಿದ್ದಾರೆ. 68 ಎಸೆತಗಳನ್ನು ಎದುರಿಸಿದ ಓವನ್​, 13 ಸಿಕ್ಸರ್‌ ಮತ್ತು 11 ಬೌಂಡರಿಗಳನ್ನು ಬಾರಿಸಿದ್ದಾರೆ.

ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯ 5ನೇ ಪಂದ್ಯದಲ್ಲಿ ಕೀರನ್ ಪೊಲಾರ್ಡ್ ಆಕ್ರೋಶ ಹೊರ ಹಾಕಿದ್ದಾರೆ. ಈ ಪಂದ್ಯದಲ್ಲಿ ಪೊಲಾರ್ಡ್ ಅಬ್ಬರದಿಂದ ವಾಷಿಂಗ್ಟನ್ ಫ್ರೀಡಮ್ ತಂಡದ ಬೌಲರ್​ಗಳು ಕಂಗೆಟ್ಟಿದ್ದರು. ಇದರ ನಡುವೆ ವೇಗದ ಬೌಲರ್ ಆಸಿಫ್ ಮೆಹಮೂದ್  ಪೊಲಾರ್ಡ್ ಕಣ್ಣಿಗೆ ಕಣ್ಣಿಟ್ಟು ಕೆಣಕಲು ಯತ್ನಿಸಿದರು. ಇದರಿಂದ ಕೋಪಗೊಂಡ ಪೊಲಾರ್ಡ್ ಕೆಣಕಲು ಬಂದ ಬೌಲರ್​ಗೆ ಚೆಂಡೆಸೆದರೆ ಬ್ಯಾಟ್ ಎಸಿತೀನಿ ಎಂದು ತೋರಿಸಿದ್ದಾರೆ. ಈಗ ಈ ವಿಡಿಯೋ ಸಖತ್ ವೈರಲ್ ಆಗ್ತಿದೆ.

ಇಂಗ್ಲೆಂಡ್​ನ  ಜೋ ರೂಟ್  ಸಚಿನ್ ತೆಂಡೂಲ್ಕರ್ ಅವರ ರೆಕಾರ್ಡ್‌ ಹತ್ತಿರಕ್ಕೆ ಬಂದಿದ್ದಾರೆ.  ನ್ಯೂಝಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್​ನಲ್ಲಿ ಜೋ ರೂಟ್ 75 ರನ್ ಬಾರಿಸಿದ್ದಾರೆ. ಈ 75 ರನ್​ಗಳೊಂದಿಗೆ ರೂಟ್ ಟೆಸ್ಟ್ ಕ್ರಿಕೆಟ್​ನಲ್ಲಿ 14 ಸಾವಿರ ರನ್​ಗಳ ಗಡಿದಾಟಿದ್ದಾರೆ. ಸಚಿನ್ ತೆಂಡೂಲ್ಕರ್ ಕೇವಲ 279 ಇನಿಂಗ್ಸ್‌ಗಳಲ್ಲಿ 14 ಸಾವಿರ ರನ್ ಕಲೆಹಾಕಿದ್ದರು. ಈಗ ರೂಟ್ ತಮ್ಮ 302ನೇ ಇನಿಂಗ್ಸ್‌ನಲ್ಲಿ 14 ಸಾವಿರ ರನ್ ಪೂರೈಸಿದ್ದಾರೆ. ಈ ಮೂಲಕಸಾರ್ವಕಾಲಿಕ ರನ್‌ ಸರದಾರರ ಪಟ್ಟಿಯಲ್ಲಿ 2ನೇ ಸ್ಥಾನವನ್ನು ಅಲಂಕರಿಸಿದ್ದಾರೆ.

ಇಂಗ್ಲೆಂಡ್‌ ತಂಡದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸರಣಿಯ 12 ಅಂಕಗಳನ್ನು ಕಡಿತಗೊಳಿಸಲಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಸರಣಿಯ ನಿಯಮಗಳ ಪ್ರಕಾರ, ಪಂದ್ಯದಲ್ಲಿ ನಿಗದಿತ ಸಮಯಕ್ಕಿಂತ ಕಡಿಮೆ ಬೌಲಿಂಗ್ ಮಾಡಿದ ಪ್ರತಿ ಓವರ್‌ಗೆ ತಂಡವು ಒಂದು ಚಾಂಪಿಯನ್‌ಶಿಪ್ ಅಂಕವನ್ನು ಕಳೆದುಕೊಳ್ಳಬೇಕಾಗುತ್ತದೆ. ಅದರಂತೆ ನ್ಯೂಝಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ನಿಗದಿತ ಸಮಯದಲ್ಲಿ ಓವರ್​ಗಳನ್ನು ಪೂರ್ಣಗೊಳಿಸಿರಲಿಲ್ಲ. ಅಲ್ಲದೆ 12 ಓವರ್​ಗಳು ಹಿಂದಿದ್ದ ಕಾರಣ 12 ಅಂಕಗಳನ್ನು ಕಡಿತಗೊಳಿಸಲಾಗಿದೆ.

Kishor KV