ಭವಾನಿ ರೇವಣ್ಣಗೆ ಬಂಧನದ ಭೀತಿ – ಒಂದೂವರೆ ಕೋಟಿ ಕಾರಿನ ಒಡತಿಗೆ 15 ಲಕ್ಷದ ಪೊಲೀಸ್ ಜೀಪ್ ಫಿಕ್ಸಾ?

ಭವಾನಿ ರೇವಣ್ಣ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗ್ತಿದ್ದಂತೆ SIT ಫುಲ್ ಅಲರ್ಟ್ ಆಗಿದೆ. ಆದರೆ ಭವಾನಿ ರೇವಣ್ಣ ಇದೀಗ ತಲೆಮರೆಸಿಕೊಂಡಿರುವುದು ಎಸ್ಐಟಿಯ ತಲೆನೋವಿಗೆ ಕಾರಣವಾಗಿದೆ. ಭವಾನಿ ರೇವಣ್ಣ ಅವರು ಎಲ್ಲಿದ್ದಾರೆ ಎಂದು SIT ಅಧಿಕಾರಿಗಳು ಮಾಹಿತಿ ಕಲೆ ಹಾಕ್ತಿದ್ದಾರೆ. ಆದ್ರೆ ಭವಾನಿ ರೇವಣ್ಣ ಎಲ್ಲಿಯೂ ಕಾಣಿಸ್ತಿಲ್ಲ. ಅವರ ಕಾರುಗಳು ಮನೆಯಲ್ಲೇ ಇವೆ. ಇವರ ಸುಳಿವು ಮಾತ್ರ ಪತ್ತೆ ಆಗ್ತಾ ಇಲ್ಲ. ಭವಾನಿ ರೇವಣ್ಣ ಪತ್ತೆಯಾಗ್ತಿದ್ದಂತೆ SIT ಅಧಿಕಾರಿಗಳು ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಆದ್ರೆ ಭವಾನಿ ರೇವಣ್ಣ ಅಜ್ಞಾತ ಸ್ಥಳದ್ಲಲೇ ಇದ್ದು, ಎಲ್ಲವನ್ನೂ ವೀಕ್ಷಿಸುತ್ತಿದ್ದಾರೆ ಅಂತಾ ಹೇಳಲಾಗ್ತಿದೆ.
ಇದನ್ನೂ ಓದಿ: ವಿಶ್ವಕಪ್ ಫಸ್ಟ್ ಪಂದ್ಯಕ್ಕಿಲ್ಲ ಕೊಹ್ಲಿ – ರೋHIT ಗೆ ಕಾಡ್ತಿರೋ ಟೆನ್ಷನ್ ಏನು?
ಭವಾನಿ ರೇವಣ್ಣ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ ಶುರುವಾಗಿದೆ. ಈ ಹಿಂದೆ ತಮ್ಮ ಒಂದೂವರೆ ಕೋಟಿ ಕಾರಿಗೆ ಬೈಕ್ ನಲ್ಲಿ ಬಂದ ವ್ಯಕ್ತಿ ಟಚ್ ಮಾಡಿದ್ದಕ್ಕೆ ಬಾಯಿಗೆ ಬಂದ ಹಾಗೇ ಬೈದಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಒಂದೂವರೆ ಕೋಟಿ ಕಾರಿನ ಒಡತಿ, 15 ಲಕ್ಷ ಮೌಲ್ಯದ ಪೊಲೀಸ್ ಜೀಪ್ ಏರೋದು ಫಿಕ್ಸ್ ಅಂತಾ ಸೋಶಿಯಲ್ ಮೀಡಿಯಾ ಬಳಕೆದಾರರು ಚರ್ಚೆ ನಡೆಸ್ತಾ ಇದ್ದಾರೆ.