ಧಮ್ ಹೊಡೆಯೋದು ಕಡಿಮೆ ಮಾಡಬೇಕಲೇ! – ಮಾರ್ಕ್‌ನಲ್ಲಿ ಕಿಚ್ಚ ಸಿಕ್ಕಾಪಟ್ಟೆ ಮಾಸ್‌

ಧಮ್ ಹೊಡೆಯೋದು ಕಡಿಮೆ ಮಾಡಬೇಕಲೇ! – ಮಾರ್ಕ್‌ನಲ್ಲಿ ಕಿಚ್ಚ ಸಿಕ್ಕಾಪಟ್ಟೆ ಮಾಸ್‌

ಬಾದ್‌ಶಾ ಕಿಚ್ಚ ಸುದೀಪ್ ಅಭಿನಯದ ‘ಮಾರ್ಕ್’ ಚಿತ್ರದ ಚಿತ್ರೀಕರಣ ಇಗಾಗಲೇ ಕಂಪ್ಲೀಟ್ ಆಗಿದ್ದು, ಭಾನುವಾರ ಸಿನಿಮಾದ ಟ್ರೈಲರ್‌ ರಿಲೀಸ್‌ ಆಗಿದೆ. ಮಾರ್ಕ್‌ನಲ್ಲಿ ಕಿಚ್ಚನ ಅಬ್ಬರ ಕಂಡು ಫ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ.

ಇದನ್ನೂ ಓದಿ: ಈ ವಾರ ಅಭಿಷೇಕ್‌ ಎಲಿಮಿನೇಟ್!‌ – ಕ್ಯಾಪ್ಟನ್‌ ಆದ್ರೂ ದೊಡ್ಮನೆಯಿಂದ ಔಟ್!

ಕಿಚ್ಚ ಸುದೀಪ್‌ ಒಂದು ವರ್ಷದ ಬಳಿಕ ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ. ಮ್ಯಾಕ್ಸ್‌ ಸಿನಿಮಾ ಬಳಿಕ ಮಾರ್ಕ್‌ ಸಿನಿಮಾ ತೆರೆಗೆ ಅಪ್ಪಳಿಸುತ್ತಿದ್ದು, ಸಿನಿಮಾದ ಹೈಪ್ ಬಹಳಷ್ಟು ಹೆಚ್ಚಿದೆ. ಡಿಸೆಂಬರ್ 25ರಂದು ಸಿನಿಮಾ ರಿಲೀಸ್ ಆಗಲಿದೆ. ನಿನ್ನೆ ಮಾರ್ಕ್‌ ಸಿನಿಮಾದ ಟ್ರೇಲರ್ ರಿಲೀಸ್‌ ಆಗಿದೆ.

ಈ ಸಿನಿಮಾದ ಕಥೆ ಏನು ಎಂಬುದರ ಬಗ್ಗೆ ಟ್ರೇಲರ್ ಮೂಲಕ ಸುಳಿವು ನೀಡಲಾಗಿದೆ. ಮಾರ್ಕ್ ಚಿತ್ರದಲ್ಲಿ ಸುದೀಪ್ ಪೊಲೀಸ್ ಆಫೀಸರ್ ಮಾರ್ಕ್ ಆಗಿಯೇ ನಟಿಸಿದ್ದಾರೆ. ಆದರೆ, ಮಫ್ತಿಯಲ್ಲಿಯೇ ಇದ್ದಾರೆ. ಪಕ್ಕಾ ರೌಡಿ ತರವೇ ಕಾಣಿಸುತ್ತಾರೆ. ಸಿಗರೇಟ್ ಸೇದೋದು ಸ್ವಲ್ಪ ಜಾಸ್ತಿನೇ ಇದೆ. ಹಾಗಂತ ಫೈಟ್‌ಗೆ ನಿಂತರೆ ಡೌನ್ ಆಗೋದೇ ಇಲ್ಲ. ಆ ರೀತಿನೇ ಮಾರ್ಕ್ ಫೈಟ್ ಮಾಡ್ತಾರೆ. ಮಾರ್ಕ್ ಚಿತ್ರದಲ್ಲಿ ಮಕ್ಕಳ ಕಳ್ಳತನ ಕಥೆ ಇದೆ. ಮಕ್ಕಳ ಕಳ್ಳರ ದುಷ್ಟರನ್ನ ಬೆನ್ನಟ್ಟಿ ಮಾರ್ಕ್ ಹೋಗುತ್ತಾರೆ ಅನ್ನುವ ಮಾಹಿತಿ ಟ್ರೈಲರ್ ಅಲ್ಲಿಯ ಸಿಗುತ್ತದೆ. ಮಾರ್ಕ್ ಚಿತ್ರದಲ್ಲಿ ಸುದೀಪ್ ಸಸ್ಪೆಂಡ್ ಆಗಿರ್ತಾರೆ. ಆದರೂ ಪೊಲೀಸ್ ಕೆಲಸ ಮುಂದುವರೆಸಿರುತ್ತಾರೆ.

ಸತ್ಯಜ್ಯೋತಿ ಫಿಲ್ಮ್ಸ್ ಮತ್ತು ಕಿಚ್ಚ ಕ್ರಿಯೇಷನ್ಸ್ ಮೂಲಕ ಮಾರ್ಕ್ ಸಿನಿಮಾ ನಿರ್ಮಾಣ ಆಗಿದೆ. ಮಾರ್ಕ್‌ ಸಿನಿಮಾವನ್ನ ವಿಜಯ್ ಕಾರ್ತಿಕೇಯನ್ ಅವರು ನಿರ್ದೇಶನ ಮಾಡಿದ್ದಾರೆ ಈ ಮೊದಲು ಇದೇ ಕಾಂಬಿನೇಷನ್​ನಲ್ಲಿ ನಿರ್ಮಾಣ ಆಗಿದ್ದ ಮ್ಯಾಕ್ಸ್  ಸಿನಿಮಾ ಕೂಡ ಡಿಸೆಂಬರ್ 25ರಂದು ಬಿಡುಗಡೆ ಆಗಿ ಧೂಳೆಬ್ಬಿಸಿತ್ತು. ಈ ವರ್ಷ ಡಿಸೆಂಬರ್ 25ಕ್ಕೆ ಮಾರ್ಕ್  ಸಿನಿಮಾ ಎಲ್ಲ ಕಡೆಗಳಲ್ಲಿ ಅಬ್ಬರಿಸಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ತೆರೆಕಾಣಲಿದೆ.

ಅಜನೀಶ್ ಲೋಕನಾಥ್ ಅವರು ‘ಮಾರ್ಕ್’ ಸಿನಿಮಾಗೆ ಸಂಗೀತ ನೀಡಿದ್ದಾರೆ. ತಮಿಳು ಚಿತ್ರರಂಗದ ಖ್ಯಾತ ನಟ ಯೋಗಿಬಾಬು, ಮಲಯಾಳಂ ಚಿತ್ರರಂಗದ ಶೈನ್ ಟಾಮ್ ಚಾಕೋ ಸೇರಿದಂತೆ ಹಲವು ಸ್ಟಾರ್ ಕಲಾವಿದರು ‘ಮಾರ್ಕ್’ ಸಿನಿಮಾದಲ್ಲಿ ನಟಿಸಿದ್ದಾರೆ. ಟ್ರೇಲರ್​​ನಲ್ಲಿ ಎಲ್ಲ ಪಾತ್ರಗಳ ಝಲಕ್ ತೋರಿಸಲಾಗಿದೆ. ಈ ಸಿನಿಮಾ ಖಂಡಿತಾ ಸೂಪರ್ ಹಿಟ್ ಆಗಲಿದೆ ಎಂದು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ. ಶೇಖರ್ ಚಂದ್ರ ಅವರ ಛಾಯಾಗ್ರಹಣ ಈ ಸಿನಿಮಾಗಿದೆ.

Shwetha M