ಒಬ್ಬರಿಗೆ ಆಟ ಅರ್ಥ ಆಗಿಲ್ಲ.. ಮತ್ತೊಬ್ಬರಿಗೆ ಬಿಗ್‌ ಬಾಸ್‌ ಮೇಲೆ ರೆಸ್ಪೆಕ್ಟ್​ ಇಲ್ಲ! – ತ್ರಿಮೋಕ್ಷಿಗೆ ಕಿಚ್ಚನ ಕ್ಲಾಸ್?‌

ಒಬ್ಬರಿಗೆ ಆಟ ಅರ್ಥ ಆಗಿಲ್ಲ.. ಮತ್ತೊಬ್ಬರಿಗೆ ಬಿಗ್‌ ಬಾಸ್‌ ಮೇಲೆ ರೆಸ್ಪೆಕ್ಟ್​ ಇಲ್ಲ! – ತ್ರಿಮೋಕ್ಷಿಗೆ ಕಿಚ್ಚನ ಕ್ಲಾಸ್?‌

ವೀಕೆಂಡ್‌ ಬಂದಾಯ್ತು.. ಕಿಚ್ಚನ ಖಡಕ್‌ ಎಂಟ್ರಿ ಆಯ್ತು. ಇದೀಗ ಬಿಗ್‌ ಬಾಸ್‌ ಫ್ಯಾನ್ಸ್‌ ರಾತ್ರಿ 9 ಗಂಟೆಗಾಗಿ ಎಕ್ಸೈಟಾಗಿದ್ದಾರೆ. ಇದೀಗ ಕಲರ್ಸ್ ಕನ್ನಡ ಪ್ರೋಮೋ ರಿಲೀಸ್ ಮಾಡಿದ್ದು,  ಕಿಚ್ಚ ಇಬ್ಬರು ಸ್ಪರ್ಧಿಗಳಿಗೆ ಸರಿಯಾಗೇ ಕ್ಲಾಸ್‌ ತೆಗೆದುಕೊಂಡಂತೆ ಕಾಣ್ತಿದೆ. ಇದೀಗ ವೀಕ್ಷಕರ ಕ್ಯೂರಿಯಾಸಿಟಿ ದುಪಟ್ಟಾಗಿದೆ.

ಇದನ್ನೂ ಓದಿ: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಿಖಿಲ್‌? – ಸುಳಿವು ನೀಡಿದ ಹೆಚ್​ಡಿ ದೇವೇಗೌಡ

ಹೌದು, ಕಲರ್ಸ್‌ ಕನ್ನಡ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಕಿಚ್ಚ ಸುದೀಪ್ ತಮ್ಮ ಇಂಟ್ರೋದಲ್ಲಿ ಈ ವಾರ ಚರ್ಚೆ ಆಗಲಿರುವ ವಿಚಾರಗಳ ಬಗ್ಗೆ ವೀಕ್ಷಕರಿಗೆ ಸುಳಿವು ಕೊಟ್ಟಿದ್ದಾರೆ. ‘ಅರ್ಥ ಆಯ್ತಾ, ಅರ್ಥ ಆಯ್ತಾ ಎಂದು ಊರಿಗೆಲ್ಲ ಕೇಳ್ತಿರೋ ಒಬ್ಬರಿಗೆ ಇನ್ನೂ ಬಿಗ್​ಬಾಸ್​ ಅನ್ನೋ ರಿಯಲ್ ಗೇಮ್ ಅರ್ಥ ಆಗಿಲ್ಲ. ಈ ಗೇಮ್​​ನ ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀನಿ ಅಂತಾ ಬ್ರಮೆಯಲ್ಲಿ ಇರೋರಿಗೆ.., ಬಿಗ್​ಬಾಸ್ ಮೇಲಿನ ನಿರ್ಧಾರಗಳ ಮೇಲೆ ರೆಸ್ಪೆಕ್ಟ್​ ಇಲ್ಲ’ ಎಂದು ಸುದೀಪ್ ಡೈಲಾಗ್ ಹೊಡೆದಿದ್ದಾರೆ.

ಪ್ರೋಮೋ ನೋಡಿದ ವೀಕ್ಷಕರು ಮೋಕ್ಷಿತಾಗೆ ಕ್ಲಾಸ್ ಪಕ್ಕಾ ಎಂದು ಅಂದಾಜಿದ್ದಾರೆ. ಕಳೆದ ಎರಡು ವಾರಗಳುದ್ದಕ್ಕೂ ಮೋಕ್ಷಿತಾ ತಮ್ಮ ಜಿದ್ದಿನ ಹಠದ ವಿಚಾರಕ್ಕೆ ಸುದ್ದಿ ಆಗ್ತಿದ್ದಾರೆ. ಗೌತಮಿ ಮತ್ತು ಮಂಜು ವಿಚಾರವನ್ನು ವೈಯಕ್ತಿಕವಾಗಿ ತೆಗೆದುಕೊಂಡಿರುವ ಮೋಕ್ಷಿತಾಗೆ ಸುದೀಪ್ ಸಖತ್ ಕ್ಲಾಸ್ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಪ್ರೊಮೋದಲ್ಲಿ ಮೋಕ್ಷಿತಾ, ವಿಕ್ರಮ್ ಪ್ರಮುಖವಾಗಿ ಹೈಲೈಟ್ಸ್​ ಆಗಿದ್ದಾರೆ. ಕಳೆದ ವಾರ ಶೋಭಾ ಶೆಟ್ಟಿ ಶೋ ಕ್ವಿಟ್ ಮಾಡಿ ಹೊರ ಹೋಗಿದ್ದರು. ಈ ವೇಳೆ ತ್ರಿವಿಕ್ರಮ್ ಆಡಿರುವ ಮಾತುಗಳಿಗೂ ಸುದೀಪ್ ಕೆರಳಿ ಕಂಡವಾದಂತಿದೆ. ಸ್ಪರ್ಧಿಗಳಿಗೆ ಬಿಗ್​ಬಾಸ್ ಮೇಲಿನ ನಿರ್ಧಾರಗಳಿಗೆ ರೆಸ್ಪೆಕ್ಟ್ ಇಲ್ಲ ಎಂದಿದ್ದಾರೆ.

Shwetha M