300 T20I ಮ್ಯಾಚ್, IND ಹಿಸ್ಟರಿ MIಗೆ ಪೊಲಾರ್ಡ್ ಹೆಡ್ ಕೋಚ್
BCCI ಮುಂದೆ ಮಂಡಿಯೂರಿದ PAK!

IND
ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಕಣಕ್ಕಿಳಿಯುತ್ತಿದ್ದಂತೆ ಭಾರತ ಇತಿಹಾಸ ಬರೆದಿದೆ. ಈ ಪಂದ್ಯವು ಟೀಮ್ ಇಂಡಿಯಾದ 300ನೇ ಟಿ20 ಅಂತರಾಷ್ಟ್ರೀಯ ಪಂದ್ಯವಾಗಿದ್ದು, ಈ ಸಾಧನೆ ಮಾಡಿದ ವಿಶ್ವದ ಎರಡನೇ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಪಾಕಿಸ್ತಾನ 304 ಪಂದ್ಯಗಳೊಂದಿಗೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ರೆ, ಭಾರತ 2ನೇ ಸ್ಥಾನದಲ್ಲಿದ್ದು. 268 ಪಂದ್ಯಗಳೊಂದಿಗೆ ನ್ಯೂಜಿಲೆಂಡ್ ಮೂರನೇ ಸ್ಥಾನದಲ್ಲಿದೆ.
ಪ್ರತೀಕಾ ರಾವಲ್ ಶತಕದ ಬಲದಿಂದ ಭಾರತ ಮಹಿಳಾ ಕ್ರಿಕೆಟ್ ತಂಡ, ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ ಭರ್ಜರಿ ಗೆಲುವು ಪಡೆದಿದೆ. ವಡೋದರಾದ ಬಿಸಿಎ ಕ್ರೀಡಾಂಗಣದಲ್ಲಿ ನಡೆದಿದ್ದ ಐತಿಹಾಸಿಕ ದ್ವಿಪಕ್ಷೀಯ ಮಹಿಳಾ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ ಪ್ರತೀಕಾ ರಾವಲ್ ಅವರ ಅಜೇಯ ಶತಕ ಹಾಗೂ ಬೌಲರ್ ಶ್ರೀ ಚರಣಿ ಅವರ ಅಮೋಘ ಪ್ರದರ್ಶನದ ನೆರವಿನಿಂದ ಭಾರತ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಆ ಮೂಲಕ ಭಾರತ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ.
ನ್ಯೂಜಿಲೆಂಡ್ ಎ ವಿರುದ್ಧದ ಪಂದ್ಯದಲ್ಲಿ ಭಾರತ ಎ ತಂಡದ ಬ್ಯಾಟರ್ಗಳು ನಿರಾಸೆ ಮೂಡಿಸಿದ್ದಾರೆ. ಟೆಸ್ಟ್ ಕ್ರಿಕೆಟ್ಗೆ ಸಿದ್ಧತೆ ನಡೆಸುತ್ತಿರುವ ಪ್ರಮುಖ ಆಟಗಾರರೇ ರನ್ ಗಳಿಸಲು ಪರದಾಡಿದ್ದು, 113ಕ್ಕೆ ಆಲ್ಔಟ್ ಆಗಿದ್ದಾರೆ. ಐದು ಜನ ಬ್ಯಾಟರ್ಗಳು ಖಾತೆ ತೆರೆಯುವ ಮೊದಲೇ ಡಕ್ ಔಟ್ ಆಗಿ ಪೆವಿಲಿಯನ್ ಸೇರಿದರು. ಕೆಎಲ್ ರಾಹುಲ್-0 ಸಾಯಿ ಸುದರ್ಶನ್-0 ವಾಷಿಂಗ್ಟನ್ ಸುಂದರ್-0 ಆಕಾಶ್ ದೀಪ್-0 ಮುಖೇಶ್ ಚೌಧರಿ-0 ಔಟ್ ಆಗಿದ್ದಾರೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು 2.2 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿದೆ. ಇದರ ಸಂಪತ್ತು ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಗಳ ಒಟ್ಟು ಸಂಪತ್ತಿಗಿಂತಲೂ ಹಲವು ಪಟ್ಟು ಹೆಚ್ಚಾಗಿದೆ. ಐಪಿಎಲ್ ಮತ್ತು ವಾಣಿಜ್ಯ ಒಪ್ಪಂದಗಳಿಂದ ಬಿಸಿಸಿಐ ಈ ಬೃಹತ್ ಆದಾಯವನ್ನು ಗಳಿಸುತ್ತಿದೆ.
ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ತನ್ನ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಕೀರನ್ ಪೊಲಾರ್ಡ್ ಅವರನ್ನು ತಂಡದ ನೂತನ ಮುಖ್ಯ ಕೋಚ್ ಆಗಿ ನೇಮಕ ಮಾಡಿದೆ. ಮುಂಬರುವ ಐಪಿಎಲ್ 2027ರ ಸೀಸನ್ಗಾಗಿ ಐದು ಬಾರಿಯ ಚಾಂಪಿಯನ್ಸ್ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದು, ಇದರೊಂದಿಗೆ ಮುಂಬೈ ಫ್ರಾಂಚೈಸಿ ಹಾಗೂ ಪೊಲಾರ್ಡ್ ನಡುವಿನ 16 ವರ್ಷಗಳ ಸುದೀರ್ಘ ಬಾಂಧವ್ಯದಲ್ಲಿ ಹೊಸದೊಂದು ಅಧ್ಯಾಯ ಆರಂಭವಾದಂತಾಗಿದೆ.
ಭಾರತದ ಮಾಜಿ ವೇಗದ ಬೌಲರ್ ಪರ್ವಿಂದರ್ ಅವಾನಾ ಅವರನ್ನು, ಹೊಸದಾಗಿ ರಚಿಸಲಾದ ಬಿಸಿಸಿಐ ಜೂನಿಯರ್ ಆಯ್ಕೆ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಅವಾನಾ ಭಾರತಕ್ಕಾಗಿ ಎರಡು ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದರು ಮತ್ತು 62 ಪ್ರಥಮ ದರ್ಜೆ ಪಂದ್ಯಗಳಲ್ಲಿ ಭಾಗವಹಿಸಿ, 191 ವಿಕೆಟ್ಗಳನ್ನು ಪಡೆದಿದ್ದಾರೆ.
ಭಾರತದ ಯುವ ಬ್ಯಾಟರ್ ಸರ್ಫರಾಝ್ ಖಾನ್ ಅವರನ್ನು ನ್ಯೂಜಿಲೆಂಡ್ ವಿರುದ್ಧದ ಮುಂಬರುವ ಟೆಸ್ಟ್ ಸರಣಿಗೆ ಆಯ್ಕೆ ಮಾಡದಿರುವ ಬಗ್ಗೆ ವಾಸೀಮ್ ಜಾಫರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇಶಿ ಕ್ರಿಕೆಟ್ನಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಸರ್ಫರಾಜ್ ಅವರನ್ನು ಮತ್ತೆ ಮತ್ತೆ ಕಡೆಗಣಿಸುತ್ತಿರುವುದರ ಹಿಂದೆ ಕ್ರಿಕೆಟ್ ಹೊರತಾದ ಕಾರಣಗಳಿರಬಹುದು ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ, ಸಬ್ಬಿನೇನಿ ಮೇಘನಾ ಅವರು ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಭಾರತದ ಜರ್ಸಿ ಧರಿಸಿ, ಕೈಯಲ್ಲಿ ಬ್ಯಾಟ್ ಹಿಡಿದು ಮೈದಾನಕ್ಕೆ ಕಾಲಿಟ್ಟ ಆ ಕ್ಷಣ ನನ್ನ ಕನಸು ನನಸಾದಂತಿತ್ತು. ಈಗ ಒಬ್ಬ ಆಟಗಾರ್ತಿಯಾಗಿ ಎಲ್ಲಾ ಮಾದರಿಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸುತ್ತಿರುವ ಈ ಸಂದರ್ಭದಲ್ಲಿ ನನ್ನ ಮನಸ್ಸು ಕೃತಜ್ಞತೆಯಿಂದ ತುಂಬಿದೆ. ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.
2028ರ ಮಹಿಳಾ ಟಿ20 ವಿಶ್ವಕಪ್ನ ಎಲ್ಲಾ ಪಂದ್ಯಗಳನ್ನು ಆಯೋಜಿಸಲು ಪಾಕಿಸ್ತಾನ ಉತ್ಸುಕವಾಗಿದೆ. ಆದರೆ ಭಾರತ ಭಾಗವಹಿಸುವ ಪಂದ್ಯಗಳನ್ನು ಹೊರತುಪಡಿಸಿ ಉಳಿದ ಪಂದ್ಯಗಳನ್ನು ಮಾತ್ರ ಅದು ಆಯೋಜಿಸಲು ಬಯಸಿದೆ. ಹೀಗಾಗಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯಗಳು ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ನಡೆಯುವ ಸಾಧ್ಯತೆ ಇದೆ.
ಯುಎಇಯಲ್ಲಿ ನಡೆದ ತ್ರಿಕೋನ ಸರಣಿಯ ಫೈನಲ್ನಲ್ಲಿ ಅಫ್ಘಾನಿಸ್ತಾನ ತಂಡ ಜಿಂಬಾಬ್ವೆ ವಿರುದ್ಧ ಏಳು ವಿಕೆಟ್ಗಳ ಜಯ ಸಾಧಿಸಿದೆ. ಜಿಂಬಾಬ್ವೆ ತಂಡ 169 ರನ್ ಗಳಿಸಿದರೆ, ಇಬ್ರಾಹಿಂ ಜದ್ರಾನ್ ಅಜೇಯ 70 ರನ್ ಗಳಿಸಿ ಅಫ್ಘಾನಿಸ್ತಾನಕ್ಕೆ ಗೆಲುವು ತಂದುಕೊಟ್ಟರು. ಸಿಕಂದರ್ ರಝಾ ಅವರ 68 ರನ್ಗಳ ಹೋರಾಟವೂ ಜಿಂಬಾಬ್ವೆಗೆ ಸಾಕಾಗಲಿಲ್ಲ. ಇಡೀ ಸರಣಿಯಲ್ಲಿ ಅಜೇಯವಾಗಿ ಉಳಿದ ಅಫ್ಘಾನಿಸ್ತಾನ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ನೋಡಿರಿ

