ಜಾಮೀನು ಸಿಕ್ಕರೂ ರಾತ್ರಿಯಿಡಿ ಜೈಲಲ್ಲೇ ಕಾಲ ಕಳೆದ ರೇವಣ್ಣ.. ಶಾಸಕನಿಗೆ ಕೋರ್ಟ್​ ವಿಧಿಸಿದ ಷರತ್ತುಗಳು ಏನೇನು..?

ಜಾಮೀನು ಸಿಕ್ಕರೂ ರಾತ್ರಿಯಿಡಿ ಜೈಲಲ್ಲೇ ಕಾಲ ಕಳೆದ ರೇವಣ್ಣ.. ಶಾಸಕನಿಗೆ ಕೋರ್ಟ್​ ವಿಧಿಸಿದ ಷರತ್ತುಗಳು ಏನೇನು..?

ಮಹಿಳೆ ಕಿಡ್ನಾಪ್‌ ಆರೋಪದ ಹೊತ್ತು ಜೈಲು ಸೇರಿದ್ದ ಮಾಜಿ ಸಚಿವ ಹೆಚ್‌ಡಿ ರೇವಣ್ಣ ಕೊನೆಗೂ ಬಿಗ್‌ ರಿಲೀಫ್‌ ಸಿಕ್ಕಿದೆ. ರೇವಣ್ಣಗೆ ಜಾಮೀನು ಮಂಜೂರಾಗಿದ್ದು, ಮಂಗಳವಾರ ಜೈಲಿನಿಂದ ರಿಲೀಸ್‌ ಆಗಿದ್ದಾರೆ.

ಇದನ್ನೂ ಓದಿ: ಅಬ್ಬಬ್ಬಾ.. ಹಾವುಗಳೊಂದಿಗೆ ಟೈಮ್‌ ಪಾಸ್‌ ಮಾಡುತ್ತಾಳೆ ಈ ಮಹಿಳೆ!

ಸೋಮವಾರ ಬೆಳಗ್ಗೆಯಿಂದ ಸಂಜೆ 4 ಗಂಟೆಯವರೆಗೆ ಜಾಮೀನು ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಬಳಿಕ  ರೇವಣ್ಣಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಸಂಜೆಯಾದ ಕಾರಣ ಕೋರ್ಟ್ ಸಮಯ ಮುಗಿದಿದ್ದರಿಂದ ಷರತ್ತು ಪೂರೈಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ರೇವಣ್ಣ ಸೋಮವಾರ ಕೂಡ ಜೈಲಿನಲ್ಲೇ ಕಾಲ ಕಳೆದಿದ್ದಾರೆ. ಮಂಗಳವಾರ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

ಮೊದಲಿಗೆ ಜನಪ್ರತಿನಿಧಿಗಳ ಕೋರ್ಟ್‍ನಲ್ಲಿ ಜಾಮೀನು ಪ್ರತಿ ಪಡೆಯಬೇಕು. ಆ ಬಳಿಕ ಸಿಸಿಎಚ್ 42ರಲ್ಲಿ ಷರತ್ತುಗಳ ಪೂರೈಸಲು ವ್ಯವಸ್ಥೆ ಮಾಡಲಾಗಿದೆ. ಮೊದಲಿಗೆ ಷರತ್ತು ಪೂರೈಸಲು ರೇವಣ್ಣ ಪರ ವಕೀಲರು ಸಿದ್ಧತೆ ನಡೆಸಿದ್ದಾರೆ. 5 ಲಕ್ಷದ ಬಾಂಡ್, ಇಬ್ಬರು ವೈಯಕ್ತಿಕ ಶ್ಯೂರಿಟಿ ನೀಡಬೇಕು. 5 ಲಕ್ಷದ ಬಾಂಡ್‍ಗೆ ಸಹಿ ಮಾಡಿಸಿ ವಕೀಲರು ಕೋರ್ಟ್‍ಗೆ ತಲುಪಿಸಲಿದ್ದಾರೆ. ಎಸಿಎಂಎಂ ಕೋರ್ಟ್ 42ರಲ್ಲಿ ಈ ಎಲ್ಲಾ ಜಾಮೀನಿನ ಷರತ್ತು ಪೂರೈಸಬೇಕು. ಎಲ್ಲಾ ಪ್ರಕ್ರಿಯೆ ಮುಗಿದ ಬಳಿಕ ರೇವಣ್ಣ ಜೈಲಿಂದ ಬಿಡುಗಡೆಯಾಗಲಿದ್ದಾರೆ.

ಹೆಚ್​ಡಿ ರೇವಣ್ಣಗೆ ಷರತ್ತು ಬದ್ಧ ಜಾಮೀನು ಸಿಕ್ಕ ಸುದ್ದಿ ತಿಳಿಯುತ್ತಿದ್ದಂತೆ ಅತ್ತ ಹೊಳೆನರಸೀಪುರದಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ರೇವಣ್ಣ ಪರ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಪರಪ್ಪನ ಅಗ್ರಹಾರ ಜೈಲು ಮುಂದೆಯೂ ರೇವಣ್ಣ ಪರ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದಾರೆ.. ಒಟ್ಟಾರೆ, ಕಿಡ್ನಾಪ್ ಕಳಂಕದಿಂದ ರೇವಣ್ಣಗೆ ಸದ್ಯಕ್ಕೆ ಮುಕ್ತಿ ಸಿಕ್ಕಿದೆ.. ಆದ್ರೆ ಪ್ರಕರಣದ ತನಿಖೆಯನ್ನ ಎಸ್‌ಐಟಿ ನಡೆಸುತ್ತಿದೆ.. ಮುಂದೆ ಕಿಡ್ನ್ಯಾಪ್‌ ಕೇಸ್‌ಗೆ ಅದ್ಯಾವ ಟ್ವಿಸ್ಟ್‌ ಸಿಗುತ್ತೋ ಕಾದು ನೋಡಬೇಕಿದೆ..

Shwetha M