ಪಾಕಿಸ್ತಾನದಲ್ಲಿ ಹಿಂದೂ ವ್ಯಾಪಾರಿಗಳ ಅಪಹರಣ – ಬರಗೆಟ್ಟ ದೇಶದಲ್ಲಿ ಅಲ್ಪಸಂಖ್ಯಾತರೇ ಟಾರ್ಗೆಟ್‌!

ಪಾಕಿಸ್ತಾನದಲ್ಲಿ ಹಿಂದೂ ವ್ಯಾಪಾರಿಗಳ ಅಪಹರಣ – ಬರಗೆಟ್ಟ ದೇಶದಲ್ಲಿ ಅಲ್ಪಸಂಖ್ಯಾತರೇ ಟಾರ್ಗೆಟ್‌!

ಆರ್ಥಿಕವಾಗಿ ಅಧಃಪತನವಾಗುತ್ತಿರುವ ಪಾಪಿ ಪಾಕಿಸ್ತಾನದಲ್ಲಿ ಇದೀಗ ಹಿಂದೂಗಳನ್ನ ಟಾರ್ಗೆಟ್ ಮಾಡಲಾಗ್ತಿದೆ. ಬೆಲೆ ಏರಿಕೆಯಿಂದ ಕಂಗೆಟ್ಟಿರೋ ಪಾಕಿಗಳು ಹಿಂದೂಗಳನ್ನ ಕಿಡ್ನ್ಯಾಪ್ ಮಾಡುತ್ತಿದ್ದಾರೆ. ಕೋಟಿಗಟ್ಟಲೆ ಹಣ ನೀಡುವಂತೆ ಡಿಮ್ಯಾಂಡ್ ಮಾಡುತ್ತಿದ್ದಾರೆ. ತಿಂಗಳುಗಳ ಕಾಲ ತಮ್ಮಲ್ಲಿಯೇ ಇಟ್ಟುಕೊಂಡು ಅವ್ರಿಗೆ ಚಿತ್ರಹಿಂಸೆ ನೀಡಿ ವಿಡಿಯೋಗಳನ್ನ ಸೋಶಿಯಲ್ ಮೀಡಿಯಾಗಳಲ್ಲಿ ಅಪ್​ಲೋಡ್ ಮಾಡ್ತಿದ್ದಾರೆ.

ಇದನ್ನೂ ಓದಿ: ಬೇಗ ಮದುವೆಯಾಗಲಿ ಅಂತಾ ವ್ರತ ಮಾಡಿದ.. – ತನ್ನ ಕೋರಿಕೆ ಈಡೇರಿಸಿಲ್ಲ ಎಂದು ಶಿವಲಿಂಗವನ್ನೇ ಕದ್ದ ಭೂಪ!

ಪಾಕಿಸ್ತಾನದ ಸಿಂದ್ ಪ್ರಾಂತ್ಯದ ಕಾಶ್ಮೀರ್ ಜಿಲ್ಲೆಯಲ್ಲಿನ ಹಿಂದೂ ವ್ಯಾಪಾರಿಗಳು ಮತ್ತು ಸಮುದಾಯದ ಸದಸ್ಯರನ್ನು ನಿರಂತರವಾಗಿ ಅಪಹರಿಸಲಾಗುತ್ತಿದೆ. ಹಾಗೂ ಕೋಟಿ ಕೋಟಿ ಹಣ ನೀಡುವಂತೆ ಡಿಮ್ಯಾಂಡ್ ಮಾಡುತ್ತಿದ್ದಾರೆ. ಹೀಗಾಗಿ ಅನೇಕ ಕುಟುಂಬಗಳು ಈಗ ತಮ್ಮ ಹುಟ್ಟೂರನ್ನು ತೊರೆದು ಬೇರೆ ಪ್ರದೇಶಗಳು ವಲಸೆ ಹೋಗಲು ಪ್ರಾರಂಭಿಸಿವೆ. ಇಷ್ಟೆಲ್ಲಾ ಆಗ್ತಿದ್ರೂ ಅಲ್ಲಿನ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಇದೇ ಕಾರಣಕ್ಕೆ ಹಿಂದೂಗಳು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಬಲೂಚಿಸ್ತಾನ ಮತ್ತು ಪಂಜಾಬ್ ಪ್ರಾಂತ್ಯಗಳಿಗೆ ಸಂಪರ್ಕ ಕಲ್ಪಿಸುವ ಸಿಂಧ್ ಪ್ರಾಂತ್ಯದ ಮುಖ್ಯ ಸಿಂಧೂ ಹೆದ್ದಾರಿಯನ್ನು ತಡೆದು ಆಕ್ರೋಶ ಹೊರ ಹಾಕಿದ್ದಾರೆ.

ಸ್ವಾತಂತ್ರ್ಯ ಮತ್ತು ನ್ಯಾಯಕ್ಕಾಗಿ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಕಾಶ್ಮೀರ್ ಜಿಲ್ಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಸ್ಲಿಂ ಸಮುದಾಯದಿಂದ ನಡೆಯುತ್ತಿರುವ ಕಿಡ್ನ್ಯಾಪ್ ಪ್ರಕರಣಗಳಿಗೆ ಕಡಿವಾಣ ಹಾಕುವಂತೆ ಆಗ್ರಹಿಸಿದ್ದಾರೆ.

suddiyaana