ತಪ್ಪಾಗಿ ಆಡಿರೋ ಮಾತಿಗೆ ಲಗಾಮು ಹಾಕೋಕೆ ಕಿಚ್ಚ ಬಂದಾಯ್ತು!‌ – ಅಶ್ವಿನಿ, ಸುಧಿಗೆ ಮಾರಿಹಬ್ಬ.. ರಕ್ಷಿತಾಗೆ ಕಿಚ್ಚನ ಚಪ್ಪಾಳೆ?

ತಪ್ಪಾಗಿ ಆಡಿರೋ ಮಾತಿಗೆ ಲಗಾಮು ಹಾಕೋಕೆ ಕಿಚ್ಚ ಬಂದಾಯ್ತು!‌ – ಅಶ್ವಿನಿ, ಸುಧಿಗೆ ಮಾರಿಹಬ್ಬ.. ರಕ್ಷಿತಾಗೆ ಕಿಚ್ಚನ ಚಪ್ಪಾಳೆ?

ಕಳೆದ ಎರಡು ವಾರದಿಂದ ಬಿಗ್‌ ಬಾಸ್‌ ಮನೆ ರಣರಂಗವಾಗಿದೆ. ಸಣ್ಣ ಪುಟ್ಟ ವಿಚಾರಕ್ಕೂ ಶುರುವಾದ ಜಗಳ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಿದೆ. ದೊಡ್ಡವರು ಎನಿಸಿಕೊಂಡಿರುವವರೇ ಮೇಲಿಂದ ಮೇಲೆ ತಪ್ಪು ಮಾಡಿ ಜನರ ಕೆಂಗಣ್ಣಿಗೆ ಗುರಿಯಾಗ್ತಿದ್ದಾರೆ. ಕಳೆದ ವಾರ ಅಶ್ವಿನಿ ಗೌಡ ರಕ್ಷಿತಾ ಶೆಟ್ಟಿಗೆ ಅವಮಾನ ಮಾಡಿದ್ದಕ್ಕೆ ಕಿಚ್ಚ ಕ್ಲಾಸ್‌ ತೆಗೆದುಕೊಂಡಿದ್ರು. ಆದ್ರೂ ಆಕೆಗೆ ಬುದ್ದಿಬಂದಂತೆ ಕಾಣ್ತಿಲ್ಲ. ಇದೀಗ ಕಿಚ್ಚ ಸುದೀಪ್‌ ಸ್ಪರ್ಧಿಗಳಿಗೆ ಬಿಸಿ ಮುಟ್ಟಿಸಲು ಎಂಟ್ರಿಕೊಟ್ಟಿದ್ದಾರೆ.

ಇದನ್ನೂ ಓದಿ: ಶಬರಿಮಲೆಯಲ್ಲಿ ಚಿನ್ನ ನಾಪತ್ತೆ ಪ್ರಕರಣಕ್ಕೆ ಕರ್ನಾಟಕದ ಲಿಂಕ್‌ –  ಬೆಂಗಳೂರಿನಲ್ಲಿ ಸಾಕ್ಷ್ಯ ಸಂಗ್ರಹ.. ಬಳ್ಳಾರಿಯಲ್ಲಿ ಗೋಲ್ಡ್‌ ರಿಕವರಿ!

ಬಿಗ್ ಬಾಸ್ ಮನೆಯಲ್ಲಿ ಏಕವಚನ ಪ್ರಯೋಗ, ಕೀಳುಮಟ್ಟದ ಹೇಳಿಕೆ ನೀಡುವುದು ಹೊಸದೇನಲ್ಲ. ಕೆಲ ದಿನಗಳ ಹಿಂದೆಯಷ್ಟೇ ರಕ್ಷಿತಾ ಶೆಟ್ಟಿ ವಿಚಾರದಲ್ಲಿ ಅಶ್ವಿನಿ ಗೌಡ ಮತ್ತು ಜಾಹ್ನವಿ ಮಾಡಿದ ಮಿಸ್ಟೇಕ್ ಎಂಥದ್ದು ಎಂದು ಎಲ್ಲರಿಗೂ ಗೊತ್ತಿದೆ. ರಕ್ಷಿತಾಳನ್ನ ಟಾರ್ಗೆಟ್‌ ಮಾಡಿದ್ದ ಅಶ್ವಿನಿ ಗೌಡ, ಜಾಹ್ನವಿಗೆ ಕಿಚ್ಚ ಸುದೀಪ್‌ ಸರಿಯಾಗೇ ಕ್ಲಾಸ್‌ ತೆಗೆದುಕೊಂಡಿದ್ರು. ಇದ್ರಿಂದ ಜಾಹ್ನವಿ ಸೈಲೆಂಟ್‌ ಆಗಿದ್ರೆ, ಅಶ್ವಿನಿ ಗೌಡ ಸರಿದಾರಿಗೆ ಬರೋ ಹಾಗೆ ಕಾಣ್ತಿಲ್ಲ.. ಈ ವಾರ ಕೂಡ ಆಶ್ವಿನಿ ಗೌಡ ಕಾವ್ಯಗೆ ಮನಬಂದಂತೆ ಬೈದಿದ್ರು. ಗಿಲ್ಲಿ ಪಂಚೆ ಎಳೆಯೋ ಸವಾಲ್ ಸವಾಲ್‌ ಹಾಕಿದ್ರು. ಇವೆಲ್ಲದ್ರ ಮಧ್ಯೆ ಅಶ್ವಿನಿ ಗೌಡ ಸ್ಪರ್ಧಿಗಳ ಟೂತ್‌ ಬ್ರಷ್‌ ಟಾಯ್ಲೆಟ್‌ಗೆ ತೆಗೆದುಕೊಂಡು ಹೋಗಿದ್ದು ವಿವಾದಕ್ಕೆ ಕಾರಣವಾಗಿದೆ. ಮತ್ತೊಂದ್ಕಡೆ, ಕಾಕ್ರೋಚ್‌ ಸುಧಿ ಕೂಡ ರಕ್ಷಿತಾ ಶೆಟ್ಟಿಗೆ ಅವಮಾನ ಮಾಡಿದ್ರು. ಮಾತಿನ ಭರದಲ್ಲಿ, ”ಅವಳ್ಯಾವಳೋ ನಿನ್ನೆ ಮೊನ್ನೆ ಬಂದಿರೋ ಸೆಡೆ ಮಾತಾಡ್ತಾನೇ ಇದ್ದಾಳೆ.. ಎಂದು ನಿಂದಿಸಿದ್ರು. ಇವೆಲ್ಲದ್ರ ಬಗ್ಗೆ ಸುದೀಪ್‌ ಈ ವಾರದ ಪಂಚಾಯ್ತಿಯಲ್ಲಿ ಮಾತನಾಡ್ಬೇಕು ಎಂದು ವೀಕ್ಷಕರು ಒತ್ತಾಯಿಸಿದ್ದಾರೆ. ಇದೀಗ ತಪ್ಪಾಗಿ ಆಡಿರೋ ಮಾತಿಗೆ ಲಗಾಮು ಹಾಕೋಕೆ ಕಿಚ್ಚನ ಖಡಕ್‌ ಎಂಟ್ರಿಯಾಗಿದೆ. ಇದ್ರ ಪ್ರೋಮೋ ರಿಲೀಸ್‌ ಆಗಿದೆ.

ಒಂದು ಮಾತು ವ್ಯಕ್ತಿಗಳನ್ನ ಗೆಲ್ಲಿಸುತ್ತೆ.. ಸ್ವಲ್ಪ ಎಡವಿದ್ರೆ ಅದೇ ಮಾತು ವ್ಯಕ್ತಿತ್ವವನ್ನ ಸೋಲಿಸುತ್ತೆ.. ಜೋರಾದ ಮಾತು.. ಮೆದುವಾದ ಮಾತು.. ಎಲ್ಲದ್ರ ಮಧ್ಯೆ ಸರಿಯಾದ ಮಾತು.. ಯಾರ ಮಾತು ಸರಿಯಾಗಿತ್ತು? ಯಾರ ಮಾತು ಸರಿಯಾಗ್ಬೇಕಿತ್ತು ಅಂತಾ ಸುದೀಪ್‌ ಸ್ಟೇಜ್‌ಗೆ ಎಂಟ್ರಿಕೊಡುತ್ತಿದ್ದಾರೆ. ಈ ಪ್ರೋಮೋ ಮೂಲಕವೇ ಸುದೀಪ್‌ ಇಂದು ಏನೆಲ್ಲಾ ಚರ್ಚೆ ನಡೆಸಲಿದ್ದಾರೆ ಅನ್ನೋದು ರಿವೀಲ್‌ ಆಗಿದೆ.

ರಕ್ಷಿತಾಗೆ ಈ ವಾರದ ‘ಕಿಚ್ಚನ ಚಪ್ಪಾಳೆ’ ಸಿಕ್ಕರೂ ಅಚ್ಚರಿ ಏನಿಲ್ಲ. ಅವರು ಆಟ ಎಂದಾಗ ಸ್ಫೂರ್ತಿದಾಯಕವಾಗಿ ಆಟ ಆಡಿದ್ದಾರೆ. ಮಾತು ಎಂಬುದು ಬಂದಾಗ ಅವರು ತೂಕದ ಮಾತುಗಳನ್ನು ಆಡಿದ್ದಾರೆ. ‘ನಾವಿಲ್ಲಿ ಸ್ಟ್ರಗಲ್ ಮಾಡಿದ್ದೇವೆ, ನಿನ್ನೆ ಮೊನ್ನೆ ಬಂದವರು ಈಗ ಕ್ಯಾಪ್ಟನ್ ಆಗುತ್ತಿದ್ದಾರೆ’ ಎಂದು ಅಶ್ವಿನಿ ಗೌಡ ಅವರು ವೈಲ್ಡ್ ಕಾರ್ಡ್ ಸ್ಪರ್ಧಿಗಳ ಬಗ್ಗೆ ಮಾತನಾಡಿದ್ದರು. ಇದಕ್ಕೆ ಉತ್ತರಿಸಿದ್ದ ರಕ್ಷಿತಾ, ‘ಹೊರಗೆ ಅವರು ಇನ್ನೂ ಸ್ಟ್ರಗಲ್ ಮಾಡಿರಬಹುದಲ್ಲ’ ಎಂದು ಪ್ರಬುದ್ಧತೆ ತೋರಿದ್ದರು.

Shwetha M