ಮುಂಬೈ ಇಂಡಿಯನ್ಸ್ ಕೈಬಿಟ್ಟಿದ್ದಕ್ಕೆ ಐಪಿಎಲ್‌ಗೆ ಗುಡ್‌ಬೈ
ತಂಡದಿಂದ ಹೊರಬಿದ್ರೂ ಟೀಮ್‌ನಲ್ಲಿ ಇರ್ತಾರೆ ಪೊಲಾರ್ಡ್!

ಮುಂಬೈ ಇಂಡಿಯನ್ಸ್ ಕೈಬಿಟ್ಟಿದ್ದಕ್ಕೆ ಐಪಿಎಲ್‌ಗೆ ಗುಡ್‌ಬೈತಂಡದಿಂದ ಹೊರಬಿದ್ರೂ ಟೀಮ್‌ನಲ್ಲಿ ಇರ್ತಾರೆ ಪೊಲಾರ್ಡ್!

ಮುಂಬೈ ಇಂಡಿಯನ್ಸ್ ತಂಡದ ಆಲ್ ರೌಂಡರ್ , ವೆಸ್ಟ್ ಇಂಡೀಸ್ ಆಟಗಾರ ಕೈರನ್ ಪೊಲಾರ್ಡ್ ಮಂಗಳವಾರ ಐಪಿಎಲ್ ನಿಂದ ನಿವೃತ್ತಿ ಘೋಷಿಸಿದ್ದಾರೆ. 2010ರಲ್ಲಿ ಮುಂಬೈ ತಂಡದ ಜೊತೆಗೆ ಐಪಿಎಲ್ ಟೂರ್ನಿಗೆ ಪದಾರ್ಪಣೆ ಮಾಡಿದ್ದ ಪೊಲಾರ್ಡ್ ಅವರನ್ನು ಇದೀಗ ಫ್ರಾಂಚೈಸಿ ಕೈಬಿಟ್ಟಿದೆ. ಇದರ ಬೆನ್ನಲ್ಲೇ ಪೊಲಾರ್ಡ್ ಈ ಮಹತ್ವದ ಘೋಷಣೆ ಮಾಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ದಿಢೀರ್ ವಿದಾಯ ಘೋಷಿಸಿದ್ದಾರೆ. ಇನ್ನು ಮುಂದೆ ಐಪಿಎಲ್​ನಲ್ಲಿ ನಾನು ಕಣಕ್ಕಿಳಿಯುವುದಿಲ್ಲ ಎಂದಿರುವ ಪೊಲಾರ್ಡ್, ಮುಂಬೈ ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಸಿನಿಮಾದಲ್ಲಿ ನಟಿಸ್ತಾರಾ ಕ್ಯಾಪ್ಟನ್ ಕೂಲ್ ಧೋನಿ?

ಒಂದು ತಂಡದಲ್ಲಿ ಕೆಲ ವರ್ಷಗಳ ಕಾಲ ಆಡಿ ಈ ತೀರ್ಮಾನ ತೆಗೆದುಕೊಳ್ಳುವುದು ಅಷ್ಟು ಸುಲಭವಲ್ಲ, ಆದರೆ ಮುಂಬೈ ಇಂಡಿಯನ್ಸ್ ನೊಂದಿಗೆ ಚರ್ಚೆ ನಡೆಸಿದ ನಂತರ ಐಪಿಎಲ್ ವೃತ್ತಿ ಜೀವನದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ. ನಾನು ಇನ್ನು ಮುಂದೆ ಮುಂಬೈ ಇಂಡಿಯನ್ಸ್ ಗಾಗಿ ಆಡುವುದಿಲ್ಲ. ಹಾಗಂತಾ ಮುಂಬೈ ಇಂಡಿಯನ್ಸ್ ವಿರುದ್ಧವೂ ಆಡುವುದನ್ನು ನಾನೇ ಸ್ವತ: ನೋಡಲು ಸಾಧ್ಯವಿಲ್ಲ ಎಂದು ಅವರು ಟ್ವೀಟ್ ಮಾಡಿದ್ದಾರೆ. ಕೊನೆಯ ಓವರ್‌ನಲ್ಲಿ ಪಂದ್ಯದ ದಿಕ್ಕನ್ನೇ ಬದಲಾಯಿಸುವ ಸಾಮರ್ಥ್ಯ ಹೊಂದಿದ್ದ ಪೋಲಾರ್ಡ್‌ ಆಕ್ರಮಣಕಾರಿ ಆಟಕ್ಕೆ ಪ್ರಸಿದ್ದರಾಗಿದ್ದರು. ಸಿಕ್ಸರ್‌, ಬೌಂಡರಿ ಚಚ್ಚುವ ಮೂಲಕ ಮುಂಬೈ ತಂಡದ ಆಧಾರಸ್ತಂಭವಾಗಿ ಪಂದ್ಯದ ಫಲಿತಾಂಶವನ್ನೇ ಬದಲಾಯಿಸುತ್ತಿದ್ದರು.

ಮುಂಬೈ ಇಂಡಿಯನ್ಸ್ ತಂಡದ ಮಾಲಕಿ ನೀತಾ ಅಂಬಾನಿ, ಪೊಲಾರ್ಡ್‌ ಅವರಿಗೆ ಶುಭ ಹಾರೈಸಿದ್ದಾರೆ. ಐಪಿಎಲ್‌ ಮೂರನೇ ಆವೃತ್ತಿಯಿಂದ ನಾವು ಪೊಲಾರ್ಡ್‌ ಸಂತೋಷ, ಬೆವರು ಮತ್ತು ಕಣ್ಣೀರನ್ನು ಹಂಚಿಕೊಂಡಿದ್ದೇವೆ. ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ನಮ್ಮ ಚಾಂಪಿಯನ್ಸ್ ಲೀಗ್ ಟ್ರೋಫಿ ಮತ್ತು ಎಲ್ಲಾ 5 ಐಪಿಎಲ್‌ ವಿಜೇತ ತಂಡದ ಭಾಗವಾಗಿದ್ದಾರೆ. ಮೈದಾನದಲ್ಲಿ ಅವರ ಮ್ಯಾಜಿಕ್ ನೋಡುವುದನ್ನು ನಾವು ತಪ್ಪಿಸಿಕೊಳ್ಳುತ್ತೇವೆ. ಆದರೆ ಅವರು ಎಂಐ ತಂಡಕ್ಕೆ ಆಡುವುದನ್ನು ಮುಂದುವರಿಸುತ್ತಾರೆ. ಬ್ಯಾಟಿಂಗ್ ತರಬೇತುದಾರರಾಗಿ ಯುವ ಆಟಗಾರರಿಗೆ ಮಾರ್ಗದರ್ಶನ ನೀಡಲಿದ್ದಾರೆ. ಪೋಲಾರ್ಡ್‌ ಅವರ ಹೊಸ ಪ್ರಯಾಣವು ಅವರಿಗೆ ಇನ್ನೂ ಹೆಚ್ಚಿನ ವೈಭವ, ವಿಜಯ ತರಲಿ” ಎಂದು ನೀತಾ ಅಂಬಾನಿ ಶುಭ ಹಾರೈಸಿದ್ದಾರೆ.

ಒಟ್ಟು 171 ಇನ್ನಿಂಗ್ಸ್‌ ಆಡಿರುವ ಪೋಲಾರ್ಡ್‌ , 3,412 ರನ್‌ ಗಳಿಸಿದ್ದಾರೆ. ಗರಿಷ್ಟ 87 ರನ್‌ ಹೊಡೆದಿರುವ ಇವರು 16 ಅರ್ಧಶತಕ ಬಾರಿಸಿದ್ದಾರೆ. 107 ಇನ್ನಿಂಗ್ಸ್‌ ನಲ್ಲಿ 69 ವಿಕೆಟ್‌ 103 ಕ್ಯಾಚ್‌ಗಳನ್ನು ಪಡೆದಿದ್ದಾರೆ. 44 ರನ್‌ಗಳಿಗೆ 4 ವಿಕೆಟ್‌ ಪಡೆದಿದ್ದು ಅತ್ಯುತ್ತಮ ಬೌಲಿಂಗ್‌ ಸಾಧನೆಯಾಗಿದೆ.

suddiyaana