ಗಿಲ್ಲಿ ತಾಳಕ್ಕೆ ಕುಣಿದ ರಕ್ಷಿತಾಗೆ ಕಿಚ್ಚನ ಕ್ಲಾಸ್!‌ – ಗಿಲ್ಲಿಗೂ ಕಾದಿದ್ಯಾ ಮಾರಿಹಬ್ಬ?

ಗಿಲ್ಲಿ ತಾಳಕ್ಕೆ ಕುಣಿದ ರಕ್ಷಿತಾಗೆ ಕಿಚ್ಚನ ಕ್ಲಾಸ್!‌ – ಗಿಲ್ಲಿಗೂ ಕಾದಿದ್ಯಾ ಮಾರಿಹಬ್ಬ?

ಈ ವಾರ ಬಿಗ್‌ ಬಾಸ್‌ ಮನೆಯ ಆಟ ರೋಚಕತೆಯಿಂದ ಕೂಡಿತ್ತು. ಸದಾ ವೈಲೆಂಟ್‌ ಆಗಿದ್ದ ಅಶ್ವಿನಿ ಗೌಡ ಕೂಲ್‌ ಆಗಿ ಆಟ ಆಡ್ತಿದ್ರು.. ಆದ್ರೆ ಗಿಲ್ಲಿ, ರಕ್ಷಿತಾ ಮಾತ್ರ ಟಾಸ್ಕ್‌ನಲ್ಲಿ ಸಾಕಷ್ಟು ಕುತಂತ್ರ ಮಾಡಿದ್ರು. ಗಿಲ್ಲಿ ಮಾತು ಕೇಳಿಕೊಂಡು ಅಶ್ವಿನಿ ಟೀಂನ ಪ್ಲ್ಯಾನ್‌ಅನ್ನೇ ಉಲ್ಟಾ ಮಾಡಿದ್ರು. ಈ ಬಗ್ಗೆ ಕಿಚ್ಚನ ಪಂಚಾಯ್ತಿಯಲ್ಲಿ ಇಂದು ಚರ್ಚೆ ನಡೆಯಲಿದೆ. ಗಿಲ್ಲಿ ಮಾತು ಕೇಳಿಕೊಂಡು ತನ್ನ ಟೀಂ ವಿರುದ್ಧವೇ ಕುತಂತ್ರ ಮಾಡಿದ ರಕ್ಷಿತಾಗೆ ಕಿಚ್ಚನ ಕ್ಲಾಸ್‌ ಫಿಕ್ಸ್‌ ಆಗಿದೆ. ಇದ್ರ ಪ್ರೋಮೋ ರಿಲೀಸ್‌ ಆಗಿದೆ.

ಇದನ್ನೂ ಓದಿ: ವೃಕ್ಷಮಾತೆ ಇನ್ನು ನೆನಪು ಮಾತ್ರ.. ಮಣ್ಣಲ್ಲಿ ಮಣ್ಣಾದ ಸಾಲುಮರದ ತಿಮ್ಮಕ್ಕ  

ಈ ವಾರ ರಕ್ಷಿತಾ ಗಿಲ್ಲಿನಟ ತಾಳಕ್ಕೆ ಕುಣಿದಿದ್ರು. ಗಿಲ್ಲಿನಟ ಮಾತು ಕೇಳಿಕೊಂಡು  ಸಾಕಷ್ಟು ಕುತಂತ್ರ ಮಾಡಿದ್ದರು. ರಕ್ಷಿತಾನ ತಮ್ಮ ತಂಡದ ವಿರುದ್ಧವೇ ಎತ್ತಿ ಕಟ್ಟಿದ್ದರು. ಇವತ್ತು ರಕ್ಷಿತಾ ಹಾಗೂ ಗಿಲ್ಲಿನಟನಿಗೆ ಕ್ಲಾಸ್‌ ಫಿಕ್ಸ್‌ ಆಗಿದೆ. ಇದ್ರ ಪ್ರೋಮೋ ರಿಲೀಸ್‌ ಆಗಿದ್ದು, ಬಿಗ್‌ ಬಾಸ್‌ ಮನೆಯ ಉದ್ದೇಶವನ್ನು ಪಕ್ಕದಲ್ಲಿ ಇಟ್ಟು, ಸೀಕ್ರೆಟ್‌ ಮ್ಯಾಚ್‌ ಸ್ಟಾರ್ಟ್‌ ಮಾಡಿದ್ರೆ, ಒಂದು ಲೆವೆಲ್‌ ತನಕ ಇದ್ದರೆ ಓಕೆ. ಅದೇ ಉಲ್ಟಾ ಹೊಡೆಯೋಕೆ ಹೋದ್ರೆ, ಟ್ರಾಜಡಿ ಅಲ್ಲಿಂದ ಪ್ರಾರಂಭವಾಗುತ್ತೆ ಅಂತ ಖಡಕ್‌ ಆಗಿಯೇ ಸುದೀಪ್‌ ಹೇಳಿದ್ದಾರೆ.

ಈ ವಾರ ಒಂದರ ಹಿಂದೊಂದು ಟಾಸ್ಕ್​​ಗಳು ನಡೆದಿವೆ. ಎಲ್ಲ ಸ್ಪರ್ಧಿಗಳು ಸಹ ಟಾಸ್ಕ್​​ನಲ್ಲಿ ಆಡಲು, ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಶ್ರಮ ಪಟ್ಟಿದ್ದರು. ಅಶ್ವಿನಿ ಮತ್ತು ಗಿಲ್ಲಿ ಬೇರೆ ಬೇರೆ ತಂಡಗಳಲ್ಲಿ ಇದ್ದರು. ಅಶ್ವಿನಿ ತಂಡದಲ್ಲಿ ರಕ್ಷಿತಾ ಶೆಟ್ಟಿ ಸಹ ಇದ್ದರು. ಆದರೆ ಟಾಸ್ಕ್​​ ವೇಳೆ ಗಿಲ್ಲಿ ಮತ್ತು ರಕ್ಷಿತಾ ಪರಸ್ಪರ ಗುಟ್ಟಾಗಿ ಮಾತನಾಡಿದ್ದು, ಅಶ್ವಿನಿಗೆ ವಿಪರೀತ ಸಿಟ್ಟು ತರಿಸಿತ್ತು. ಅಶ್ವಿನಿ, ರಕ್ಷಿತಾ ಮೇಲೆ ಕೂಗಾಡಿದ್ದರು. ಗಿಲ್ಲಿ ಮತ್ತು ರಕ್ಷಿತಾ ತಂತ್ರ-ಕುತಂತ್ರಕ್ಕೆ ಬೆಂಕಿಯಾಗಿದ್ದರು.

ರಕ್ಷಿತಾ ಶೆಟ್ಟಿ ಅವರು ಒಂದು ಟೀಂ ಆದರೆ, ಗಿಲ್ಲಿ ಮತ್ತೊಂದು ತಂಡದಲ್ಲಿ ಇದ್ದರು. ರಕ್ಷಿತಾ ತಂಡ ಗೆದ್ದಿತು. ಈ ಕಾರಣಕ್ಕೆ ಅವರ ತಂಡದ ಒಬ್ಬರನ್ನು ನಾಮಿನೇಷನ್​ನಿಂದ ಬಚಾವ್ ಮಾಡಬೇಕಿತ್ತು. ಈ ಬಗ್ಗೆ ಚರ್ಚೆ ಮಾಡಲು ಹೊರಡುವ ಮುನ್ನ ಗಿಲ್ಲಿ ಅವರು ರಕ್ಷಿತಾ ಶೆಟ್ಟಿ ಬಳಿ ಮಾತನಾಡಿದ್ದಾರೆ. ರಕ್ಷಿತಾ ಅವರು ಆಗಾಗ ಎದುರಾಳಿ ತಂಡದ ಗಿಲ್ಲಿಯಿಂದ ಹಿಂಟ್ ತೆಗೆದುಕೊಂಡು ಹೋಗುತ್ತಿದ್ದುದು ಸ್ಪಷ್ಟವಾಗುತ್ತಿತ್ತು.

ನಾಮಿನೇಷನ್‌ನಿಂದ ಪಾರಾಗಲು ಅಶ್ವಿನಿ ತಂಡದಲ್ಲಿ ಬಹುತೇಕರು ರಾಶಿಕಾ ಅವರನ್ನು ಸೇಫ್‌ ಮಾಡಲು ವೋಟ್‌ ಹಾಕಿದ್ದರು. ಆದರೆ ರಕ್ಷಿತಾ ಅವರು ಸುಧಿ ಅವರ ಹೆಸರನ್ನು ತೆಗೆದುಕೊಂಡರು. ಇದು ರಾಶಿಕಾ ಅವರಿಗೆ ಕೋಪ ಬರಿಸುವಂತೆ ಮಾಡಿತ್ತು. ರಾಶಿಕಾ ಈ ವೇಳೆ ಪ್ರತಿ ವಾರ ನಾನು ನಾಮಿನೇಟ್‌ ಆಗಿದ್ದೇನೆ ಎಂದರು. ಅದಕ್ಕೆ ಒಪ್ಪದ ರಕ್ಷಿತಾ, ನಾವು ಕೂಡ ನಾಮಿನೇಷನ್‌ ಫೇಸ್‌ ಮಾಡಿದ್ದೇವೆ ಎಂದಿದ್ದಾರೆ. ರಾಶಿಕಾ ಕೂಡ ಇಡೀ ತಂಡವೇ ಒಂದು ನಿರ್ಧಾರ ತೆಗೆದುಕೊಂಡಿರುವಾಗ, ರಕ್ಷಿತಾ ನಿರ್ಧಾರವನ್ನು ನಾನು ಒಪ್ಪುವುದಿಲ್ಲ ಎಂದು ಕೂಗಾಡಿದ್ದರು.

Shwetha M