ಬಾ ಬಾ ಬ್ಲಾಕ್ ಶೀಪ್ – ಮ್ಯಾಕ್ಸ್ ನಲ್ಲಿ ಕಿಚ್ಚ ಮಾಸ್ ಎಂಟ್ರಿ

ಬಾ ಬಾ ಬ್ಲಾಕ್ ಶೀಪ್ – ಮ್ಯಾಕ್ಸ್ ನಲ್ಲಿ ಕಿಚ್ಚ ಮಾಸ್ ಎಂಟ್ರಿ

ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಮ್ಯಾಕ್ಸ್ ಚಿತ್ರದ ಟೀಸರ್ ರಿಲೀಸ್ ಆಗಿದೆ. ಮ್ಯಾಕ್ಸ್ ಚಿತ್ರದಲ್ಲಿ ಕಿಚ್ಚನ ಮಾಸ್ ಎಂಟ್ರಿ ಫ್ರೇಕ್ಷಕರಿಗೆ ಥ್ರಿಲ್ ಕೊಟ್ಟಿದೆ. ಮ್ಯಾಕ್ಸ್ ಸಿನಿಮಾದಲ್ಲಿ ಕಿಚ್ಚನ ಖದರ್ ಹೇಗಿತ್ತು?, ಬಾ ಬಾ ಬ್ಲಾಕ್ ಶೀಪ್ ಅಂತಾ ಕಿಚ್ಚ ಗುನುಗುತ್ತಾ ಬಂದಿದ್ದು ಯಾಕೆ ಎಂಬ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:PAKಗೆ IND ಕಾಲಿಡದಿದ್ರೆ ಬರೆದುಕೊಡಿ! – ಚಾಂಪಿಯನ್ಸ್ ಟ್ರೋಫಿಗೆ ಹೊಸ ಕ್ಯಾತೆ

ಬಹುದಿನಗಳ ಬ್ರೇಕ್‌ನ ನಂತರ ಕಿಚ್ಚ ಸುದೀಪ್ ಖಡಕ್ ಎಂಟ್ರಿಗೆ ಫ್ಯಾನ್ಸ್ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ. ಅದ್ರಲ್ಲೂ ಮ್ಯಾಕ್ಸ್ ಚಿತ್ರದಲ್ಲಿ ಸುದೀಪ್ ಮಾಸ್ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.

ಪಕ್ಕಾ ಆ್ಯಕ್ಷನ್ ಆಧರಿಸಿರೋ ಈ ಚಿತ್ರದಲ್ಲಿ ಸುದೀಪ್ ಪೊಲೀಸ್ ಆಫೀಸರ್ ಆಗಿದ್ದಾರೆ. ವಿಜಯ್ ಕಾರ್ತಿಕೇಯ ಡೈರೆಕ್ಷನ್ ಮಾಡಿರೋ ಈ ಸಿನಿಮಾದ ಟೀಸರ್ ಪೂರ್ತಿ ಸುದೀಪ್ ಖದರೇ ಆವರಿಸಿಕೊಂಡಿದೆ. ಟೀಸರ್ ಓಪನಿಂಗ್ ನಲ್ಲೇ ಕಿಚ್ಚ ಸುದೀಪ್ ಬಾ ಬಾ ಬ್ಲಾಕ್ ಶೀಪ್ ಹಾಡನ್ನ ಹಾಡುತ್ತಾರೆ. ಈ ಮೂಲಕವೇ ತಮ್ಮ ಇನ್ವೆಸ್ಟಿಗೇಷನ್‌ ಖದರ್ ಏನೂ ಅನ್ನೋದನ್ನ ಕೂಡ ಇಲ್ಲಿ ತೋರಿದ್ದಾರೆ. ಕಿಚ್ಚ ಸುದೀಪ್ ಇಲ್ಲಿ ಒಂದಲ್ಲ ಎರಡು ವೆಪನ್ ಹಿಡಿದಿದ್ದಾರೆ. ಎರಡು ಮಚ್ಚುಗಳನ್ನ ಹಿಡಿದು ಜಬರ್ ದಸ್ತ್ ಆಗಿಯೇ ಸುದೀಪ್ ಅಟ್ಯಾಕ್ ಮಾಡುತ್ತಾರೆ. ಪ್ರಮೋದ್ ಶೆಟ್ಟಿ ಇಲ್ಲಿ ವೈಟ್ ಆ್ಯಂಡ್ ವೈಟ್ ಡ್ರೆಸ್‌ನಲ್ಲಿಯೇ ಕಾಣಿಸುತ್ತಿದ್ದಾರೆ. ತೆಲುಗು ನಟ ಸುನಿಲ್ ಶ್ರೀಮಂತನಂತೆ ಹೊಳೆಯುತ್ತಿದ್ದಾರೆ. ನಾಯಕಿ ವರಲಕ್ಷ್ಮಿ ಶರತಕುಮಾರ್ ಪಾತ್ರ ಇಲ್ಲಿ ವಿಭಿನ್ನ ಅನಿಸುತ್ತದೆ. ಕೊನೆಯಲ್ಲಿ ಎಲ್ಲರನ್ನೂ ಸಂಹಾರ ಮಾಡಿ ಡ್ಯಾನ್ಸ್ ಮಾಡೋ ದೃಶ್ಯವೂ ವಿಭಿನ್ನಾಗಿಯೇ ಇದೆ. ಯಾಕೆಂದರೆ ಇಲ್ಲಿ ಶಕ್ತಿದೇವಿ ಕಾಳಿ ರೂಪ ಕಿಚ್ಚನ ಹಿಂದೆ ಇರುತ್ತದೆ. ಕೊನೆಯಲ್ಲಿ ಸುದೀಪ್ ಹಾಕುವ ಸ್ಟೆಪ್‌ನಲ್ಲಿ ಮಹಾಕಾಳಿಯ ವಿಗ್ರಹ ನೋಡಿದ್ರೆ ಎಲ್ಲ ದೃಶ್ಯಗಳು ಕತ್ತಲ ರಾತ್ರಿಯಲ್ಲಿಯೇ ನಡೆಯುತ್ತಿವೆ ಎಂಬಂತಿದೆ. ಟೀಸರ್​ನಲ್ಲಿ ವರಲಕ್ಷ್ಮಿ ಶರತ್​ಕುಮಾರ್ ಪಾತ್ರವನ್ನೂ ತುಸು ಹೈಲೆಟ್ ಮಾಡಲಾಗಿದ್ದು, ವರಲಕ್ಷ್ಮಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಂತಿದೆ.

ಇನ್ನು ಸುದೀಪ್ ಟೀಸರ್​ನಲ್ಲಿ ಹೇಳುವ ಪದ್ಯದ ಕೊನೆಯ ಸಾಲಿನ ತಾತ್ಪರ್ಯ ಹೀಗಿದೆ, ‘ನೀನು ನನ್ನನ್ನು ಕೆಣಕಬಾರದ ರೀತಿ ಕೆಣಕಿದ್ದೀಯ, ನಾನೀಗ ಆಟವನ್ನು ಮುಗಿಸುತ್ತೇನೆ’. ಈ ಸಾಲನ್ನು ಗಮನದಲ್ಲಿಟ್ಟುಕೊಂಡು ವಿಶ್ಲೇಷಿಸುವುದಾದರೆ ‘ಮ್ಯಾಕ್ಸ್’ ಸಿನಿಮಾ ಒಂದು ರಿವೇಂಜ್ ಆಕ್ಷನ್ ಡ್ರಾಮಾ ಜಾನರ್​ನ ಸಿನಿಮಾ ಆಗಿರುವ ಸಾಧ್ಯತೆ ಇದೆ. ಒಟ್ನಲ್ಲಿ, ವಿಕ್ರಾಂತ್ ರೋಣ ಸಿನಿಮಾದ ನಂತರ ಮ್ಯಾಕ್ಸ್ ಅವತಾರದಲ್ಲಿ ಕಿಚ್ಚ ಸುದೀಪ್ ಮಾಸ್ ಎಂಟ್ರಿಯನ್ನ ನೋಡಲು ಫ್ಯಾನ್ಸ್ ಕೂಡಾ ಕಾಯುತ್ತಿದ್ದಾರೆ.

Shwetha M

Leave a Reply

Your email address will not be published. Required fields are marked *